ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸಿದ್ದರಾಮಯ್ಯ ಟಾರ್ಚರ್ ತಡೆದುಕೊಳ್ಳಲಾಗದೇ ತೈಲಬೆಲೆ ಇಳಿಸಿದ ಮೋದಿ"

|
Google Oneindia Kannada News

ಬೆಂಗಳೂರು, ನ 5: ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ನಂತರ, ಎನ್ಡಿಎ ಮೈತ್ರಿಕೂಟದ ಸರಕಾರವಿರುವ ರಾಜ್ಯಗಳೂ ಇನ್ನಷ್ಟು ಬೆಲೆಯನ್ನು ಇಳಿಸಿದ್ದವು.

ಕರ್ನಾಟಕದಲ್ಲಿ ತಲಾ ಏಳು ರೂಪಾಯಿ ಇಳಿಕೆ ಮಾಡಲಾಗಿದ್ದು, ನೂತನ ದರ ಗುರುವಾರದಿಂದಲೇ ಜಾರಿಗೆ ಬಂದಿದೆ. ದೀಪಾವಳಿಗೆ ಮುನ್ನಾದಿನ ಬೆಲೆ ಇಳಿಕೆಯಾಗಿದ್ದು ಹಬ್ಬದ ಗಿಫ್ಟ್ ಎಂದು ಬಿಜೆಪಿಯವರು ವ್ಯಾಖ್ಯಾನಿಸುತ್ತಿದ್ದಾರೆ. ಅಸ್ಸಾಂ, ತ್ರಿಪುರ, ಮಣಿಪುರ, ಗೋವಾ ರಾಜ್ಯಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ ತಲಾ ಏಳು ರೂಪಾಯಿಯಂತೆ ಕಡಿತ ಮಾಡಲಾಗಿದೆ.

ಆದರೆ, ಉಪ ಚುನಾವಣೆಯ ಫಲಿತಾಂಶದಿಂದ ಭಯಪಟ್ಟು ಕೇಂದ್ರ ಮತ್ತು ರಾಜ್ಯ ಸರಕಾರ ತೈಲಬೆಲೆಯನ್ನು ಇಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಸರ್ಕಾರಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಸರ್ಕಾರ

ಇನ್ನು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ತೈಲಬೆಲೆ ಇಳಿಕೆಯ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ಕೇಂದ್ರ ಸರಕಾರ ಭಯಪಟ್ಟು ತೈಲಬೆಲೆಯಲ್ಲಿ ಇಳಿಕೆಯನ್ನು ಮಾಡಿದೆ ಎಂದು ಗೌಡ್ರು ಹೇಳಿದ್ದಾರೆ

ತೈಲಬೆಲೆ ಇಳಿಕೆಯ ವಿಚಾರ

ತೈಲಬೆಲೆ ಇಳಿಕೆಯ ವಿಚಾರ

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ದೇವೇಗೌಡ್ರು
ತೈಲಬೆಲೆ ಇಳಿಕೆಯ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ದೇವೇಗೌಡ್ರು, "ಸಿದ್ದರಾಮಯ್ಯನವರು ಹೇಳಿದ್ದಕ್ಕೆ ಬೆಲೆ ಇಳಿಕೆ ಮಾಡಲಾಗಿದೆ. ಯಾವಾಗಲೂ ಸಿದ್ದರಾಮಯ್ಯನವರು ಮೋದಿ ಮತ್ತು ಕೇಂದ್ರ ಸರಕಾರದ ಮೇಲೆ ದಾಳಿ ಮಾಡಿದ್ದರಿಂದ ಜ್ಞಾನೋದಯವಾಗಿ ಬೆಲೆ ಕಡಿಮೆ ಮಾಡಿದ್ದಾರೆ"ಎಂದು ದೇವೇಗೌಡ್ರು ಪಕ್ಕದಲ್ಲೇ ಇದ್ದ ಟಿ.ಎ.ಶರವಣ ಅವರನ್ನು ನೋಡಿ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರ ಟಾರ್ಚರ್ ಮೋದಿಯವರಿಗೆ ತಡೆದುಕೊಳ್ಳಲು ಆಗಲಿಲ್ಲ

ಸಿದ್ದರಾಮಯ್ಯನವರ ಟಾರ್ಚರ್ ಮೋದಿಯವರಿಗೆ ತಡೆದುಕೊಳ್ಳಲು ಆಗಲಿಲ್ಲ

ಹಾಗಾದರೆ ಮೋದಿಯವರು ಸಿದ್ದರಾಮಯ್ಯನವರಿಗೆ ಭಯ ಪಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಗೌಡ್ರು, "ಭಯ ಪಡುವುದಲ್ಲ, ಸಿದ್ದರಾಮಯ್ಯನವರ ಟಾರ್ಚರ್ ಮೋದಿಯವರಿಗೆ ತಡೆದುಕೊಳ್ಳಲು ಆಗಲಿಲ್ಲ. ಸಿದ್ದರಾಮಯ್ಯನವರು ಕೊಡುವ ಮಾತಿನ ಪೆಟ್ಟಿನಿಂದಾಗಿ ತೈಲಬೆಲೆ ಇಳಿಕೆಯಾಗಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ಅನಾವಶ್ಯಕ"ಎಂದು ದೇವೇಗೌಡ್ರು ಹೇಳಿದ್ದಾರೆ. ಉಪ ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ಗೌಡ್ರ ಕುಟುಂಬ ಮತ್ತು ಸಿದ್ದರಾಮಯ್ಯನವರ ನಡುವೆ ವಾಕ್ಸಮರ ಜೋರಾಗಿ ನಡೆಯುತ್ತಿದೆ.

ಪ್ರಧಾನಿ ಮೋದಿಯವರು ಅದೆಷ್ಟು ಭಯ ಪಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ

ಪ್ರಧಾನಿ ಮೋದಿಯವರು ಅದೆಷ್ಟು ಭಯ ಪಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ

"ಒಂದೇ ಸಮನೆ ಐದು, ಹತ್ತು ರೂಪಾಯಿ ಇಳಿಸುತ್ತಾರೆ ಅಂದರೆ ಪ್ರಧಾನಿ ಮೋದಿಯವರು ಅದೆಷ್ಟು ಭಯ ಪಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಮೋದಿಯವರು ಇನ್ನೂ ಮೂರು ವರ್ಷ ಪ್ರಧಾನಿಯಾಗಿರುತ್ತಾರೆ. ಸಿದ್ದರಾಮಯ್ಯ ಇನ್ನೂ ಯುವಕ, ಮೋದಿಯವರಿಗೆ ಫೈಟ್ ಕೊಡುತ್ತಾರೆ. ನನಗೆ 89ವರ್ಷ ವಯಸ್ಸಾಯಿತು, ನಮ್ಮ ಕ್ಯಾಶ್ ಬಾಕ್ಸ್ ನಲ್ಲಿ ಏನೂ ದುಡ್ಡಿಲ್ಲ. ಆದರೂ, ರಾಜಕೀಯ ಮಾಡುತ್ತಿದ್ದೇವೆ"ಎಂದು ದೇವೇಗೌಡ್ರು ಲೇವಡಿ ಮಾಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪ್ರತಿ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ

ಕಳೆದ ಕೆಲವು ತಿಂಗಳುಗಳಿಂದ ಪ್ರತಿ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ

ಕಳೆದ ಕೆಲವು ತಿಂಗಳುಗಳಿಂದ ಪ್ರತಿ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿತ್ತು. ಕಳೆದ 36 ದಿನಗಳಲ್ಲಿ 28 ರೂಪಾಯಿ ಏರಿಕೆಯಾಗಿತ್ತು. ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ ಇರುವ ಬ್ರೆಂಟ್‌ ಕಚ್ಚಾ ತೈಲ ದರ ಮುಂದಿನ ವರ್ಷ ಶೇ.30ರಷ್ಟು ಹೆಚ್ಚಳದೊಂದಿಗೆ 110 ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್‌ಮನ್‌ ಸ್ಯಾಕ್ಸ್‌ ಸಂಸ್ಥೆಯ ವರದಿ ತಿಳಿಸಿತ್ತು. ಹಾಗಾಗಿ, ತೈಲಬೆಲೆ ಇಳಿಕೆಯಾಗುತ್ತೆ ಎನ್ನುವ ಯಾವ ನಿರೀಕ್ಷೆಯೂ ಜನರಲ್ಲಿ ಇರಲಿಲ್ಲ.

ತೈಲ ಬೆಲೆ 50 ರೂ. ಗೆ ಇಳಿಸಲು ಬಿಜೆಪಿಯ ಸೋಲಿಸಲೇ ಬೇಕು: ಸಂಜಯ್ ರಾವತ್

Recommended Video

ರವೀಂದ್ರ ಜಡೇಜಾ ಕೊಟ್ಟ ಉತ್ತರಕ್ಕೆ ಫುಲ್‌ ಕಕ್ಕಾಬಿಕ್ಕಿಯಾದ ಪತ್ರಕರ್ತ | Oneindia Kannada

English summary
Why Narendra Modi Suddenly Decreased Petrol And Diesel Price,H D Devegowda Explained. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X