ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಂವಿಧಾನವನ್ನೇ ಅರಿಯದೇ 50 ವರ್ಷ ರಾಜಕಾರಣ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್'

By ಡಾ.ಹೆಚ್.ಸಿ ಮಹದೇವಪ್ಪ
|
Google Oneindia Kannada News

ಭಾರತದ ಸಂವಿಧಾನದ ರಚನಾ ಸ್ವರೂಪ ಮತ್ತು ಅದರ ಉದ್ದೇಶದ ಬಗೆಗೆ ಸರಿಯಾದ ಜ್ಞಾನ ಹೊಂದಿಲ್ಲದ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಕೇವಲ ತನ್ನ ಸುತ್ತ ವ್ಯಕ್ತಿ ಕೇಂದ್ರಿತವಾದ ಚರ್ಚೆಯೊಂದು ನಡೆಯಲಿ ಎಂಬ ಕಾರಣಕ್ಕೆ ಸಂವಿಧಾನವನ್ನು ಬದಲಿಸುವ ಮಾತನ್ನು ಆಡಿರುವುದು ಅವರ ಬೇಜವಾಬ್ದಾರಿ ತನದ ಸಂಕೇತ.

ಈತನ ಪ್ರಕಾರ ಸಮವರ್ತಿ ಪಟ್ಟಿಯಲ್ಲಿರುವ ಅಂಶಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಳ ಮೇಳ ಇಲ್ಲದೇ ಇರುವುದರಿಂದ ಸಂವಿಧಾನವನ್ನು ಬದಲಿಸಬೇಕಂತೆ. ಸರ್ಕಾರಗಳ ನಡುವೆ ತಾಳ ಮೇಳ ಇಲ್ಲದೇ ಹೋಗುವುದು ಸರ್ಕಾರಗಳ ಲೋಪವೋ ಇಲ್ಲ ಸಂವಿಧಾನದ ಲೋಪವೋ? ನಿಮ್ಮ ದುರ್ಬಲತೆಗೆ ಸಂವಿಧಾನವೇಕೆ ಜವಾಬ್ದಾರಿ ಹೊರಬೇಕು?

ಸಿ.ಎಂ.ಇಬ್ರಾಹಿಂ ಹಚ್ಚಿದ ಬೆಂಕಿಗೆ ನಲುಗುತ್ತಿರುವ ಕಾಂಗ್ರೆಸ್, ಸಿದ್ದರಾಮಯ್ಯಸಿ.ಎಂ.ಇಬ್ರಾಹಿಂ ಹಚ್ಚಿದ ಬೆಂಕಿಗೆ ನಲುಗುತ್ತಿರುವ ಕಾಂಗ್ರೆಸ್, ಸಿದ್ದರಾಮಯ್ಯ

50 ವರ್ಷಗಳ ರಾಜಕೀಯ ನೋಡಿದ್ದರಿಂದಾಗಿಯೇ ಸಂವಿಧಾನವನ್ನು ಹೊಸದಾಗಿ ಬರೆಯಬೇಕು ಎಂದು ತೆಲಂಗಾಣ ಮುಖ್ಯಮಂತ್ರಿಗಳಿಗೆ ಅನ್ನಿಸಿದೆಯಂತೆ. ಸಂವಿಧಾನವನ್ನೇ ಅರ್ಥ ಮಾಡಿಕೊಳ್ಳದೇ ಈತ 50 ವರ್ಷ ರಾಜಕೀಯ ಹೇಗೆ ಮಾಡಿರಬಹುದು ಎಂದು ನೆನೆದರೆ ನನಗೆ ಆತಂಕವಾಗುತ್ತದೆ. ಭಾರತದ ಸಂವಿಧಾನವು ಜಗತ್ತಿನಲ್ಲೇ ಅತಿದೊಡ್ಡ ಸಂವಿಧಾನ ಎಂದು ಹೆಸರು ಪಡೆದಿದೆ.

ಅತಿದೊಡ್ಡ ಸಂವಿಧಾನ ಎಂದು ಕರೆಸಿಕೊಳ್ಳುವ ಸಲುವಾಗಿಯೇ ಸಂವಿಧಾನದೊಳಗೆ ಪುಟಗಳನ್ನು ತುಂಬಿಸಿಲ್ಲ. ಬದಲಿಗೆ ವಿಸ್ತಾರ ಭೂ ಪ್ರದೇಶ ಹೊಂದಿ, ಕೆಲವೇ ಕಿಲೋಮೀಟರ್ ಗಳ ಅಂತರಕ್ಕೆ ಒಂದು ಭಾಷೆ, ಸಂಸ್ಕೃತಿ ಮತ್ತು ವಿಭಿನ್ನ ಆಚರಣೆಯ ಜೊತೆಗೆ, ಹತ್ತಾರು ಧರ್ಮ, ನೂರಾರು ಜಾತಿಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿರುವ ಕಾರಣಕ್ಕೆ, ಅವರೆಲ್ಲರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಂವಿಧಾನವು ದೊಡ್ಡದಾಗಿ ರೂಪುಗೊಂಡಿದೆ.

'ಸರಕಾರದ ಸಮರ್ಥನೆಗೆ ಮಾಧುಸ್ವಾಮಿ ಬೇಕು, ಉಸ್ತುವಾರಿ ಯಾಕಿಲ್ಲ''ಸರಕಾರದ ಸಮರ್ಥನೆಗೆ ಮಾಧುಸ್ವಾಮಿ ಬೇಕು, ಉಸ್ತುವಾರಿ ಯಾಕಿಲ್ಲ'

 ಚಂದ್ರಶೇಖರ ರಾವ್ ಅವರ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆ

ಚಂದ್ರಶೇಖರ ರಾವ್ ಅವರ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆ

ಕೇವಲ ಹಕ್ಕಿನ ಪ್ರಜ್ಞೆ ಮಾತ್ರವಲ್ಲದೇ ಕರ್ತವ್ಯದ ಪ್ರಜ್ಞೆಯನ್ನೂ ಸಾರುವ ನಮ್ಮ ಸಂವಿಧಾನದಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ವಿಂಗಡಣೆಯಾದ ರಾಜ್ಯಗಳ ಜನರನ್ನು ರಕ್ಷಿಸುವ ಆಡಳಿತ ಸೂತ್ರಗಳನ್ನು ವಿಸ್ತಾರವಾಗಿ ನೀಡಲಾಗಿದೆ. ಸಂವಿಧಾನದಲ್ಲಿ ಇಷ್ಟೊಂದು ಅವಕಾಶ ಇರುವುದರಿಂದಲೇ ಚಂದ್ರಶೇಖರ ರಾವ್ ಅವರ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆಗೆ ಮನ್ನಣೆ ದೊರೆತಿದೆ.

 ಸಂವಿಧಾನದಲ್ಲಿ ಇರುವ ಅಂಶಗಳು ಬಹುತೇಕ ಎಲ್ಲಾ ಭಾರತೀಯರ ಭಾವನೆ

ಸಂವಿಧಾನದಲ್ಲಿ ಇರುವ ಅಂಶಗಳು ಬಹುತೇಕ ಎಲ್ಲಾ ಭಾರತೀಯರ ಭಾವನೆ

ಇಷ್ಟೇ ಅಲ್ಲದೇ ಸಂವಿಧಾನದಲ್ಲಿ ಇರುವ ಅಂಶಗಳು ಬಹುತೇಕ ಎಲ್ಲಾ ಭಾರತೀಯರ ಭಾವನೆ, ಆಚರಣೆ, ಆಡಳಿತ, ರಕ್ಷಣೆ ಮತ್ತು ಎಲ್ಲರೂ ಸಹಯೋಗದೊಂದಿಗೆ ಆರೋಗ್ಯಪೂರ್ಣವಾಗಿ ಬದುಕಬೇಕೆಂಬ ತಳಹದಿಯ ಮೇಲೆ ರಚಿತವಾಗಿದೆ. ಸಂವಿಧಾನ ಎಂಬುದು ಸಿಹಿನೀರಿನ ಸಮುದ್ರ ಇದ್ದಂತೆ, ಅಲ್ಲಿ ಜೀವ ರಾಶಿಗಳು ಬದುಕಲು ಬೇಕಾದ ಎಲ್ಲ ಅವಕಾಶಗಳನ್ನೂ ಸೃಷ್ಟಿಸಲಾಗಿದೆ. ಇಂತಹ ಸಮುದ್ರದ ಸಹಾಯದಿಂದ ಎಲ್ಲರನ್ನೂ ಬದುಕಿಸಬೇಕಾದ ಜವಾಬ್ದಾರಿ ಹೊತ್ತಿರುವ ಕೆಸಿಆರ್ ಅಂತಹ ಜನ ಪ್ರತಿನಿಧಿಗಳು ಅಂತಹ ಸಮುದ್ರವನ್ನೇ ಬದಲಿಸಬೇಕು ಎನ್ನುವುದು ಮೂರ್ಖತನದ ಸಂಕೇತವಾಗಿದೆ.

 ಎಲ್ಲರೂ ಸರಿಯಾಗಿ ನಡೆಯುತ್ತಾರೆ ಎಂಬುದು ಇನ್ನೊಂದು ಮೂರ್ಖತನ

ಎಲ್ಲರೂ ಸರಿಯಾಗಿ ನಡೆಯುತ್ತಾರೆ ಎಂಬುದು ಇನ್ನೊಂದು ಮೂರ್ಖತನ

ಬಾಬಾ ಸಾಹೇಬರು " ನನ್ನ ಸಂವಿಧಾನ ಉತ್ತಮವಾಗಿದ್ದರೂ ಸಹ ಅದು ಕೆಟ್ಟ ಜನರ ಕೈಗೆ ಸಿಕ್ಕರೆ, ಅದರ ಉದ್ದೇಶ ಫಲಿಸುವುದಿಲ್ಲ" ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ನೋಡಿದಾಗ ಚಂದ್ರಶೇಖರ್ ರಾವ್ ಅವರು ಮೊದಲು ಸಂವಿಧಾನವನ್ನು ಅರ್ಥಮಾಡಿಕೊಂಡು ಮಾತನಾಡುವುದನ್ನು ಕಲಿಯಬೇಕು. ಸಂವಿಧಾನವೇ ಅರ್ಥವಾಗದೇ ಸಂವಿಧಾನವನ್ನು ಬದಲಿಸುತ್ತೇವೆ ಎಂಬುದು ಮೊದಲನೇ ಮೂರ್ಖತನವಾದರೆ, ಸಂವಿಧಾನವನ್ನು ಹೊಸದಾಗಿ ಬರೆದ ಮೇಲೆ ಎಲ್ಲವೂ ಎಲ್ಲರೂ ಸರಿಯಾಗಿ ನಡೆಯುತ್ತಾರೆ ಎಂಬುದು ಇನ್ನೊಂದು ಮೂರ್ಖತನ.

 ಡಾ.ಹೆಚ್.ಸಿ ಮಹದೇವಪ್ಪ ಲೇಖನ

ಡಾ.ಹೆಚ್.ಸಿ ಮಹದೇವಪ್ಪ ಲೇಖನ

ಹೀಗಾಗಿ ಕೇವಲ ಒಣ ಪ್ರಚಾರಕ್ಕಾಗಿ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಅತಿ ಬುದ್ಧಿವಂತಿಕೆ ತೋರದೇ, ಮೊದಲು ಸಂವಿಧಾನವನ್ನು ತಿಳಿದುಕೊಳ್ಳಲಿ ಮತ್ತು ಸಂವಿಧಾನವನ್ನೇ ಅರಿಯದೇ 50 ವರ್ಷ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಈಗ ಸಂವಿಧಾನವನ್ನು ಬದಲಿಸಬೇಕು ಎಂದು ಬೇಜವಾಬ್ದಾರಿಯಿಂದ ಮಾತನಾಡಿದ್ದಕ್ಕೆ ದೇಶದ ಜನರ ಕ್ಷಮೆಯಾಚಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ!

Recommended Video

West Indies ವಿರುದ್ಧ Mayank ಹಾಗು Kishan ಇಬ್ಬರಿಗೂ ಬುಲಾವ್ | Oneindia Kannada

English summary
Without Understanding The Constituion Telangana CM KCR Ruling The State. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X