ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣ್ಣೆ ಹಾಕಿಕೊಂಡ ಕುಡುಕರಿಗೆ ಇಂಗ್ಲೀಷ್ ಮೇಲೆ 'Full Love' ಯಾಕೆ!?

|
Google Oneindia Kannada News

ಕುಡಿಯುವವರೆಗೂ ಮಾತ್ರ ಬೇರೆಯವರ ಹವಾ, ಕುಡಿದ ಮೇಲೆ ನಂದೇ ಹವಾ. ಕನ್ನಡ ಸಿನಿಮಾದ ಡೈಲಾಗ್ ಹೊಡೆಯುವ ಕುಡುಕರು, ಕೊಂಚ ಕಿಕ್ ಹೊಡೆಯುತ್ತಿದ್ದಂತೆ ಭಾಷೆಯನ್ನೇ ಚೇಂಜ್ ಮಾಡಿ ಬಿಡುತ್ತಾರೆ.

ಮದ್ಯದ ಮತ್ತು ನೆತ್ತಿಗೆ ಏರುತ್ತಿದ್ದಂತೆ ಕುಡುಕರ ಸ್ಟೈಲೇ ಚೇಂಜ್ ಆಗಿ ಬಿಡುತ್ತೆ. ಕುಡಿಯುವ ಮುನ್ನ ಕನ್ನಡ ಕನ್ನಡ ಎನ್ನುತ್ತಿದ್ದವರು ದಿಢೀರನೇ ಇಂಗ್ಲೀಷ್ ಡೈಲಾಗ್ ಹೊಡೆಯುವುದಕ್ಕೆ ಶುರು ಮಾಡಿ ಬಿಡುತ್ತಾರೆ. ಇನ್ನೂ ಕೆಲವರು ಹಿಂದಿಯಲ್ಲಿ ಕಹಾನಿ ಶುರುವಿಟ್ಟುಕೊಳ್ಳುತ್ತಾರೆ.

ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!

ಸಾಮಾನ್ಯವಾಗಿ ಕುಡಿದ ಮೇಲೆ ಮಂದಿ ಯಾಕೆ ಇಂಗ್ಲೀಷ್ ಮಾತನಾಡುತ್ತಾರೆ ಎಂಬ ಅನುಮಾನ ಎಲ್ಲರಿಗೂ ಇದ್ದೇ ಇರುತ್ತದೆ. ಇಂಗ್ಲೀಷ್ ಗೊತ್ತಿಲ್ಲದವರಿಗೂ ಅದ್ಯಾಗೋ ಇಂಗ್ಲೀಷ್ ಮೇಲೆ ಲವ್ ಹುಟ್ಟಿಕೊಳ್ಳುತ್ತೆ. ಇದರ ಹಿಂದಿನ ಅಸಲಿ ಕಥೆಯನ್ನು ಸಮೀಕ್ಷೆಯೊಂದು ಬಟಾಬಯಲು ಮಾಡಿದೆ.

ಕುಡುಕರ ಕಹಾನಿ ಬಿಚ್ಚಿಟ್ಟ ಸಮೀಕ್ಷೆ ಯಾವುದಯ್ಯಾ?

ಕುಡುಕರ ಕಹಾನಿ ಬಿಚ್ಚಿಟ್ಟ ಸಮೀಕ್ಷೆ ಯಾವುದಯ್ಯಾ?

ಕುಡುಕರು ಹಾಕಿಕೊಳ್ಳುವ ಎಣ್ಣೆಯ ಅಮಲು ಅವರನ್ನು ಬೇರೆ ಭಾಷೆ ಮಾತನಾಡುವುದಕ್ಕೆ ಸಹಾಯ ಮಾಡುತ್ತದೆ ಎಂದು 'ಜರ್ನಲ್ ಆಫ್ ಸೈಕೋಫಾರ್ಮಕಾಲಜಿ' ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.

ಲಿವರ್ಪೂಲ್ ವಿಶ್ವವಿದ್ಯಾನಿಲಯ, ಬ್ರಿಟನ್‌ನ ಕಿಂಗ್ಸ್ ಕಾಲೇಜ್ ಮತ್ತು ನೆದರ್ಲ್ಯಾಂಡ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಭಾಷೆ ಬದಲಾವಣೆ ನಡುವಳಿಕೆ ಒಂದು ಭಾಗ

ಭಾಷೆ ಬದಲಾವಣೆ ನಡುವಳಿಕೆ ಒಂದು ಭಾಗ

ಮದ್ಯಪಾನ ಮಾಡಿದ ನಂತರದಲ್ಲಿ ಸಾಮಾನ್ಯವಾಗಿ ವ್ಯಕ್ತಿಗಳ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ನಡವಳಿಕೆ ಬದಲಾವಣೆ ಆಗಿದೆ ಎಂಬುದನ್ನು ತೋರಿಸುವುದರಲ್ಲಿ ಭಾಷಾಶೈಲಿಯೂ ಸಹ ಸೇರಿದೆ. ಮದ್ಯಪಾನ ಮಾಡಿದ ವ್ಯಕ್ತಿಯ ಮಾತಿನಲ್ಲಿ ತೊದಲಿಕೆಯ ಜೊತೆಗೆ ಬೇರೆ ಭಾಷೆಯ ಮೇಲೆ ಆತನಿಗಿರುವ ವ್ಯಾಮೋಹವು ಮದ್ಯದ ಅಮಲಿನಲ್ಲಿ ಹೊರಗೆ ಬೀಳುತ್ತದೆ. ಅದು ಇಂಗ್ಲೀಷ್ ಆಗಿರಬೇಕು ಅಂತೇನಿಲ್ಲ ಹಿಂದಿಯಾಗಿದ್ದರೂ ಓಕೆ, ಉರ್ದು ಆಗಿದ್ದರೂ ಓಕೆ.

ಆತ್ಮವಿಶ್ವಾಸದೊಂದಿಗೆ ಎಣ್ಣೆ ಏಟಿನಲ್ಲಿ ಮಾತುಗಾರಿಕೆ

ಆತ್ಮವಿಶ್ವಾಸದೊಂದಿಗೆ ಎಣ್ಣೆ ಏಟಿನಲ್ಲಿ ಮಾತುಗಾರಿಕೆ

ಸಾಮಾನ್ಯವಾಗಿ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಆದರೆ ಎಣ್ಣೆ ಹಾಕಿಕೊಂಡ ವ್ಯಕ್ತಿಗಳಲ್ಲಿ ಅವರಿಗೆ ಅರಿವಿಲ್ಲದಂತೆಯೇ ಆತ್ಮವಿಶ್ವಾಸವನ್ನು ಹೆಚ್ಚಿಸಿರುತ್ತದೆ. ಅದೇ ಆತ್ಮವಿಶ್ವಾಸದಲ್ಲಿ ತಮ್ಮ ದೃಷ್ಟಿಕೋನ ಮತ್ತು ವಿಚಾರಗಳನ್ನು ಧೈರ್ಯವಾಗಿ ಎದುರಿಗಿರುವ ವ್ಯಕ್ತಿಗಳ ಬಳಿ ಮಂಡಿಸುತ್ತಾರೆ. ಈ ವೇಳೆಯಲ್ಲಿ ಅವರ ಭಾಷಾ ಕೌಶಲ್ಯವನ್ನು ಪ್ರದರ್ಶಿಸುವುದಕ್ಕೆ ಮದ್ಯ ಸಹಾಯ ಮಾಡುತ್ತದೆ ಎಂದು ಸಂಶೋಧನೆಯು ಹೇಳಿದೆ.

ಮದ್ಯಪಾನ ಮಾಡಿದರೆ ಇಂಗ್ಲೀಷ್ ಮಾತುಗಾರಿಕೆ ಸುಲಭವೇ?

ಮದ್ಯಪಾನ ಮಾಡಿದರೆ ಇಂಗ್ಲೀಷ್ ಮಾತುಗಾರಿಕೆ ಸುಲಭವೇ?

ಇಂಗ್ಲೀಷ್ ಮಾತನಾಡುವುದಕ್ಕೆ ಬಾರದವರು ಇತರರ ಮುಂದೆ ಆ ಭಾಷೆಯನ್ನು ಬಳಸುವುದಿಲ್ಲ. ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಅಂಥವರು ಭಯಪಡುತ್ತಾರೆ. ಆದರೆ ಮದ್ಯಪಾನ ಮಾಡಿದ ಸಮಯದಲ್ಲಿ ಅದೇ ವ್ಯಕ್ತಿಗಳಲ್ಲಿನ ಭಯ ಮಂಗಮಾಯವಾಗುತ್ತದೆ. ಆಗ ತಮಗೆ ತಿಳಿದಷ್ಟು ಇಂಗ್ಲೀಷ್ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಮದ್ಯದ ಮತ್ತಿನಲ್ಲಿ ಇರುವ ಮಂದಿಗೆ ಯಾವುದೇ ಭಯ ಇರುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

English summary
Why people talk english and hindi after drink alcohol. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X