ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು

|
Google Oneindia Kannada News

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ ಹೃದಯ. ರಕ್ತವನ್ನು ಶುದ್ಧೀಕರಿಸಿ ಇಡೀ ದೇಹಕ್ಕೆ ಜೀವಕಣಗಳನ್ನು ಪಸರಿಸುವ ನಿಮ್ಮ ಹೃದಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದೀರಿ? ಇಂದಿನ ದಿನ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಏಕೆಂದರೆ, ಇಂದಿನ ಜೀವಮಾನದಲ್ಲಿ ಹೃದಯಾಘಾತ ಯಾವ ವಯಸ್ಸಿನಲ್ಲಿಯೂ ಆಗಬಹುದು.

ಹೃದಯದ ಮಹತ್ವ ಅರಿತಿರುವ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೃದಯ ಆರೋಗ್ಯದ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಬಂದೆರಗುವ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೃದಯಾಘಾತವಾದಾಗ ಅಸುಸರಿಸಬೇಕಾದ Cardiopulmonary resuscitation (CPR) ವಿಧಾನದ ಬಗ್ಗೆ ಅರಿವು ಮೂಡಿಸಲು ಕೈಜೋಡಿಸಿದ್ದಾರೆ.

ಇಡೀ ಜಗತ್ತಿನಾದ್ಯಂತ 1 ಕೋಟಿ 75 ಲಕ್ಷದಷ್ಟು ಜನರು ಹೃದಯ ಸಂಬಂಧಿ ರೋಗಕ್ಕೆ ಬಲಿಯಾಗುತ್ತಿದ್ದಾರೆ. 2030ರ ಹೊತ್ತಿಗೆ ಇನ್ನೂ 2 ಕೋಟಿ 30 ಲಕ್ಷ ಜನರ ಸೇರ್ಪಡೆಯಾಗಲಿದೆ ಎಂದು ವಿಶ್ವ ಆರೋಗ್ಯ ಮಂಡಳಿ ಎಚ್ಚರಿಕೆಯ ಮಾತುಗಳನ್ನು ಹೇಳಿದೆ. ಈ ಸಮಯದಲ್ಲಿ ಆರೋಗ್ಯಕರ ಜೀವನ ಮಾಡುವ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಕಡಿವಾಣ ಹಾಕುವ ಕಾರ್ಯಕ್ರಮವನ್ನು ರೂಪಿಸಿದೆ.

ಮರುಹುಟ್ಟು ನೀಡಿದ ಪ್ರಿಯತಮೆಯ ಆ ಮೊದಲ 'ಮುತ್ತಿನ' ಮ್ಯಾಜಿಕ್!ಮರುಹುಟ್ಟು ನೀಡಿದ ಪ್ರಿಯತಮೆಯ ಆ ಮೊದಲ 'ಮುತ್ತಿನ' ಮ್ಯಾಜಿಕ್!

ಮಾಡಬೇಕಾಗಿರುವುದೇನು? ಚಿಂತೆಗಳನ್ನು ಬಿಡಿ, ದಿನನಿತ್ಯ ಹೃದಯಕ್ಕೆ ಸಹಾಯವಾಗುವಂಥ ವ್ಯಾಯಾಮಗಳನ್ನು ಮಾಡಿ, ಇಲ್ಲಸಲ್ಲದ ಜಂಕ್ ಆಹಾರಗಳನ್ನು ತಿನ್ನಬೇಡಿ, ಸಸ್ಯಾಹಾರವನ್ನೇ ಹೆಚ್ಚಾಗಿ ಸೇವಿಸಿ, ಯಾವಾಗಲೂ ನಗುನಗುತ್ತಿರಿ ಇತರರನ್ನೂ ನಗಿಸುತ್ತಿರಿ, ಉಲ್ಲಾಸ ತರುವಂಥ ಪುಸ್ತಕಗಳನ್ನು ಓದಿರಿ, ಎಲ್ಲರನ್ನೂ ಪ್ರೀತಿಸಿರಿ, ಮನದಲ್ಲಿ ಹೃದಯವಂತಿಕೆ ತುಂಬಿರಲಿ.

ಹೃದಯ ಅಂದ್ರೆ ಬರೀ ರಕ್ತವನ್ನು ಪಂಪ್ ಮಾಡುವ ಅಂಗ ಮಾತ್ರವಲ್ಲ. ಪ್ರೀತಿಸಲೂ ಹೃದಯ ಬೇಕು. ಹಾಗಾದರೆ ಹೃದಯ ಚೆನ್ನಾಗಿರಬೇಕಾದರೆ ಮತ್ತೂ ಏನು ಮಾಡಬೇಕು? ಕೆಳಗೆ ನೀಡಲಾಗಿರುವ 5 ಲೇಖನಗಳನ್ನು ತಪ್ಪದೆ ಓದಬೇಕು ಮತ್ತು ಇತರರೊಂದಿಗೆ ಹಂಚಿಕೊಳ್ಳಬೇಕು. ಆಗಾ ನಿಮ್ಮ ಹೃದಯವೂ ಚೆನ್ನಾಗಿರುತ್ತದೆ, ಇತರರ ಹೃದಯವೂ ಚೆನ್ನಾಗಿರುತ್ತದೆ.

ಶೇ.50ರಷ್ಟು ಹೃದ್ರೋಗ ಹೆಚ್ಚಳ, ಕಾರಣ ಇಲ್ಲಿವೆ

ಶೇ.50ರಷ್ಟು ಹೃದ್ರೋಗ ಹೆಚ್ಚಳ, ಕಾರಣ ಇಲ್ಲಿವೆ

ಮೊದಲಿಗೆ ತಿಳಿಯಬೇಕಾದ ಸಂಗತಿಯೆಂದರೆ, ಎಲ್ಲ ರೋಗಗಳ ಮೂಲ ನಾವು ಸೇವಿಸುವ ಆಹಾರ ಮತ್ತು ನಮ್ಮ ಗುಡಾಣದಂಥ ಹೊಟ್ಟೆ. ಇದು ನೇರವಾಗಿ ಹೃದಯಕ್ಕೆ ಸಂಬಂಧಿಸಿದ್ದು. ಹೃದಯಮಟ್ಟಿಗೆ ಹೇಳಬೇಕಾದರೆ ಯಾವ ಆಹಾರವನ್ನು ಮುಟ್ಟದಿದ್ದರೂ ಚಿಂತೆಯಿಲ್ಲ, ದಿ ಲಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ ನಡೆಸಿರುವ ಅಧ್ಯಯನ ಏನು ಹೇಳುತ್ತದೆ? ಯಾವ ರಾಜ್ಯಗಳಲ್ಲಿ ಹೃದಯಾಘಾತದಿಂದ ಎಷ್ಟು ಸಾವು ಸಂಭವಿಸುತ್ತಿವೆ? ಯಾವ ವಯಸ್ಸಿನ ನಂತರ ಇಂಥ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿವೆ? ಇತ್ಯಾದಿ ವಿವರಗಳನ್ನು ಅಂಕಿಸಂಖ್ಯೆಗಳ ಮೂಲಕ ಇಲ್ಲಿ ವಿವರಿಸಲಾಗಿದೆ.

ಶೇ.50ರಷ್ಟು ಹೃದ್ರೋಗ ಹೆಚ್ಚಳ, ಕಾರಣ ಇಲ್ಲಿವೆಶೇ.50ರಷ್ಟು ಹೃದ್ರೋಗ ಹೆಚ್ಚಳ, ಕಾರಣ ಇಲ್ಲಿವೆ

ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ

ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ

ಹೃದಯಕ್ಕೂ ಪ್ರೀತಿಗೂ ಎಲ್ಲಿಂದೆಲ್ಲಿಯ ಸಂಬಂಧ? ಆಕರ್ಷಣೆಗೊಳಗಾದಾಗ ಯಾಕೆ ಹೃದಯ ಮಿಡಿಯಿತು, ಹೃದಯ ಅರಳಿತು ಅಂತೆಲ್ಲ ಹೇಳ್ತಾರೆ? ನೀವೆಂದಾದರೂ ಪ್ರೀತಿಯಲ್ಲಿ ಬಿದ್ದಿದ್ದೀರಾ? 'ಬೆಳ್ಳಿಯ ಕಾಲ್ಗೆಜ್ಜೆ ತೊಟ್ಟು ನೀನು ಕಾಲಿಟ್ಟಿದ್ದು ಕಾಲೇಜಿಗೆ ಮಾತ್ರವಲ್ಲ ನನ್ನ ಹೃದಯಕ್ಕೆ' ಅಂತೆಲ್ಲ ಕವಿಹೃದಯದವರು ಬರೀತಾರೆ? ಹೋಗಲಿ ಕವಿಹೃದಯ ಅಂದರಾದರೂ ಏನು? ಜಾಸ್ತು ತಲೆ ಕೆಡಿಸಿಕೊಳ್ಳಬೇಡಿ, ಈ ಸುಂದರವಾದ ಪ್ರೇಮಪತ್ರವನ್ನು ಓದಿರಿ, ಸಾಧ್ಯವಾದರೂ ನಿಮ್ಮಲ್ಲೂ ಪ್ರೀತಿ ಪ್ರೇಮದ ಹೂವು ಅರಳಲಿ.

ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ

ಹಸ್ತ ಸಾಮುದ್ರಿಕಾ: ನಿಮ್ಮ ಹೃದಯ ರೇಖೆ ಏನನ್ನು ಸೂಚಿಸುತ್ತದೆ?

ಹಸ್ತ ಸಾಮುದ್ರಿಕಾ: ನಿಮ್ಮ ಹೃದಯ ರೇಖೆ ಏನನ್ನು ಸೂಚಿಸುತ್ತದೆ?

ಎಲ್ಲರ ಅಂಗೈಯಲ್ಲಿ ರೇಖೆಗಳಿದ್ದೇ ಇರುತ್ತವೆ. ಒಂದೊಂದು ರೇಖೆಯೂ ಒಂದೊಂದು ಕಥನವನ್ನು, ನಮ್ಮ ಬಾಳಪಯಣವನ್ನು, ಭವಿಷ್ಯವನ್ನು ವಿವರಿಸುತ್ತವೆ ಅಂತಾರೆ ಹಸ್ತಸಾಮುದ್ರಿಕಾ ತಜ್ಞರು. ಈ ಶಾಸ್ತ್ರದ ಮೂಲಕ ನಮ್ಮ ಹೃದಯದ ಆರೋಗ್ಯ ಹೇಗಿರಲಿದೆ ಎಂಬುದು ಹೇಳಲು ಸಾಧ್ಯವೆ? ನೇರ ರೇಖೆ, ಬಾಗಿರುವ ರೇಖೆಗಳು ಏನನ್ನು ನುಡಿಯುತ್ತಿವೆ? ಈ ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು ನಿಮ್ಮ ಹೃದಯ ತುಡಿಯುತ್ತಿದ್ದರೆ ಇಲ್ಲೊಂದು ಮಾಹಿತಿಯುಕ್ತ ಲೇಖನವಿದೆ ಓದಿರಿ. ಆಸಕ್ತಿ ಇರುವವರಿಗೂ ಇದರ ಬಗ್ಗೆ ತಿಳಿಸಿ. ಒಟ್ಟಿನಲ್ಲಿ ಎಲ್ಲರ ಹೃದಯ ಚೆನ್ನಾಗಿರಬೇಕು ಅಷ್ಟೇ.

ಹಸ್ತ ಸಾಮುದ್ರಿಕಾ: ನಿಮ್ಮ ಹೃದಯ ರೇಖೆ ಏನನ್ನು ಸೂಚಿಸುತ್ತದೆ?ಹಸ್ತ ಸಾಮುದ್ರಿಕಾ: ನಿಮ್ಮ ಹೃದಯ ರೇಖೆ ಏನನ್ನು ಸೂಚಿಸುತ್ತದೆ?

ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು

ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು

ಇದು ಉಪದೇಶ ಮಾಡುವ ಲೇಖನ ಖಂಡಿತ ಅಲ್ಲ. ಕುಡುಕನಿಗೆ ಉಪದೇಶ ಮಾಡುವುದು, ಸಿಗರೇಟು ಸೇದುವವನಿಗೆ ಸಿಗರೇಟು ಬಿಡಿ ಅನ್ನುವುದಕ್ಕಿಂತ ವ್ಯರ್ಥ ಪ್ರಯತ್ನ ಮತ್ತೊಂದಿಲ್ಲ. ಆದರೆ, ಅವುಗಳು ಮಾಡುವ ಕೇಡುಗಳ ಬಗ್ಗೆ ತಿಳಿದುಕೊಂಡರೆ ತಪ್ಪೇನು? ನಿಮ್ಮ ಹೃದಯದ ಆರೋಗ್ಯ ದಿವಿನಾಗಿರಬೇಕಾಗಿದ್ದರೆ 10 ಅತ್ಯುಪಯುಕ್ತ ಸಲಹೆ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ. ಹೃದಯ ಮಾನವನ ಜೀವ ಚೈತನ್ಯ. ಸದಾ ಉಲ್ಲಾಸವನ್ನು ಧಾರೆ ಎರೆಯುವ ಇದರ ಕಾರ್ಯವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಾಗದು. ಜೀವನಾಡಿ ಹೃದಯವೇ ನಿಂತರೆ.... ಸ್ವಲ್ಪ ವಿಚಾರ ಮಾಡಿ.

ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

ನಿಜವಾಗಿಯೂ ಹೇಳುತ್ತೇನೆ, ಸತ್ಯವಾಗಿಯೂ ಹೇಳುತ್ತೇನೆ, ನಂಬಿಕೆ ಇದ್ರೆ ನಂಬಿ, ಇಲ್ಲದಿದ್ದರೆ ಬಿಡಿ, ಆದರೂ ಪ್ಲೀಸ್ ನಂಬಿ.... ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರವೆಂದರೆ ಮದುವೆಯಂತೆ! ಇದು ನಗುವಂಥ, ಕೇವಲವಾಗಿ ತಿಳಿದುಕೊಳ್ಳುವಂಥ ವಿಷಯ ಅಲ್ಲವೇ ಅಲ್ಲ. ಹಲವಾರು ಅಧ್ಯಯನಗಳಿಂದ, ಹಲವಾರು ದೇಶಗಳಲ್ಲಿ ಇದು ಸಾಬೀತಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ ಉಳಿದ ರಾಷ್ಟ್ರಗಳಲ್ಲಿ ಕೂಡ ಹೃದಯದ ಆರೋಗ್ಯದ ದೃಷ್ಟಿಯಿಂದ ಮದುವೆಗೆ ಜನ ಶರಣಾಗುತ್ತಿದ್ದಾರೆ. ನೀವು ಇನ್ನೂ ಏಕಾಂಗಿಯಾಗಿದ್ದರೆ ವಿಚಾರ ಮಾಡಿ.

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ! ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

English summary
World Heart Day : Read these 5 different stories for healthy living. Take good care of you health, which is the most precious organ of your body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X