• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಆಹಾರ ದಿನ 2021: ಇತಿಹಾಸ ಹಾಗೂ ಮಹತ್ವ

|
Google Oneindia Kannada News

ಇಡೀ ಜಗತ್ತೇ ಕೊರೊನಾ ಎನ್ನುವ ಕಂಟಕವನ್ನು ಎದುರಿಸುತ್ತಿದೆ, ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ.

ಇದಲ್ಲದೆ ನಮ್ಮ ನಿತ್ಯ ಅವಶ್ಯಕತೆಗಳಲ್ಲಿ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಪೌಷ್ಠಿಕ ಆಹಾರ ಸೇವನೆಯಿಂದ ಸದೃಢ ದೇಹ ನಮ್ಮದಾಗುತ್ತದೆ.

ಆಹಾರದ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಇದು 'ಹಸಿವಿನ ವಿರುದ್ಧ ಕ್ರಮ ತೆಗೆದುಕೊಳ್ಳುವ ದಿನ'. ಜಾಗತಿಕವಾಗಿ ಅಲ್ಲ, ಸ್ಥಳೀಯವಾಗಿ ಹಸಿವಿನ ನಿರ್ಮೂಲನೆಗೆ ಒಂದು ಹೆಜ್ಜೆ ಇಡಬೇಕಾದ ದಿನ.

ಪೌಷ್ಟಿಕ ಆಹಾರದ ಸೇವನೆ ದೇಶದ ಪ್ರತಿಯೊಂದು ಮಗುವಿನ ಹಕ್ಕು. ಆಹಾರ ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿ ಪೌಷ್ಟಿಕ ಆಹಾರದ ಕೊರತೆ, ಹಸಿವು ಮತ್ತು ಬಡತನ ಕಿತ್ತುತಿನ್ನುತ್ತಿವೆ. ಆಹಾರದ ಕೊರತೆಯಿಂದಾಗಿ ಸಾಮಾನ್ಯ ಜನರ ಜೀವನದ ಮೇಲೆ ಹೊಡೆತ ಬಿದ್ದಿದೆ.

ಜೀವನಪದ್ಧತಿಯಲ್ಲಿ ಸಾಕಷ್ಟುಬದಲಾಯೇ ಹಾಗಾಗಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಟದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಬಹಳ ಅಗತ್ಯ. ಪ್ರತಿವರ್ಷ ಅಕ್ಟೋಬರ್ 16ರಂದು ವಿವಿಧ ಥೀಮ್‌ನಡಿಯಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.

ಯುನೈಟೆಡ್ ನೇಶನ್ಸ್ 1945ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಸಂಸ್ಥೆಯ ಸ್ಮರಣಾರ್ಥ ಈ ದಿನವನ್ನು ವಿಶ್ವ ಆಹಾರದಿನವನ್ನಾಗಿ ಆಚರಿಸಲಾಗುತ್ತದೆ. 1981ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಆಹಾರ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ವಿಶ್ವಆಹಾರ ದಿನದ ಮುಖ್ಯ ಉದ್ದೇಶಗಳಲ್ಲಿ ಒಂದು.

ಅಪೌಷ್ಟಿಕಾಂಶ ಮತ್ತು ಬಡತನವನ್ನು ಎದುರಿಸಲು ಪ್ರತಿಯೊಂದು ರಾಷ್ಟ್ರ ಮತ್ತು ನಾಗರಿಕ ಸಮಾಜದ ವಿವಿಧ ಸಂಸ್ಥೆಗಳು ಕೆಲಸ ಮಾಡಬೇಕಿವೆ. ಹಸಿವಿನ ವಿರುದ್ಧ ಪೋಷಕರು ಮತ್ತು ಸಮಾಜ ಒಟ್ಟಾಗಿ ಹೋರಾಡಬೇಕಿದೆ.

ಶಿಕ್ಷಣ ನೀಡುವುದರ ಮೂಲಕ ಈ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು. ಹಸಿವು ಮತ್ತು ಬಡತನದ ತೀವ್ರತೆ ಹೆಚ್ಚುತ್ತಲೇ ಇದೆ. ಆದರೆ ನೈಸರ್ಗಿಕ ಸಂಪನ್ಮೂಲಗಳು ಮಿತಿಯಲ್ಲಿವೆ. ಹಾಗಾಗಿ ಆಹಾರ ಬೆಳೆಯ ಉತ್ಪಾದನೆಗೆ ಹೆಚ್ಚು ಬಂಡವಾಳ ತೊಡಗಿಸಿಬೇಕಾದ ಅಗತ್ಯ ಇದೆ.

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬೆಲೆ ಅಂತರ, ನಿರ್ದಿಷ್ಟ ಏರಿಕೆ ಆಹಾರ ಭದ್ರತೆಯನ್ನು ಪ್ರತಿನಿಧಿಸುತ್ತದೆ. ವಿಶ್ವ ಬ್ಯಾಂಕ್‌ನ ಪ್ರಕಾರ 2010-2011ರಲ್ಲಿ ಆಹಾರ ಬೆಲೆ ಏರಿಕೆಯಿಂದಾಗಿ ಸುಮಾರು 70ದಶಲಕ್ಷ ಜನರು ಬಡತನಕ್ಕೆ ತಳ್ಳಲ್ಪಟ್ಟರು.

ಇದರಿಂದಾಗಿ ವಿಶ್ವವ್ಯಾಪಿ ಹಸಿವು ಮತ್ತು ಬಡತನ ತೀವ್ರತೆಯನ್ನು ಪಡೆದುಕೊಂಡಿತು. ಕೃಷಿ ಆಹಾರ ಉತ್ಪಾದನೆಯನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ, ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಸರ್ಕಾರೇತರ ಪ್ರಯತ್ನಗಳನ್ನು ಉತ್ತೇಜಿಸುವ ಸಲುವಾಗಿ ಕೆಲವೊಂದು ಉದ್ದೇಶಗಳನ್ನು ಗುರಿಗಳನ್ನಾಗಿಸಿಕೊಂಡಿದೆ.

ವಿಶ್ವದಾದ್ಯಂತದ ಬಡ ಮತ್ತು ದುರ್ಬಲ ಸಮುದಾಯಗಳ ಮೇಲೆ ವಿಶೇಷ ಗಮನಹರಿಸುತ್ತದೆ, ಆಹಾರ ಸುರಕ್ಷತೆ ಮತ್ತು ಎಲ್ಲರಿಗೂ ಉತ್ತಮ ಪೋಷಣೆಗೆ ಅಗತ್ಯವಾದ ಕ್ರಮಗಳನ್ನು ಹೈಲೈಟ್ ಮಾಡಲು ಮತ್ತು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ವಿಶ್ವ ಆಹಾರ ದಿನವು ಅನೇಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ರಚಿಸುತ್ತದೆ.

ವಿಶ್ವ ಆಹಾರ ದಿನ 2020 ಎಫ್‌ಒಒನ 75 ನೇ ವಾರ್ಷಿಕೋತ್ಸವವನ್ನು ಅಸಾಧಾರಣ ಕ್ಷಣದಲ್ಲಿ ವಿಶ್ವ ಕೋವಿಡ್ -19 ಸಾಂಕ್ರಾಮಿಕ ರೋಗದ ವ್ಯಾಪಕ ಪರಿಣಾಮಗಳನ್ನು ಎದುರಿಸುತ್ತಿದೆ. ಇದು ನಾವು ಒಟ್ಟಾಗಿ ನಿರ್ಮಿಸಬೇಕಾದ ಭವಿಷ್ಯವನ್ನು ಪರಿಶೀಲಿಸುವ ಸಮಯ" ಎಂದು ಆಹಾರ ಮತ್ತು ಯುನೈಟೆಡ್ ರಾಷ್ಟ್ರಗಳ ಅಧಿಕೃತ ವೆಬ್‌ಸೈಟ್ ಸಾರ್ವಜನಿಕರನ್ನು ಎಚ್ಚರಿಸಿತ್ತು.

ವಿಶ್ವ ಆಹಾರ ದಿನದ ಹಿನ್ನಲೆ:
ಯುನೈಟೆಡ್ ನೇಷನ್ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 1979 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವೆಂದು ಗುರುತಿಸಿತು. ಈ ದಿನವು ಅಕ್ಟೋಬರ್ 16, 1945 ರಂದು ಸಂಭವಿಸಿದ ವಿಶ್ವಸಂಸ್ಥೆಯ (UN) ಆಹಾರ ಮತ್ತು ಕೃಷಿ ಸಂಸ್ಥೆ (FAO) ಅಡಿಪಾಯವನ್ನು ಸೂಚಿಸುತ್ತದೆ. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತಿದೆ. ಆರಂಭದಲ್ಲಿ ಎಫ್‌ಎಒ ಸ್ಥಾಪನೆಯ ನೆನಪಿಗಾಗಿ ವಿಶ್ವ ಆಹಾರ ದಿನವನ್ನು ಪ್ರಾರಂಭಿಸಲಾಯಿತು.

ಕ್ರಮೇಣ ಈ ಆಚರಣೆಯು ಜಾಗತಿಕ ಘಟನೆಯಾಗಿ ಬದಲಾಯಿತು, ಆಹಾರದ ಕೊರತೆಯ ಬಗ್ಗೆ ಜಾಗೃತಿ ಮೂಡಿಸಿತು ಮತ್ತು ಜಗತ್ತಿನಾದ್ಯಂತ ಆಹಾರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಿತು. ಪ್ರತಿ ವರ್ಷ, ವಿಶ್ವ ಆಹಾರ ದಿನವು ಆಹಾರವನ್ನು ಉತ್ತೇಜಿಸಲು ಮತ್ತು ಆಹಾರ ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ. ಈ ಹಿನ್ನಲೆಯಲ್ಲಿ ಹಲವಾರು ಕಂಪನಿಗಳು ವ್ಯವಹಾರಗಳು, ಎನ್‌ಜಿಒ (NGO)ಗಳು, ಮಾಧ್ಯಮಗಳು, ಸಾರ್ವಜನಿಕರು, ಸರ್ಕಾರಗಳು ಹಲವು ರೀತಿಯ ಚಟುವಟಿಕೆಗಳನ್ನು ನಡೆಸುತ್ತವೆ. ಚಟುವಟಿಕೆಗಳ ಮೂಲಕ ಹಸಿವಿನಿಂದ ಬಳಲುತ್ತಿರುವವರಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾರೆ.

ವಿಶ್ವ ಆಹಾರ ದಿನದ ಮಹತ್ವ:
ವಿಶ್ವದಾದ್ಯಂತದ ಬಡ ಮತ್ತು ದುರ್ಬಲ ಸಮುದಾಯಗಳ ಮೇಲೆ ವಿಶೇಷ ಗಮನಹರಿಸುತ್ತದೆ, ಆಹಾರ ಸುರಕ್ಷತೆ ಮತ್ತು ಎಲ್ಲರಿಗೂ ಉತ್ತಮ ಪೋಷಣೆಗೆ ಅಗತ್ಯವಾದ ಕ್ರಮಗಳನ್ನು ಹೈಲೈಟ್ ಮಾಡಲು ಮತ್ತು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ವಿಶ್ವ ಆಹಾರ ದಿನವು ಅನೇಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ರಚಿಸುತ್ತದೆ.

"ವಿಶ್ವ ಆಹಾರ ದಿನ 2020 ಎಫ್‌ಒಒನ 75 ನೇ ವಾರ್ಷಿಕೋತ್ಸವವನ್ನು ಅಸಾಧಾರಣ ಕ್ಷಣದಲ್ಲಿ ವಿಶ್ವ ಕೋವಿಡ್ -19 (Covid 19) ಸಾಂಕ್ರಾಮಿಕ ರೋಗದ ವ್ಯಾಪಕ ಪರಿಣಾಮಗಳನ್ನು ಎದುರಿಸುತ್ತಿದೆ. ಇದು ನಾವು ಒಟ್ಟಾಗಿ ನಿರ್ಮಿಸಬೇಕಾದ ಭವಿಷ್ಯವನ್ನು ಪರಿಶೀಲಿಸುವ ಸಮಯ" ಎಂದು ಆಹಾರ ಮತ್ತು ಯುನೈಟೆಡ್ ರಾಷ್ಟ್ರಗಳ ಅಧಿಕೃತ ವೆಬ್‌ಸೈಟ್ ಸಾರ್ವಜನಿಕರನ್ನು ಎಚ್ಚರಿಸಿದೆ.

English summary
World Food Day 2021 is celebrated all over the world on 16th October. It is an initiative by the Food and Agricultural Organisation (FAO) of the United Nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X