• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಂಗಾಯತ ಹೋರಾಟ ನೆಲಕಚ್ಚಲು ಇಪ್ಪತ್ತೆಂಟು ಕಾರಣಗಳು

By ಡಾ. ಶಶಿಕಾಂತ ಪಟ್ಟಣ, ರಾಮದುರ್ಗ
|

ಬೌದ್ಧ, ಸಿಖ್, ಜೈನ ಧರ್ಮಗಳು ಮಾನ್ಯತೆಯನ್ನು ಕಾನೂನಾತ್ಮಕವಾಗಿ ಸದ್ದಿಲ್ಲದೇ ಪಡೆದುಕೊಂಡವು. ಹಲವು ಬಾರಿ ನಮಗೆ ಪ್ರಶ್ನೆ ಕಾಡುತ್ತದೆ. ಭಾರತ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ ಯಾವ ರಾಜ್ಯಗಳು ಈ ಮೂರು ಧರ್ಮಗಳನ್ನು ಅಲ್ಪಸಂಖ್ಯಾತ ಮತ್ತು ಸ್ವತಂತ್ರ ಧರ್ಮವೆಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಯಿತು? ಬೌದ್ಧ, ಸಿಖ್, ಜೈನ ಧರ್ಮಗಳ ಧಾರ್ಮಿಕ ಮುಖಂಡರೂ ಎಷ್ಟು ಸಮಾವೇಶ ಮಾಡಿದರು? ಈಗಲೂ ಜೈನರೂ ಹಿಂದೂ ಧರ್ಮದ ಅನೇಕ ಆಚರಣೆಗಳನ್ನು ಪಾಲಿಸುತ್ತಾರೆ.

ಯಾವ ರಾಜಕೀಯ ಮುಖಂಡರು ಹೀಗೆ ಬೀದಿಗಿಳಿದು ಮುಗ್ಧ ಜನರನ್ನು ದಾರಿ ತಪ್ಪಿಸಿದರು. ಲಿಂಗಾಯತ ಧರ್ಮ ಮಾನ್ಯತೆ ಹಾಗು ಅವುಗಳ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಸ್ವತಂತ್ರ ಧಾರ್ಮಿಕ ಸಂವಿಧಾನ ಮಾನ್ಯತೆ ನಮ್ಮ ಲಿಂಗಾಯತರ ಮತ್ತು ಕನ್ನಡಿಗರ ಮೂಲಭೂತ ಹಕ್ಕು. ಆದರೆ ಕೆಲ ರಾಜಕಾರಣಿಗಳು ಹಾಗೂ ಹಿರಿಯ ನಿವೃತ್ತ ಅಧಿಕಾರಿಗಳು ಕಪಟ ಕಾವಿ ಹಾಗೂ ಶ್ವೇತ ವಸ್ತ್ರಧಾರಿಗಳನ್ನು ಮುಂದೆ ಮಾಡಿ, ರಾಜಕೀಯವಲ್ಲದ ಸಂಘಟನೆ ಎಂದು ಹೇಳುತ್ತಾ ರಾಜಕೀಯ ಹಿತಾಸಕ್ತಿ ಕಾಪಾಡಲು ಹೋಗಿ, ಆರುಮುಕ್ಕಾಲು ಕೋಟಿ ಜನರ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ.

ಶಿವನೇ ಸಿದ್ದಾರೂಢ: ಲಿಂಗಾಯತ ಪ್ರತ್ಯೇಕ ಧರ್ಮನೂ ಆಗಿಲ್ಲ, ಎಂ ಬಿ ಪಾಟೀಲ್ರು ಸಚಿವರೂ ಆಗಿಲ್ಲ

ಸಮಯೋಚಿತ ಯೋಜನೆಯಿಲ್ಲದೆ ಕೇವಲ ಪತ್ರಿಕೆ, ಟಿವಿಯಲ್ಲಿ ರಾರಾಜಿಸಿದ ನಿವೃತ್ತ ಅಧಿಕಾರಿಗಳು ಇತರ ಲಿಂಗಾಯತ ಸಂಘಟನೆಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ತೆಗೆದುಕೊಂಡ ಸರ್ವಾಧಿಕಾರದ ನಿರ್ಣಯಗಳು ಧಾರ್ಮಿಕ ಹಿನ್ನೆಡೆಗೆ ಹಾಗೂ ಕರ್ನಾಟಕ ಸರಕಾರವು ಅದಕ್ಕೆ ದುಬಾರಿ ಬೆಲೆ ತೆತ್ತಬೇಕಾಯಿತು.

Why Lingayat movement failed in Karnataka? Reasons

ಲಿಂಗಾಯತ ಧರ್ಮ ಮಾನ್ಯತೆ ಆಂದೋಲನ ಹಾಗೂ ಸಮಾವೇಶದಿಂದ ಕರ್ನಾಟಕದ ಈ ಹಿಂದಿನ ಸಿದ್ಧರಾಮಯ್ಯನವರ ಸರಕಾರವು ಎಪ್ಪತ್ತೆಂಟು ಶಾಸಕರನ್ನು ಶಾಸನ ಸಭೆಗೆ ಆಯ್ಕೆಯಾಗುವಂತೆ ಮಾಡಿದೆ ಎಂದು ಇತ್ತೀಚಿಗೆ ಸಂಘಟನೆಯ ಪದಾಧಿಕಾರಿ ತಮ್ಮ ಭಂಡತನವನ್ನು ಪ್ರದರ್ಶಿಸಿದ್ದಾರೆ.

ವಿನಯ ಕುಲಕರ್ಣಿ, ಡಾ ಶರಣ ಪ್ರಕಾಶ ಪಾಟೀಲ, ಬಸವರಾಜ ರಾಯರೆಡ್ಡಿ, ಅಶೋಕ ಪಟ್ಟಣ, ಬಿಆರ್ ಪಾಟೀಲ್, ಟಿಬಿ ಜಯಚಂದ್ರ, ಡಾ ವಿಶ್ವನಾಥ ಪಾಟೀಲ (ಬಿಜೆಪಿ) ಮತ್ತು ಸ್ವತಃ ಸಿದ್ಧರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲಿಂಗಾಯತರ ವೀರಶೈವರ ಕೋಪಕ್ಕೆ ಗುರಿಯಾಗಿ ಹೀನಾಯವಾಗಿ ಸೋತಿದ್ದಾರೆ.

ಲಿಂಗಾಯತ ಚಳವಳಿ ನಿರಂತರ: ಡಾ.ಜಾಮದಾರ್ ಘೋಷಣೆ

ದೇಶವು ಕಂಡ ಅಪ್ರತಿಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಧನೆಯು ಧಾರ್ಮಿಕ ಹೋರಾಟ ವಿವಾದದಲ್ಲಿ ಕೊಚ್ಚಿ ಹೋಯಿತು. ಏಕೆ ಸುಬ್ಬಯ್ಯನವರು ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ಚುನಾವಣೆಯ ಹಿನ್ನೆಡೆಗೆ ಲಿಂಗಾಯತ ಧಾರ್ಮಿಕ ಮಾನ್ಯತೆ ಹಾಗೂ ಹೋರಾಟಗಾರರ ಕರ್ತವ್ಯ ಲೋಪ ಕುರಿತಾಗಿ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ.

Why Lingayat movement failed in Karnataka? Reasons

ವಸ್ತುಸ್ಥಿತಿಯೆಂದರೆ ಲಿಂಗಾಯತ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ಆಂದೋಲನವನ್ನು ಪಕ್ಷಾತೀತವಾಗಿ ನಡೆಸದೆ, ಒಂದು ಪಕ್ಷದ ಏಜೆಂಟ್ ರಂತೆ ಹಾಗೂ ಒಬ್ಬ ನಿವೃತ್ತ ಹಿರಿಯ ಅಧಿಕಾರಿಯ ಆದೇಶದಂತೆ ನಡೆಯಬೇಕಾಗಿ ಬಂದದ್ದು ದುರ್ದೈವದ ಸಂಗತಿ.

1) ಏಕ ಪಕ್ಷಿಯ ನಿರ್ಧಾರ, ತರಾತುರಿಯ ಹೇಳಿಕೆ, ಟೀಕೆ ಖಂಡನೆ, ಅನಗತ್ಯ ವಿವಾದ ಸೃಷ್ಟಿಸಿದರು ಸುಳ್ಳು ಹೇಳುವ ಸಾಹೇಬರು.

2) ಅನ್ಯ ಧರ್ಮಿಯರ ಶ್ರೀ ಪೇಜಾವರ ಸ್ವಾಮಿಗಳಿಗೆ ವಿಧಾನಸಭೆಯ ಬಾಂಕ್ವೆಟ್ ಹಾಲಿನಲ್ಲಿ ಚರ್ಚೆಗೆ ಸವಾಲು ಹಾಕಿದ್ದು ಯಾರು? ಅವುಗಳಿಂದ ಮತಗಳ ಧ್ರುವೀಕರಣಗೊಂಡವು.

ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ

3) ಸಿದ್ಧಗಂಗಾಶ್ರೀಗಳ ವಿವಾದವನ್ನು ಯಾರು ಹುಟ್ಟು ಹಾಕಿದರು? ಮಾಧ್ಯಮಗಳಿಗೆ ಆಹಾರವೆನಿಸಿದ ಇವರ ವಿವಾದವು ಅನ್ಯಧರ್ಮಿಯರ ಮುಂದೆ ನಗೆಪಾಟಲಿಗೆ ಈಡಾಯಿತು.

4) ಶರಣರ ಬಗ್ಗೆ ಅವರ ಚರಿತ್ರೆಯ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡುತ್ತ, ತಮ್ಮ ವಾಚಾಳಿತನವನ್ನು ಭಂಡತನವನ್ನು ಪ್ರದರ್ಶಿಸುತ್ತ, ಸಮಯ ವ್ಯರ್ಥವಾಗಿ ಕಳೆದರೆೇ ಹೊರತು, ಅಂದೇ ಕಾನೂನಾತ್ಮಕ ಕ್ರಮ ಕೈಗೊಂಡಿದ್ದರೆ ಇಂತಹ ಹೀನಾಯಸ್ಥಿತಿ ಬರುತ್ತಿರಲಿಲ್ಲ.

Why Lingayat movement failed in Karnataka? Reasons

5) ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯಲ್ಲಿ ಶಿಫಾರಸ್ಸುಗೊಂಡ ಲಿಂಗಾಯತ ಮತ್ತು ವೀರಶೈವ ಲಿಂಗಾಯತ (ಬಸವ ತತ್ವಗಳಲ್ಲಿ ನಂಬಿಕೆ ಇಟ್ಟವರಿಗೆ) ರಾಜ್ಯದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲು ಹೇಳಿದ್ದು ಯಾರನ್ನು ಓಲೈಸಲು ಮತ್ತು ಯಾವ ಪುರುಷಾರ್ಥಕ್ಕೆ?

6) ಚುನಾವಣಾ ಸಂದರ್ಭದಲ್ಲಿ "ಜೈಲಿಗೆ ಹೋಗಿ ಬಂದ ಭ್ರಷ್ಟ ಮುಖ್ಯಮಂತ್ರಿಗೆ ನೀವು ಮತ ಹಾಕಬೇಕೆ" ಎಂದು ಜಾಗತಿಕ ಲಿಂಗಾಯತ ಮಹಾಸಭೆಯು ಪ್ರತ್ಯಕ್ಷವಾಗಿ ಎಡಿಯೂರಪ್ಪನವರನ್ನು ಗುರಿ ಮಾಡಿ ಜಾಹೀರಾತನ್ನು ಕೊಟ್ಟಿದ್ದು ಸರಿಯೇ? (ಉಳಿದ ರಾಜಕೀಯ ಪಕ್ಷದ ರಾಜಕಾರಣಿಗಳು ಸತ್ಯ ಹರಿಶ್ಚಂದ್ರರೇ?)

'ಲಿಂಗಾಯತ' ಕಾರ್ಡ್ ಕಾಂಗ್ರೆಸ್ಸಿಗೆ ಹಿನ್ನಡೆಯಾಯಿತೆ?

7) ಪಂಚ ಪೀಠದವರು ಐದು ಜನರಿಗೆ ಹುಟ್ಟಿದವರು, ಕಲ್ಲಿನಲ್ಲಿ ಹುಟ್ಟಿದವರು, ಅವರಿಗೆ ತಂದೆ ತಾಯಿಗಳಿಲ್ಲ ಎಂದು ಹಿರಿಯ ಅಧಿಕಾರಿಗಳು ಜವಾಬ್ದಾರಿಯುತ ಸ್ವಾಮಿಗಳು ವಾಚಾಮಗೋಚರವಾಗಿ ಹೀಯಾಳಿಸಿದ ಫಲವಾಗಿ ಲಿಂಗಾಯತ ಧರ್ಮದ ಒಂದು ವರ್ಗ ತಮ್ಮ ಜಾತಿ ಶ್ರೇಷ್ಠತೆಗಾಗಿ ಎಂಬಿ ಪಾಟೀಲರನ್ನು ಸೇರಿಸಿದಂತೆ ಅನೇಕರನ್ನು ಸೋಲಿಸಲು ಹರಸಾಹಸ ಮಾಡಿದರು. ಆದರೆ ನಮ್ಮ ವಿರಕ್ತ ಸ್ವಾಮಿಗಳು ಲಿಂಗಾಯತ ಧರ್ಮದ ಬದ್ಧತೆ ತೋರದೆ ಮೌನವಾದರು ಮತ್ತು ಬೀದರ, ಕಲಬುರ್ಗಿ, ಚಿತ್ರದುರ್ಗ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿ ಬಿಜೆಪಿ ಗೆ ಬಹಿರಂಗವಾಗಿ ಪ್ರಚಾರಕ್ಕಿಳಿದು ನೆರವಾದರು. ಪಂಚ ಪೀಠದ ಸ್ವಾಮಿಗಳಿಗಿಂತ ನಮ್ಮವರೆನಿಸಿದ ಸ್ವಾಮಿ ಅಕ್ಕನವರು ಮಾತಿಗೆ ದ್ರೋಹ ಬಗೆದರು.

8) ಅನೇಕ ಶಾಸಕರು ಬಿಆರ್ ಪಾಟೀಲ ಮುಂತಾದವರು ಲಿಂಗಾಯತ ಮಹಾಸಭೆಯ ಹಿರಿಯ ಅಧಿಕಾರಿಯ ತರಾತುರಿಯ ನಿರ್ಣಯದ ಬಗ್ಗೆ ಬೇಸರ ವ್ಯಕ್ತಪಡಿಸಿದರೂ ಯಾವುದೇ ಫಲವಾಗಲಿಲ್ಲ.

Why Lingayat movement failed in Karnataka? Reasons

9) ಇಂತಹ ತರಾತುರಿ ಏಕ ಪಕ್ಷೀಯವಾದ ಸರ್ವಾಧಿಕಾರದ ಮನೋಭಾವನೆಯ ಬಗ್ಗೆ ಕಾಲಕಾಲಕ್ಕೆ ಡಾ ಎಂಬಿ ಪಾಟೀಲರಿಗೆ ಹಾಗೂ ಬಸವರಾಜ್ ಹೊರಟ್ಟಿ ಅವರಿಗೆ ತಿಳಿಸಿದೆನು ಅವರು ಅಸಹಾಯಕರಾದರು ಮತ್ತು ಜಾಣ ಮೌನಕ್ಕೆ ಜಾರಿದರು.

10) ವೀರಶೈವರು ದಿನದಿಂದ ದಿನಕ್ಕೆ ಒಗ್ಗೂಡಿದರೂ ಬಸವ ಭಕ್ತರು ವಿಘಟಿತರಾದರು. ಇದಕ್ಕೆ ಜವಾಬ್ದಾರಿಯುತ ವ್ಯಕ್ತಿ ನಡೆದುಕೊಂಡ ರೀತಿ ದರ್ಪ ಬ್ಯೂರೋಕ್ರಾಟಿಕ್ ಮನೋಭಾವ, ತಮ್ಮನು ಪ್ರಶ್ನಿಸುವವರನ್ನು ಹತ್ತಿಕ್ಕುವ ಅಥವಾ ದೂರವಿಡುವ ಕುಟಿಲತನ ಇಂತಹ ದುರಂತಕ್ಕೆ ಕಾರಣವಾಯಿತು.

ಲಿಂಗಾಯತರಿಗೀಗ ಯಡಿಯೂರಪ್ಪ ನಾಯಕರಲ್ಲ: ರಾಷ್ಟ್ರೀಯ ಬಸವ ಸೇನೆ

11) ಒಬ್ಬರು ಇಬ್ಬರು ವ್ಯಕ್ತಿಗಳು ಪೂರ್ವಾಪರ ಚರ್ಚಿಸದೆ ತೆಗೆದುಕೊಳ್ಳುವ ನಿರ್ಣಯ, ನಿರ್ಧಾರಗಳು ಸಂಘಟನೆಗೆ ಮಾರಕ. ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟದಲ್ಲಿ ಐದು ವರ್ಷಗಳವರೆಗೆ ದುಡಿದವರನ್ನು ಪರಿಗಣಿಸದೆ, ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ತಮಗೆ ಜೈ ಎನ್ನುವವರ ಮಧ್ಯೆ ಮೀಟಿಂಗ್ ಮಾಡುವ ಅಧಿಕಾರಿಗಳು. ಈಗಲಾದರೂ ಒಮ್ಮೆ ಇಂತಹ ಹಿನ್ನೆಡೆಗೆ ಕಾರಣಗಳನ್ನು ಅವಲೋಕಿಸಬಹುದೇ?

Why Lingayat movement failed in Karnataka? Reasons

12) ಲಿಂಗಾಯತ ಚಳವಳಿ ಹಿಂದೂ ವಿರೋಧಿಯಲ್ಲ ಎಂದು ಬೊಗಳೆ ಬಿಡುವ ನಾವುಗಳು, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ ಹಾಗೂ ಕಲ್ಬುರ್ಗಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಜನರಿಂದ ನೀರು ಹಣ್ಣು ರಸ ಶರಬತ್ತು ಮುಂತಾದ ಸೇವೆ ಪಡೆಯುವ ಅಗತ್ಯವಿತ್ತೇ?

13 ) ಲಿಂಗಾಯತ ಧರ್ಮ ಮಾನ್ಯತೆ ಪಡೆಯುವ ಭರಾಟೆಯಲ್ಲಿ ಲಿಂಗಾಯತ ಮಹಾಸಭೆಯ ಅನೇಕರು ಆರ್ ಎಸ್ ಎಸ್ ವಿಶ್ವ ಹಿಂದೂ ಪರಿಷತ್ತು ಮತ್ತು ಪೇಜಾವರ ಶ್ರೀಗಳನ್ನು ಅತ್ಯಂತ ಅವಹೇಳನಕಾರ ಮಾತುಗಳಿಂದ ಟೀಕಿಸಿದ್ದು ಮರೆತು ಬಿಟ್ಟಿದ್ದೇವೆಯೇ?

ಇಲ್ಲಿ ಯಾರ ಬಗ್ಗೆಯೂ ಟೀಕೆಯನ್ನು ಮಾಡದೇ ಕಳೆದ ಹತ್ತು ತಿಂಗಳಿನಿಂದ ಕರ್ನಾಟಕದಲ್ಲಿ ಲಿಂಗಾಯತ ಚಳುವಳಿಯ ಹೋರಾಟವು ನೆಲ ಕಚ್ಚಲು ಕಾರಣವಾದ ಕೆಲವೇ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ಸಾದರ ಪಡಿಸಿದ್ದೇನೆ. ಇಂತಹ ಪರಿಸ್ಥಿತಿ ದೇಶದ ಇನ್ನುಳಿದ ರಾಜ್ಯಗಳಲ್ಲಿ ಮರುಕಳಿಸದಿರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why Lingayat movement failed in Karnataka? Who should be held responsible? How it impacted the results in Karnataka Assembly Elections 2018? Shashikanth Pattan writes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more