ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಸಂಗೀತ ದಿನ 2022: ಯಾರು, ಏಕೆ ತಿಳಿಯಬೇಕು ಈ ದಿನದ ವಿಶೇಷ?

|
Google Oneindia Kannada News

ಸಂಗೀತ ಎಂದರೆ ಯಾರಿಗೆ ತಾನೇ ಇಷ್ಟವಾಗದು ಹೇಳಿ. ಮ್ಯೂಸಿಕ್ ಮಾಡುವ ಮ್ಯಾಜಿಕ್ ಹಾಗೇ ಇರುತ್ತದೆ. ನೊಂದ ಮನಸುಗಳಿಗೆ ಮುದ ನೀಡುವುದು ಸಂಗೀತವಾದರೆ, ನಲಿಯುವ ಹೃದಯಗಳ ಪಾಲಿನ ಸ್ಪೂರ್ತಿಯೂ ಇದೇ ಸಂಗೀತ. ಇಂಥ ಸಂಗೀತದ ಸ್ಮರಣೆಗಾಗಿಯೇ ಜೂನ್ 21ರ ಈ ದಿನವನ್ನು ವಿಶ್ವ ಸಂಗೀತ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

2022ರ ಜೂನ್ 21ರಂದು ವಿಶ್ವ ಸಂಗೀತ ದಿನದ ಆಚರಣೆಯ ವಿಶೇಷತೆ ಏನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಸಂಗೀತ ವಾದ್ಯಗಳ ಮಧುರ ಮತ್ತು ಶಬ್ದಗಳು ಗಾಳಿಯಲ್ಲಿ ತೇಲುತ್ತಿದ್ದಂತೆ ಜಗತ್ತಿನಾದ್ಯಂತ ಉತ್ಸಾಹದ ಚಿಲುಮೆ ಉಕ್ಕುತ್ತದೆ.

ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶ ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶ

ಭಾರತದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವು ಸುದೀರ್ಘ ಇತಿಹಾಸವನ್ನು ಹೊಂದಿದೆ. ಮುಖ್ಯವಾಹಿನಿಯ ಸಂಗೀತವೂ ಸಹ ದೇಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಎತ್ತರಕ್ಕೆ ತಲುಪಿದೆ. ವಿಶ್ವ ಸಂಗೀತ ದಿನದ ಇತಿಹಾಸ ಏನು?, ವಿಶ್ವ ಸಂಗೀತ ದಿನ ಆಚರಿಸುವುದಕ್ಕೆ ಕಾರಣವೇನು?, ವಿಶ್ವ ಸಂಗೀತ ದಿನದ ವಿಶೇಷವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಮೊದಲು ಫ್ರಾನ್ಸ್‌ನಲ್ಲಿ 'ಮ್ಯೂಸಿಕ್ ಡೇ' ಶುರು

ಮೊದಲು ಫ್ರಾನ್ಸ್‌ನಲ್ಲಿ 'ಮ್ಯೂಸಿಕ್ ಡೇ' ಶುರು

ಜಗತ್ತಿನಲ್ಲಿ ಮೊದಲು ಫ್ರಾನ್ಸ್‌ನಲ್ಲಿ 'ಮ್ಯೂಸಿಕ್ ಡೇ' ಅನ್ನು ಪ್ರಾರಂಭಿಸಲಾಗಿತ್ತು. ಆದ್ದರಿಂದ ಇದನ್ನು ಫ್ರೆಂಚ್‌ನಲ್ಲಿ 'ಫೆಟೆ ಡೆ ಲಾ ಮ್ಯೂಸಿಕ್' ಎಂದು ಕರೆಯಲಾಗುತ್ತದೆ, ಅಂದರೆ ಈ ಸಾಲು ಅರ್ಥ 'ಸಂಗೀತ ಹಬ್ಬ' ಎಂಬ ಅರ್ಥವನ್ನು ನೀಡುತ್ತದೆ. ಇಡೀ ಜಗತ್ತಿನ ಸಂಗೀತಗಾರರನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಂಗೀತ ದಿನವನ್ನು ಆಚರಣೆ ಮಾಡಲಾಗುತ್ತದೆ.

ವಿಶ್ವ ಸಂಗೀತ ದಿನ ಇತಿಹಾಸವನ್ನು ತಿಳಿಯಿರಿ

ವಿಶ್ವ ಸಂಗೀತ ದಿನ ಇತಿಹಾಸವನ್ನು ತಿಳಿಯಿರಿ

ಕಳೆದ 1982ರಲ್ಲಿ ಮೊದಲ ಬಾರಿಗೆ ವಿಶ್ವ ಸಂಗೀತ ದಿನವನ್ನು ಆಚರಣೆ ಮಾಡಲಾಯಿತು. ಫ್ರಾನ್ಸ್‌ನಲ್ಲಿ ಆಯೋಜಿಸಿದ ಈ ಕಾರ್ಯಕ್ರಮವನ್ನು ಮಾಜಿ ಸಂಸ್ಕೃತಿ ಸಚಿವ ಜಾಕ್ ಲ್ಯಾಂಗ್ ಉದ್ಘಾಟಿಸಿದರು. ಸಂಗೀತ ಅಭಿಮಾನಿಗಳು ಮತ್ತು ಸಂಗೀತಗಾರರು ಸಾಮಾನ್ಯವಾಗಿ ಉದ್ಯಾನವನಗಳು, ಬಸ್ ನಿಲ್ದಾಣಗಳು, ವಸ್ತುಸಂಗ್ರಹಾಲಯಗಳು ಮತ್ತು ಕೆಫೆಗಳಲ್ಲಿ ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸುತ್ತಾರೆ. ಈ ದಿನದಂದು ಯುವ ಸಂಗೀತಗಾರರು ಸಹ ಪ್ರದರ್ಶನ ನೀಡಬಹುದು, ಇದು ಅಂಥ ಸಂಗೀತಗಾರರಿಗೆ ಮತ್ತು ಸಂಗೀತಪ್ರಿಯರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶವಾಗಿರುತ್ತದೆ.

ವಿಶ್ವ ಸಂಗೀತ ದಿನದ ವಿಶೇಷ

ವಿಶ್ವ ಸಂಗೀತ ದಿನದ ವಿಶೇಷ

ಜಗತ್ತಿನಾದ್ಯಂತ ವಿಶ್ವ ಸಂಗೀತ ದಿನಕ್ಕಾಗಿಯೇ ಸಂಗೀತಗಾರರು, ಉತ್ಸಾಹಿ ಸಂಗೀತ ಪ್ರೇಮಿಗಳು ಎದುರು ನೋಡುತ್ತಿರುತ್ತಾರೆ. ಜಗತ್ತಿನ ಪ್ರಮುಖ ನಗರಗಳಲ್ಲಿರುವ ಬೀದಿಗಳು, ಬಸ್ ನಿಲ್ದಾಣಗಳು, ವಸ್ತುಸಂಗ್ರಹಾಲಯಗಳು, ಉದ್ಯಾನವನಗಳು, ಮಂಟಪಗಳಲ್ಲಿ ಸಂಗೀತ ಪ್ರದರ್ಶನಗಳನ್ನು ನೀಡುವುದು ಮನಸಿಗೆ ಮುದ ನೀಡುತ್ತದೆ. ಯುವ ಸಂಗೀತಗಾರರಲ್ಲಿ ಹೊಸ ಚೈತನ್ಯ ತುಂಬಿದಂತೆ ಆಗುತ್ತದೆ. ಇದರ ಜೊತೆಗೆ ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಂಗೀತ ಪ್ರಿಯರಿಗೆ ಅದು ಮನರಂಜನೆ ನೀಡಿದರೆ, ಸಂಗೀತಗಾರರ ಪಾಲಿಗೆ ಹೊಸ ಪ್ರೇರೇಪಣೆ ಸಿಕ್ಕಂತೆ ಆಗುತ್ತದೆ. ಭಾರತ ಸರ್ಕಾರವು ಸಹ ಈ ನಿಟ್ಟಿನಲ್ಲಿ ಸಂಗೀತದ ಮೂಲಕವೇ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕೆ ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ.

ಜಗತ್ತಿನಲ್ಲಿ ಹೇಗಿರಲಿದೆ ವಿಶ್ವ ಸಂಗೀತ ದಿನದ ಆಚರಣೆ

ಜಗತ್ತಿನಲ್ಲಿ ಹೇಗಿರಲಿದೆ ವಿಶ್ವ ಸಂಗೀತ ದಿನದ ಆಚರಣೆ

ವಿಶ್ವ ಸಂಗೀತ ದಿನ 2022 ಅನ್ನು ಪ್ರಪಂಚದಾದ್ಯಂತ ವಿಭಿನ್ನ ಹಾಗೂ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ಹಂತದಲ್ಲಿ ವಿವಿಧ ಶ್ರೇಣಿಗಳ ಸಂಗೀತ ಶೈಲಿಗಳನ್ನು ಸಂಗೀತ ಪ್ರಿಯರ ಎದುರಿನಲ್ಲಿ ಪ್ರಸ್ತುತಪಡಿಸಲಾಗುತ್ತದೆ. ವಿಶ್ವ ಸಂಗೀತ ದಿನದಂದು, ಜನರು ಸ್ನೇಹಿತರೆಲ್ಲ ಒಂದು ಕರೆಯಲ್ಲಿ ಸೇರಿಕೊಂಡು ಸಂಗೀತವನ್ನು ಆಲಿಸುತ್ತಾರೆ. ತಿಳಿ ಸಂಜೆಯಲ್ಲಿ ಸಂಗೀತ ಸುಧೆಯನ್ನು ಆಲಿಸುತ್ತಾ ಈ ದಿನವನ್ನು ಆಚರಣೆ ಮಾಡುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕೂಟಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.

Recommended Video

ಮೈಸೂರಿನಲ್ಲಿ ಡಿಜಿಟಲ್‌ ಯೋಗ ಕೇಂದ್ರ ಉದ್ಘಾಟಿಸಿದ‌ ಮೋದಿ | OneIndia Kannada

English summary
World Music Day 2022 will be held on June 21; Know history, importance and ideas for celebrations in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X