ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕ್ಯಾನ್ಸರ್ ದಿನ -2021: ಈ ದಿನಾಚರಣೆ ಬಗ್ಗೆ ನಿಮಗೆಷ್ಟು ಗೊತ್ತು?

|
Google Oneindia Kannada News

ನವದೆಹಲಿ, ಫೆಬ್ರವರಿ.04: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗಿಂತಲೂ ಮೊದಲ ಜಗತ್ತನ್ನು ಕಾಡಿದ್ದು ಮಾರಕ ರೋಗ ಕ್ಯಾನ್ಸರ್. ಪ್ರತಿವರ್ಷ ಫೆಬ್ರವರಿ.04ರಂದು ವಿಶ್ವ ಕ್ಯಾನ್ಸರ್ ದಿನವಾಗಿದೆ. ಅಪಾಯಕಾರಿ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಈ ದಿನದ ವಿಶೇಷವಾಗಿದೆ.

ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರಿಕೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಒಕ್ಕೂಟ ರಚಿಸಲಾಗಿದೆ. ಮನುಷ್ಯನ ದೇಹದಲ್ಲಿ ಅನಿಯಂತ್ರಿತ ಜೀವಕೋಶದ ಬೆಳವಣಿಗೆಯನ್ನು ಕ್ಯಾನ್ಸರ್ ಎಂದು ಹೇಳಲಾಗುತ್ತದೆ.

ಸ್ತನ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮೈಸೂರಿನ ಪ್ರೊಫೆಸರ್‌ ಸ್ತನ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮೈಸೂರಿನ ಪ್ರೊಫೆಸರ್‌

ಅಂತಾರಾಷ್ಚ್ರೀಯ ಮಟ್ಟದಲ್ಲಿ ಬಹಳಷ್ಟು ಜನರನ್ನು ಬಲಿ ಪಡೆದಿರುವ ಮತ್ತು ಅತಿಹೆಚ್ಚು ಅಪಾಯಕಾರಿ ಕ್ಯಾನ್ಸರ್ ರೋಗದ ಬಗ್ಗೆ ನಿಮಗೆಷ್ಟು ಗೊತ್ತಿದೆ. ವಿಶ್ವ ಕ್ಯಾನ್ಸರ್ ದಿನ ಆಚರಿಸುವ ಉದ್ದೇಶವೇನು, ವಿಶ್ವ ಕ್ಯಾನ್ಸರ್ ದಿನದ ಇತಿಹಾಸವೇನು, ವಿಶ್ವ ಕ್ಯಾನ್ಸರ್ ದಿನವನ್ನು ಹೇಗೆ ಆಚರಿಸಲಾಗುತ್ತದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಜಗತ್ತಿನ ಪ್ರತಿ 6 ಮಂದಿ ಪೈಕಿ ಒಬ್ಬರು ಕ್ಯಾನ್ಸರ್ ಗೆ ಬಲಿ

ಜಗತ್ತಿನ ಪ್ರತಿ 6 ಮಂದಿ ಪೈಕಿ ಒಬ್ಬರು ಕ್ಯಾನ್ಸರ್ ಗೆ ಬಲಿ

ಎಲ್ಲ ವಯೋಮಾನದವರಿಗೂ ಕ್ಯಾನ್ಸರ್ ರೋಗ ಅಪಾಯಕಾರಿ ಆಗಿರುತ್ತದೆ. ಕ್ಯಾನ್ಸರ್ ರೋಗದ ಬಗ್ಗೆ ಸೂಕ್ತ ಸಂದರ್ಭದಲ್ಲಿ ಪತ್ತೆ ಮಾಡದೇ ಹೋದರೆ ಸಾವಿನ ಅಪಾಯ ಕಟ್ಟಿಟ್ಟ ಬುತ್ತಿ. ಸಮಯ ಮೀರಿದರೆ ಈ ರೋಗಕ್ಕೆ ಚಿಕಿತ್ಸೆಯೂ ಇಲ್ಲ. ಈ ಕಾರಣದಿಂದಲೇ ವಿಶ್ವದಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ಇದೇ ಕ್ಯಾನ್ಸರ್ ರೋಗದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಹೆಚ್ಐವಿ ಏಡ್ಸ್, ಮಲೇರಿಯಾ ಮತ್ತು ಕ್ಷಯ ರೋಗಕ್ಕಿಂತ ಕ್ಯಾನ್ಸರ್ ರೋಗದಿಂದಲೇ ಅತಿಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜಾಗತಿಕ ಕ್ಯಾನ್ಸರ್ ದಿನ 2021ರ ವಿಷಯ

ಜಾಗತಿಕ ಕ್ಯಾನ್ಸರ್ ದಿನ 2021ರ ವಿಷಯ

"ನಾನೆಲ್ಲರೂ ಸೇರೋಣ, ನಮ್ಮಿಷ್ಟದಂತೆ ಬದುಕೋಣ" ಎನ್ನುವುದೇ 2021ರ ವಿಶ್ವ ಕ್ಯಾನ್ಸರ್ ದಿನಾಚರಣೆಯ ವಿಷಯವಾಗಿದೆ. ಈ ವರ್ಷ ಸಹಕಾರ ಮತ್ತು ಸಾಮೂಹಿಕ ಕ್ರಿಯೆಯನ್ನು ನೆನಪಿಸುತ್ತದೆ. ನಾವು ಒಟ್ಟಿಗೆ ಸೇರಲು ಬಯಸಿದ ಸಂದರ್ಭದಲ್ಲಿ ಬಯಸಿದ್ದನ್ನು ನಾವು ಸಾಧಿಸಬಹುದ.: ಕ್ಯಾನ್ಸರ್ ಇಲ್ಲದ ಆರೋಗ್ಯಕರ, ಪ್ರಕಾಶಮಾನವಾದ ಜಗತ್ತನ್ನು ಕಟ್ಟಬಹುದು ಎನ್ನುವುದಾಗಿದೆ.

ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆ

ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆ

ಪ್ಯಾರಿಸ್ ನಲ್ಲಿ ಮೊದಲ ವಿಶ್ವ ಕ್ಯಾನ್ಸರ್ ದಿನದ ಶೃಂಗಸಭೆಯನ್ನು 2000ರಲ್ಲಿ ನಡೆಸಲಾಯಿತು. ವಿಶ್ವ ಕ್ಯಾನ್ಸರ್ ದಿನಾಚರಣೆ ಗುರಿ ಮತ್ತು ಘೋಷಣೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 2008ರಲ್ಲಿ ಅಂತಾರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಒಕ್ಕೂಟ ಸ್ಥಾಪಿಸಲಾಯಿತು. ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಾಥಮಿಕ ಗುರಿ ಕ್ಯಾನ್ಸರ್ ನಿಂದ ಉಂಟಾಗುವ ಅನಾರೋಗ್ಯ ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸುವುದೇ ಆಗಿದೆ.

ಕ್ಯಾನ್ಸರ್ ದಿನಾಚರಣೆಯ ವೈಖರಿ ಹೇಗಿರುತ್ತದೆ?

ಕ್ಯಾನ್ಸರ್ ದಿನಾಚರಣೆಯ ವೈಖರಿ ಹೇಗಿರುತ್ತದೆ?

ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಎಲ್ಲ ರಾಷ್ಟ್ರಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವು ರೀತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಶಾಲೆ, ಆಸ್ಪತ್ರೆ, ಮಾರುಕಟ್ಟೆ, ಉದ್ಯಾನವನ, ಸಮುದಾಯ ಸಭಾಂಗಣ, ಪೂಜಾ ಸ್ಥಳ - ಬೀದಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಸಮುದಾಯ, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಒಟ್ಟುಗೂಡಿಸಿ ಜಾಗೃತಿ ಮೂಡಿಸಲಾಗುತ್ತದೆ.

English summary
World Cancer Day 2021: Theme, History And Significance In kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X