ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ರೌಪದಿ ಮುರ್ಮ ನಾಮಪತ್ರದೊಂದಿಗೆ ಸರ್ನಾ ಧರ್ಮದ ಕೂಗು ಮುನ್ನೆಲೆಗೆ

|
Google Oneindia Kannada News

ನವದೆಹಲಿ, ಜು.2: ಬುಡಕಟ್ಟು ಮಹಿಳೆಯೊಬ್ಬರು ಭಾರತದ ಮುಂದಿನ ರಾಷ್ಟ್ರಪತಿಯಾಗಲು ನಾಮಪತ್ರ ಸಲ್ಲಿಸಿರುವ ವೇಳೆಯಲ್ಲಿ "ಸರ್ನಾ" ಅನ್ನು ಸ್ಥಳೀಯ ಸಮುದಾಯಗಳ ಪ್ರತ್ಯೇಕ ಧರ್ಮವಾಗಿ ಗುರುತಿಸಬೇಕೆಂಬ ಬಹುಕಾಲದ ಬೇಡಿಕೆಯು ಈಗ ಮುನ್ನೆಲೆಗೆ ಬಂದಿದೆ.

ಆದರೆ ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸೈದ್ಧಾಂತಿಕ ಚೌಕಟ್ಟಿನ ವಿರುದ್ಧವಾಗಿ ಗ್ರಹಿಸಲ್ಪಟ್ಟಿದೆ ಎನ್ನಲಾಗಿದೆ. ಅಖಂಡ ಹಿಂದೂ ಧರ್ಮದ ಚೌಕಟ್ಟಿನೊಳಗೆ ಆದಿವಾಸಿಗಳನ್ನು ಒಳಪಡಿಸುವ ಚಿಂತನೆಯು ಆರ್‌ಎಸ್‌ಎಸ್ ಕಾರ್ಯಸೂಚಿಯ ವಿರುದ್ಧ ಬರುತ್ತದೆ ಎನ್ನಲಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರಿದಂತೆ ಬುಡಕಟ್ಟು ಸಮುದಾಯದ ಮುಖಂಡರು ಮತ್ತು ಪಕ್ಷಗಳು ಮುಂದಿನ ಜನಗಣತಿಯ ಸಮಯದಲ್ಲಿ ಸರ್ನಾ ನಂಬಿಕೆಗೆ ಪ್ರತ್ಯೇಕ ಧರ್ಮದ ಅಗತ್ಯವನ್ನು ಪ್ರತಿಪಾದಿಸುತ್ತಿವೆ. ಸರ್ನಾ ಧರ್ಮವನ್ನು ನಂಬುವವರು ಜಾರ್ಖಂಡ್‌ ಅಸ್ಸಾಂ, ಛತ್ತಿಸ್‌ಗಡ, ಬಿಹಾರ ರಾಜ್ಯಗಳಲ್ಲಿ ಕಂಡು ಬರುತ್ತಾರೆ.

ರಾಷ್ಟ್ರಪತಿ ಚುನಾವಣೆ 2022: ಯಾವ ಪಕ್ಷದಿಂದ ಯಾರಿಗೆ ಬೆಂಬಲ?ರಾಷ್ಟ್ರಪತಿ ಚುನಾವಣೆ 2022: ಯಾವ ಪಕ್ಷದಿಂದ ಯಾರಿಗೆ ಬೆಂಬಲ?

ಈ ಸರ್ನಾ ವಿಚಾರಧಾರೆ ನಂಬಿಕೆಯ ಅನುಯಾಯಿಗಳು ಮೂರ್ತಿ ಪೂಜೆಯನ್ನು ನಂಬುವುದಿಲ್ಲ. ಬದಲಿಗೆ ಪ್ರಕೃತಿಯ ಶಕ್ತಿಗಳನ್ನು ಗೌರವಿಸುತ್ತಾರೆ. ಅದು ಕಾಡುಗಳು, ಬೆಟ್ಟಗಳು, ನದಿಗಳು ಅಥವಾ ಭೂಮಿ ಇವೇ ಮೊದಲಾದವು. ಸರ್ನಾ ಧರ್ಮದ ಅನುಪಸ್ಥಿತಿಯಲ್ಲಿ ಜನಗಣತಿಯ ಸಮಯದಲ್ಲಿ ಸರ್ನಾ ನಂಬಿಕೆಯ ಅನುಯಾಯಿಗಳು ತಮ್ಮನ್ನು ಇತರ ಧರ್ಮಗಳ ವರ್ಗಕ್ಕೆ ಸೇರಿಸಿಕೊಳ್ಳುತ್ತಾ ಬಂದಿದ್ದಾರೆ.

 ಜೂನ್ 30 ರಂದು ಆದಿವಾಸಿ ಸೆಂಗೆಲ್ ಅಭಿಯಾನ್

ಜೂನ್ 30 ರಂದು ಆದಿವಾಸಿ ಸೆಂಗೆಲ್ ಅಭಿಯಾನ್

ಎನ್‌ಡಿಎ ಮೈತ್ರಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪ್ರಚಾರ ಮತ್ತು ಸಂತಾಲ್ ಬಂಡಾಯದ ವಾರ್ಷಿಕೋತ್ಸವದ ಸಮಯದೊಂದಿಗೆ ಸರ್ನಾ ಧರ್ಮದ ವಿಷಯವು ಚಿಂತನೆಗೆ ಈಗ ಮರಳಿದೆ. ಮಾಜಿ ಬಿಜೆಪಿ ಸಂಸದ ಸಲ್ಖಾನ್ ಮುರ್ಮು ಅವರು ಜೂನ್ 30 ರಂದು ಜಂತರ್ ಮಂತರ್‌ನಲ್ಲಿ ಆದಿವಾಸಿ ಸೆಂಗೆಲ್ ಅಭಿಯಾನ್ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಸಂಸದರ ಸಲ್ಖಾನ್‌ ಮರ್ಮು ನೇತೃತ್ವದ ಸಂಸ್ಥೆಯು ಭಾರತದಾದ್ಯಂತ ಸ್ಥಳೀಯ ಸಮುದಾಯಗಳನ್ನು ಸಬಲೀಕರಣ ಮಾಡುವ ಗುರಿಯನ್ನು ಹೊಂದಿದೆ.

ರಾಷ್ಟ್ರಪತಿ ಚುನಾವಣೆ: ತಿರಸ್ಕೃತಗೊಳ್ಳಲಿದೆ 113 ನಾಮಪತ್ರ; ಅಷ್ಟು ಸುಲಭವಲ್ಲ ಸ್ಪರ್ಧೆರಾಷ್ಟ್ರಪತಿ ಚುನಾವಣೆ: ತಿರಸ್ಕೃತಗೊಳ್ಳಲಿದೆ 113 ನಾಮಪತ್ರ; ಅಷ್ಟು ಸುಲಭವಲ್ಲ ಸ್ಪರ್ಧೆ

 2000ರಲ್ಲಿ ರೈರಂಗ್‌ಪುರ ಕ್ಷೇತ್ರದ ಶಾಸಕಿ ಮುರ್ಮು

2000ರಲ್ಲಿ ರೈರಂಗ್‌ಪುರ ಕ್ಷೇತ್ರದ ಶಾಸಕಿ ಮುರ್ಮು

ಪ್ರಾಸಂಗಿಕವಾಗಿ, 1998 ಮತ್ತು 2004 ರ ನಡುವೆ, ಸಲ್ಖಾನ್ ಮುರ್ಮು ಮಯೂರ್ಭಂಜ್ ಅನ್ನು ಪ್ರತಿನಿಧಿಸಿದರು, ಎನ್‌ಡಿಎ ಅಧ್ಯಕ್ಷೀಯ ಚುನಾವಣೆಯ ನಾಮನಿರ್ದೇಶಿತ ದ್ರೌಪದಿ ಮುರ್ಮು ಇದೇ ಮೂಲದವರು. ಮುರ್ಮು ಅವರು 2000ರಲ್ಲಿ ಒಡಿಶಾ ವಿಧಾನಸಭೆಯಲ್ಲಿ ಮಯೂರ್ಭಂಜ್ ಸಂಸದೀಯ ಸ್ಥಾನದ ಅಡಿಯಲ್ಲಿ ಬರುವ ರೈರಂಗ್‌ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುದ್ದರು.

ಅನೇಕರು ದ್ರೌಪದಿ ಮುರ್ಮು ಅವರ ಉಮೇದುವಾರಿಕೆ ಮತ್ತು ರಾಷ್ಟ್ರಪತಿ ಹುದ್ದೆಗೆ ಏರಿಸುವ ಸಾಧ್ಯತೆಯು ಕೇವಲ ಸಾಂಕೇತಿಕವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಆಕೆಯ ನಾಮನಿರ್ದೇಶನದಿಂದ ಆರಂಭವಾದ ಚರ್ಚೆ ಮತ್ತು ಸಂವಾದವು ಬುಡಕಟ್ಟು ಸಮಸ್ಯೆಗಳನ್ನು ಗಮನಕ್ಕೆ ತರಲು ಸಹಾಯ ಮಾಡಿದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ನಾವುಗಳು ಮುಂದೆ ಹೋಗುವುದು ಸಮುದಾಯಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ಸಲ್ಖಾನ್ ಮುರ್ಮು ತಿಳಿಸಿದ್ದಾರೆ.

 ರಾಮ್ ನಾಥ್ ಕೋವಿಂದ್ ತಲುಪುದು ಕಷ್ಟ

ರಾಮ್ ನಾಥ್ ಕೋವಿಂದ್ ತಲುಪುದು ಕಷ್ಟ

ಸಲ್ಖಾನ್ ಮುರ್ಮು ಅವರು ಮುಂದೆ ರಾಷ್ಟ್ರಪತಿಯಾಗಲಿರುವ ದ್ರೌಪದಿ ಮುರ್ಮ ಅವರೊಂದಿಗೆ ತಮ್ಮ ಬೇಡಿಕೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ನಾವು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಅವರನ್ನು ತಲುಪುವುದು ತುಂಬಾ ಕಷ್ಟ. ಹೀಗಾಗಿ, ನಾವು ಭದ್ರತಾ ಸಿಬ್ಬಂದಿಗೆ ಜ್ಞಾಪಕ ಪತ್ರವನ್ನು ನೀಡಿದ್ದೇವೆ ಎಂದು ಅವರು ಹೇಳಿದರು. ಜೂನ್‌ 30ರಂದು ಪ್ರದರ್ಶನದಲ್ಲಿ ಜಂತರ್ ಮಂತರ್‌ನಲ್ಲಿ ಸುಮಾರು 1,000 ಜನರು ಧಾರಾಕಾರ ಮಳೆಯ ನಡುವೆಯೂ ಬೇಡಿಕೆಯ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದರು.

 ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಅಪಯ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಅಪಯ

ಔಪಚಾರಿಕ ಮನ್ನಣೆಯ ಅನುಪಸ್ಥಿತಿಯಲ್ಲಿ ಸರ್ನಾ ಧರ್ಮ ತನ್ನ ಗುರುತನ್ನು, ಸಂಸ್ಕೃತಿಯನ್ನು ಮತ್ತು ಸಾಂಪ್ರದಾಯಿಕ ಜೀವನ ವಿಧಾನವನ್ನು ಕಳೆದುಕೊಳ್ಳುವ ಆತಂಕದಿಂದ ಈ ಬೇಡಿಕೆಯು ಉದ್ಭವಿಸಿದೆ. ಬಹುಪಾಲು ಬುಡಕಟ್ಟು ಜನಾಂಗದವರು ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಅಪಯವನ್ನು ಇಲ್ಲಿ ಮುನ್ನೆಲೆಗೆ ತರಲಾಗಿದೆ.

 342ನೇ ಪರಿಚ್ಛೇದದಲ್ಲಿ ಬುಡಕಟ್ಟು ಜನಾಂಗ

342ನೇ ಪರಿಚ್ಛೇದದಲ್ಲಿ ಬುಡಕಟ್ಟು ಜನಾಂಗ

ಅನೇ ಸಂದರ್ಭಗಳಲ್ಲಿ, ಜನಗಣತಿ ಗಣತಿದಾರರು ತಮ್ಮನ್ನು ತಾವು ಹಿಂದೂಗಳೆಂದು ಗುರುತಿಸಿಕೊಳ್ಳುವಂತೆ ಬುಡಕಟ್ಟು ಜನರನ್ನು ಮೋಸಗೊಳಿಸುತ್ತಾರೆ. ಮತ್ತು ದೇಶದ 12 ಕೋಟಿ ಆದಿವಾಸಿಗಳನ್ನು ಸಂವಿಧಾನದ 342ನೇ ಪರಿಚ್ಛೇದದ ಅಡಿಯಲ್ಲಿ ಪರಿಶಿಷ್ಟ ಪಂಗಡಗಳೆಂದು ಗುರುತಿಸಬಹುದಾದರೆ, ಅವರ ನಂಬಿಕೆಯು 25ನೇ ವಿಧಿಯ ಅಡಿಯಲ್ಲಿ ಮಾನ್ಯತೆ ಪಡೆಯುತ್ತದೆ. ಇದು ನಮ್ಮ ಮೂಲಭೂತ ಹಕ್ಕು ಎಂದು ಮಾಜಿ ಸಂಸದ ಸಲ್ಖಾನ್ ಮುರ್ಮು ಹೇಳಿದರು.

 ಕೇಂದ್ರಕ್ಕೆ ಪತ್ರವನ್ನು ಕಳುಹಿಸಲು ನಿರ್ಣಯ

ಕೇಂದ್ರಕ್ಕೆ ಪತ್ರವನ್ನು ಕಳುಹಿಸಲು ನಿರ್ಣಯ

ನವೆಂಬರ್ 2020ರಲ್ಲಿ ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಸರ್ಕಾರವು ವಿಶೇಷ ಅಸೆಂಬ್ಲಿ ಅಧಿವೇಶನವನ್ನು ಕರೆದಿತ್ತು. ಇಲ್ಲಿ ಸರ್ನಾ ಧರ್ಮವನ್ನು ಗುರುತಿಸಲು ಮತ್ತು 2021ರ ಜನಗಣತಿಯಲ್ಲಿ ಅದನ್ನು ಪ್ರತ್ಯೇಕ ಧರ್ಮವಾಗಿ ಆಗಿ ಸೇರಿಸಲು ಕೇಂದ್ರಕ್ಕೆ ಪತ್ರವನ್ನು ಕಳುಹಿಸಲು ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ ಸಲ್ಖಾನ್ ಮುರ್ಮು ಜೆಎಂಎಂ ಈ ವಿಷಯದ ಬಗ್ಗೆ ಗಂಭೀರವಾಗಿಲ್ಲ ಎಂದು ಭಾವಿಸಿದ್ದರು. ನಂತರ ಅವರು ರಾಜಕೀಯ ಉಳಿವಿಗಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳ ಮೇಲೆ ಅವಲಂಬಿತರಾಗಿದ್ದಾರೆ ಅವರು ಹೇಳಿದರು. ಅವರು ಚುನಾವಣಾ ವಿಷಯಗಳಿಗಿಂತ ಸಾಮಾಜಿಕ ವಿಷಯಗಳ ಮೇಲೆ ಹೆಚ್ಚು ಗಮನಹರಿಸಲು ಸ್ವಯಂಪ್ರೇರಣೆಯಿಂದ ಬಿಜೆಪಿಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

English summary
A long-standing demand for recognition of "Sarna" as a separate religion of indigenous communities has now come to the fore as a tribal woman has filed her nomination paper to become the next President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X