ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Cancer Day 2023: ವಿಶ್ವ ಕ್ಯಾನ್ಸರ್​ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು

|
Google Oneindia Kannada News

ವಿಶ್ವ ಕ್ಯಾನ್ಸರ್ ದಿನ 2023: ಫೆಬ್ರುವರಿ 4 ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಜಾಗೃತಿ ಮತ್ತು ರೋಗದ ಚಿಕಿತ್ಸೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಜಾಗತಿಕವಾಗಿ ಸಾವುಗಳಿಗೆ ಪ್ರಮುಖ ಕಾರಣವಾಗಿರುವ ಕ್ಯಾನ್ಸರ್‌ನ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಸರ್ಕಾರಗಳು, ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುವ ಗುರಿಯನ್ನು ಇದು ಹೊಂದಿದೆ.

ಆದಾಗ್ಯೂ, ಜೀವನಶೈಲಿಯ ಬದಲಾವಣೆಗಳು, ನಿಯಮಿತ ತಪಾಸಣೆ ಮತ್ತು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಮೂಲಕ ಪ್ರಪಂಚದಾದ್ಯಂತ ಈ ಸಾವುಗಳಲ್ಲಿ 40 ಪ್ರತಿಶತಕ್ಕಿಂತಲೂ ಹೆಚ್ಚು ತಡೆಗಟ್ಟಬಹುದು. ಈ ದಿನ ಕ್ಯಾನ್ಸರ್ ರೋಗಿಗಳು ಮತ್ತು ಬದುಕುಳಿದವರ ಜೀವನದ ಸುಧಾರಣೆಯಲ್ಲಿ ಪ್ರಭಾವ ಬೀರಲು ಅವಕಾಶವನ್ನು ನೀಡುತ್ತದೆ.

World Cancer Day 2023

ವಿಶ್ವ ಕ್ಯಾನ್ಸರ್ ದಿನ 2023: ಥೀಮ್

ವಿಶ್ವ ಕ್ಯಾನ್ಸರ್ ದಿನ 2023: ಥೀಮ್

ಮೂರು ವರ್ಷಗಳವರೆಗೆ - 2022, 2023 ಮತ್ತು 2024 - ವಿಶ್ವ ಕ್ಯಾನ್ಸರ್ ದಿನದ ಥೀಮ್ ಅನ್ನು "ಕ್ಲೋಸ್ ದಿ ಕೇರ್ ಗ್ಯಾಪ್" ಎಂದು ನಿರ್ಧರಿಸಲಾಗಿದೆ. ಈ ಬಹು-ವರ್ಷದ ಅಭಿಯಾನ ಜಗತ್ತಿನಾದ್ಯಂತ ಕ್ಯಾನ್ಸರ್ ಆರೈಕೆಯಲ್ಲಿನ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗುರುತಿಸುವುದಾಗಿದೆ.

ವಿಶ್ವ ಕ್ಯಾನ್ಸರ್ ದಿನ 2023: ಮಹತ್ವ

ವಿಶ್ವ ಕ್ಯಾನ್ಸರ್ ದಿನ 2023: ಮಹತ್ವ

ಜಾಗೃತಿ ಮೂಡಿಸುವುದು ಮತ್ತು ರೋಗಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುದು ದಿನದ ಮುಖ್ಯ ಗುರಿಯಾಗಿದೆ. ಶ್ವಾಸಕೋಶ, ಸ್ತನ, ಗರ್ಭಕಂಠ, ತಲೆ ಮತ್ತು ಕುತ್ತಿಗೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (CRC) ಭಾರತೀಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಕ್ಯಾನ್ಸರ್ಗಳಾಗಿವೆ. ವಿಶ್ವ ಕ್ಯಾನ್ಸರ್ ದಿನದಂದು, ಪ್ರತಿಯೊಬ್ಬರೂ ಕ್ಯಾನ್ಸರ್ ಮುಕ್ತ ಆರೋಗ್ಯಕರ ಜಗತ್ತನ್ನು ಹೊಂದಲು ಒಟ್ಟಾಗಿ ನಿಲ್ಲಬೇಕಿದೆ. ಇಂದು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಕಾರ್ಯಕ್ರಮಗಳಲ್ಲಿ ಕ್ಯಾನ್ಸರ್ ಮತ್ತು ಅದರ ಆರಂಭಿಕ ಪತ್ತೆ, ಚಿಕಿತ್ಸೆ ಮತ್ತು ಹೆಚ್ಚಿನದನ್ನು ಜನರಿಗೆ ತಿಳಿಸಲು ಮತ್ತು ಅರಿವು ಮೂಡಿಸಲಾಗುತ್ತದೆ.

ವಿಶ್ವ ಕ್ಯಾನ್ಸರ್ ದಿನ 2023: ಉಲ್ಲೇಖಗಳು

ವಿಶ್ವ ಕ್ಯಾನ್ಸರ್ ದಿನ 2023: ಉಲ್ಲೇಖಗಳು

"ಕ್ಯಾನ್ಸರ್‌ಗೆ ಹೇಳುವ ನನ್ನ ಮಾತು, 'ನೀನು ನನ್ನ ದೇಹವನ್ನು ಆಕ್ರಮಿಸಲು ಪ್ರಯತ್ನಿಸುತ್ತಿರುವೆ; ನೀನು ನನ್ನನ್ನು ನನ್ನ ಕುಟುಂಬದಿಂದ ದೂರವಿಡಲು ಪ್ರಯತ್ನಿಸುತ್ತಿರುವೆ, ಆದರೆ ನಾನು ನಿನಗಿಂತ ಬಲಶಾಲಿ ಮತ್ತು ನಾನು ಗಟ್ಟಿಯಾಗಿ ನಿಂತು ನಿನ್ನ ವಿರುದ್ಧ ಹೊಡೆಯಲಿದ್ದೇನೆ" -ಸ್ಟುವರ್ಟ್ ಸ್ಕಾಟ್

"ಕ್ಯಾನ್ಸರ್ ನನ್ನ ಎಲ್ಲಾ ದೈಹಿಕ ಸಾಮರ್ಥ್ಯಗಳನ್ನು ಕಸಿದುಕೊಳ್ಳಬಹುದು. ಆದರೆ ಅದು ನನ್ನ ಮನಸ್ಸನ್ನು ಮುಟ್ಟಲು ಸಾಧ್ಯವಿಲ್ಲ. ಅದು ನನ್ನ ಹೃದಯವನ್ನು ಮುಟ್ಟಲು ಸಾಧ್ಯವಿಲ್ಲ ಮತ್ತು ಅದು ನನ್ನ ಆತ್ಮವನ್ನು ಮುಟ್ಟಲು ಸಾಧ್ಯವಿಲ್ಲ." - ಜಿಮ್ ವಾಲ್ವಾನೋ

"ಕ್ಯಾನ್ಸರ್ ಅನೇಕ ಬಾಗಿಲುಗಳನ್ನು ತೆರೆಯುತ್ತದೆ. ಅದರಲ್ಲಿ ಪ್ರಮುಖವಾದದ್ದು ನಿಮ್ಮ ಹೃದಯ." - ಗ್ರೆಗ್ ಆಂಡರ್ಸನ್

ಕ್ಯಾನ್ಸರ್ ಒಂದು ಮ್ಯಾರಥಾನ್ ಆಗಿದೆ. ಅದರೊಂದಿಗೆ ನೀವು ಗೆಲ್ಲಿ. ಅದು ನಿಮ್ಮನ್ನು ಗೆಲ್ಲಲು ಬಿಡಬೇಕು. ಉಸಿರಾಡುವಂತೆ ಅದು ನಿಮ್ಮ ದೇಹದಿಂದ ದೂರವಾಗುವಂತೆ ನೋಡಿಕೊಳ್ಳಿ" - ಸಾರಾ ಬೆಟ್ಜ್ ಬುಸಿಯೆರೊ

ಸರಳ ಜೀವನಶೈಲಿ ಬದಲಾವಣೆಗಳು

ಸರಳ ಜೀವನಶೈಲಿ ಬದಲಾವಣೆಗಳು

ಎಲ್ಲಾ ರೂಪಗಳಲ್ಲಿ ತಂಬಾಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದರಿಂದ ಬಾಯಿಯ ಕುಹರ, ಶ್ವಾಸಕೋಶಗಳು, ಜಠರಗರುಳಿನ ಪ್ರದೇಶ, ಇತ್ಯಾದಿಗಳ ಕ್ಯಾನ್ಸರ್ ಬೆಳವಣಿಗೆಯಿಂದ ನಿಮ್ಮನ್ನು ತ್ವರಿತವಾಗಿ ದೂರವಿಡಬಹುದು. ತಂಬಾಕನ್ನು ಸಾಮಾನ್ಯವಾಗಿ ಸಿಗರೇಟ್‌ಗಳಲ್ಲಿ ಬಳಸಲಾಗುತ್ತದೆ. ಅದನ್ನು ಇತರ ರಾಸಾಯನಿಕಗಳೊಂದಿಗೆ ಸಂಯೋಜಿಸಲಾಗುತ್ತದೆ. ಇದು ಕಾಲಾನಂತರದಲ್ಲಿ ಜೀವಕೋಶವನ್ನು ಹಾನಿಗೊಳಿಸುತ್ತದೆ. ಹೀಗಾಗಿ ತಂಬಾಕು ಸೇವನೆಯಿಂದ ದೂರವಿರುವುದರಿಂದ ಕ್ಯಾಣ್ಸರ್ ತಡೆಗಟ್ಟಬಹುದು.

ದೇಹದ ತೂಕವನ್ನು ಹೆಚ್ಚಾಗದಂತೆ ನೋಡಿಕೊಳ್ಳುವುದು. ಸ್ಥೂಲಕಾಯದ ವ್ಯಕ್ತಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಸ್ಥೂಲಕಾಯದ ಮಹಿಳೆಯರು ವಿಶೇಷವಾಗಿ ಸ್ತನ ಕ್ಯಾನ್ಸರ್‌ಗೆ ಗುರಿಯಾಗುತ್ತಾರೆ. ಆರೋಗ್ಯಕರ ಆಹಾರ ಸೇವನೆಯು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ದೇಹದ ತೂಕವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಿ.

ಸೂರ್ಯನಿಂದ ಬರುವ ನೇರಳಾತೀತ ವಿಕಿರಣವು ಚರ್ಮದ ಕ್ಯಾನ್ಸರ್ಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಸೂರ್ಯನ ಬೆಳಕಿನಲ್ಲಿರುವ ಯುವಿ ಕಿರಣಗಳು ಡಿಎನ್ಎ ಹಾನಿಯನ್ನು ಉಂಟುಮಾಡಬಹುದು ಮತ್ತು ಕ್ಯಾನ್ಸರ್ಗೆ ಕಾರಣವಾಗಬಹುದು. ಅಲ್ಲದೆ, ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಸನ್ ಬರ್ನ್ಸ್ ಮತ್ತು ತೀವ್ರ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ, ಸೂರ್ಯನ ಹಾನಿಕಾರಕ ವಿಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ರಕ್ಷಣಾತ್ಮಕ ಟೋಪಿಗಳು, ಉದ್ದನೆಯ ತೋಳುಗಳು ಮತ್ತು ಸನ್‌ಸ್ಕ್ರೀನ್ ಉತ್ಪನ್ನಗಳನ್ನು ಬಳಸಿ.

English summary
World Cancer Day 2023: Theme, History And Significance In kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X