ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡ್ಲಿ ಎಂಬ ಎರಡಕ್ಷರದಲ್ಲಿ ಎಷ್ಟೊಂದು ನೆನಪುಂಟು!

|
Google Oneindia Kannada News

ಮತ್ತೆ ನೆನಪಾಗುತಿದೆ. ಇದನ್ನು ಓದುತ್ತಿದ್ದ ಹಾಗೆ ಬೇಸಿಗೆ ಕಾಲದಲ್ಲಿ ಇದೆಂಥದು ಅಂದುಕೊಳ್ಳಬೇಡಿ. ಇವತ್ತು ವಿಶ್ವ ಇಡ್ಲಿ ದಿನ ಅಂತೆ. ಇಂಥ ಶುಭ ದಿನದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ ತುಮಕೂರು. ಕ್ಯಾತ್ಸಂದ್ರದ ಪವಿತ್ರಾ ಹೋಟೆಲ್ ಹಾಗೂ ರವಿ ದರ್ಶನ್ ಅನ್ನು ನೆನಪಿಸಿಕೊಂಡೇ ಮುಂದೆ ಸಾಗಬೇಕು. ಸಾಲಾಗಿ ನಿಂತ ಕಾರುಗಳು, ಗಿಜಿಗುಡುವ ಜನ.

ಹಬೆಯಾಡುವ ಇಡ್ಲಿ ಹಾಗೂ ಹದವಾದ ಚಟ್ನಿ, ಮೇಲೊಂದಿಷ್ಟು ಬೆಣ್ಣೆ ಮುಂದೆ ಬಾಗದ ನಾಲಗೆಯುಂಟೆ? ಇನ್ನು ತುಮಕೂರು ನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್ ನ ಬಳಿ ಮಹಾತ್ಮ ಗಾಂಧಿ ಸ್ಟೇಡಿಯಂ ಎದುರಿನ ಶಿರಡಿ ಹೋಟೆಲ್ ಕೂಡ ವಾಹ್. ಆದರೆ ಈ ಹೋಟೆಲ್ ಗೆ ಹೋಗುವಾಗ ಒಂದಿಷ್ಟು ತಾಳ್ಮೆಯಿಂದ ಹೋಗಬೇಕು.

ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಏಕೆಂದರೆ, ಒಂದು ಕೆಲಸಗಾರರು ಕಡಿಮೆ. ಮಾಲೀಕರೂ ಸೇರಿದಂತೆ ಇಡೀ ಹೋಟೆಲ್ ಗೆ ಹೋಟೆಲ್ ಬಿಜಿಯಾಗಿರುತ್ತದೆ. ಬೆಳಗ್ಗೆ ಹತ್ತು- ಹತ್ತೂವರೆಗೆಲ್ಲ ಬಾಗಿಲು ಬಂದ್. ಇಡ್ಲಿ ಮುಖ್ಯ ಆಕರ್ಷಣೆ. ಜತೆಗೆ ಮಸಾಲೆ ವಡೆ, ಉಪ್ಪಿಟ್ಟು, ಚಿತ್ರಾನ್ನ, ಕಾಫಿ-ಟೀ ಕೂಡ ಸಿಗುತ್ತದೆ. ಇನ್ನು ಅಮಾನಿ ಕೆರೆಯಿಂದ ಮುಂದೆ ಇರುವ ಚರ್ಚ್ ಎದುರಿಗೆ ಅಟ್ಟೂರು ಹೋಟೆಲ್ ಅಂತೊಂದಿದೆ.

ತಂದೆ ಕಾಲದಿಂದಲೂ ಅಂಗಡಿ ನಡೆಸುತ್ತಿದ್ದಾರೆ

ತಂದೆ ಕಾಲದಿಂದಲೂ ಅಂಗಡಿ ನಡೆಸುತ್ತಿದ್ದಾರೆ

ಅಲ್ಲಿನ ಇಡ್ಲಿ, ಅವರೆಕಾಳು ಗಸಿ ಬಲೇ ಕಾಂಬಿನೇಷನ್, ಜತೆಗೆ ಮಸಾಲ ವಡೆ, ತುಪ್ಪದ ದೋಸೆ ಹಾಗೂ ಮಸಾಲೆ ದೋಸೆ ಕೂಡ ಅಷ್ಟೇ ಚಂದ. ಕೆ.ಆರ್.ರೋಡ್ ನಲ್ಲಿ ಈಗ ಮಂಜು ಅನ್ನೋರು ಸಣ್ಣ ಹೋಟೆಲ್ ಇಟ್ಟುಕೊಂಡಿದ್ದಾರೆ. ಅವರ ತಂದೆ ಕಾಲದಿಂದ ಇಡ್ಲಿ ಮಾಡಿಕೊಂಡು ಬರ್ತಿದ್ದಾರೆ. ಅವರ ಹೆಸರಲ್ಲೇ ಈ ಹೋಟೆಲ್ ಬಹಳ ಹೆಸರುವಾಸಿ.

ಪತ್ರಿಕಾಗೋಷ್ಠಿಯಲ್ಲಿ ಕಾಯಂ ಮೆನು

ಪತ್ರಿಕಾಗೋಷ್ಠಿಯಲ್ಲಿ ಕಾಯಂ ಮೆನು

ತುಮಕೂರು ನಗರದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿ ಆದರೆ ಇಡ್ಲಿ-ವಡೆ, ಉಪ್ಪಿಟ್ಟು, ಚಿತ್ರಾನ್ನ ಕಾಯಂ ಮೆನು. ಅದರಲ್ಲೂ ಕೆಲವು ಮುಖಂಡರು ಪತ್ರಿಕಾ ಗೋಷ್ಠಿ ಕರೆದರಂತೂ ಇಂಥದ್ದೇ ಹೋಟೆಲಿನ ಇಡ್ಲಿ ತರಿಸುವುದು ನಿಶ್ಚಿತ ಎಂಬುದು ಪತ್ರಕರ್ತರಿಗೂ ಖಾತ್ರಿ ಆಗಿರುತ್ತದೆ. ಅಂಥ ಹಲವು ಪತ್ರಿಕಾಗೋಷ್ಠಿ ಈಗಲೂ ನೆನಪಾಗುತ್ತದೆ, ಇಡ್ಲಿಯ ಸಹಿತ.

ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ? ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?

ಸೋಮೇಶ್ವರಪುರಂನ ಸುನೀತಾ ಹೋಟೆಲ್

ಸೋಮೇಶ್ವರಪುರಂನ ಸುನೀತಾ ಹೋಟೆಲ್

ಇನ್ನು ಸೋಮೇಶ್ವರಪುರಂ ಸುನೀತಾ ಹೋಟೆಲ್ ಗೆ ಒಮ್ಮೆಯಾದರೂ ಹೋಗಲೇಬೇಕು. ಅಲ್ಲಿನ ಇಡ್ಲಿ-ಸಾಂಬಾರ್, ಮಸಾಲೆ ದೋಸೆ, ಕಾಫಿ ಇಡೀ ತುಮಕೂರಿಗೆ ಖ್ಯಾತಿ. ಇನ್ನು ಹೊಯ್ಸಳ ಹೋಟೆಲ್, ಎಂ.ಜಿ.ರಸ್ತೆಯ ದ್ವಾರಕಾ ಹೋಟೆಲ್, ಬಸ್ ಸ್ಟಾಪ್ ಹತ್ತಿರದ ಅಶೋಕ ಹೋಟೆಲ್, ಸುಧಾ ಟೀ ಹೌಸ್, ನಂಜುಂಡೇಶ್ವರ ಹೋಟೆಲ್, ಚಿಕ್ಕಪೇಟೆಯ ಅನ್ನಪೂರ್ಣೇಶ್ವರಿ ಹೋಟೆಲ್, ಗಣೇಶ ಹೋಟೆಲ್... ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ.

ಬೆಂಗಳೂರಿನ ಹೋಟೆಲ್ ಗಳ ನೆನಪು ಒಂದಿಷ್ಟು

ಬೆಂಗಳೂರಿನ ಹೋಟೆಲ್ ಗಳ ನೆನಪು ಒಂದಿಷ್ಟು

ಇದೇ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಬ್ರಾಹ್ಮಣರ ಕಾಫಿ ಕೇಂದ್ರ, ನಾರ್ತ್ ರೋಡ್ ನ ಎಸ್ಎಲ್ ವಿ, ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಹತ್ತಿರದ ಎಸ್ಎಲ್ ವಿ, ಜಯನಗರ ನಾಲ್ಕನೇ ಬ್ಲಾಕ್ ನ ಇಡ್ಲೀಸ್, ಇಂದಿರಾ ನಗರದ ಮದುರೆ ಇಡ್ಲಿ ಹೋಟೆಲ್, ಲಾಲ್ ಬಾಗ್ ಬಳಿಯಿರುವ ಎಂಟಿಆರ್,ಮಲ್ಲೇಶ್ವರದ ವೀಣಾ ಹೋಟೆಲ್ ಎಲ್ಲವನ್ನೂ ನೆನಪಿಸಿಕೊಂಡು ಬಿಡೋಣ.

ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್! ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!

English summary
March 30th World Idli day. This is the time to remember tasty Idli- Chatni of Tumakuru and Bengaluru. Idli is favorite and healthy snacks for South Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X