ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ವಿಶ್ವ ಹತ್ತಿ ದಿನ- ಇಲ್ಲಿದೆ ಅದರ ಮಹತ್ವ, ಇತಿಹಾಸ

|
Google Oneindia Kannada News

ನಮ್ಮ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಗಳಿಗೆ ಮೂಲ ಎಂಬುದು ಗೊತ್ತಿರಬಹುದು. ಈಗ ರೇಷ್ಮೆ ಇತ್ಯಾದಿ ಬಂದಿದ್ದಿರಬಹುದಾದರೂ ಬಹಳ ಕಾಲದಿಂದ ಭಾರತದ ವಸ್ತ್ರ ತಯಾರಿಕೆಗೆ ಆಧಾರವಾಗಿರುವುದು ಹತ್ತಿಯೇ.

ಪುರಾತನ ಕಾಲದಿಂದಲೂ ಹತ್ತಿಯ ಬಗ್ಗೆ ಮಾನವರಿಗೆ ಅರಿವು ಇದೆ. ಸಾಕ್ಷ್ಯಾಧಾರಗಳ ಪ್ರಕಾರ, ಹತ್ತಿಯಿಂದ ಮಾಡಿದ ಉಡುಪುಗಳನ್ನು ಕ್ರಿಸ್ತಪೂರ್ವ 6 ಸಾವಿರ ವರ್ಷಗಳ ಹಿಂದೆಯೇ ಮನುಷ್ಯರು ಧರಿಸುತ್ತಿದ್ದರು. ಸಿಂಧೂ ನದಿ ನಾಗರಿಕತೆ (ಇಂಡಸ್ ವ್ಯಾಲಿ ಸಿಲಿವೈಸೇಶನ್) ಅವಧಿಯಲ್ಲೂ ಹತ್ತಿ ಬಳಕೆ ಮಾಡಲಾಗುತ್ತಿದ್ದುದು ಕಂಡು ಬಂದಿದೆ.

World Smile Day 2022 : ವಿಶ್ವ ನಗು ದಿನ : ಥೀಮ್, ಇತಿಹಾಸ, ಪ್ರಾಮುಖ್ಯತೆ ಮತ್ತು ಉಲ್ಲೇಖಗಳುWorld Smile Day 2022 : ವಿಶ್ವ ನಗು ದಿನ : ಥೀಮ್, ಇತಿಹಾಸ, ಪ್ರಾಮುಖ್ಯತೆ ಮತ್ತು ಉಲ್ಲೇಖಗಳು

ಹತ್ತಿಯಿಂದ ತಯಾರಿಸಲಾದ ಉಡುಪುಗಳ ಬಲು ಚಂದ. ನೋಡಲು ಚಂದ, ತೊಡಲೂ ಚಂದ. ಹತ್ತಿ ಉತ್ಪಾದನೆಯಲ್ಲಿ ಭಾರತ ನಂಬರ್ ಒನ್. ಆದರೆ, ಹತ್ತಿ ರಫ್ತಿನಲ್ಲಿ ಅಮೆರಿಕ ನಂಬರ್ ಒನ್.

 ಹತ್ತಿ ದಿನದ ಇತಿಹಾಸ

ಹತ್ತಿ ದಿನದ ಇತಿಹಾಸ

2019ರಿಂದಲೂ ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಅಕ್ಟೋಬರ್ 7ರಂದು ವಿಶ್ವ ಹತ್ತಿ ದಿನ ಇರುತ್ತದೆ. ಅಂದೇ ಈ ದಿನವನ್ನು ಆಚರಿಸಲು ಕಾರಣ ಇದೆ.

ಆಫ್ರಿಕಾದ ಸಹಾರ ಮರುಭೂಮಿಗೆ ಹೊಂದಿಕೊಂಡಿರುವ ದೇಶಗಳ ಪೈಕಿ ಹತ್ತಿ ಬೆಳೆಯಲ್ಲಿ ಹೆಸರುವಾಸಿಯಾದ ಬೆನಿನ್, ಬರ್ಕೀನಾ ಫಾಸೋ, ಚಾದ್ ಮತ್ತು ಮಾಲಿ ಈ ನಾಲ್ಕು ದೇಶಗಳು ಅಕ್ಟೋಬರ್ 7ರಂದು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ವಿಶ್ವ ಹತ್ತಿ ದಿನ ಆಚರಣೆಗೆ ಪ್ರಸ್ತಾಪ ಮಾಡಿದ್ದವು.

ಕಾಟನ್-4 ದೇಶಗಳ ಪ್ರಸ್ತಾಪವನ್ನು ಒಪ್ಪಿದ ಡಬ್ಲ್ಯುಟಿಒ 2019 ಅಕ್ಟೋಬರ್ 7ರಂದು ಮೊದಲ ಬಾರಿಗೆ ವಿಶ್ವ ಹತ್ತಿ ದಿನದ ಆಚರಣೆಗೆ ಚಾಲನೆ ಕೊಟ್ಟಿತು. ಡಬ್ಲ್ಯೂಟಿಒದ ಮುಖ್ಯ ಕಚೇರಿಯಲ್ಲಿ 800ಕ್ಕೂ ಹೆಚ್ಚು ಮಂದಿ ವಿಶ್ವ ಹತ್ತಿ ದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶ್ವಾದ್ಯಂತ ಹತ್ತಿ ಬೆಳೆಗಾರರ ಪ್ರತಿನಿಧಿಗಳು, ಹತ್ತಿ ಮಾರಾಟಗಾರರು, ಕೃಷಿ ವಿಜ್ಞಾನಿಗಳು ಇತ್ಯಾದಿ ಹತ್ತಿಗೆ ಸಂಬಂಧಿಸಿದ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಹತ್ತಿ ದಿನದ ಮಹತ್ವ

ಹತ್ತಿ ದಿನದ ಮಹತ್ವ

ಹತ್ತಿಗೆ ಸಂಬಂಧಿಸಿದ ಚಟುವಟಿಕೆಗಳು, ಹತ್ತಿಯ ವಿವಿಧ ಉತ್ಪನ್ನಗಳು, ಹತ್ತಿ ಬೆಳೆಗೆ ಪೂರಕವಾದ ತಂತ್ರಜ್ಞಾನ ಇತ್ಯಾದಿಯನ್ನು ಪರಿಚಯಿಸಲು ಈ ದಿನವನ್ನು ಬಳಸಿಕೊಳ್ಳಬಹುದು. ವಿಶ್ವಸಂಸ್ಥೆಯಿಂದ ಈ ದಿನಕ್ಕೆ ಮಾನ್ಯತೆ ಸಿಕ್ಕಿರುವುದು ಹತ್ತಿ ಉತ್ಪನ್ನಗಳ ಬಗ್ಗೆ ಜಗಜ್ಜಾಹೀರಾಗುವ ರೀತಿಯಲ್ಲಿ ಅರಿವು ಮೂಡಿಸುವುದು ಸುಲಭವಾಗುತ್ತದೆ. ಅಭಿವೃದ್ಧಿಶೀಲ ದೇಶಗಳ ಹತ್ತಿಗೆ ಜಾಗತಿಕ ಮಾರುಕಟ್ಟೆ ಹೆಚ್ಚು ಸುಲಭವಾಗಿ ತೆರೆದುಕೊಳ್ಳುವಂತೆ ಪ್ರಯತ್ನಿಸಬಹುದು.

 ಹತ್ತಿ ಉತ್ಪನ್ನಗಳು

ಹತ್ತಿ ಉತ್ಪನ್ನಗಳು

ಹತ್ತಿ ಬಹೂಪಯೋಗಿ ವಸ್ತು. ಬಟ್ಟೆಗಳನ್ನು ತಯಾರಿಸಲು ಇದು ಪ್ರಮುಖವಾಗಿ ಉಪಯೋಗಕ್ಕೆ ಬರುತ್ತದೆ. ವುಲನ್ ಬಟ್ಟೆ ಮಾತ್ರವಲ್ಲ, ಡೆನಿಮ್ ಬಟ್ಟೆಗಳು, ಜೀನ್ಸ್ ಬಟ್ಟೆಗಳನ್ನೂ ತಯಾರಿಸಬಹುದು. ಪಾಲಿಯಸ್ಟರ್ ಬಟ್ಟೆಗಳನ್ನೂ ಹತ್ತಿಯಿಂದಲೇ ಮಾಡಲಾಗುತ್ತದೆ.

ಹತ್ತಿಯ ಬೀಜಗಳೂ ಉಪಯುಕ್ತ. ಇದರ ಬೀಜದಿಂದ ಎಣ್ಣೆ, ಸೋಪು, ರಬ್ಬರ್ ಇತ್ಯಾದಿ ಉತ್ಪನ್ನಗಳನ್ನು ಮಾಡಬಹುದು. ಇದರಲ್ಲಿ ಔಷಧೀಯ ಗುಣವೂ ಇದೆ. ಫಾರ್ಮಾ ಕಂಪನಿಗಳು ಕೆಲ ಔಷಧಗಳ ತಯಾರಿಕೆಗೆ ಹತ್ತಿ ಬೀಜಗಳನ್ನು ಬಳಸುತ್ತವೆ.

ಹತ್ತಿ ಬೀಜದ ಎಣ್ಣೆ ಕೊಲೆಸ್ಟ್ರಾಲ್-ಮುಕ್ತವಾಗಿರುತ್ತದೆ. ದೇಹಕ್ಕೆ ಒಳ್ಳೆಯದು ಮಾಡುವ ಆ್ಯಂಟಿ-ಆಕ್ಸಿಡೆಂಟ್ಸ್ ಅಂಶಗಳು ಈ ಎಣ್ಣೆಯಲ್ಲಿ ಯತೇಚ್ಛವಾಗಿರುತ್ತವೆ. ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುತ್ತದೆ. ಈ ಎಣ್ಣೆಯನ್ನು ಅಡುಗೆಗೆ ಬಳಸಬಹುದು, ಸೋಪು, ಎಮಲ್ಸಿಫಯರ್, ಕಾಸ್ಮೆಟಿಕ್ಸ್ ಇತ್ಯಾದಿ ತಯಾರಿಕೆಗೂ ಬಳಸಬಹುದು.

 ಹತ್ತಿ ಇತಿಹಾಸ

ಹತ್ತಿ ಇತಿಹಾಸ

ಹತ್ತಿಗೆ ಇಂಗ್ಲೀಷ್‌ನಲ್ಲಿ ಕರೆಯಲಾಗುವ ಕಾಟನ್ ಪದ ಅರೇಬಿಕ್ ಭಾಷೆಯಲ್ಲಿ ಬಳಸುವ ಖುಟುನ್ ಪದವೇ ಮೂಲ. ಹತ್ತಿಗೆ ಅರೇಬಿಕ್‌ನಲ್ಲಿ ಖುಟುನ್ ಎಂದು ಕರೆಯಲಾಗುತ್ತಿತ್ತು. ಅದು ಆಂಗ್ಲರಿಗೆ ಕಾಟನ್ ಆಗಿದೆ.

ಪೆರುವಿನಲ್ಲಿ ಕ್ರಿಸ್ತಪೂರ್ವ 6 ಸಾವಿರ ವರ್ಷಗಳ ಹಿಂದೆ ಹತ್ತಿ ಬಳಕೆಯಾಗುತ್ತಿದ್ದುದರ ಕುರುಹು ಸಿಕ್ಕಿದೆ. ಸಿಂದೂ ಕಣಿವೆ ನಾಗರಿಕೆಯಲ್ಲಿ ಕ್ರಿಸ್ತ ಪೂರ್ವ 5500 ರಲ್ಲಿ ಹತ್ತಿ ಬೆಳೆಯುತ್ತಿರುವುದು ಗೊತ್ತಾಗಿದೆ. ಈಗಿನ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಇದರ ಕುರುಹು ಇದೆ. ಇಲ್ಲಿಂದ ಹತ್ತಿ ಅರಬ್‌ಗೆ ಮತ್ತು ಅಲ್ಲಿಂದ ಯೂರೋಪ್ ಮತ್ತಿತರೆಡೆಗೆ ರಫ್ತಾಗಿ ಹೋಗುತ್ತಿದ್ದಿರಬಹುದು ಎಂದು ಭಾವಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

 Papankush Ekadashi 2022: ಏಕಾದಶಿಯ ಪೂಜಾ ವಿಧಿ, ಮಂತ್ರ, ಸಮಯ ಕಥೆ ತಿಳಿಯಿರಿ Papankush Ekadashi 2022: ಏಕಾದಶಿಯ ಪೂಜಾ ವಿಧಿ, ಮಂತ್ರ, ಸಮಯ ಕಥೆ ತಿಳಿಯಿರಿ

English summary
October 7 is celebrated as World Cotton Day. WTO first launched this day in 2019. Know more about history, significance of world cotton day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X