• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಅನುರಾಗವೇ ಮೂಡಲು ಸಾಧ್ಯವಿಲ್ಲದ ಅನುಮಾನದ ಸರಕಾರ, ಇಲ್ಲಿವೆ ಕಾರಣ

By ಅನಿಲ್
|

ರಾಜ್ಯ ರಾಜಕೀಯದಲ್ಲಿ ದಿನದಿನಕ್ಕೂ ಹೊಸ ಗೊಂದಲ, ಆತಂಕ. ಇಗೋ ಇನ್ನೊಂದು ದಿನಕ್ಕೆ, ಅಷ್ಟೇ ಏಕೆ ಇನ್ನೊಂದು ಕ್ಷಣಕ್ಕೆ ಏನಾಗಬಹುದೋ ಎಂಬ ಪ್ರಶ್ನಾರ್ಥಕ ಚಿಹ್ನೆ ಸುಳಿದಾಡುತ್ತಲೇ ಇದೆ. ಯಾಕೆ ಹೀಗಾಗುತ್ತಿದೆ ಅಥವಾ ಹೀಗಾಗುತ್ತದೆ ಅನ್ನೋದನ್ನು ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಡಿಸುವ ಪ್ರಯತ್ನವೇ ಈ ವರದಿ.

ಜೆಡಿಎಸ್ ಹಾಗೂ ಕಾಂಗ್ರೆಸ್ ದು 'ಮೈತ್ರಿ' ಸರಕಾರ ಅನ್ನೋ ಮಾತನ್ನು ಎರಡೂ ಪಕ್ಷಗಳಲ್ಲೂ ಸ್ವಲ್ಪ ಅನುಮಾನದಿಂದಲೇ ಹೇಳುವವರು ಸಿಗುತ್ತಾರೆ. ಏಕೆಂದರೆ ಎರಡೂ ಪಕ್ಷದಲ್ಲೂ ಈ ಸರಕಾರದ ಬಗ್ಗೆ ಅಸಮಾಧಾನ ಇರುವವರು ಇದ್ದಾರೆ. ಅದು ತಳ ಮಟ್ಟದ ಕಾರ್ಯಕರ್ತರಿಂದ ಶುರುವಾಗಿ ಮುಖ್ಯ ತೀರ್ಮಾನಗಳನ್ನು ಕೈಗೊಳ್ಳುವ ಪ್ರಮುಖ ನಾಯಕರವರೆಗೆ ಈ ಕೆಟಗರಿಯಲ್ಲಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ಸೆ.17ಕ್ಕೆ ಕ್ಲೈಮ್ಯಾಕ್ಸ್?

ಹಾಗೇ ಒಮ್ಮೆ ನೆನಪಿಸಿಕೊಳ್ಳಿ, ಮೇ ತಿಂಗಳಿಂದ ಅಂದರೆ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಸೆಪ್ಟೆಂಬರ್ ತನಕ ಅಂದರೆ ಈ ದಿನದ ತನಕ ಎರಡೂ ಪಕ್ಷಗಳ ಕಡೆಯಿಂದ ಯಾವ ಹೇಳಿಕೆಗಳು ಬಂದಿವೆ? ಈ ಸರಕಾರದಲ್ಲಿ ಗೊಂದಲಗಳಿವೆಯಂತೆ, ಅಸಮಾಧಾನ ಇವೆಯಂತೆ, ಸರಕಾರವೇ ಬಿದ್ದು ಹೋಗುತ್ತದಂತೆ ಹೀಗೆ ಅದೆಷ್ಟು ವದಂತಿ-ಸುದ್ದಿ-ವರದಿಗಳು?

ಪರಸ್ಪರರಲ್ಲಿ ಅವಲಂಬನೆ ಹೆಚ್ಚುತದೆಯೇ ಹೊರತು ಲಾಭವಿಲ್ಲ

ಪರಸ್ಪರರಲ್ಲಿ ಅವಲಂಬನೆ ಹೆಚ್ಚುತದೆಯೇ ಹೊರತು ಲಾಭವಿಲ್ಲ

ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಕ್ಕೂ ವೋಟ್ ಬ್ಯಾಂಕ್ ಗಳು ಅವೇ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಇನ್ನು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಹೀಗೆ ಒಂದೇ ತಟ್ಟೆಗೇ ಅಥವಾ ಬುಟ್ಟಿಗೇ ಇಬ್ಬರೂ ಕಚ್ಚಾಡಬೇಕು. ಜನರ ಮುಂದೆ ಎರಡೂ ಪಕ್ಷದ ಕಾರ್ಯಕರ್ತರು ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿ ನಡೆದಾಡಿದರೆ ಬಿಜೆಪಿಯವರು ಕುಣಿದು, ಕುಪ್ಪಳಿಸುತ್ತಾರೆ. ಅವರಿಬ್ಬರೂ ಎಂದಿದ್ದರೂ ಒಂದೇ. ನಮಗೆ ಮತ ಕೊಡಿ ಎಂದು ತಲೆ ಎತ್ತಿ ನಿಲ್ಲುತ್ತಾರೆ. ಇತ್ತೀಚೆಗೆ ಬಂದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವನ್ನು ಅಳತೆಗೋಲು ಮಾಡಿಕೊಂಡು ನಮ್ಮನ್ನು ಒಪ್ಪಿಬಿಟ್ಟರು ಎಂದು ಮೇಲ್ನೋಟಕ್ಕೆ ಜೆಡಿಎಸ್-ಕಾಂಗ್ರೆಸ್ ಹೇಳುತ್ತಿರಬಹುದು. ಆದರೆ ವಾಸ್ತವ ಏನೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಹಾಗೂ ಜನರ ಜತೆಗೆ ಹೇಗೆ ಸ್ಪಂದಿಸುತ್ತಾರೆ ಅನ್ನೋ ಸಂಗತಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಿಂತ ಹೆಚ್ಚು ಮುಖ್ಯವಾಗುತ್ತದೆ. ಆ ದೃಷ್ಟಿಯಲ್ಲಿ ನೋಡಿದಾಗ ಎರಡೂ ಪಕ್ಷಗಳ ಪಾಲಿಗೆ ಪರಸ್ಪರ ಅವಲಂಬನೆ ಹೆಚ್ಚುತ್ತದೆಯೋ ಹೊರತು ಅಂಥ ಲಾಭವೇನಿಲ್ಲ.

ಪರಸ್ಪರರಿಗೆ ಹೇಳಿಕೊಳ್ಳಲಾಗದಂಥ ಅನುಮಾನ

ಪರಸ್ಪರರಿಗೆ ಹೇಳಿಕೊಳ್ಳಲಾಗದಂಥ ಅನುಮಾನ

ಒಂದೇ ಒರೆಯಲ್ಲಿ ಎರಡು ಕತ್ತಿ ಇಡಲು ಸಾಧ್ಯವಿಲ್ಲ ಅನ್ನೋದು ಮತ್ತೊಂದು ಸಂಗತಿ. ಸರಕಾರದಿಂದ ಅನುದಾನ ಬಿಡುಗಡೆ ಸಂದರ್ಭದಲ್ಲಿ ಎರಡು ಪಕ್ಷಗಳ ಶಾಸಕರ ಮಧ್ಯೆ ಪೈಪೋಟಿ ಸಹಜವಾಗಿರುತ್ತದೆ. ಜತೆಗೆ ಎರಡೂ ಪಕ್ಷಕ್ಕೆ ಪ್ರತ್ಯೇಕವಾಗಿ ಬೆಂಬಲಿಸುವ ಬೇರೆ ಕಾಂಟ್ರ್ಯಾಕ್ಟರ್ ಗಳು ಇರುತ್ತಾರೆ. ತಮ್ಮದೇ ಸರಕಾರ ಅಧಿಕಾರದಲ್ಲಿದೆ ಎಂದು ಎರಡೂ ಕಡೆಯವರು ಲಾಬಿ ಆರಂಭಿಸಿದರೆ, ಆಡಳಿತ ಅಯೋಮಯ. ಯಾವುದೇ ಕೆಲಸ ಹಿಡಿದರೂ ಪರಸ್ಪರರ ಮೇಲೆ ತೋರ್ಪಡಿಸಿಕೊಳ್ಳಲಾಗದ ಅನುಮಾನವೊಂದು ಇದ್ದೇ ಇರುತ್ತದೆ. ಯಾವುದೇ ಒಳ್ಳೆ ಯೋಜನೆಯ ಶ್ರೇಯ ಯಾರಿಗೆ ಸೇರಬೇಕು? ಒಂದು ವೇಳೆ ಹಗರಣಗಳು ಬಯಲಿಗೆ ಬಿದ್ದರೆ ಅದರ ಹೊಡೆತ ಯಾರು ಅನುಭವಿಸಬೇಕು? ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಹೇಗೆ ಸಾಧ್ಯವಾಗುತ್ತದೆ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಈಗ ಕುಮಾರಸ್ವಾಮಿ ಅವರ ಸೋದರ ರೇವಣ್ಣ ಅವರ ಬಗ್ಗೆ ತಕರಾರು ವ್ಯಕ್ತ ಆಗುತ್ತಿರುವುದು ಎಲ್ಲ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬ ಕಾರಣಕ್ಕೆ. ಆದರೆ ಕಾಂಗ್ರೆಸ್ ನಿಂದ ಏನೂ ಮಾಡುವಂತಿಲ್ಲ.

ವೈಯಕ್ತಿಕ ದ್ವೇಷ ಎರಡೂ ಕಡೆ ಇದೆ

ವೈಯಕ್ತಿಕ ದ್ವೇಷ ಎರಡೂ ಕಡೆ ಇದೆ

ಇನ್ನು ಎರಡೂ ಪಕ್ಷಗಳಲ್ಲೂ ವೈಯಕ್ತಿಕವಾಗಿ ದ್ವೇಷಿಸುವ ನಾಯಕರಿದ್ದಾರೆ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರು, ಈ ಸರಕಾರ ಐದು ವರ್ಷ ಪೂರ್ತಿ ಮಾಡುತ್ತದೆ ಅಂತಾರೆ. ಆದರೆ ಅಂತರಾಳದ ಧ್ವನಿಯು ಬೇಡ ಅಂದರೂ ಹೊರಗೆ ಬರುತ್ತಲೇ ಇರುತ್ತದೆ. ಹಾಗಂತ ಕುಮಾರಸ್ವಾಮಿ ಅವರಿಗೇನು ಸಿದ್ದು ಮೇಲೆ ಪ್ರೀತಿಯೇ? ರಾಹುಲ್ ಗಾಂಧಿಯನ್ನು ಭೇಟಿಯಾದಾಗ, ಸ್ವಲ್ಪ ಸಿದ್ದು ಬಗ್ಗೆ ನೋಡಿಕೊಳ್ಳಿ ಎಂದು ತಿದಿಯೊತ್ತಿಯೇ ಬರುತ್ತಾರೆ. ಇನ್ನು ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆಂದು ಹೊತ್ತಿ ಉರಿಯುವ ಸನ್ನಿವೇಶ ಇದೆ. ಆದರೂ ಅಲ್ಲಿ ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗಿದೆ. ಈ ಮಧ್ಯೆ ಯಾವ ಕ್ಷಣದಲ್ಲಾದರೂ ಜೆಡಿಎಸ್-ಬಿಜೆಪಿ ಸೇರಿ ಸರಕಾರ ರಚನೆ ಮಾಡಿಬಿಡಬಹುದು ಎಂಬ ಸುದ್ದಿ ಬೇರೆ ಹರಿದಾಡುತ್ತಲೇ ಇರುವುದರಿಂದ ಮುಜುಗರ ಎದುರಿಸಲೇ ಬೇಕಾಗಿದೆ.

ಸಿದ್ದರಾಮಯ್ಯ ಎಸೆದ ಬಾಂಬ್ 2019ರ ಚುನಾವಣೆಯ ತಂತ್ರವೇ?

ಲೋಕಸಭೆ ಚುನಾವಣೆಯ ಡೆಡ್ ಲೈನ್

ಲೋಕಸಭೆ ಚುನಾವಣೆಯ ಡೆಡ್ ಲೈನ್

ಸದ್ಯಕ್ಕಂತೂ ಎಲ್ಲರ ಕಣ್ಣು ಲೋಕಸಭೆ ಚುನಾವಣೆ ಮೇಲಿದೆ. ಆ ನಂತರ ಏನು ಬೇಕಾದರೂ ಆಗಬಹುದು. ಇಲ್ಲೂ ಕೆಲವು ಲೆಕ್ಕಾಚಾರಗಳಿವೆ. ಈಗಿರುವ ಮೈತ್ರಿ ಸರಕಾರ ಬೀಳಿಸಲು ಇರುವ ಸಾಧ್ಯತೆಗಳ ಪೈಕಿ ಪಕ್ಷಾಂತರ ಎಂಬುದು ಊಹಿಸಲೂ ಸಾಧ್ಯವಿಲ್ಲದ್ದು. ಏಕೆಂದರೆ ಯಾವುದೇ ಪಕ್ಷದಿಂದ ಮೂರನೇ ಎರಡರಷ್ಟು ಶಾಸಕರನ್ನು ಹೊರಗೆಳೆಯುವುದು ಕಷ್ಟಸ್ಯ ಕಷ್ಟ. ಇನ್ನು ಜೆಡಿಎಸ್ ಪಕ್ಷವು ಸರಕಾರದಿಂದ ಹೊರಬಂದು ಬಿಜೆಪಿ ಜತೆಗೆ ಸೇರುವುದು ದೂರದಲ್ಲಿ ದೂರದ ಮಾತು, ಆದರೆ ಸಾಧ್ಯವಿಲ್ಲದ್ದಲ್ಲ. ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು, ಯಾವುದೇ ಷರತ್ತು ವಿಧಿಸದಿದ್ದರೂ ಮೋಸ ಮಾಡಿತು ಜೆಡಿಎಸ್ ಎಂದು ಕಾಂಗ್ರೆಸ್ ದೇಶದಾದ್ಯಂತ ಮರ್ಯಾದೆ ಕಳೆದುಬಿಡುತ್ತದೆ. ಜತೆಗೆ ಈ ಕಾರಣಕ್ಕೇ ಕಾಂಗ್ರೆಸ್ ನ ಹಲವು ನಾಯಕರು ಆ ಪಕ್ಷದ ಬಗ್ಗೆ ಸದಾ ಗುಮಾನಿಯಲ್ಲಿಇರುತ್ತಾರೆ. ಇನ್ನು ಎರಡೂ ಪಕ್ಷದಿಂದ ಕೆಲ ಶಾಸಕರ ರಾಜೀನಾಮೆ ಕೊಡಿಸಿದರೆ, ಆ ನಂತರ ಚುನಾವಣೆ ಎದುರಿಸಿ, ಬಹುಮತ ಸಾಬೀತು ಪಡಿಸಬೇಕಾದ ಅನಿವಾರ್ಯ ಬಿಜೆಪಿಗೆ ಇರುತ್ತದೆ. ಅಂಥ ಸನ್ನಿವೇಶದಲ್ಲಿ ಬಿಜೆಪಿಯ ವರ್ಚಸ್ಸಿಗೆ ಅದು ಹೊಡೆತ. ಆದರೆ ಆ ಬಗ್ಗೆ ಎರಡೂ ಪಕ್ಷದಲ್ಲೂ ಗುಮಾನಿ ಇದ್ದೇ ಇದೆ. ಆದ್ದರಿಂದಲೇ ಈಗಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಗೊಂದಲದಲ್ಲೇ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is an analytical story about why JDS- Congress coalition government will not run for long time in Karnataka? These are the major reasons for lack of confidence between two parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more