• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರನ ಮೇಲಿಳಿಯಲು ಇಷ್ಟು ಸಾಹಸವೇಕೆ? ಅಲ್ಲಿ ಏನಿದೆ ಗೊತ್ತೇ?

|

ಬೆಂಗಳೂರು, ಸೆಪ್ಟೆಂಬರ್ 11: ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಯೋಜನೆ ಇನ್ನೇನು ಸಂಪೂರ್ಣ ಗುರಿ ಮುಟ್ಟಿತು ಎನ್ನುವಾಗಲೇ ಲ್ಯಾಂಡರ್ ಭೂಮಿಯೊಂದಿಗಿನ ಸಂಪರ್ಕ ಕಡಿದುಕೊಂಡಿತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಶಿಷ್ಟ ಸಾಧನೆಗಾಗಿ ಕಾತರದಿಂದ ಕಾಯುತ್ತಿದ್ದವರಿಗೆಲ್ಲ ಇದು ನಿರಾಸೆ ಮೂಡಿಸಿತು.

   ಎಲ್ಲರಿಗೂ ಶಿವನ್ ಹೇಳೋದು ಒಂದೇ ಮಾತು..?| ISRO chief K Sivan

   ಜುಲೈ 22ರಂದು ಭೂಮಿಯಿಂದ ಹೊರಟಾಗಿನಿಂದ ಸೆ. 7ರಂದು ಚಂದ್ರನ ಮೇಲ್ಮೈ ಮೇಲೆ ಇಳಿಯುವ ಅಂತಿಮ ಪ್ರಯತ್ನದ ಗಳಿಗೆಯವರೆಗೂ ಭೂಮಿಯಲ್ಲಿನ ತನ್ನ ನಿಯಂತ್ರಕರೊಂದಿಗೆ ಮಾತನಾಡುತ್ತಿದ್ದ 'ವಿಕ್ರಮ' ಕೊನೆಯ ಕ್ಷಣದಲ್ಲಿ ಕಳೆದುಹೋಗಿಬಿಟ್ಟ. ಆದರೆ, ಯೋಜನೆಯ ಭಾಗವಾದ ಆರ್ಬಿಟರ್ ನೌಕೆ ಚಂದ್ರನಿಂದ ನೂರು ಕಿ.ಮೀ. ದೂರದಲ್ಲಿ ಸುತ್ತಾಡುತ್ತಲೇ ವಿಕ್ರಮ ಇರುವ ಜಾಗವನ್ನು ಪತ್ತೆಹಚ್ಚಿದೆ. ವಿಕ್ರಂ ಲ್ಯಾಂಡರ್ ಜತೆಗೆ ಮತ್ತೆ ಸಂಪರ್ಕ ಸಾಧಿಸುವುದು ಅತಿ ಕಷ್ಟ ಎನ್ನುವುದು ಸತ್ಯವಾಗಿದ್ದರೂ ವಿಜ್ಞಾನಿಗಳು ತಮ್ಮ ಭರವಸೆ ಕಳೆದುಕೊಂಡಿಲ್ಲ.

   ವಿಕ್ರಂ ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋ

   ವಿಶೇಷವೆಂದರೆ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಅಷ್ಟಾಗಿ ಆಸಕ್ತಿಯಿಲ್ಲದವರೂ 'ಚಂದ್ರಯಾನ-2'ದ ಸಾಹಸವನ್ನು ಬೆರಗುಗಣ್ಣಿನಿಂದ ನೋಡುತ್ತಿರುವುದು. ಯೋಜನೆಗೆ ಹಿನ್ನಡೆಯಾದಾಗ ಅವರೂ ಬೇಸರಪಟ್ಟುಕೊಂಡರು. ವಿಜ್ಞಾನಿಗಳ ಜತೆಗೆ ನಾವಿದ್ದೇವೆ ಎಂದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ಬೆನ್ನಿಗೆ ನಿಂತರು. ಭಾವನಾತ್ಮಕವಾಗಿ ಅವರು ಬೆಸೆದುಕೊಂಡರು. ಇಸ್ರೋದ ಈ ಯೋಜನೆ ಚಂದ್ರನ ಕುರಿತು ಅಧ್ಯಯನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಸಾಮಾನ್ಯವಾಗಿ ತಿಳಿದಿರುವ ಸಂಗತಿ. ಅಲ್ಲಿ ನೀರು ಇದೆಯೇ? ಜೀವಿಗಳ ಅಸ್ತಿತ್ವ ಇದೆಯೇ ಮುಂತಾದವುಗಳನ್ನು ತಿಳಿಯುವುದು ಈ ಅಧ್ಯಯನದ ಭಾಗ ಎನ್ನುವುದು ಮಾತ್ರ ಮುಖ್ಯವಾಗಿ ತಿಳಿದಿದೆ. ಆದರೆ ಅದರಾಚೆಗೆ ಚಂದ್ರಯಾನದಂತಹ ಯೋಜನೆಗಳ ಉದ್ದೇಶ ಬೇರೆಯದೇ ಇದೆ. ಅದು ಏನು? ಮುಂದೆ ಓದಿ...

   ಚಂದ್ರನ ಸಂಪತ್ತಿನ ಮೇಲೆ ಕಣ್ಣು!

   ಚಂದ್ರನ ಸಂಪತ್ತಿನ ಮೇಲೆ ಕಣ್ಣು!

   ಚಂದ್ರನಲ್ಲಿಗೆ ನೌಕೆಗಳನ್ನು ರವಾನಿಸಿದ ಪ್ರಮುಖ ರಾಷ್ಟ್ರಗಳಲ್ಲಿ ಅಮೆರಿಕ ಮತ್ತು ರಷ್ಯಾ ಪ್ರಮುಖವಾಗಿವೆ. ಇತ್ತೀಚಿನ ದಿನಗಳಲ್ಲಿ ಚೀನಾ, ಜಪಾನ್‌ ಈ ನಿಟ್ಟಿನಲ್ಲಿ ತ್ವರಿತವಾಗಿ ಯೋಜನೆಗಳನ್ನು ಸಿದ್ಧಪಡಿಸುತ್ತಿವೆ. ಭಾರತ ಕೂಡ ಚಂದ್ರಯಾನ 2 ಉಡಾವಣೆಗೂ ಮುನ್ನವೇ ಮೂರನೇ ಯೋಜನೆಗೂ ಅಡಿಪಾಯ ಹಾಕಿದೆ. ಇಸ್ರೇಲ್‌ನಂತಹ ದೇಶವೂ ಇಂಥದ್ದೊಂದು ಪ್ರಯತ್ನ ನಡೆಸಿದೆ. ಬಾಹ್ಯಾಕಾಶ ಜಗತ್ತಿನಲ್ಲಿ ವಿವಿಧ ಪ್ರಯೋಗಗಳು ನಡೆಯುತ್ತಿದ್ದರೂ ಚಂದ್ರನ ಮೇಲೆ ಏಕೆ ಎಲ್ಲ ದೇಶಗಳಿಗೂ ಕಣ್ಣು? ಇದಕ್ಕೆ ಕಾರಣ, ಚಂದ್ರನಲ್ಲಿರುವ ಸಂಪತ್ತು.

   ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

   ಸನ್ನಿವೇಶ ಬದಲಾಗಿದೆ

   ಸನ್ನಿವೇಶ ಬದಲಾಗಿದೆ

   ಒಂದು ವೇಳೆ ಚಂದ್ರಯಾನ ಸಂಪೂರ್ಣ ಯಶಸ್ವಿಯಾಗಿದ್ದರೆ ಏನಾಗುತ್ತಿತ್ತು? ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಚಂದ್ರನಲ್ಲಿನ ಈ ಸಂಪತ್ತಿನ ಮೇಲೆ ಕಣ್ಣಿಟ್ಟಿವೆ. ಬಾಹ್ಯಾಕಾಶ ರಂಗದಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಭಾರತ ಕೂಡ ಈ ನಿಟ್ಟಿನಲ್ಲಿ ದಾಪುಗಾಲು ಇಡತೊಡಗಿದೆ. ಚಂದ್ರ ಒಂದು ಕೌತುಕದ ಕೇಂದ್ರವಾಗಿತ್ತು. ಅಲ್ಲಿ ಏನಿದೆ? ಏನಿಲ್ಲ ಎನ್ನುವುದನ್ನು ತಿಳಿಯುವುದು ಆರಂಭದ ಉದ್ದೇಶಗಳಲ್ಲಿ ಒಂದಾಗಿತ್ತು. 1969ರಲ್ಲಿ ಮೊದಲ ಬಾರಿಗೆ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಸಂದರ್ಭವೇ ಬೇರೆ. ಈಗಿನ ಸನ್ನಿವೇಶವೇ ಬೇರೆ.

   $30 ಬಿಲಿಯನ್ ಹೂಡಿಕೆ

   $30 ಬಿಲಿಯನ್ ಹೂಡಿಕೆ

   2024ರ ವೇಳೆಗೆ ಚಂದ್ರನ ಅಂಗಳಕ್ಕೆ ಪುರುಷರು ಮತ್ತು ಮಹಿಳೆಯರನ್ನು ಕಳುಹಿಸಲು ಅಮೆರಿಕದ ನಾಸಾ 'ಅಪೋಲೋ' ಯೋಜನೆಯ ತಯಾರಿ ನಡೆಸುತ್ತಿದ್ದರೆ, ನೆರೆಯ ಚೀನಾ 2030ರ ಹೊತ್ತಿಗೆ ಚಂದ್ರನಲ್ಲಿ ತನ್ನ ನೆಲೆಯನ್ನೇ ನಿರ್ಮಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಬಾಹ್ಯಾಕಾಶ ಸಂಸ್ಥೆಗಳು ಈ ಯೋಜನೆಗಳಿಗಾಗಿ $30 ಬಿಲಿಯನ್ ವ್ಯಯಿಸುವ ಸಾಧ್ಯತೆ ಇದೆ. ಚಂದ್ರನ ಲ್ಯಾಂಡರ್‌ನಿಂದ ಹಿಡಿದು ಮಿನಿ ಬಾಹ್ಯಾಕಾಶ ನಿಲ್ದಾಣ

   ನಿಲ್ದಾಣ ಸ್ಥಾಪನೆಯ ವಿವಿಧ ಯೋಜನೆಗಳಿಗೆ ಹಣ ಹೂಡಲು ಮುಂದಾಗಿದ್ದಾರೆ.

   ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

   ಖಾಸಗಿ ವ್ಯಕ್ತಿಗಳಿಂದಲೂ ಹೂಡಿಕೆ

   ಖಾಸಗಿ ವ್ಯಕ್ತಿಗಳಿಂದಲೂ ಹೂಡಿಕೆ

   ಕೋಟ್ಯಧಿಪತಿಗಳಾದ ಎಲೋನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರು ಚಂದ್ರ ಮತ್ತು ಮಂಗಳದ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ಸುರಿಯುತ್ತಿದ್ದಾರೆ. ಇದರ ನಡುವೆ ಭಾರತ ಕೂಡ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಉದ್ದೇಶದಂತೆ ಲ್ಯಾಂಡರ್ ಸುಗಮವಾಗಿ ಚಂದ್ರನ ಮೇಲೆ ಇಳಿದಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತು. ಇಡೀ ಜಗತ್ತಿನ ದೇಶಗಳು ಭಾರತವನ್ನು ಪ್ರಮುಖ ಶಕ್ತಿಶಾಲಿ ದೇಶಗಳ ಮುಂಚೂಣಿಯಲ್ಲಿ ಗುರುತಿಸುತ್ತಿದ್ದವು. ಈಗಲೂ ಭಾರತದ ಸಾಧನೆ ಕಡಿಮೆಯೇನಲ್ಲ.

   ಹೀಲಿಯಂ-3 ಎಂಬ ಭವಿಷ್ಯದ ಶಕ್ತಿ

   ಹೀಲಿಯಂ-3 ಎಂಬ ಭವಿಷ್ಯದ ಶಕ್ತಿ

   ಚಂದ್ರನ ಮೇಲೆ ಹೀಲಿಯಂ 3 ಅಸ್ತಿತ್ವದ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಅದರ ಸುತ್ತಲೂ ವಿವಿಧ ಅಧ್ಯಯನಗಳು ಮುಂದುವರಿದಿವೆ. ಹೀಲಿಯಂ 3 ಅದಕ್ಕೆ ಪೂರಕವಾಗಿ ಚಂದ್ರಯಾನದಂತಹ ಯೋಜನೆಗಳು ನಡೆಯುತ್ತಿವೆ. ಹೀಲಿಯಂ-3 ಭವಿಷ್ಯದ ಪ್ರಮುಖ ಇಂಧನ ಸಾಧನ. ರೇಡಿಯೋ ಆಕ್ಟಿವ್ ರಹಿತವಾಗಿರುವ ಹೀಲಿಯಂ 3, ಯುರೇನಿಯಂಗಿಂತಲೂ ಮೂರು ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಬಲ್ಲದು.

   200-300 ವರ್ಷಕ್ಕೆ ಸಾಕು

   200-300 ವರ್ಷಕ್ಕೆ ಸಾಕು

   ಒಂದು ಅಂದಾಜಿನ ಪ್ರಕಾರ ಚಂದ್ರನಲ್ಲಿ ಒಂದು ಮಿಲಿಯನ್ ಮೆಟ್ರಿಕ್ ಟನ್ ಹೀಲಿಯಂ ಇದೆ. ಒಂದು ಟನ್ ಹೀಲಿಯಂ 3ಯ ಬೆಲೆ ಸುಮಾರು $5 ಬಿಲಿಯನ್ ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ ಇದರಲ್ಲಿ ಸುಮಾರು 250,000 ಟನ್ ಹೀಲಿಯಂ 3ಯನ್ನು ಮಾತ್ರ, ಅಂದರೆ ಕಾಲುಭಾಗದಷ್ಟನ್ನು ಸಂಸ್ಕರಿಸಿ ಹೊರತೆಗೆಯಬಹುದು. ಈ ಹೀಲಿಯಂನಿಂದ ಎಷ್ಟು ಶಕ್ತಿ ದೊರಕಬಹುದು ಎಂಬುದು ಗೊತ್ತೇ? ಇಡೀ ಭೂಮಿಗೆ ಕನಿಷ್ಠ ಎರಡು ಶತಮಾನಗಳಿಗೆ ಸಾಲುವಷ್ಟು! ಅಂದರೆ, ಇಡೀ ಭೂಮಿಗೆ ಸುಮಾರು 200 ವರ್ಷಗಳಿಗೆ ಸಾಕಾಗುವಷ್ಟು ಎನರ್ಜಿ ಹೀಲಿಯಂ-3 ಮೂಲಕ ಸಿಗುತ್ತದೆ. ಅಷ್ಟೂ ಪ್ರಮಾಣದ ಹೀಲಿಯಂ ತಂದರೆ ಮೂರರಿಂದ ಐದು ವರ್ಷದವರೆಗೂ ಎನರ್ಜಿಗೆ ಬರವೇ ಬರುವುದಿಲ್ಲ. ಇದರ ಜತೆಗೆ ಚಂದ್ರನಲ್ಲಿ ಬೇರೆ ಸಂಪನ್ಮೂಲಗಳು ಸಿಗುವ ನಿರೀಕ್ಷೆಗಳೂ ಇವೆ. ಇನ್ನು ಹತ್ತೇ ವರ್ಷಗಳಲ್ಲಿ ಚಂದ್ರನ ಒಡಲು ಬಗೆದು ಭೂಮಿಗೆ ಸಂಪತ್ತನ್ನು ಹೊತ್ತು ತರುವ ಕಾರ್ಯ ಆರಂಭವಾದರೂ ಅಚ್ಚರಿಯಿಲ್ಲ.

   ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

   ಹೀಲಿಯಂ ಇರಿಸುವುದು ಎಲ್ಲಿ?

   ಹೀಲಿಯಂ ಇರಿಸುವುದು ಎಲ್ಲಿ?

   ಆದರೆ ನಾವು ಚಂದ್ರನಿಂದ ಭಾರಿ ಪ್ರಮಾಣದ ಹೀಲಿಯಂ 3 ತರುವಲ್ಲಿ ಯಶಸ್ವಿಯಾದರೆ ಅದನ್ನು ಎಲ್ಲಿ ಇರಿಸುವುದು? ಪ್ರಸ್ತುತ ಅದರ ಸಂಗ್ರಹಣೆ ಮತ್ತು ನಿರ್ವಹಣೆಗೆ ನಮ್ಮ ಬಳಿ ತಂತ್ರಜ್ಞಾನವಿಲ್ಲ. ಈ ವಸ್ತುವನ್ನು ಪರಮಾಣು ಸಮ್ಮಿಳನ ಕೇಂದ್ರಗಳಲ್ಲಿ ಬಳಸಬಹುದಾದರೂ ಅದನ್ನು ಎನರ್ಜಿಯಾಗಿ ಪರಿವರ್ತಿಸುವ ಮತ್ತು ಬಳಸುವ ತಂತ್ರಜ್ಞಾನದಲ್ಲಿ ನಾವಿನ್ನೂ ದಶಕಗಳಷ್ಟು ಹಿಂದೆ ಇದ್ದೇವೆ.

   ಚಂದ್ರಯಾನ ಯೋಜನೆಗಾಗಿ ಭಾರತ ವ್ಯಯಿಸಿರುವುದು 125 ಮಿಲಿಯನ್ ಡಾಲರ್ ಹಣವನ್ನು. ಭಾರತವು ಅತ್ಯಂತ ಕಡಿಮೆ ಬಜೆಟ್‌ನಲ್ಲಿಯೇ ಇಷ್ಟು ದೊಡ್ಡ ಮಟ್ಟದ ಪ್ರಗತಿಯ ಜತೆಗೆ ಪ್ರತಿಷ್ಠೆಯನ್ನೂ ಸಂಪಾದಿಸಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರ ವಾರ್ಷಿಕ ಹೂಡಿಕೆ ಕೇವಲ $1.7 ಬಿಲಿಯನ್. ನಾಸಾದ ಬಜೆಟ್ ಗಾತ್ರ ವರ್ಷಕ್ಕೆ $19 ಬಿಲಿಯನ್. ಅಂದರೆ ಭಾರತದ ಹತ್ತು ಪಟ್ಟು ಹೆಚ್ಚು!

   ಚಂದ್ರನಲ್ಲಿ ಭಾರತದ ಫ್ಯಾಕ್ಟರಿ

   ಚಂದ್ರನಲ್ಲಿ ಭಾರತದ ಫ್ಯಾಕ್ಟರಿ

   ಬ್ರಹ್ಮೋಸ್ ಕ್ಷಿಪಣಿ ಯೋಜನೆಯ ನೇತೃತ್ವ ವಹಿಸಿದ್ದ ಡಿಆರ್‌ಡಿಓದ ಮಾಜಿ ವಿಜ್ಞಾನಿ ಎ. ಶಿವಧನು ಪಿಳ್ಳೈ ಅವರ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ಚಂದ್ರನ ಮೇಲೆ ತನ್ನ ನೆಲೆ ಸ್ಥಾಪಿಸಿ ಹೀಲಿಯಂ 3ಯನ್ನು ತೆಗೆಯಲು ಫ್ಯಾಕ್ಟರಿಯನ್ನೇ ನಿರ್ಮಿಸಲಿದೆ. ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ಯೋಜನೆಗಳ ತಂತ್ರಜ್ಞಾನದಲ್ಲಿ ಪಾರುಪತ್ಯ ಸಾಧಿಸಿರುವ ನಾಲ್ಕು ದೇಶಗಳಲ್ಲಿ ಭಾರತವೂ ಒಂದು ಎಂದು ಹೇಳಿದ್ದಾರೆ.

   ಹೀಲಿಯಂ 3 ಎನ್ನುವುದು ಭವಿಷ್ಯದ ಹೊಸ ಇಂಧನ ಸಾಧನವಾಗಲಿದೆ ಎಂದಿರುವ ಅವರು, ಚಂದ್ರನ ಮೇಲೆ ಇರುವ ಭಾರಿ ಪ್ರಮಾಣದ ಕಚ್ಚಾ ಸಂಪತ್ತನ್ನು ಪರಿಷ್ಕರಿಸಿ ಹೀಲಿಯಂ 3ಅನ್ನು ಹೊರತೆಗೆದು ಭೂಮಿಗೆ ತರುವ ಕಾರ್ಯಕ್ಕಾಗಿ ಭಾರತ ಇನ್ನು ಹತ್ತು ವರ್ಷಗಳಲ್ಲಿ ಚಂದ್ರನ ಮೇಲೆ ಕಾರ್ಖಾನೆಯನ್ನೇ ಸ್ಥಾಪಿಸುವಷ್ಟು ಶಕ್ತವಾಗಲಿದೆ. ಮಾತ್ರವಲ್ಲ, ಸೌರ ವ್ಯವಸ್ಥೆಯಲ್ಲಿನ ಇತರೆ ಗ್ರಹಗಳಿಗೆ ತಲುಪುವ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಚಂದ್ರನೇ ಪ್ರಮುಖ ಕೇಂದ್ರವಾಗಿ ಬದಲಾಗಲಿದೆ ಎಂದಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   USA, Russia, China and India are leading in the moon missions. Why the Nations running for Lunar projects? Its all for Helium 3.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more