ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ಸತ್ಯಾಂಶ: Aunty ಪ್ರೀತ್ಸೆ ಎಂದವರಿಗೆ OK ಎನ್ನುವರೇ ಮಹಿಳೆಯರು!?

|
Google Oneindia Kannada News

ನವದೆಹಲಿ, ಆಗಸ್ಟ್ 19: ಹೆಣ್ಣು ಅಂದರೆ ತಾಯಿ, ಹೆಣ್ಣು ಅಂದರೆ ಸಹೋದರೆ, ಹೆಣ್ಣು ಎಂದರೆ ಹೆತ್ತವರ ಕೊನೆಗಾಲದಲ್ಲಿ ಕೈ ಹಿಡಿದು ನಡೆಸುವ ಮುದ್ದು ಮಗಳೂ ಸರಿ. ಇಡೀ ಸಮಾಜದಲ್ಲಿ ಆದ್ದರಿಂದಲೇ ಹೆಣ್ಣಿಗೆ ದೇವತೆ ಸ್ಥಾನವನ್ನು ನೀಡಲಾಗುತ್ತದೆ. ಆದರೆ ಗಂಡ-ಹೆಂಡತಿ ಅಂತಾ ಬಂದಾಗ ಮಾತ್ರ ಟೀಕೆ-ಟಿಪ್ಪಣಿಗಳು ಯಥಾವತ್ತಾಗಿ ಕಂಟಿನ್ಯೂ ಆಗುತ್ತೆ.

ಗಂಡನ ಮೇಲೆ ಅನುಮಾನ ಪಡುವ ಹೆಂಡತಿಯರು ಎಷ್ಟಿದ್ದಾರೋ, ಅದೇ ರೀತಿ ಹೆಂಡತಿ ಮೇಲೆ ಡೌಟ್ ಪಡುವ ಗಂಡಸರ ಸಂಖ್ಯೆಯೂ ಅಷ್ಟೇ ಇದೆ. ಕೆಲವರು ಕಾಲದ ಕೈಗೊಂಬೆ ಆಗಿ ದಾರಿ ತಪ್ಪಿದರೆ, ಇನ್ನೂ ಕೆಲವರು ದುರಾಸೆಗೆ ಬಿದ್ದು ಅಡ್ಡದಾರಿ ಹಿಡಿಯುತ್ತಾರೆ. ಹೀಗೆ ಅಡ್ಡದಾರಿ ಹಿಡಿದವರ ಪಟ್ಟಿಯಲ್ಲಿ ಮಹಿಳೆಯೇ ಹೆಚ್ಚು ಎನ್ನುವುದನ್ನು ಸಮೀಕ್ಷೆಯೊಂದು ತೆರೆದಿಟ್ಟಿದೆ.

ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?

ಅಕ್ರಮ ಸಂಬಂಧಕ್ಕೆ ಓಕೆ ಅಂತಾ ಹೇಳುವುದರಲ್ಲಿ ಆಂಟಿಯರ ಸಂಖ್ಯೆ ಡಬ್-ಕಿ-ಡಬಲ್ ಆಗುತ್ತಿದೆ. ಕದ್ದುಮುಚ್ಚಿ ಆಡುವ ಕಳ್ಳಾಟದಲ್ಲಿ ಮಹಿಳೆಯರ ಪಾಲೇ ಹೆಚ್ಚು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ತಿಳಿಸಿದೆ. ಚೋರಿಯರ ಚಿತ್ತ ಕೆಡಿಸುವವರ ಸಂಖ್ಯೆ ಎಷ್ಟಿದೆ ಎಂಬುದನ್ನೂ ಸಮೀಕ್ಷೆ ಹೇಳಿದೆ. ಚೋರ-ಚೋರಿಯರ ಚಳ್ಳಾಟದ ಕಥೆ ಹಾಗೂ ಹಿಂದಿನ ಭಯಾನಕತೆ ಕುರಿತು ಒಂದು ಸಮೀಕ್ಷಾ ವರದಿ ಇಲ್ಲಿದೆ ಓದಿ.

ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲೇ ಅಕ್ರಮ ಸಂಬಂಧ ಹೆಚ್ಚು!

ಪುರುಷರಿಗೆ ಹೋಲಿಸಿದರೆ, ಮಹಿಳೆಯರಲ್ಲೇ ಅಕ್ರಮ ಸಂಬಂಧ ಹೆಚ್ಚು!

ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿರುತ್ತಾರೆ ಎನ್ನುವುದೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ನೀಡಿರುವ ವರದಿಯ ಸಾರಾಂಶವಾಗಿದೆ. ಅಂದರೆ ಒಬ್ಬ ಮಹಿಳೆಯರು ತನ್ನ ಗಂಡನನ್ನು ಹೊರತುಪಡಿಸಿ, ನೆರೆಹೊರೆಯರ ಗೆಳೆಯರು, ಸಂಬಂಧಿಕರು ಅಥವಾ ಮೂರನೇ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕವನ್ನು ಹೊಂದಿರುತ್ತಾರೆ ಎಂಬುದನ್ನು ಸಮೀಕ್ಷೆಯು ತಿಳಿಸುತ್ತದೆ. ಅಕ್ರಮ ಸಂಬಂಧವನ್ನು ಬೆಳೆಸುವವರ ಸಂಖ್ಯೆಯನ್ನು ವಿಶ್ಲೇಷಿಸಿದ ಸಂದರ್ಭದಲ್ಲಿ ಆಂಟಿಯರ ಪಾಲು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆ

ಭಾರತದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಸರಾಸರಿಯಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಅನ್ಯರೊಂದಿಗೆ ಲೈಂಗಿಕ ಸಂಭೋಗ ಬೆಳೆಸುವುದರಲ್ಲಿ ಪುರುಷರು ಶೇಕಡಾ 4ರಷ್ಟಿದ್ದರೆ, ಮಹಿಳೆಯರ ಪಾಲು ಶೇ.5ರಷ್ಟಿದೆ. 1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಸರಾಸರಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆ ಹೆಚ್ಚಾಗಿರುವುದನ್ನು ಎಂದು ತೋರಿಸಿದೆ.

ಅತಿಹೆಚ್ಚು ನಂಟು ಹೊಂದಿರುವ ಆಂಟಿಯರ ರಾಜ್ಯ!

ಅತಿಹೆಚ್ಚು ನಂಟು ಹೊಂದಿರುವ ಆಂಟಿಯರ ರಾಜ್ಯ!

ಮಹಿಳೆಯರೇ ಅತಿಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ 11 ಹಾಗೂ ಮತ್ತೊಂದು ಕೇಂದ್ರಾಡಳಿತ ಪ್ರದೇಶಗಳಿವೆ. ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ರಾಜಸ್ಥಾನದಲ್ಲಿ ಸರಾಸರಿ 3.1ರಷ್ಟು ಮಹಿಳೆಯರು ಅತಿಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದು, ಶೇ.1.8ರಷ್ಟು ಪುರುಷರು ಹೆಚ್ಚಿನ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.

ಸಮೀಕ್ಷೆ ನಡೆಸಿದ ಪರಿ ಹೇಗಿದೆ?

ಸಮೀಕ್ಷೆ ನಡೆಸಿದ ಪರಿ ಹೇಗಿದೆ?

2019-21ರ ಅವಧಿಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಅನ್ನು ನಡೆಸಲಾಗಿತ್ತು. ಈ ವೇಳೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 707 ಜಿಲ್ಲೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಂತದಲ್ಲಿ 12 ತಿಂಗಳುಗಳಲ್ಲಿ ನಡೆಸಿದ ಸಮೀಕ್ಷೆಯು ತನ್ನ ವರದಿಯ ಫಲಿತಾಂಶವನ್ನು ನೀಡಿದೆ. ಅದರ ಪ್ರಕಾರ, ತಮ್ಮ ಸಂಗಾತಿಯಾಗಲಿ ಅಥವಾ ಲಿವ್-ಇನ್ ಪಾಲುದಾರರು ಅಲ್ಲದೇ ಅನ್ಯರೊಂದಿಗೆ ಲೈಂಗಿಕ ಸಂಭೋಗ ನಡೆಸಿದ ಪುರುಷರ ಸಂಖ್ಯೆ ಶೇ.4ರಷ್ಟಿದೆ. ಈ ವಿಷಯದಲ್ಲಿ ಮಹಿಳೆಯರ ಸಂಖ್ಯೆ ಶೇ.5ರಷ್ಟಿದೆ.

English summary
Women on average have more sex partners than men in 11 states and UTs according to the National Family Health Survey data. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X