ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮೊದಲು, ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

|
Google Oneindia Kannada News

ರಕ್ತದಾನ ಮಹಾದಾನ ಎನ್ನುವ ಮಾತು ಇಂದಿಗೂ ಜನಜನಿತವಾಗಿದೆ. ಪ್ರತಿದಿನ ಶಸ್ತ್ರಚಿಕಿತ್ಸೆ, ಆಘಾತ ಮತ್ತು ದೀರ್ಘಕಾಲದ ಅನಾರೋಗ್ಯದಂತಹ ವಿವಿಧ ಕಾರಣಗಳಿಗಾಗಿ ಸಾವಿರಾರು ಜನರಿಗೆ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಅತಿಯಾದ ರಕ್ತದ ನಷ್ಟವು ಸಾವಿಗೆ ಕಾರಣವಾಗಬಹುದು. ಹೀಗಾಗಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದಾನಿಗಳಿಂದ ಸಂಗ್ರಹವಾದ ರಕ್ತವನ್ನು ಬಳಕೆ ಮಾಡಲಾಗುತ್ತದೆ. ರಕ್ತದಾನದಿಂದ ಸಾವಿರಾರು ಜನರ ಪ್ರಾಣ ಕಾಪಾಡಬಹುದು.

ಹೀಗಾಗಿ ಪ್ರಪಂಚದಾದ್ಯಂತದ ದೇಶಗಳು ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು (WBDD) ಆಚರಿಸುತ್ತವೆ. ಇದನ್ನು ಸುರಕ್ಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂಪ್ರೇರಿತವಾಗಿದ ರಕ್ತದಾನಿಗಳ ಜೀವನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ಹಾಗೂ ರಕ್ತದ ಉಡುಗೊರೆಗಳನ್ನು ಉಳಿಸುವ ಉದ್ದೇಶವನ್ನು ಹೊಂದಿದೆ.

ವಿಶ್ವ ರಕ್ತದಾನಿಗಳ ದಿನ 2022: ರಕ್ತದಾನ ಯಾರು ಮಾಡಬಹುದು? ರಕ್ತದಾನ ಬಗ್ಗೆ ತಿಳಿಯಿರಿವಿಶ್ವ ರಕ್ತದಾನಿಗಳ ದಿನ 2022: ರಕ್ತದಾನ ಯಾರು ಮಾಡಬಹುದು? ರಕ್ತದಾನ ಬಗ್ಗೆ ತಿಳಿಯಿರಿ

ವಿಶ್ವ ರಕ್ತದಾನಿಗಳ ದಿನದ ಜಾಗತಿಕ ವಿಷಯವು ಪ್ರತಿ ವರ್ಷ ತಮ್ಮ ರಕ್ತವನ್ನು ತಮಗೆ ತಿಳಿದಿಲ್ಲದ ಜನರಿಗೆ ದಾನ ಮಾಡುವ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸಲು ಆಚರಿಸಲಾಗುತ್ತದೆ. ದೇಹವು ಸಾಕಷ್ಟು ಪ್ರಮಾಣದ ರಕ್ತವನ್ನು ಹೊಂದಿದ್ದು ಅದನ್ನು ವ್ಯಕ್ತಿಯ ಹಿಮೋಗ್ಲೋಬಿನ್ ಮಟ್ಟವನ್ನು ಅವಲಂಬಿಸಿ ದಾನ ಮಾಡಬಹುದು. ಹಾಗಾದರೆ ರಕ್ತದಾನ ಮಾಡುವ ಮೊದಲು ಮತ್ತು ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಏನು ಎಂಬುದನ್ನು ನೋಡೋಣ.

ಯಾರು ಮಾಡಬಹುದು?

ಯಾರು ಮಾಡಬಹುದು?

ರಕ್ತ ಮಾನವ ಜೀವನದ ಪ್ರಮುಖ ಅಂಶವಾಗಿದೆ. ಇದು ಜೀವಕೋಶಗಳಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುತ್ತದೆ. ರಕ್ತವು ಒಂದು ಸಾರಿಗೆ ದ್ರವವಾಗಿದ್ದು ಅದು ಹೃದಯದಿಂದ ದೇಹದ ಎಲ್ಲಾ ಪ್ರದೇಶಗಳಿಗೆ ಪಂಪ್ ಮಾಡಲ್ಪಡುತ್ತದೆ. ನಂತರ ಪ್ರಕ್ರಿಯೆಯನ್ನು ಪುನರಾವರ್ತಿಸಲು ಹೃದಯಕ್ಕೆ ಹಿಂತಿರುಗುತ್ತದೆ. ಇದು ಎಲ್ಲಾ ಅಂಗಗಳು ಕೆಲಸ ಮಾಡಲು ಸಹಾಯ ಮಾಡುತ್ತದೆ. ರಕ್ತ ಅಥವಾ ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಲು ದಾನಿಯು ಉತ್ತಮ ಆರೋಗ್ಯ ಹೊಂದಿರಬೇಕು, ಕನಿಷ್ಠ 45 ಕೆಜಿ ತೂಕ ಹೊಂದಿರಬೇಕು ಮತ್ತು 18 ರಿಂದ 65 ವರ್ಷ ವಯಸ್ಸಿನವರಾಗಿರಬೇಕು.

ಇದರಿಂದ ನಿಮ್ಮ ಆರೋಗ್ಯವೂ ಉತ್ತಮ

ಇದರಿಂದ ನಿಮ್ಮ ಆರೋಗ್ಯವೂ ಉತ್ತಮ

*ರಾತ್ರಿ ಪೂರ್ತಿ ನಿದ್ದೆ ಮಾಡಿ.

*ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುವುದರಿಂದ ಕಬ್ಬಿಣಾಂಶವಿರುವ ಆಹಾರಗಳನ್ನು ಒಳಗೊಂಡಂತೆ ಸಾಕಷ್ಟು ಆಹಾರವನ್ನು ಸೇವಿಸಿ.

*ರಕ್ತದಾನ ಮಾಡುವ ಮೊದಲು ನೀವು ಸಾಕಷ್ಟು ನೀರು ಕುಡಿಯುತ್ತೀರೆಂದು ಖಚಿತಪಡಿಸಿಕೊಳ್ಳಿ.

*ಕನಿಷ್ಠ 72 ಗಂಟೆಗಳಲ್ಲಿ ನಿಮಗೆ ಶೀತ ಅಥವಾ ಜ್ವರ ಬಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

*ರಕ್ತದಾನ ಮಾಡುವ ಮೊದಲು ಕನಿಷ್ಠ ಎರಡು ಗಂಟೆಗಳ ಕಾಲ ಧೂಮಪಾನ ಮಾಡಬೇಡಿ.

*ರಕ್ತದಾನಕ್ಕೆ ಒಂದು ದಿನ ಮೊದಲು ಮದ್ಯಪಾನ ಮಾಡಬೇಡಿ.

*ದಾನಿಗಳು ಇತ್ತೀಚಿನ ಅರ್ಹತಾ ಷರತ್ತುಗಳನ್ನು ಪರಿಶೀಲಿಸಿ.

*ದಾನಿಗಳ ಗುರುತಿನ ಚೀಟಿ ಅಥವಾ ಇತರ ಯಾವುದೇ ಗುರುತಿನ ಚೀಟಿಯನ್ನು ಕೊಂಡೊಯ್ಯಿರಿ.

*ರಕ್ತವನ್ನು ಪಡೆಯುವ ರೋಗಿಯನ್ನು ರಕ್ಷಿಸಲು ನಿಮ್ಮ ವೈದ್ಯಕೀಯ ಇತಿಹಾಸವನ್ನು ಹಂಚಿಕೊಳ್ಳಿ.

ರಕ್ತದಾನದ ನಂತರ ಹೀಗೆ ಮಾಡಿದರೆ ಒಳ್ಳೆಯದು

ರಕ್ತದಾನದ ನಂತರ ಹೀಗೆ ಮಾಡಿದರೆ ಒಳ್ಳೆಯದು

* ರಕ್ತದಾನದ ನಂತರ ಎದ್ದೇಳುವ ಮೊದಲು ಕನಿಷ್ಠ ಐದು ನಿಮಿಷ ಕಾಯಿರಿ.

*ನಿಮ್ಮ ದೇಹಕ್ಕೆ ರಕ್ತ ಮರುಪೂರಣಗೊಳ್ಳಲು ಮುಂದಿನ 24 ಗಂಟೆಗಳ ಕಾಲ ಸಮತೋಲಿತ ಊಟವನ್ನು ಸೇವಿಸಿ.

*ರಕ್ತದಾನದ ನಂತರ ಆರೋಗ್ಯಕರ ಆಹಾರವನ್ನು ಸೇವಿಸಿ. ಹೊಟ್ಟೆ ಖಾಲಿಯಾಗದಿರಲಿ.

* ಮುಂದಿನ 24 ರಿಂದ 48 ಗಂಟೆಗಳವರೆಗೆ ದ್ರವ ಸೇವನೆಯನ್ನು ಹೆಚ್ಚಿಸಿ. ಏಕೆಂದರೆ ರಕ್ತದಾನದ ನಂತರ ದೇಹವು ದ್ರವವನ್ನು ಹಿಂಪಡೆಯಲು ಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳಬಹುದು.

* ಸೋಡಾದಂತಹ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ.

* ಸರಿಸುಮಾರು ಐದು ಗಂಟೆಗಳ ಕಾಲ, ದಾನ ಮಾಡಿದ ತೋಳನ್ನು ಬಲವಾಗಿ ಎತ್ತುವುದು ಅಥವಾ ಎಳೆಯುವುದನ್ನು ತಪ್ಪಿಸಿ.

* ಹೆಚ್ಚು ಹೊತ್ತು ನಿಲ್ಲಬೇಡಿ.

*ನಾಲ್ಕು ಗಂಟೆಗಳ ಕಾಲ ಧೂಮಪಾನ ಮತ್ತು 24 ಗಂಟೆಗಳ ಕಾಲ ಮದ್ಯಪಾನವನ್ನು ತಪ್ಪಿಸಿ.

ರಕ್ತದಾನದ ಬಗ್ಗೆ ಹೆಚ್ಚುವರಿ ಸಲಹೆಗಳು

ರಕ್ತದಾನದ ಬಗ್ಗೆ ಹೆಚ್ಚುವರಿ ಸಲಹೆಗಳು

*ಮುಂದಿನ ಹಲವಾರು ಗಂಟೆಗಳ ಕಾಲ ಸ್ಟ್ರಿಪ್ ಬ್ಯಾಂಡೇಜ್ ಅನ್ನು ಇರಿಸಿಕೊಳ್ಳಿ; ಚರ್ಮದ ದದ್ದು ತಪ್ಪಿಸಲು, ಬ್ಯಾಂಡೇಜ್ ಸುತ್ತಲಿನ ಪ್ರದೇಶವನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಿ.

*ಉಳಿದ ದಿನಗಳಲ್ಲಿ ಯಾವುದೇ ಭಾರ ಎತ್ತುವ ಅಥವಾ ತೀವ್ರವಾದ ವ್ಯಾಯಾಮವನ್ನು ತಪ್ಪಿಸಲು ಪ್ರಯತ್ನಿಸಿ.

*ಸೂಜಿಯ ಸ್ಥಳವು ರಕ್ತಸ್ರಾವವಾಗಲು ಪ್ರಾರಂಭಿಸಿದರೆ 5-10 ನಿಮಿಷಗಳ ಕಾಲ ಅಥವಾ ರಕ್ತಸ್ರಾವ ನಿಲ್ಲುವವರೆಗೆ ನಿಮ್ಮ ತೋಳನ್ನು ನೇರವಾಗಿ ಮೇಲಕ್ಕೆತ್ತಿ.

*ಕಬ್ಬಿಣ ಅಂಶವಿರುವ ಆಹಾರವನ್ನು ಸೇವಿಸಲು ಪ್ರಯತ್ನಿಸಿ.

*ಸಮತೋಲಿತ ಆಹಾರ ಭವಿಷ್ಯದಲ್ಲಿ ನಿಯಮಿತ ರಕ್ತದಾನಿಯಾಗಲು ನಿಮಗೆ ಸಹಾಯ ಮಾಡುತ್ತದೆ

English summary
World Blood Donor Day 2022: Here are the few things people should consider before and after blood donation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X