• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆರ್ಭಟಕ್ಕೆ ಇಂಗ್ಲೆಂಡ್ ಕಕ್ಕಾಬಿಕ್ಕಿ!

|

ಲಂಡನ್, ಜೂನ್ 6: ಐಪಿಎಲ್ ಮುಗಿದ ಬಳಿಕ ಈಗ ವಿಶ್ವಕಪ್ ಕಾವು ಜೋರಾಗಿದೆ. ಭಾರತದಲ್ಲಿ ಇನ್ನೇನು ಮುಂಗಾರು ಶುರುವಾಗುವ ಸಮಯ ಬಂದಿದೆ. ಇನ್ನು ಅತ್ತ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಇಂಗ್ಲೆಂಡ್‌ನಲ್ಲಿ ಒಮ್ಮೆ ಮಳೆ ಒಮ್ಮೆ ಬಿಸಿಲು ಇರುವ ವಾತಾವರಣ. ಕ್ರಿಕೆಟ್ ಅಭಿಮಾನಿಗಳ ಉತ್ಸಾಹಕ್ಕೇನೂ ಕಡಿಮೆಯಾಗಿಲ್ಲ.

ಸಾಮಾನ್ಯವಾಗಿ ಭಾರತದಲ್ಲಿ ಯಾವುದೇ ಪಂದ್ಯವಿರಲಿ, ಕ್ರೀಡಾಂಗಣ ತುಂಬಿ ತುಳುಕುತ್ತಿರುತ್ತದೆ. ದೂರದ ಇಂಗ್ಲೆಂಡ್‌ನಲ್ಲಿಯೂ ಭಾರತೀಯ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಭಾರತದ ಪಂದ್ಯಗಳನ್ನು ನೋಡುವುದಕ್ಕಾಗಿಯೇ ಇಂಗ್ಲೆಂಡ್‌ಗೆ ತೆರಳುವ ಹುಚ್ಚು ಅಭಿಮಾನಿಗಳು ಸಾಕಷ್ಟಿದ್ದಾರೆ. ಆದರೆ, ಈ ಬಾರಿ ಅವರ ಸಂಖ್ಯೆ ಇಂಗ್ಲೆಂಡ್‌ಅನ್ನೂ ದಂಗುಬಡಿಸಿದೆ.

ವಿಶ್ವಕಪ್: ಮಿಂಚಿದ ರಾಸ್ ಟೇಲರ್, ಬಾಂಗ್ಲಾದೇಶ ಮಣಿಸಿದ ನ್ಯೂಜಿಲ್ಯಾಂಡ್

ಜೂನ್ 30ರಂದು ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನಿಜಕ್ಕೂ ಈ ಪಂದ್ಯ ಆತಿಥೇಯ ಇಂಗ್ಲೆಂಡಿಗರಿಗೆ ಪರೀಕ್ಷೆಯಾಗುವುದರಲ್ಲಿ ಸಂದೇಹವೇ ಇಲ್ಲ. ಸಾಮಾನ್ಯವಾಗಿ ಆತಿಥೇಯ ದೇಶದ ಪಂದ್ಯವಿರುವಾಗ ತವರಿನ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೆ, ಇಂಗ್ಲೆಂಡ್-ಭಾರತದ ಪಂದ್ಯದಲ್ಲಿ ಇದು ಉಲ್ಟಾ ಆಗಿದೆ. ಈ ಪಂದ್ಯದಲ್ಲಿ ಪ್ರೇಕ್ಷಕಕರ ಗ್ಯಾಲರಿಯಿಂದ ವಿರಾಟ್ ಕೊಹ್ಲಿ ಪಡೆಗೇ ಹೆಚ್ಚು ಜೈಕಾರ ಮೊಳಗಲಿದೆ.

ಟ್ರೆಂಟ್‌ಬ್ರಿಡ್ಜ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಮಣಿಸಿತ್ತು. ಈ ವೇಳೆ ಪಾಕಿಸ್ತಾನದ ಬೆಂಬಲಿಗರು ಮತ್ತು ಇಂಗ್ಲೆಂಡ್ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಶೇ 55ರಷ್ಟು ಭಾರತದ ಅಭಿಮಾನಿಗಳು

ಶೇ 55ರಷ್ಟು ಭಾರತದ ಅಭಿಮಾನಿಗಳು

ಬರ್ಮಿಂಗ್‌ಹ್ಯಾಮ್‌ನ ಕ್ರೀಡಾಂಗಣದಲ್ಲಿ ಜೂನ್ 30ರಂದು ನಡೆಯುವ ಪಂದ್ಯದಲ್ಲಿ ಒಟ್ಟು ಟಿಕೆಟ್‌ಗಳ ಪೈಕಿ ಶೇ 55ರಷ್ಟು ಟಿಕೆಟ್‌ಗಳನ್ನು ಭಾರತದ ಅಭಿಮಾನಿಗಳೇ ಖರೀಸಿದ್ದಾರೆ. ಟಿಕೆಟ್ ಖರೀದಿ ಮಾಡಿರುವ ಇಂಗ್ಲೆಂಡ್ ಬೆಂಬಲಿಗರ ಸಂಖ್ಯೆ ಶೇ 42ರಷ್ಟು ಮಾತ್ರ. ಅಂದರೆ, 24,500 ಗರಿಷ್ಠ ಮಿತಿ ಪ್ರೇಕ್ಷಕರು ಕೂರಬಹುದಾದ ಕ್ರೀಡಾಂಗಣದಲ್ಲಿ 13,500 ಮಂದಿ ಭಾರತದ ಅಭಿಮಾನಿಗಳೇ ಇರುತ್ತಾರೆ. ಇಂಗ್ಲೆಂಡ್ ಅಭಿಮಾನಿಗಳ ಸಂಖ್ಯೆ ಸುಮಾರು 10,300 ಇರಲಿದೆ.

ಕನಿಷ್ಠ ಬೆಲೆಯೇ 49,200 ರೂ!

ಕನಿಷ್ಠ ಬೆಲೆಯೇ 49,200 ರೂ!

ಈ ಪಂದ್ಯಕ್ಕೆ ಬ್ಲಾಕ್ ಮಾರ್ಕೆಟ್‌ನಲ್ಲಿ ಭಾರಿ ಬೇಡಿಕೆ ಉಂಟಾಗಿದೆ. ಅತಿ ಕಡಿಮೆ ಎಂದರೂ ಒಂದು ಟಿಕೆಟ್‌ಗೆ 560 ಪೌಂಡ್ (49,200 ರೂ) ಇದೆ. ಭಾರತದ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಹಾಗೆಯೇ ಕೆಲವರು ಇದನ್ನು ಲಾಭದ ಕೆಲಸವನ್ನಾಗಿಯೂ ಮಾಡಿಕೊಂಡಿದ್ದಾರೆ. ಮೊದಲೇ ಟಿಕೆಟ್ ಖರೀದಿ ಮಾಡಿದ ಅನೇಕರು ಭಾರತೀಯ ಅಭಿಮಾನಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪ್ರೌಢತೆಯ ಆಟದಿಂದ ಗೆಲುವು ತಂದ ರೋಹಿತ್ ನಿಜಕ್ಕೂ ಗ್ರೇಟ್!

ಪಾಕ್ ಪಂದ್ಯದಲ್ಲಿ ಅಭಿಮಾನಿಗಳ ಸೈನ್ಯ

ಪಾಕ್ ಪಂದ್ಯದಲ್ಲಿ ಅಭಿಮಾನಿಗಳ ಸೈನ್ಯ

ಈ ಪಂದ್ಯಕ್ಕೂ ಮುನ್ನ ಓಲ್ಡ್ ಟ್ರಾಫೊರ್ಡ್‌ನಲ್ಲಿ ಜೂನ್ 16ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಇಲ್ಲಿಯೂ ಭಾರತೀಯ ಅಭಿಮಾನಿಗಳದ್ದೇ ಹವಾ ಜೋರಾಗಿ ಇರಲಿದೆ. ಈ ಪಂದ್ಯದಲ್ಲಿ ಒಟ್ಟು ಟಿಕೆಟ್‌ಗಳಲ್ಲಿ ಶೇ 66.6ರಷ್ಟು ಟಿಕೆಟ್‌ಗಳನ್ನು ಭಾರತೀಯ ಅಭಿಮಾನಿಗಳೇ ಖರೀದಿ ಮಾಡಿದ್ದಾರೆ. ಟಿಕೆಟ್ ಖರೀದಿಸಿದ ಪಾಕ್ ಅಭಿಮಾನಿಗಳ ಸಂಖ್ಯೆ ಕೇವಲ ಶೇ 18.1.

ಅಭಿಮಾನಿಗಳ ನಡುವೆ ಪೈಪೋಟಿ

ಅಭಿಮಾನಿಗಳ ನಡುವೆ ಪೈಪೋಟಿ

ಸುಮಾರು 124 ದೇಶಗಳ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಇಲ್ಲಿ ತಂಡಗಳ ನಡುವಿನ ಹೋರಾಟದ ಜತೆಗೆ, ಅಭಿಮಾನಿಗಳ ನಡುವಿನ ಪೈಪೋಟಿಯೂ ತೀವ್ರವಾಗಿ ಇರಲಿದೆ. ಪಾಕ್-ಇಂಗ್ಲೆಂಡ್ ಪಂದ್ಯದ ನಡುವೆ ಇಂಗ್ಲೆಂಡ್ ಕ್ರಿಕೆಟಿಗ ಕ್ರಿಸ್ ವೋಕ್ಸ್ ಮೊದಲ ಕ್ಯಾಚ್ ಹಿಡಿದಾಗ ಬೆಂಬಲಿಗರು ದೊಡ್ಡ ಗದ್ದಲ ಎಬ್ಬಿಸಿದ್ದರು. ಇದರಿಂದ ಅಂಪೈರ್ ಮಾರಿಸ್ ಎರಾಸ್ಮಸ್ ಅವರು ಬೌಂಡರಿ ಗೆರೆ ಬಳಿ ಸಂಭ್ರಮಾಚರಣೆ ಮಾಡದಂತೆ ಇಂಗ್ಲೆಂಡ್ ಆಟಗಾರರಿಗೆ ಸೂಚಿಸಿದ್ದರು. ಲಾಂಗ್‌ ಆಫ್‌ನಲ್ಲಿ ಜೇಸನ್ ರಾಯ್ ಕ್ಯಾಚ್ ಕೈಚೆಲ್ಲಿದಾಗ ಈ ಸದ್ದು ಜೋರಾಗಿತ್ತು. ಇಂಗ್ಲೆಂಡ್ ಅಭಿಮಾನಿಗಳನ್ನು ಪಾಕ್ ಅಭಿಮಾನಿಗಳು ಕೆಣಕಿದ್ದರು.

ವಿಶ್ವಕಪ್ 2019: ರೋಹಿತ್ ಶರ್ಮಾ ಅಪ್ಪಿ ಅಭಿನಂದಿಸಿದ ವಿರಾಟ್ ಕೊಹ್ಲಿ

English summary
There will be a huge presence of Indian supporters than England in the match between India and England on June 30 in Edgbaston.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X