• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಯುದ್ಧವನ್ನೆಲ್ಲ ನೋಡಿಬಂದ ಇಡ್ಲಿ, ನಿನ್ನ ಮಹಿಮೆ ನಾನೆಂತು ಪೇಳಲಿ!

|

"ಬೆಳಗ್ಗೆ ತಿಂಡಿಗೆ ಇಡ್ಲಿಯಾದೆ, ಸಂಜೆ ಸ್ನ್ಯಾಕ್ಸಿಗೆ ಬೋಂಡಾವಾದೆ... ರಾತ್ರಿ ಊಟಕ್ಕೆ ಉಪ್ಪಿಟ್ಟಾದೆ... ನೀ ಯಾರಿಗಾದೆಯೋ...." ಹೌದು, ಇದು ಮಲ್ಲಿಗೆ ಬಣ್ಣದ ಇಡ್ಲಿಯ ಮಹಿಮೆ.

ಬೆಳಗ್ಗೆ ತಿಂಡಿಗೆ ಮೂಲರೂಪದಲ್ಲಿ ಇಡ್ಲಿಯೇ ಆದರೂ, ಸಂಜೆಯಾಗುತ್ತ ರೂಪಾಂತರವಾಗಿ ಇಡ್ಲಿ ಬೋಂಡಾ, ಇಡ್ಲಿ ಉಪ್ಪಿಟ್ಟು ಎಂದೆಲ್ಲ ಬದಲಾಗಿ ನಾಲಿಗೆಗೆ ಮತ್ತಷ್ಟು ರುಚಿ ನೀಡುವ ಇಡ್ಲಿಯ ಮಹಿಮೆ, ರುಚಿ ಬಲ್ಲವನೇ ಬಲ್ಲ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾರ್ಚ್ 30 ವಿಶ್ವ ಇಡ್ಲಿ ದಿನವಂತೆ! ಭಾರತದ, ಅದರಲ್ಲೂ ದಕ್ಷಿಣ ಭಾರತದ ಈ ರುಚಿಕರ ಖಾದ್ಯ ಅದರಕ್ಕೂ ಸಿಹಿ, ಉದರಕ್ಕೂ ಸಿಹಿ ಎಂಬ ಕಾರಣಕ್ಕೆ ಮತ್ತಷ್ಟು ಜನಪ್ರಿಯತೆ ಗಳಿಸಿದೆ.

ತೀರಾ ಹಸಿವಾಗಿ ಹೊಟೆಲ್ ಗೆ ಕಾಲಿಟ್ಟರೆ ಸುರಕ್ಷಿತ ಆಹಾರ ಎನ್ನಿಸುವ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣುವ ಹೆಸರು ಇಡ್ಲಿಯದ್ದೇ! "ಮೈಯಲ್ಲಿ ಹುಷಾರಿಲ್ಲ, ಹಾಳು-ಮೂಳು ತಿನ್ನೋದು ಬೇಡ" ಅಂದಾಗ ಥಟ್ಟಂಥ ನೆನಪಾಗೋದು ಇದೇ ಇಡ್ಲಿ! ಆಸ್ಪತ್ರೆ ಸೇರಿರುವ ಪೇಶಂಟಿಗೂ ವೈದ್ಯರು ಸಲಹೆ ನೀಡುವ ತಿಂಡಿಯೂ ಇಡ್ಲಿಯೇ! ನಾಳೆ ಏನು ತಿಂಡಿ ಮಾಡ್ಲಿ ಎಂದು ತಲೆಕೆಡಿಸಿಕೊಳ್ಳುವಾಗ ಅತ್ಯಂತ ಸುಲಭ ಖಾದ್ಯವಾಗಿ ಕಾಣೋದು ಈ ಇಡ್ಲಿ ಸಾಂಬಾರೇ!

ಇಡ್ಲಿ ವರ್ಲ್ಡ್ ಫೇಮಸ್; ತಿನ್ನುವವರ ಸಂಖ್ಯೆಯಲ್ಲಿ ದೇಶಕ್ಕೆ ಬೆಂಗಳೂರು ನಂಬರ್ 1

ಇಂಥ ಇಡ್ಲಿ, ಆಧುನಿಕ ಯುಗದಲ್ಲಿ ಮೊಟ್ಟ ಮೊದಲಬಾರಿಗೆ ಚಾಲ್ತಿಗೆ ಬಂದಿದ್ದು ವಿಶ್ವಯುದ್ಧದಲ್ಲಿ ಎಂದರೆ ನಂಬುತ್ತೀರಾ? ವಿಶ್ವಯುದ್ಧದ ಸಮಯದಲ್ಲಿ ಅಕ್ಕಿಯ ಪೂರೈಕೆ ಹೆಚ್ಚಿಲ್ಲದ ಕಾರಣ, ಅಕ್ಕಿಗೆ ಪರ್ಯಾಯವಾಗಿ ಕಂಡಿದ್ದು ಇಡ್ಲಿ! ಆಗಿನಿಂದ ಆಹಾರ ಸಂಸ್ಕೃತಿಯ ಪಯಣದಲ್ಲಿ ಆರಂಭವಾದ ಇಡ್ಲಿಯ ಜೈತ್ರಯಾತ್ರೆ ಇಂದಿಗೂ ಮುಗಿದಿಲ್ಲ... ಆಹಾರ ಸಂಸ್ಕೃತಿಯ ಅನಭಿಷಿಕ್ತ ದೊರೆಯಾಗಿ ಇಂದಿಗೂ ಇಡ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಇಂದಿನ ಇಡ್ಲಿ ದಿನ ಟ್ವಿಟ್ಟರ್ ನಲ್ಲೂ ಟಾಪ್ ಟ್ರೆಂಡಿಂಗ್ ಆಗಿದ್ದು, ಇಡ್ಲಿ ಪ್ರಿಯರು ವಿಶ್ವ ಇಡ್ಲಿದಿನಕ್ಕೆ ಶುಭಾಶಯ ಕೋರಿದ್ದಾರೆ!

ಭಾರತದ ಎವ್ವರ್ ಗ್ರೀನ್ ತಿಂಡಿ!

ಕೆಲವರು ಇಡ್ಲಿಯನ್ನು ಅರಬ್ ವ್ಯಾಪಾರಿಗಳು ಭಾರತಕ್ಕೆ ತಂದರು ಎನ್ನುತ್ತಾರೆ, ಇನ್ನು ಕೆಲವರು ಇಡ್ಲಿ ಇಂಡೋನೇಶ್ಯಾದಿಂದ ಶುರುವಾಯ್ತು ಎನ್ನುತ್ತಾರೆ. ಅದೇನೇ ಇದ್ದಿರಲಿ, ಇಡ್ಲಿಯಂತೂ ಭಾರತದ ಎಂದಿನ ನೆಚ್ಚಿನ ಖಾದ್ಯವಾಗಿ ನಮ್ಮ ಬಾಯಲ್ಲಿ ನೀರೂರಿಸಿದೆ- ಗೀತಿಕಾ ಸ್ವಾಮಿ

ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಬೆಂಗಳೂರಿನ ಐದು ಇಡ್ಲಿ ಹೊಟೇಲ್

ಈ ಇಡ್ಲಿದಿನದಂದು ಬೆಂಗಳೂರು ಐದು ಅತ್ಯುತ್ತಮ ಇಡ್ಲಿ ಹೊಟೇಲ್ ಗಳನ್ನು ನಾನು ಪಟ್ಟಿ ಮಾಡುತ್ತೇನೆ.

ಸುವರ್ಣ ಇಡ್ಲಿ, ರಾಜಾಜೀನಗರ

ತಾಜಾ ತಿಂಡಿ, ಜಯನಗರ

ಬ್ರಾಹ್ಮಿನ್ಸ್, ಶಂಕರಪುರ

ಐಡಿಸಿ ಕಿಚನ್, ಗಾಂಧಿನಗರ

ಹೊಟೆಲ್ ಹೊಯ್ಸಳ, ಶೇಷಾದ್ರಿಪುರಂ

ಎಂದು ತೇಜಮ್ಮ ಎಂಬುವವರು ಪಟ್ಟಿ ಮಾಡಿದ್ದಾರೆ.

ಆಹಾರಗಳ ರಾಜ!

ಇಂದು ಇಡ್ಲಿದಿನ- ಆಹಾರಗಳ ರಾಜನ ದಿನ! ನಾಣು ಎಂದಿಗೂ ಇಡ್ಲಿ ಇಲ್ಲದೆ ದಿನವನ್ನು ಆರಂಭಿಸೋಲ್ಲ ಎಂದಿದ್ದಾರೆ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್.

ಪ್ರತಿದಿನ ತಿಂದರೂ ಬೇಜಾರಿಲ್ಲ!

ಇಡ್ಲಿ ಮಾತ್ರವೇ ಪ್ರತಿದಿನವೂ ತಿಂದರೂ ಬೇಜಾರಾಗದ ತಿಂಡಿ. ವಿಶ್ವ ಇಡ್ಲಿದಿನದ ಶುಭಾಶಯಗಳು ಎಂದಿದ್ದಾರೆ ಶಿಲ್ಪಾ ಚಾವ್ಲಾ.

English summary
World Idli Day: March 30 is celebrated as world Idli day. South India's most favourite breakfast food now Idli is trending on twitter today!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X