ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ನಂತರ 100 ಮಿಲಿಯನ್ ಅಂಚಿನಲ್ಲಿ ಕೊರೊನಾ ಸೋಂಕು; ಮುಂದಿರುವ ಹೊಸ ಸವಾಲೇನು?

|
Google Oneindia Kannada News

ಸರಿಯಾಗಿ ಒಂದು ವರ್ಷದ ಹಿಂದೆ ಇಷ್ಟು ಹೊತ್ತಿಗೆ ಚೀನಾದಲ್ಲಿ ಕೊರೊನಾ ಎಂಬ ಸೋಂಕು ಇಡೀ ವಿಶ್ವವನ್ನೇ ಆವರಿಸುವ ಸೂಚನೆ ಕೊಟ್ಟಿತ್ತು. ಜನವರಿಯಲ್ಲಿ ಚೀನಾ ನಂತರ ಅಮೆರಿಕದಲ್ಲಿ ಮೊಟ್ಟ ಮೊದಲ ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿತ್ತು. ಚೀನಾ ದೇಶ ಕೊರೊನಾ ಸೋಂಕು, ಲಾಕ್ ಡೌನ್ ಎಂಬ ಪದಗಳನ್ನು ಉಚ್ಚರಿಸುತ್ತಿದ್ದರೆ, ಇಡೀ ವಿಶ್ವವೇ ಚೀನಾ ಕಡೆ ಬೆರಗುಗಣ್ಣಿನಿಂದ ನೋಡುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ನೋಡನೋಡುತ್ತಿದ್ದಂತೆ ವಿಶ್ವವ್ಯಾಪಿಯಾಗಿ ಕೊರೊನಾ ಸೋಂಕು ಹರಡಿಕೊಂಡಿತ್ತು.

ಈ ಒಂದು ವರ್ಷದ ಅವಧಿಯಲ್ಲಿ ಈ ಕೊರೊನಾ ಸೋಂಕಿನ ಪೂರ್ವಾಪರ ಕಂಡುಕೊಂಡಿರುವ ವಿಜ್ಞಾನಿಗಳು ಸೋಂಕಿನ ವಿರುದ್ಧ ಹೋರಾಡಲು ಲಸಿಕೆಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ವಿಶ್ವದ ಹಲವು ದೇಶಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತವಾಗಿವೆ. ಇದೀಗ ವಿಶ್ವವು ನೂರು ಮಿಲಿಯನ್ ಕೊರೊನಾ ಪ್ರಕರಣಗಳ ಅಂಚಿನಲ್ಲಿದೆ. ಮುಂದೆ ಓದಿ...

 ನೂರು ಮಿಲಿಯನ್ ಸಮೀಪಿಸುತ್ತಿರುವ ಕೊರೊನಾ ಪ್ರಕರಣ

ನೂರು ಮಿಲಿಯನ್ ಸಮೀಪಿಸುತ್ತಿರುವ ಕೊರೊನಾ ಪ್ರಕರಣ

ಪ್ರಪಂಚದಾದ್ಯಂತ ಶನಿವಾರ, ಜನವರಿ 23ರ ಹೊತ್ತಿಗೆ ನೂರು ಮಿಲಿಯನ್ ಪ್ರಕರಣಗಳ ಅಂಚಿಗೆ ಕೊರೊನಾ ಪ್ರಕರಣಗಳು ತಲುಪಿವೆ. ಶನಿವಾರ ವಿಶ್ವದಲ್ಲಿ ಒಟ್ಟಾರೆ 99,756,039 ಪ್ರಕರಣಗಳು ದಾಖಲಾಗಿವೆ. ಅಮೆರಿಕದಲ್ಲಿ ಒಟ್ಟಾರೆ 25 ಮಿಲಿಯನ್ ಪ್ರಕರಣಗಳು ದಾಖಲಾಗಿದ್ದು, 10,668,674 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಸೋಂಕಿನ ವಿರುದ್ಧ ಹೋರಾಟಕ್ಕೆ ನಿರಂತರ ಬೆಂಬಲ; ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವ ಸಂಸ್ಥೆಸೋಂಕಿನ ವಿರುದ್ಧ ಹೋರಾಟಕ್ಕೆ ನಿರಂತರ ಬೆಂಬಲ; ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವ ಸಂಸ್ಥೆ

 ರೂಪಾಂತರ ಸೋಂಕಿನ ಸವಾಲು

ರೂಪಾಂತರ ಸೋಂಕಿನ ಸವಾಲು

ನೂರು ಮಿಲಿಯನ್ ಸಮೀಪಿಸಿ, ಕೊರೊನಾ ಲಸಿಕೆ ಅಭಿವೃದ್ಧಿಯಾಗುತ್ತಿರುವ ಈ ಹೊತ್ತಿನಲ್ಲಿ ಕೊರೊನಾ ರೂಪಾಂತರ ಸೋಂಕು ಕೂಡ ಕಾಣಿಸಿಕೊಳ್ಳುತ್ತಿರುವುದು ಹೊಸ ಸವಾಲಾಗಿ ಪರಿಣಮಿಸಿದೆ. ಮೊದಲು ಬ್ರಿಟನ್, ದಕ್ಷಿಣ ಆಫ್ರಿಕಾ ಬ್ರೆಜಿಲ್ ಹಾಗೂ ಅಮೆರಿಕದಲ್ಲಿ ಈ ರೂಪಾಂತರ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಇಡೀ ವಿಶ್ವಕ್ಕೆ ಆವರಿಸುವ ಆತಂಕ ಎದುರಾಗಿದೆ. ಜೊತೆಗೆ ಕೊರೊನಾ ವೈರಸ್ ಲಸಿಕೆಗಳು ರೂಪಾಂತರ ಸೋಂಕಿನ ಮೇಲೆ ಪರಿಣಾಮಕಾರಿ ಹೌದೋ ಅಲ್ಲವೋ ಎಂಬುದಕ್ಕೂ ನಿಖರ ಉತ್ತರ ದೊರೆತಿಲ್ಲ. ರೂಪಾಂತರ ಸೋಂಕು ಮೂಲ ಸೋಂಕಿಗಿಂತಲೂ ಅತಿ ಅಪಾಯಕಾರಿ ಎನ್ನಲಾಗಿದ್ದು, ಮಾರ್ಚ್ ವೇಳೆಗೆ ಬ್ರಿಟನ್ ನಲ್ಲಿ ಕಾಣಿಸಿಕೊಂಡ ರೂಪಾಂತರ ಸೋಂಕು ಅಮೆರಿಕದಲ್ಲಿ ಇನ್ನಷ್ಟು ಮಾರಕವಾಗಬಹುದು ಎಂದು ಕೇಂದ್ರ ಔಷಧ ನಿಯಂತ್ರಕ ಎಚ್ಚರಿಕೆ ನೀಡಿದೆ.

 ಅಮೆರಿಕದಲ್ಲಿ ಅತಿ ಹೆಚ್ಚಿನ ಪ್ರಕರಣಗಳು

ಅಮೆರಿಕದಲ್ಲಿ ಅತಿ ಹೆಚ್ಚಿನ ಪ್ರಕರಣಗಳು

ಅಮೆರಿಕದಲ್ಲಿ ಇದುವರೆಗೂ 25 ದಶಲಕ್ಷ ಪ್ರಕರಣಗಳು ದಾಖಲಾಗಿವೆ. ಪ್ರತಿ ಹದಿಮೂರು ಮಂದಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಜನಸಂಖ್ಯೆಯ 7.6% ನಷ್ಟು ಮಂದಿಗೆ ಸೋಂಕು ತಗುಲಿದೆ. ಸೋಂಕಿನಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಎಂಟು ನೂರು ಮಂದಿಗೆ ಒಬ್ಬರಂತೆ, ಒಟ್ಟಾರೆ ಇದುವರೆಗೂ 114000 ಮಂದಿ ಸಾವನ್ನಪ್ಪಿದ್ದಾರೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್‌ ನಿರ್ದೇಶಕ ಡಾ.ಫ್ರಾನ್ಸಿಸ್ ಎಸ್ ಕೋಲಿನ್ ಕೂಡ ಬ್ರಿಟನ್ ಮೂಲದ ರೂಪಾಂತರ ಸೋಂಕಿನಿಂದಲೇ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ B.1.351 ವೈರಸ್ ಇನ್ನಷ್ಟು ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತದ ಹೊಸ ದಾಖಲೆ: 6 ದಿನಗಳಲ್ಲೇ 10 ಲಕ್ಷ ಜನರಿಗೆ ಕೊರೊನಾ ಲಸಿಕೆಭಾರತದ ಹೊಸ ದಾಖಲೆ: 6 ದಿನಗಳಲ್ಲೇ 10 ಲಕ್ಷ ಜನರಿಗೆ ಕೊರೊನಾ ಲಸಿಕೆ

 ವಿಶ್ವದಲ್ಲಿ 99,756,039 ಪ್ರಕರಣಗಳು

ವಿಶ್ವದಲ್ಲಿ 99,756,039 ಪ್ರಕರಣಗಳು

ವಿಶ್ಬದಲ್ಲಿ ಜನವರಿ 23ರವರೆಗೂ 99,756,039 ಪ್ರಕರಣಗಳು ದಾಖಲಾಗಿದ್ದು, ಅಮೆರಿಕ- 25,702,125, ಭಾರತ 10,668,674, ಬ್ರೆಜಿಲ್ 8,844,600, ರಷ್ಯಾ 3,719,400, ಬ್ರಿಟನ್ 3,647,463, ಫ್ರಾನ್ಸ್, 3053,617, ಸ್ಪೇನ್ 2,603,472, ಇಟಲಿ 2,466813 ಪ್ರಕರಣಗಳು ದಾಖಲಾಗಿವೆ. ಇಡೀ ವಿಶ್ವದಲ್ಲಿ ಒಟ್ಟು 2,138,348 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

 ಭಾರತದಲ್ಲಿ ತಗ್ಗುತ್ತಿರುವ ಕೊರೊನಾ ಪ್ರಕರಣಗಳು...

ಭಾರತದಲ್ಲಿ ತಗ್ಗುತ್ತಿರುವ ಕೊರೊನಾ ಪ್ರಕರಣಗಳು...

ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗಿದ್ದು, ಏಳು ತಿಂಗಳ ನಂತರ ವಾರದ ಕೊರೊನಾ ಪ್ರಕರಣಗಳಲ್ಲಿ ಮೊದಲ ಬಾರಿ ಒಂದು ಲಕ್ಷಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ. ಜನವರಿ 18-24ರವರೆಗೆ 96,025 ಪ್ರಕರಣಗಳು ದಾಖಲಾಗಿವೆ. ಜೂನ್ 14-21ರಲ್ಲಿ 93,801 ಪ್ರಕರಣಗಳು ದಾಖಲಾಗಿದ್ದವು. ಭಾರತದಲ್ಲಿ ಭಾನುವಾರ ಜನವರಿ 24ರ ಹೊತ್ತಿಗೆ 10,668,706 ಪ್ರಕರಣಗಳು ದಾಖಲಾಗಿದ್ದು, ವಿಶ್ವದ ಎರಡನೇ ಸ್ಥಾನದಲ್ಲಿದೆ.

English summary
World is reaching 100 million cases including 25 million in the US as of Saturday — a new set of questions has been raised about variants of the virus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X