ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ನೇತೃತ್ವವಿಲ್ಲದ ಬಿಜೆಪಿ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ

|
Google Oneindia Kannada News

ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವವಿಲ್ಲದ ಬಿಜೆಪಿ ಒಂದು ಲೆಕ್ಕ, ಅವರಿಲ್ಲದ ಬಿಜೆಪಿ ಇನ್ನೊಂದು ಲೆಕ್ಕ. ಅವರ ರಾಜಕೀಯ ಕರ್ಮಭೂಮಿ ಶಿವಮೊಗ್ಗದಲ್ಲಿ ಇನ್ನು ಬಿಜೆಪಿ ಆಟ ನಡೆಯುವುದಿಲ್ಲ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

'ಒನ್ಇಂಡಿಯಾ' ಜೊತೆಗಿನ ಫೇಸ್ ಬುಕ್ ಸಂವಾದದ 88ನೇ ಸರಣಿಯಲ್ಲಿ ಮಾತನಾಡುತ್ತಿದ್ದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪನವರು ಜನನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾನದನ್ನು ಒಪ್ಪಿಕೊಳ್ಳುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಬೆಳಗಾವಿ: ಬಿಜೆಪಿಯ ವಿಶಿಷ್ಟ ತಂತ್ರಗಾರಿಕೆಯ ಎದುರು ಮಣ್ಣು ಮುಕ್ಕಿದ ಎಂಇಎಸ್ಬೆಳಗಾವಿ: ಬಿಜೆಪಿಯ ವಿಶಿಷ್ಟ ತಂತ್ರಗಾರಿಕೆಯ ಎದುರು ಮಣ್ಣು ಮುಕ್ಕಿದ ಎಂಇಎಸ್

ಕೊರೊನಾ ನಿರ್ವಹಣೆ, ತೈಲಬೆಲೆ ಏರಿಕೆ, ಬೊಮ್ಮಾಯಿ ಸರಕಾರದ ಆಯುಷ್ಯ, ಶಿವಮೊಗ್ಗದ ರಾಜಕೀಯ.. ಹೀಗೆ ಹಲವು ವಿಚಾರಗಳ ಬಗ್ಗೆ ಸಂವಾದದಲ್ಲಿ ಮಾತನಾಡುತ್ತಿದ್ದ ಬೇಳೂರು ಗೋಪಾಲಕೃಷ್ಣ, ನಾನು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರ ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯನ್ನು ಅತ್ಯಂತ ಕೆಟ್ಟವಾಗಿ ನಿರ್ವಹಿಸಿದೆ ಎಂದು ಸಂವಾದದಲ್ಲಿ ಅಭಿಪ್ರಾಯ ಪಟ್ಟ ಬೇಳೂರು ಗೋಪಾಲಕೃಷ್ಣ, ಇಂತಹ ವೈದ್ಯಕೀಯ ಎಮರ್ಜೆನ್ಸಿಯ ಸಮಯದಲ್ಲೂ ಸರಕಾರ ದುಡ್ಡು ಮಾಡುವುದಕ್ಕೆ ಆದ್ಯತೆ ನೀಡಿತು ಎಂದು ಬೇಸರ ವ್ಯಕ್ತ ಪಡಿಸಿದರು. ಸಂವಾದದ ಪ್ರಮುಖಾಂಶ ಇಂತಿದೆ:

 ಮೆಗ್ಗಾನ್ ಆಸ್ಪತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು

ಮೆಗ್ಗಾನ್ ಆಸ್ಪತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು

ಪ್ರ: ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯನ್ನು ಸರಕಾರ ಯಾವ ರೀತಿ ನಿಭಾಯಿಸಿತು?

ಬೇಳೂರು: ದೇಶ ಎದುರಿಸಿದ ಅತ್ಯಂತ ಕೆಟ್ಟ ಪರಿಸ್ಥಿತಿ ಇದಾಗಿತ್ತು, ನಿಭಾಯಿಸುವುದೂ ಕ್ಲಿಷ್ಟಕರ ಎನ್ನುವುದೂ ನಮಗೆ ಅರಿವಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ತಯಾರಿ ನಡೆಸಿಕೊಂಡಿರಲಿಲ್ಲ. ಹಾಗಾಗಿ, ಎರಡೂ ಅಲೆಯನ್ನು ಸರಕಾರ ಸರಿಯಾಗಿ ನಿಭಾಯಿಸಿರಲಿಲ್ಲ. ಇಂತಹ ಪರಿಸ್ಥಿತಿ ಮುಂದೆಂದೂ ಬರದಿರಲಿ. ರಾಜ್ಯ ಸರಕಾರ ಈ ಸಮಯದಲ್ಲೂ ಹಣ ಮಾಡುವುದಕ್ಕೆ ಮುಂದಾಯಿತು ಎನ್ನುವುದು ದುಃಖಕರವಾದ ವಿಚಾರ. ಮೆಗ್ಗಾನ್ ಆಸ್ಪತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸ್ಥಳೀಯ ಸಂಸದರು ಇದಕ್ಕೆ ಕ್ಯಾರೇ ಮಾಡಿರಲಿಲ್ಲ. ಕೊರೊನಾ ಟೈಂನಲ್ಲಿ ದುಡ್ಡು ಮಾಡಿದ್ದಾರೆ, ಇವರೆಲ್ಲಾ ಮನುಷ್ಯರಾ?

 ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ದಿನಕ್ಕೆ ಹದಿನಾರು ಗಂಟೆ ಕೆಲಸವನ್ನು ಮಾಡುತ್ತಿದ್ದಾರೆ

ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ದಿನಕ್ಕೆ ಹದಿನಾರು ಗಂಟೆ ಕೆಲಸವನ್ನು ಮಾಡುತ್ತಿದ್ದಾರೆ

ಪ್ರ: ಯಾವುದೇ ಹೋರಾಟವನ್ನು ಕಾಂಗ್ರೆಸ್ಸಿಗೆ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವಾಗುತ್ತಿಲ್ಲ?

ಬೇಳೂರು: ಕಾಂಗ್ರೆಸ್ ಜನಪರ ಹೋರಾಟವನ್ನು ಮಾಡಿಕೊಂಡು ಬರುತ್ತಿದೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ದಿನಕ್ಕೆ ಹದಿನಾರು ಗಂಟೆ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ, ಅವರ ಖಜಾನೆಯನ್ನು ತುಂಬಿಸುವುದಕ್ಕೇ ಆದ್ಯತೆಯನ್ನು ನೀಡುತ್ತಾರೆ. ದಪ್ಪ ಚರ್ಮದವರಿಗೆ ಎಷ್ಟೇ ಪ್ರತಿಭಟನೆ ನಡೆಸಿದರೆ, ಅದರ ಬಿಸಿ ತಟ್ಟುವುದಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಹಡಬೆ ದುಡ್ಡಿನಿಂದ ಶಾಸಕರನ್ನು ಖರೀದಿಸುತ್ತಾರೆ.

 ಗರ್ಭಗುಡಿ ಸಂಸ್ಕೃತಿಯಂತೆ ಬಿಜೆಪಿಯಲ್ಲಿ ಸಂಘ ನಿಷ್ಟರಿಗೆ ಮಾತ್ರ ಸ್ಥಾನ

ಗರ್ಭಗುಡಿ ಸಂಸ್ಕೃತಿಯಂತೆ ಬಿಜೆಪಿಯಲ್ಲಿ ಸಂಘ ನಿಷ್ಟರಿಗೆ ಮಾತ್ರ ಸ್ಥಾನ

ಪ್ರ: ಈ ಹಿಂದೆ ಬಿಜೆಪಿಯಲ್ಲಿ ಇದ್ದವರು, ರಾಜ್ಯ ಬಿಜೆಪಿಯಲ್ಲಿ ಎಷ್ಟು ಶಕ್ತಿಕೇಂದ್ರಗಳಿವೆ, ಮತ್ತು ಆರ್ ಎಸ್ ಎಸ್ ಪ್ರಭಾವ ಹೇಗಿದೆ?

ಬೇಳೂರು: ಬಿಜೆಪಿಯಲ್ಲಿ ಒಳಹೊಕ್ಕು ಬಂದಿದ್ದೇನೆ. ಅವರಲ್ಲಿ ಗುಂಪುಗಾರಿಕೆ ಜಾಸ್ತಿ, ಒಂದು ಸಂಘ ಪರಿವಾರದ ಶಕ್ತಿ. ಮಧ್ಯದಲ್ಲಿ ಬಂದು ಸೇರಿಕೊಂಡವರದ್ದು ಒಂದು ಗುಂಪಿದೆ. ಕೊನೆಗೆ, ಬಾಂಬೆ ಫ್ರೆಂಡ್ಸ್ ಗುಂಪೊಂದಿದೆ. ಗರ್ಭಗುಡಿ ಸಂಸ್ಕೃತಿಯಂತೆ ಬಿಜೆಪಿಯಲ್ಲಿ ಸಂಘ ನಿಷ್ಟರನ್ನು ಹೊರತು ಪಡಿಸಿ ಬೇರೆ ಯಾರೂ ಒಳಗೆ ಹೋಗಲು ಸಾಧ್ಯವಿಲ್ಲ.

Recommended Video

Puneeth Rajkumar ಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಾ? CM ಬೊಮ್ಮಾಯಿ ಹೇಳಿದ್ದೇನು | Oneindia Kannada
 ಬಿಎಸ್ವೈ ನೇತೃತ್ವವಿಲ್ಲದ ಬಿಜೆಪಿ, ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ

ಬಿಎಸ್ವೈ ನೇತೃತ್ವವಿಲ್ಲದ ಬಿಜೆಪಿ, ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ

ಪ್ರ: ಯಡಿಯೂರಪ್ಪನವರು ಇಲ್ಲದ ಶಿವಮೊಗ್ಗ ರಾಜಕೀಯದ ಬಗ್ಗೆ ಹೇಳುವುದಾದರೆ?

ಬೇಳೂರು: ರಾಜಕಾರಣದಲ್ಲಿ ಏರುಪೇರು ಇದ್ದಿದ್ದೇ, ಆದರೆ, ಯಡಿಯೂರಪ್ಪನವರನ್ನು ಯಾವ ಕಾರಣಕ್ಕಾಗಿ ಕೆಳಕ್ಕಿಳಿಸಲಾಯಿತು ಎನ್ನುವುದೇ ದೊಡ್ಡ ಪ್ರಶ್ನೆ. ನಾನೇ ಸ್ವಇಚ್ಚೆಯಿಂದ ಹುದ್ದೆಯಿಂದ ಕೆಳಗಿಳಿದಿದ್ದೇನೆ ಎಂದು ಬಿಎಸ್ವೈ ಹೇಳುತ್ತಾರೆ. ಹಾಗಾದರೆ, ಕಣ್ಣೀರು ಯಾಕೆ ಹಾಕಿದರು? ಯಡಿಯೂರಪ್ಪನವರು ಇಲ್ಲದ ಬಿಜೆಪಿಗೆ ಶಿವಮೊಗ್ಗದಲ್ಲಿ ಶಕ್ತಿಯಿಲ್ಲ. ಈಶ್ವರಪ್ಪ ಮತ್ತು ವಿಜಯೇಂದ್ರ ಅವರ ಮುಖ ನೋಡಿ ಜನರು ಯಾರೂ ಓಟು ಹಾಕುವುದಿಲ್ಲ. ಅವರಂತಹ ಜನನಾಯಕರು ಬಿಜೆಪಿಯಲ್ಲಿ ಇನ್ನೊಬ್ಬರಿಲ್ಲ ಎನ್ನುವುದನ್ನು ಕಾಂಗ್ರೆಸ್ ಮುಖಂಡನಾಗಿ ನಾನೇ ಒಪ್ಪಿಕೊಳ್ಳುತ್ತೇನೆ.

English summary
Without Yediyurappa BJP Is Zero In Shivamogga: Beluru Gopalakrishna Interview. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X