ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಏಡ್ಸ್ ದಿನ 2021: ಈ ದಿನ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

|
Google Oneindia Kannada News

ಮನುಷ್ಯನನ್ನು ಹೆಚ್ಚಾಗಿ ಬಾದಿಸುವ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿರುವ ಸೋಂಕು AIDS/HIV. ಇದರ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಅದರ ಬಗ್ಗೆ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಡಿಸೆಂಬರ್ 1, 1988 ರಿಂದ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗಿದೆ. ಪ್ರತಿ ವರ್ಷ ಡಿಸೆಂಬರ್ 1 ರಂದು ಆಚರಿಸಲಾಗುವ ವಿಶ್ವ ಏಡ್ಸ್ ದಿನ (ಮೊದಲ ಜಾಗತಿಕ ಆರೋಗ್ಯ ದಿನ) 33ನೇ ವರ್ಷಕ್ಕೆ ಕಾಲಿಡುತ್ತಿದೆ. ಇದು ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಹೀಗಾಗಿ ಸೋಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ಸಿಗೆ ನಾವೆಲ್ಲ ನಿಮ್ಮೊಟ್ಟಿಗಿದ್ದೇವೆ ಎಂಬ ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ಇದಾಗಿದೆ.

ವಿಶ್ವ ಏಡ್ಸ್ ದಿನದ ಇತಿಹಾಸ: ಈ ಸೋಂಕನ್ನು 1984 ರಲ್ಲಿ ಗುರುತಿಸಲಾಗಿದ್ದರೂ, 35 ಮಿಲಿಯನ್‌ಗಿಂತಲೂ ಹೆಚ್ಚು ಜನರು ಎಚ್‌ಐವಿ ಅಥವಾ ಏಡ್ಸ್-ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಡಿಸೆಂಬರ್ 1, 1988ರಲ್ಲಿ ಪ್ರಥಮ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯು.ಎನ್.ಏಡ್ಸ್ ಸಂಯುಕ್ತ ನೇತೃತ್ವದಲ್ಲಿ ಈ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲು ಮುಂದಾಯಿತು. ಎಚ್‌ಐವಿ/ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದಿಂದೇ ಅಲ್ಲದೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಎಚ್‌ಐವಿ ಸೋಂಕಿತರಾಗಿರುವವರಿಗೆ ಬೆಂಬಲ ನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ವಿಶ್ವದಲ್ಲಿನ ಎಚ್‌ಐವಿ ಏಡ್ಸ್ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೆಳೆಯುವುದೇ ಧ್ಯೇಯವಾಗಿದೆ.

ಜಾಗೃತಿ

ಜಾಗೃತಿ

ಆರಂಭದಲ್ಲಿ ವಿಶ್ವ ಏಡ್ಸ್ ದಿನವು ಕುಟುಂಬಗಳ ಮೇಲೆ ಏಡ್ಸ್ ಪ್ರಭಾವದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತರಲು ಮಕ್ಕಳು ಮತ್ತು ಯುವಕರ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. 1996 ರಿಂದ, ವಿಶ್ವ ಏಡ್ಸ್ ದಿನದ ಕಾರ್ಯಾಚರಣೆಗಳನ್ನು HIV/AIDS (UNAIDS) ಕುರಿತ ಜಂಟಿ ಕಾರ್ಯಕ್ರಮವನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ. ಇದು ಯೋಜನೆಯ ವ್ಯಾಪ್ತಿಯನ್ನು ವರ್ಷಪೂರ್ತಿ ತಡೆಗಟ್ಟುವಿಕೆ ಮತ್ತು ಶಿಕ್ಷಣ ಅಭಿಯಾನಕ್ಕೆ ವಿಸ್ತರಿಸಿದೆ. ಜೊತೆಗೆ ಈ ಬಾರಿ ಡಿಸೆಂಬರ್ 1, 2021ರಂದು ರಾಷ್ಟ್ರೀಯ ಮಹಿಳಾ ಮತ್ತು ಬಾಲಕಿಯರಲ್ಲಿ HIV/AIDS ಜಾಗೃತಿ, ಇತಿಹಾಸ ಮತ್ತು ಈ ದಿನದ ಮಹತ್ವ ಮಹಿಳೆಯರ ಮೇಲೆ HIVಯ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬೆಂಬಲವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

ವಿಶ್ವ ಏಡ್ಸ್ ದಿನದ ಮಹತ್ವ

ವಿಶ್ವ ಏಡ್ಸ್ ದಿನದ ಮಹತ್ವ

ಮನಷ್ಯನ ಜೀವಿತಾವಧಿಯಲ್ಲಿ ಯಮನಂತೆ ಕಾಡುವ ಎಚ್‌ಐವಿ ಪ್ರಚಲಿತದಲ್ಲಿರುವವರೆಗೂ ವಿಶ್ವ ಏಡ್ಸ್ ದಿನ ಮಹತ್ವದ್ದಾಗಿದೆ. ಇದು ಜಾಗೃತಿ ವಿರುದ್ಧದ ಹೋರಾಟವನ್ನು ಹೆಚ್ಚಿಸಲು ಮತ್ತು ಎಚ್‌ಐವಿ/ಏಡ್ಸ್‌ನ ಸುತ್ತ ಸುತ್ತುವ ಶಿಕ್ಷಣವನ್ನು ಸುಧಾರಿಸಲು ಅವಶ್ಯಕತೆಯಿದೆ ಎಂದು ಸಾರ್ವಜನಿಕರಿಗೆ ನೆನಪಿಸುತ್ತದೆ. ವಿಶ್ವ ಏಡ್ಸ್ ದಿನವು ವಿಶ್ವಾದ್ಯಂತ HIV ಯೊಂದಿಗೆ ವಾಸಿಸುವ ಲಕ್ಷಾಂತರ ಜನರೊಂದಿಗೆ ಒಗ್ಗಟ್ಟನ್ನು ತೋರಿಸಲು ಒಂದು ಅವಕಾಶವಾಗಿದೆ. ಹೆಚ್ಚಿನ ಜನರು ಈ ದಿನ ಕೆಂಪು ರಿಬ್ಬನ್ ಧರಿಸಿ ಎಚ್ಐವಿ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ವಿಶ್ವ ಏಡ್ಸ್ ದಿನದ ಥೀಮ್

ವಿಶ್ವ ಏಡ್ಸ್ ದಿನದ ಥೀಮ್

ಪ್ರತೀ ವರ್ಷದ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಏಡ್ಸ್ ದಿನದ 2021 ರ ಥೀಮ್ "ಅಸಮಾನತೆಯೊಂದಿಗೆ ಏಡ್ಸ್ ಅನ್ನು ಕೊನೆಗೊಳಿಸಿ". ಆರೋಗ್ಯ ಸೇವೆಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಮಟ್ಟ ಬಲಪಡಿಸುವುದನ್ನು ತಿಳಿಸುವ ಉದ್ದೇಶವಾಗಿದೆ. ಎಚ್‌ಐವಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಒತ್ತು ನೀಡುವುದು, ಜೊತೆಗೆ ಎಚ್‌ಐವಿ/ಏಡ್ಸ್‌ಗೆ ಹೆಚ್ಚು ದುರ್ಬಲವಾಗಿರುವ ಜನರನ್ನು ತಲುಪಲು ಸಮುದಾಯಗಳೊಂದಿಗೆ ಕೆಲಸವನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.

2030 ರ ವೇಳೆಗೆ ಏಡ್ಸ್ ಕೊನೆ

2030 ರ ವೇಳೆಗೆ ಏಡ್ಸ್ ಕೊನೆ

UNAIDS ಕಾರ್ಯನಿರ್ವಾಹಕ ನಿರ್ದೇಶಕಿ ವಿನ್ನಿ ಬಯಾನಿಮಾ ಅವರ ಹೇಳುವಂತೆ "ಈ ವರ್ಷ ಜನ ನಾಯಕರು ಅದನ್ನು ಪೂರೈಸಿದರೆ, 2030ರ ವೇಳೆಗೆ ಏಡ್ಸ್ ಕೊನೆಗೊಳ್ಳುತ್ತದೆ" ಎಂಬ ದಿಟ್ಟ ಯೋಜನೆಯನ್ನು ಜಗತ್ತು ಒಪ್ಪಿಕೊಳ್ಳುತ್ತದೆ. ಇವರ ನಾಯಕತ್ವವನ್ನು ಅನುಸರಿಸಿ, ಈ ಗುರಿಗಳನ್ನು ಸಾಧಿಸಲು ಮತ್ತು ಅಸಮಾನತೆಗಳನ್ನು ಕೊನೆಗೊಳಿಸಲು, ಏಡ್ಸ್ ಅನ್ನು ಕೊನೆಗೊಳಿಸಲು, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಲು, ನಮ್ಮ ನಾಯಕರಿಗೆ ಸವಾಲು ಹಾಕಲು, ಕೆಂಪು ರಿಬ್ಬನ್ ಧರಿಸಲು, ಸಹಾನುಭೂತಿಯನ್ನು ತೋರಿಸಲು ನಮ್ಮ ಪ್ರಯತ್ನವನ್ನು ಮಾಡೋಣ.

English summary
World AIDS Day (the first-ever global health day) is observe on December 1 each year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X