ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಅಧಿಕ ರಕ್ತದೊತ್ತಡ ದಿನ 2022: ನಿಮ್ಮ ಆಹಾರದಲ್ಲಿರಲಿ 5 ಹಣ್ಣುಗಳು

|
Google Oneindia Kannada News

ಅಧಿಕ ರಕ್ತದೊತ್ತಡದ ಅರಿವನ್ನು ಹೆಚ್ಚಿಸಲು ಮತ್ತು ಅಧಿಕ ರಕ್ತದೊತ್ತಡದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 17 ರಂದು ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡ ಪ್ರಪಂಚದಾದ್ಯಂತ ಶೇಕಡಾ 30ಕ್ಕಿಂತ ಹೆಚ್ಚು ವಯಸ್ಕ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವಿಶ್ವದ ಒಂದು ಶತಕೋಟಿಗಿಂತ ಹೆಚ್ಚು ಜನರನ್ನು ಬಾಧಿಸುತ್ತದೆ. ಭಾರತದಲ್ಲಿನ ನಾಲ್ಕು ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು ಕೇವಲ 10 ಪ್ರತಿಶತ ರೋಗಿಗಳು ತಮ್ಮ ರಕ್ತದೊತ್ತಡದ ನಿಯಂತ್ರಣದಲ್ಲಿದ್ದಾರೆ ಎಂದು ಇಂಡಿಯಾ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್‌ನ ಇತ್ತೀಚಿನ ವರದಿ ತಿಳಿಸಿದೆ.

ಅಧಿಕ ರಕ್ತದೊತ್ತಡ

ವ್ಯಕ್ತಿಯ ಹೃದಯದ ಬಡಿತದೊಂದಿಗೆ ರಕ್ತವು ಹೃದಯದಿಂದ ಅಪಧಮನಿಗಳ ಮುಖಾಂತರ ದೇಹದ ಎಲ್ಲಾ ಭಾಗಗಳಿಗೆ ತಲುಪುತ್ತದೆ ಹಾಗೂ ಅಭಿಧಮನಿಗಳಿಂದ ಹೃದಯಕ್ಕೆ ಬರುತ್ತದೆ. ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡಕ್ಕೆ ರಕ್ತದೊತ್ತಡವೆನ್ನುತ್ತಾರೆ. ಸಾಮಾನ್ಯವಾಗಿ ರಕ್ತವು ನಿಗದಿತ ವೇಗದಲ್ಲಿ ಅಪಧಮನಿಗಳಿಗೆ ಪ್ರವಹಿಸುವುದು. ಕೆಲವೊಮ್ಮೆ, ಹಲವು ಕಾರಣಗಳಿಂದ ನಿಗದಿತ ವೇಗಕ್ಕಿಂತ ಹೆಚ್ಚು ಅಥವಾ ಕಡಿಮೆ ವೇಗದಲ್ಲಿ ರಕ್ತವು ಹೃದಯದಿಂದ ಅಪಧಮನಿಗಳಿಗೆ ಪ್ರವಹಿಸಿದಾಗ ರಕ್ತದೊತ್ತಡವು ಏರುಪೇರಾಗುತ್ತದೆ.

ರಕ್ತದೊತ್ತಡವನ್ನು ನಿರ್ವಹಿಸಲು ನಿಮ್ಮ ಆಹಾರದಲ್ಲಿ ಸೇವಿಸಬೇಕಾದ ಐದು ಹಣ್ಣುಗಳ ಪಟ್ಟಿ ಇಲ್ಲಿದೆ

1. ಬಾಳೆಹಣ್ಣುಗಳು

ಬಾಳೆಹಣ್ಣಿನಲ್ಲಿ ಸೋಡಿಯಂ ಅತ್ಯಂತ ಕಡಿಮೆ ಮತ್ತು ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಬಿಪಿಯನ್ನು ಕಡಿಮೆ ಮಾಡಲು ಮತ್ತು ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣನ್ನು ಸಲಾಡ್ ಮತ್ತು ಮಿಲ್ಕ್‌ಶೇಕ್‌ ಮೂಲಕ ಸೇವಿಸಬಹುದು. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಜನರು ಹೆಚ್ಚು ಕಾಲ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

World Hypertension Day 2022: Include these five fruits in your diet

2. ಕಿತ್ತಳೆ

ಇದು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಮತ್ತು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿ ಹೃದಯ-ಆರೋಗ್ಯಕರ ಫೈಬರ್ ಮತ್ತು ವಿಟಮಿನ್ ಸಿ ಅಧಿಕವಾಗಿದೆ. ಹೀಗಾಗಿ ಅಧಿಕ ಕಿತ್ತಳೆ ಹಣ್ಣುಗಳನ್ನು ಸೇವಿಸಲು ಹೆಚ್ಚು ಸಲಹೆ ನೀಡಲಾಗುತ್ತದೆ.

3. ದಾಳಿಂಬೆ

ದಾಳಿಂಬೆ ಎಸಿಇ ಕಿಣ್ವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ರಕ್ತನಾಳಗಳ ಗಾತ್ರವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಅದನ್ನು ಹಾಗೆಯೇ ತಿನ್ನಿರಿ ಅಥವಾ ಜ್ಯೂಸ್ ಕುಡಿಯಿರಿ ಅಥವಾ ನಿಮ್ಮ ಸಲಾಡ್‌ನಲ್ಲಿ ಮಿಶ್ರಣ ಮಾಡಿ ಸೇವಿಸಬಹುದು.

World Hypertension Day 2022: Include these five fruits in your diet

4. ಮಾವು

ಹಣ್ಣುಗಳ ರಾಜ ಮಾವು ಫೈಬರ್, ಬೀಟಾ ಕ್ಯಾರೋಟಿನ್ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

5. ತೆಂಗಿನ ನೀರು

ತೆಂಗಿನಕಾಯಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಪ್ರತಿದಿನ ಒಂದು ಲೋಟ ತೆಂಗಿನ ನೀರನ್ನು ಕುಡಿಯಿರಿ.

English summary
World Hypertension Day 2022: Here list of five fruits that you should add to your diet to manage blood pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X