ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಂತರದ ಯುಗದಲ್ಲೂ 'ವರ್ಕ್ ಫ್ರಮ್ ಹೋಮ್' ಸರ್ವೇ ಸಾಮಾನ್ಯ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯ ಅಂತ್ಹೇಳಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸಿದವು. ಲಾಕ್ ಡೌನ್ ನಿಂದಾಗಿ ಆರ್ಥಿಕತೆಗೆ ಬೀಳುವ ಹೊಡೆತದಿಂದ ತಪ್ಪಿಸಿಕೊಳ್ಳಲು ಭಾರತವೂ ಸೇರಿದಂತೆ ಹಲವು ದೇಶಗಳಲ್ಲೀಗ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ.

ಹೀಗಿದ್ದರೂ, ಐಟಿ ವಲಯದಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಆಯ್ಕೆಗೆ ಒತ್ತು ನೀಡಿವೆ. ಇನ್ನೂ ಉದ್ಯೋಗಿಗಳು ಕೂಡ ಮನೆಯಿಂದಲೇ ಕೆಲಸ ಮಾಡುವಲ್ಲಿ ಹೆಚ್ಚು ಒಲವು ತೋರುತ್ತಿದ್ದಾರೆ.

ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?

ಕೋವಿಡ್-19ಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ನಿರ್ದಿಷ್ಟ ಔಷಧಿ ಕೂಡ ಇಲ್ಲದಿರುವ ಕಾರಣ, ಬಹುತೇಕ ಉದ್ಯೋಗಿಗಳು ಆಫೀಸ್ ಕಡೆ ಮುಖ ಮಾಡಲು ತಯಾರಿಲ್ಲ. ಹೀಗಾಗಿ, ಕೊರೊನಾ ನಂತರದ ಯುಗದಲ್ಲಿ ಎಲ್ಲಾ ಆಫೀಸ್ ಗಳಲ್ಲೂ 'ವರ್ಕ್ ಫ್ರಮ್ ಹೋಮ್' ಸರ್ವೇ ಸಾಮಾನ್ಯವಾಗಲಿದೆ.

ಟಿ.ಸಿ.ಎಸ್ ಪ್ಲಾನ್

ಟಿ.ಸಿ.ಎಸ್ ಪ್ಲಾನ್

''2025 ವೇಳೆಗೆ ತಮ್ಮ 3.5 ಲಕ್ಷ ಉದ್ಯೋಗಿಗಳಲ್ಲಿ 75% ರಷ್ಟು ಮಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಕೇವಲ 25% ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಯಲ್ಲಿ ಕೆಲಸ ಮಾಡಲಿದ್ದಾರೆ'' ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿ.ಸಿ.ಎಸ್) ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಎನ್.ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.

ಅಮೇರಿಕಾದಲ್ಲೂ ಇದೇ ಮಂತ್ರ

ಅಮೇರಿಕಾದಲ್ಲೂ ಇದೇ ಮಂತ್ರ

ಗ್ಲೋಬಲ್ ವರ್ಕ್ ಪ್ಲೇಸ್ ಅನಾಲಿಟಿಕ್ಸ್ ಪ್ರಕಾರ, ''ಮುಂದಿನ ಎರಡು ವರ್ಷಗಳ ಕಾಲ ಯುಎಸ್ಎ ನಲ್ಲಿ 25 ಮಿಲಿಯನ್ ನಿಂದ 30 ಮಿಲಿಯನ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ''. ಸದ್ಯ ಅಮೇರಿಕಾದಲ್ಲಿ ಐದು ಮಿಲಿಯನ್ ಮಂದಿ ಮಾತ್ರ ಅರ್ಧ ಸಮಯ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ.

ಅಯ್ಯೋ ದೇವರೇ.. HIV, ಡೆಂಘೀ ತರಹ ಕೊರೊನಾಗೂ ಲಸಿಕೆ ಸಿಗುವುದಿಲ್ಲವೇ?ಅಯ್ಯೋ ದೇವರೇ.. HIV, ಡೆಂಘೀ ತರಹ ಕೊರೊನಾಗೂ ಲಸಿಕೆ ಸಿಗುವುದಿಲ್ಲವೇ?

ಶಾಶ್ವತ ವರ್ಕ್ ಫ್ರಮ್ ಹೋಮ್

ಶಾಶ್ವತ ವರ್ಕ್ ಫ್ರಮ್ ಹೋಮ್

ಟೆಕ್ ಮಹೀಂದ್ರಾ ಸೇರಿದಂತೆ ಹಲವು ಕಂಪೆನಿಗಳು ಶಾಶ್ವತ ವರ್ಕ್ ಫ್ರಮ್ ಹೋಮ್ ಆಯ್ಕೆ ಬಗ್ಗೆ ಯೋಚಿಸುತ್ತಿವೆ. ಟೆಕ್ ಮಹೀಂದ್ರಾ ಎಂ.ಡಿ ಮತ್ತು ಸಿಇಒ ಸಿ.ಪಿ.ಗುರ್ನಾನಿ, ''25% ರಷ್ಟು ಉದ್ಯೋಗಿಗಳು ಮನೆಯಿಂದಲೇ ದೀರ್ಘಾವಧಿಯವರೆಗೆ ಕೆಲಸ ಮಾಡಲು ನಾವು ಬಯಸುತ್ತೇವೆ'' ಎಂದಿದ್ದಾರೆ.

ಇಬ್ಬರಿಗೂ ಉಳಿತಾಯ

ಇಬ್ಬರಿಗೂ ಉಳಿತಾಯ

ಮನೆಯಿಂದ ಕೆಲಸ ಮಾಡುವುದರಿಂದ ಅತ್ತ ಕಂಪನಿಗಳಿಗೆ ರಿಯಲ್ ಎಸ್ಟೇಟ್ ವೆಚ್ಚ ಕಡಿಮೆ ಆದರೆ, ಇತ್ತ ಉದ್ಯೋಗಿಗಳಿಗೆ ಓಡಾಟ ಮತ್ತು ದೈನಂದಿನ ಖರ್ಚು ಉಳಿತಾಯವಾಗುತ್ತದೆ. ವರ್ಕ್ ಫ್ರಮ್ ಹೋಮ್ ನಿಂದ ಮಾಲಿನ್ಯ ಕೂಡ ಕಡಿಮೆ ಆಗಿ ಪರಿಸರ ಕೂಡ ಸ್ವಚ್ಛವಾಗಿರುತ್ತದೆ.

English summary
Work From Home will be new normal in Post Corona World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X