ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ‘ಸ್ಪುಟ್ನಿಕ್’ಹೆಸರಿನ ಹಿಂದಿದೆ ದಶಕಗಳ ಇತಿಹಾಸ..!

|
Google Oneindia Kannada News

ಜಗತ್ತು ಕೊರೊನಾ ಭಯದಲ್ಲಿ ನಲುಗುವಾಗ ರಷ್ಯಾ ಸಿಹಿಸುದ್ದಿ ಕೊಟ್ಟಿದೆ. ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ವ್ಯಾಕ್ಸಿನ್ ಸಿದ್ಧವೆಂದು ಘೋಷಿಸಿದೆ. ಶತಮಾನದ ಸಂಜೀವಿನಿಗೆ ರಷ್ಯಾ 'ಸ್ಪುಟ್ನಿಕ್-ವಿ' ಎಂದು ನಾಮಕರಣ ಮಾಡಿದೆ. ಸ್ಪುಟ್ನಿಕ್ ಪದದ ಅರ್ಥ 'ಸಹ ಪಯಣಿಗ' ಎಂದು. ಆದರೆ ರಷ್ಯಾ ಕೊರೊನಾ ವ್ಯಾಕ್ಸಿನ್‌ಗೆ ಸ್ಪುಟ್ನಿಕ್ ಎಂದು ಹೆಸರಿಡಲು ಕಾರಣವೇನು..? ಸ್ಪುಟ್ನಿಕ್ ಎಂಬ ಹೆಸರನ್ನೇ ಆಯ್ಕೆ ಮಾಡಿದ್ದೇಕೆ..? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿವೆ.

ಅಷ್ಟಕ್ಕೂ ಸ್ಪುಟ್ನಿಕ್ ಪದ ರಷ್ಯಾದ ಕಣಕಣದಲ್ಲೂ ಬೆರೆತು ಹೋಗಿದೆ. ಹಾಗೆ ನೋಡಿದರೆ ದಶಕಗಳ ಹಿಂದೆ ಶೀತಲ ಸಮರಕ್ಕೆ ಕಿಚ್ಚು ಹಚ್ಚಿದ್ದು ಇದೇ 'ಸ್ಪುಟ್ನಿಕ್' ಎಂಬ ಹೆಸರು. ಇದೀಗ ಜಗತ್ತಿನಾದ್ಯಂತ ವ್ಯಾಕ್ಸಿನ್ ವಾರ್ ನಡೆಯುವಾಗ 'ಸ್ಪುಟ್ನಿಕ್' ಪದ ಮತ್ತೆ ಮುನ್ನೆಲೆಗೆ ಬಂದಿದೆ. ರಷ್ಯಾ ಕಂಡುಹಿಡಿದಿರುವ ಕೊರೊನಾ ಮದ್ದಿನ ಬಗ್ಗೆ ಎದ್ದಿರುವ ಗೊಂದಲದಷ್ಟೇ, ವ್ಯಾಕ್ಸಿನ್‌ಗೆ ಇಟ್ಟಿರುವ ಹೆಸರು ಕೂಡ ಜಗತ್ತಿನ ಗಮನ ಸೆಳೆದಿದೆ. ಒಮ್ಮೆ ಇದೇ ಸ್ಪುಟ್ನಿಕ್ ಹೆಸರಿಂದ ಬಾಹ್ಯಾಕಾಶ ಲೋಕದಲ್ಲಿ ಭಾರಿ ಮುಖಭಂಗ ಅನುಭವಿಸಿದ್ದ ಅಮೆರಿಕ ಈಗ ಮತ್ತೊಮ್ಮೆ ಹಿನ್ನಡೆ ಕಂಡಿದೆ.

ಬಾಹ್ಯಾಕಾಶಕ್ಕೆ ಹಾರಿದ್ದ ಮೊದಲ ಉಪಗ್ರಹ

ಬಾಹ್ಯಾಕಾಶಕ್ಕೆ ಹಾರಿದ್ದ ಮೊದಲ ಉಪಗ್ರಹ

ಅದು 1957ರ ಸಮಯ, ಮಾನವ ಭೂಮಿ ಬಿಟ್ಟು ಹೊರಗೆ ಹಾರಲು ಕಲಿತ ವರ್ಷ. ಜಗತ್ತು ಇಬ್ಭಾಗವಾಗಿ ಒಂದಷ್ಟು ರಾಷ್ಟ್ರಗಳು ಸೋವಿಯತ್ ಯೂನಿಯನ್ ಅಥವಾ ಈಗಿನ ರಷ್ಯಾ ಪರವಾಗಿ ನಿಂತರೆ, ಮತ್ತೊಂದಿಷ್ಟು ರಾಷ್ಟ್ರಗಳು ಅಮೆರಿಕ ಪರವಾಗಿದ್ದವು. ಈ ಹೊತ್ತಲ್ಲೇ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಸ್ಪರ್ಧೆ ಏರ್ಪಟ್ಟಿತ್ತು. ಅಮೆರಿಕ ಏನೇ ಮಾಡಿದರೂ ಅದನ್ನ ರಷ್ಯಾ ಮಾಡುತ್ತಿತ್ತು. ರಷ್ಯಾ ಏನೇ ಮೊದಲು ಸಾಧಿಸಿದರೂ ಅದು ಅಮೆರಿಕದ ಕಣ್ಣು ಕುಕ್ಕುತ್ತಿತ್ತು.

ವಿಶ್ವದ ಮೊದಲ ಕೊರೊನಾ ಲಸಿಕೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

ಬಾಹ್ಯಾಕಾಶ ಸಂಶೋಧನೆಯಲ್ಲಿ ಪೈಪೋಟಿ

ಬಾಹ್ಯಾಕಾಶ ಸಂಶೋಧನೆಯಲ್ಲಿ ಪೈಪೋಟಿ

ಮೊದಲು ಮಿಲಿಟರಿ ಸಾಧನಗಳ ವಿಚಾರದಲ್ಲಿ ಜಿದ್ದಿಗೆ ಬಿದ್ದ ಎರಡೂ ರಾಷ್ಟ್ರಗಳು ನಂತರ ಬಾಹ್ಯಾಕಾಶ ಸಂಶೋಧನೆಯಲ್ಲೂ ರೇಸ್ ಆರಂಭಿಸಿದ್ದವು. ಆದರೆ ಇದರಲ್ಲಿ ಗೆದ್ದಿದ್ದು ಸೋವಿಯತ್ ಯೂನಿಯನ್. 1957ರ ಅಕ್ಟೋಬರ್ 4ರಂದು ಭೂಗ್ರಹದ ಮೊದಲ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ್ದ ಸೋವಿಯತ್ ಯೂನಿಯನ್ ಎದೆಯುಬ್ಬಿಸಿತ್ತು.

ಸ್ಪುಟ್ನಿಕ್ ಹೆಸರಿನಲ್ಲಿ 28 ಯೋಜನೆಗಳು

ಸ್ಪುಟ್ನಿಕ್ ಹೆಸರಿನಲ್ಲಿ 28 ಯೋಜನೆಗಳು

ಮೊದಲ ಗೆಲುವು ದಾಖಲಾಗುತ್ತಿದ್ದಂತೆ ಸೋವಿಯತ್ ಯೂನಿಯನ್ ಅಥವಾ ಇವತ್ತಿನ ರಷ್ಯಾ ಸುಮ್ಮನೆ ಕೂರಲಿಲ್ಲ. ತನ್ನ ಸಂಶೋಧನೆಗೆ ಇನ್ನಷ್ಟು ಒತ್ತು ನೀಡಿತ್ತು. ಸೌರಮಂಡಲದ ಗ್ರಹಗಳ ಸಂಶೋಧನೆಗೆ ಇದೇ ಸ್ಪುಟ್ನಿಕ್ ಹೆಸರಿನಡಿ ಸ್ಯಾಟಲೈಟ್‌ ಹಾರಿ ಬಿಟ್ಟಿತ್ತು. ಇದರಲ್ಲಿ ಭಾಗಶಃ ಯಶಸ್ಸು ಕೂಡ ಸಾಧಿಸಿತ್ತು ಅಂದಿನ ಸೋವಿಯತ್ ರಷ್ಯಾ. ಸ್ಪುಟ್ನಿಕ್ ಹೆಸರನ್ನೇ ಇಟ್ಟು 28 ಯೋಜನೆಗಳನ್ನು ರಷ್ಯಾ ಕೈಗೊಂಡಿತ್ತು.

ರಷ್ಯಾದ ಲಸಿಕೆ ಭಾರತಕ್ಕೆ ಬರುತ್ತಾ?: ಯಾವಾಗ, ಪಡೆಯುವ ಮಾರ್ಗವೇನು?ರಷ್ಯಾದ ಲಸಿಕೆ ಭಾರತಕ್ಕೆ ಬರುತ್ತಾ?: ಯಾವಾಗ, ಪಡೆಯುವ ಮಾರ್ಗವೇನು?

‘ದೊಡ್ಡಣ್ಣ’ನಿಗೆ ದಶಕಗಳ ಅವಮಾನ..!

‘ದೊಡ್ಡಣ್ಣ’ನಿಗೆ ದಶಕಗಳ ಅವಮಾನ..!

ಅಮೆರಿಕ ಈ ಅವಮಾನದಿಂದ ಹೊರಗೆ ಬರಲು ದಶಕಗಳೇ ಬೇಕಾದವು. ಹೀಗೆ ಸ್ಪುಟ್ನಿಕ್ ರಷ್ಯಾಗೆ ಒಂದು ಗತ್ತು ತಂದುಕೊಟ್ಟಿತ್ತು ಎಂದರೆ ತಪ್ಪಾಗಲಾರದು. ಇದೇ ಕಾರಣಕ್ಕೆ ಪುಟಿನ್ ಈಗ ಕೊರೊನಾ ವ್ಯಾಕ್ಸಿನ್‌ಗೂ ಸ್ಪುಟ್ನಿಕ್ ಎಂದು ನಾಮಕರಣ ಮಾಡಿರಬಹುದು. ಒಟ್ಟಿನಲ್ಲಿ ಹಿಂದೆ ಸ್ಯಾಟಲೈಟ್ ರೇಸ್‌ನಲ್ಲಿ ಇದೇ ‘ಸ್ಪುಟ್ನಿಕ್' ಹೆಸರಿನಡಿ ಗೆದ್ದು ಬೀಗಿದ್ದ ರಷ್ಯಾ, ಈಗ ವ್ಯಾಕ್ಸಿನ್ ವಾರ್‌ನಲ್ಲೂ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಮೆರಿಕ ಮತ್ತೊಮ್ಮೆ ರಷ್ಯಾ ಎದುರು ಸೋಲು ಕಂಡಂತಾಗಿದೆ. ಆದರೆ ರಷ್ಯಾ ವ್ಯಾಕ್ಸಿನ್ ಬಗ್ಗೆ ಹಲವು ಅನುಮಾನಗಳು ಕಾಡುತ್ತಿದ್ದು, ಈ ಆರೋಪಗಳಿಂದ ರಷ್ಯಾದ ವ್ಯಾಕ್ಸಿನ್ ಮುಕ್ತವಾದ ದಿನ ಈ ಗೆಲುವು ಅಧಿಕೃತವಾಗಲಿದೆ.

English summary
Sputnik is the name of Russia's coronavirus vaccine. So it is the time to remind the history of Sputnik name and the projects made by this name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X