ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾನು ಹುಟ್ಟಲು ಅವಕಾಶ ನೀಡಿದ ವೈದ್ಯರ ವಿರುದ್ಧ ಮೊಕದ್ದಮೆ: ಲಕ್ಷಾಂತರ ಹಣ ಪಡೆದ ಮಹಿಳೆ!

|
Google Oneindia Kannada News

ಲಂಡನ್‌, ಡಿಸೆಂಬರ್‌ 02: ತಾನು ಹುಟ್ಟಲು ಅವಕಾಶ ಮಾಡಿಕೊಟ್ಟ ತನ್ನ ತಾಯಿಯ ವೈದ್ಯರ ವಿರುದ್ಧ ಮೊಕದ್ದಮೆ ಹೂಡಿದ ಮಹಿಳೆಯು ಲಕ್ಷಾಂತರ ಹಣವನ್ನು ಪರಿಹಾರದ ರೂಪದಲ್ಲಿ ಪಡೆದುಕೊಂಡಿದ್ದಾರೆ. ತಾನು ಹುಟ್ಟಲೇ ಬಾರದಿತ್ತು ಎಂದು ಪ್ರತಿಪಾದಿಸಿರುವ ಈ ಮಹಿಳೆಯು ತನ್ನ ತಾಯಿಯ ವೈದ್ಯರ ವಿರುದ್ಧ ಮೊಕದ್ದಮೆಯನ್ನು ಹೂಡಿದ್ದಳು.

ಯುಕೆಯ ಸ್ಟಾರ್ ಶೋಜಂಪರ್ ಎವಿ ಟೂಂಬ್ಸ್, ಸ್ಪೈನಾ ಬೈಫಿಡಾದಿಂದ (ಹುಟ್ಟಿನಿಂದಲೇ ಇರುವ ಬೆನ್ನುಹುರಿ) ಜನಿಸಿದ ಕಾರಣದಿಂದಾಗಿ ತನ್ನ ತಾಯಿಯ ವೈದ್ಯರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದಾರೆ. ತನಗೆ ಈ ರೀತಿಯ ಬೆನ್ನುಹುರಿ ಇದ್ದರೂ ಕೂಡಾ ವೈದ್ಯರು ತಾನು ಜನಿಸಲು ಅವಕಾಶ ನೀಡಿದ್ದರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ತನ್ನ ತಾಯಿ ಗರ್ಭಿಣಿಯಾಗಿದ್ದಾಗ ಸರಿಯಾದ ಸಲಹೆಯನ್ನು ನೀಡದ ಕಾರಣಕ್ಕಾಗಿ 20 ವರ್ಷ ವಯಸ್ಸಿನ ಎವಿ ಟೂಂಬ್ಸ್‌ ತನ್ನ ತಾಯಿಯ ವೈದ್ಯರಾದ ಡಾಕ್ಟರ್ ಫಿಲಿಪ್ ಮಿಚೆಲ್‌ರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡಿದ್ದಾಳೆ. ಇನ್ನು ಎವಿ ಟೂಂಬ್ಸ್‌ಗೆ ತೀವ್ರವಾದ ಬೆನ್ನು ಹುರಿ ಇದ್ದು, ಬೆನ್ನುಮೂಳೆಯ ದೋಷದ ಕಾರಣದಿಂದಾಗಿ ಎವಿ ಕೆಲವೊಮ್ಮೆ ದಿನಕ್ಕೆ 24 ಗಂಟೆಗಳ ಕಾಲ ಟ್ಯೂಬ್‌ಗಳಿಗೆ ಸಂಪರ್ಕ ಹೊಂದಿರಬೇಕಾಗುತ್ತದೆ ಎಂದು ದಿ ಸನ್ ವರದಿ ಮಾಡಿದೆ.

Woman Sues Moms Doctor For Allowing Her To Be Born, Wins Millions

ತಾಯಿಗೆ ಸರಿಯಾಗಿ ಸಲಹೆ ನೀಡಿಲ್ಲವೆಂದು ಆಕ್ರೋಶ

"ಮಿಚೆಲ್ ತನ್ನ ಮಗುವಿನ ಮೇಲೆ ಪರಿಣಾಮ ಬೀರುವ ಸ್ಪೈನಾ ಬೈಫಿಡಾದ ಅಪಾಯವನ್ನು ಕಡಿಮೆ ಮಾಡಲು ಫೋಲಿಕ್ ಆಸಿಡ್ ಪೂರಕಗಳನ್ನು ತೆಗೆದುಕೊಳ್ಳಬೇಕೆಂದು ತನ್ನ ತಾಯಿಗೆ ಸಲಹೆಯನ್ನು ನೀಡುತ್ತಿದ್ದರೆ ಈ ಸಮಸ್ಯೆಯು ಉಂಟಾಗುತ್ತಿರಲಿಲ್ಲ. ತಾಯಿ ಗರ್ಭಿಣಿಯಾಗಿದ್ದಾಗ ಭ್ರೂಣವನ್ನು ತೆಗೆಸಿಕೊಳ್ಳುತ್ತಿದ್ದಳು. ನಾನು ಎಂದಿಗೂ ಈ ರೀತಿಯಾಗಿ ಹುಟ್ಟುತಿರಲಿಲ್ಲ," ಎಂದು ಯುಕೆಯ ಸ್ಟಾರ್ ಶೋಜಂಪರ್ ಎವಿ ಟೂಂಬ್ಸ್ ಆರೋಪ ಮಾಡಿದ್ದಾಳೆ.

ಈ ಆರೋಪದಲ್ಲೇ ನ್ಯಾಯಾಲಯದ ಮೆಟ್ಟಿಲು ಏರಿರುವ ಎವಿ ಟೂಂಬ್ಸ್, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶ ರೊಸಾಲಿಂಡ್ ಕೋ ಕ್ಯೂಸಿ ಅವರು ಮಹತ್ವದ ತೀರ್ಪನ್ನು ನೀಡಿದ್ದಾರೆ. ನ್ಯಾಯಾಧೀಶ ರೊಸಾಲಿಂಡ್ ಕೋ ಕ್ಯೂಸಿ ಲಂಡನ್ ಹೈಕೋರ್ಟ್ ತೀರ್ಪಿನಲ್ಲಿ ಎವಿ ಟೂಂಬ್ಸ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ವೈದ್ಯರು ಸರಿಯಾದ ಸಲಹೆ ನೀಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದ ನ್ಯಾಯಾಧೀಶರು

"ಯುಕೆಯ ಸ್ಟಾರ್ ಶೋಜಂಪರ್ ಎವಿ ಟೂಂಬ್ಸ್‌ರ ತಾಯಿಗೆ ಡಾಕ್ಟರ್ ಫಿಲಿಪ್ ಮಿಚೆಲ್‌ ಸರಿಯಾದ ಶಿಫಾರಸು ಸಲಹೆಯನ್ನು ನೀಡಿದ್ದರೆ, ಈ ರೀತಿ ಆಗುತ್ತಿರಲಿಲ್ಲ, ವೈದ್ಯ ಫಿಲಿಪ್ ಮಿಚೆಲ್‌ ಸರಿಯಾದ ಮಾಹಿತಿ ನೀಡಿದ್ದರೆ, ತನ್ನ ತಾಯಿ ಆ ಸಂದರ್ಭದಲ್ಲಿ ಮಗುವನ್ನು ಇರಿಸಿಕೊಳ್ಳುತ್ತಿರಲಿಲ್ಲ. ತನ್ನ ಗರ್ಭಧರಿಸುವ ಪ್ರಯತ್ನವನ್ನು ವಿಳಂಬ ಮಾಡುತ್ತಿದ್ದರು," ಎಂದು ಲಂಡನ್ ಹೈಕೋರ್ಟ್ ನ್ಯಾಯಾಧೀಶ ರೊಸಾಲಿಂಡ್ ಕೋ ಕ್ಯೂಸಿ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

"ಮಗುವಿಗೆ ಬೆನ್ನುಹುರಿ ಸಮಸ್ಯೆ ಇದೆ ಎಂದಾದ ಮೇಲೆ ನಂತರದ ಪರಿಣಾಮಗಳ ಬಗ್ಗೆ ವೈದ್ಯರು ತಿಳಿಸಬೇಕು. ವೈದ್ಯರು ಸರಿಯಾದ ಮಾಹಿತಿಯನ್ನು ನೀಡುತ್ತಿದ್ದರೆ, ಸಾಮಾನ್ಯವಾದ ಆರೋಗ್ಯವಂತ ಮಗುವು ಜನಿಸುತ್ತಿತ್ತು," ಎಂದು ಹೇಳಿದ ಲಂಡನ್ ಹೈಕೋರ್ಟ್ ನ್ಯಾಯಾಧೀಶ ರೊಸಾಲಿಂಡ್ ಕೋ ಕ್ಯೂಸಿ, ವೈದ್ಯ ಫಿಲಿಪ್ ಮಿಚೆಲ್‌ ಮಹಿಳೆಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಇನ್ನು ಎವಿ ಟೂಂಬ್ಸ್‌ರ ವಕೀಲರು ನಿಖರವಾದ ಪರಿಹಾರವನ್ನು ಕೇಳಿಲ್ಲ. "ಆದರೆ ಆಕೆಯ ಜೀವಿತಾವಧಿಯ ಆರೈಕೆಯ ಅಗತ್ಯಗಳ ವೆಚ್ಚವನ್ನು ಬರಿಸಬೇಕಾದ ಹಿನ್ನೆಲೆ ಅಧಿಕ ಪರಿಹಾರ ನೀಡಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.

ಇನ್ನು ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದ ಎವಿ ಟೂಂಬ್ಸ್‌ರ ತಾಯಿ, "ಡಾ. ಫಿಲಿಪ್ ಮಿಚೆಲ್‌ ನನಗೆ ಸರಿಯಾದ ಮಾಹಿತಿಯನ್ನು ನೀಡಿದ್ದರೆ ನಾನು ಗರ್ಭಿಣಿಯಾಗುವ ಯೋಜನೆಯನ್ನು ಮುಂದೂಡುತ್ತಿದ್ದೆ," ಎಂದು ತಿಳಿಸಿದ್ದರು. "ನಾನು ಮೊದಲು ಉತ್ತಮ ಆಹಾರವನ್ನು ಪಡೆದುಕೊಂಡಿದ್ದರೆ, ನಾನು ಫೋಲಿಕ್‌ ಆಸಿಡ್‌ ಅನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದು ನನಗೆ ವೈದ್ಯರು ಸಲಹೆ ನೀಡಿದ್ದರು," ಎಂದು ನ್ಯಾಯಾಧೀಶರಿಗೆ ತಾಯಿ ಹೇಳಿದ್ದರು.

(ಒ‌ನ್‌ಇಂಡಿಯಾ ಸುದ್ದಿ)

English summary
Woman Sues Mom's Doctor For Allowing Her To Be Born, Wins Millions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X