ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್ ಹೆಸರು ಬದಲಿಸುತ್ತಿರುವುದು ಏಕೆ ವಿಶ್ವ ಆರೋಗ್ಯ ಸಂಸ್ಥೆ?

|
Google Oneindia Kannada News

ಬೆಂಗಳೂರು, ಜೂನ್ 15: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಜಾಗತಿಕ ಮಟ್ಟದಲ್ಲಿ ಮಂಕಿಪಾಕ್ಸ್ ಸೋಂಕಿನ ಹಾವಳಿ ಹೆಚ್ಚುತ್ತಿದೆ. ಮಂಕಿಪಾಕ್ಸ್ ಅನ್ನು ಆರೋಗ್ಯ ತುರ್ತುಸ್ಥಿತಿ ಎಂದು ಪರಿಗಣಿಸಬೇಕೇ ಬೇಡವೇ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆಲೋಚನೆ ನಡೆಸುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿಯು ಮಂಕಿಪಾಕ್ಸ್ ಸೋಂಕಿನ ಹೆಸರನ್ನು ಬದಲಾಯಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಾರತಮ್ಯರಹಿತ ಹಾಗೂ ಕಳಂಕ ರಹಿತ ಹೆಸರಿಗಾಗಿ ವಿಜ್ಞಾನಿಗಳು ಕರೆ ನೀಡಿರುವ ಬೆನ್ನಲ್ಲೇ ಇಂಥದೊಂದು ಬೆಳವಣಿಗೆ ನಡೆದಿದೆ.

ಕರ್ನಾಟಕದಲ್ಲಿ ಮಂಕಿಪಾಕ್ಸ್ ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಜಾರಿ? ಕರ್ನಾಟಕದಲ್ಲಿ ಮಂಕಿಪಾಕ್ಸ್ ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಜಾರಿ?

ಮಂಕಿಪಾಕ್ಸ್ ವೈರಸ್ ಹೆಸರು ಬದಲಾಯಿಸುವುದಕ್ಕೆ ಸಂಬಂಧಿಸಿದ ವಿಷಯದ ಮೇಲೆ ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್ ಅಧಾನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ವೈರಸ್‌ನ ಹೆಸರು, ಅದರ ಲಕ್ಷಣ, ಅದು ಉಂಟುಮಾಡುವ ರೋಗದ ಮೇಲೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ನಾವು ಸಾಧ್ಯವಾದಷ್ಟು ಬೇಗ ಹೊಸ ಹೆಸರಿನ ಕುರಿತು ಪ್ರಕಟ ಮಾಡುತ್ತೇವೆ" ಎಂದು ಗೆಬ್ರೆಯೆಸಸ್ ಹೇಳಿದ್ದಾರೆ. ಹಾಗಿದ್ದರೆ ಮಂಕಿಪಾಕ್ಸ್ ರೋಗಕ್ಕೆ ಹೊಸ ಹೆಸರು ನೀಡುವುದರ ಹಿಂದಿನ ಉದ್ದೇಶವೇನು ಮತ್ತು ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ದಕ್ಷಿಣ ಆಫ್ರಿಕಾ ವಿಜ್ಞಾನಿಗಳಿಂದ ಹೆಸರು ಬದಲಾಯಿಸಲು ಕರೆ

ದಕ್ಷಿಣ ಆಫ್ರಿಕಾ ವಿಜ್ಞಾನಿಗಳಿಂದ ಹೆಸರು ಬದಲಾಯಿಸಲು ಕರೆ

ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ವಿಜ್ಞಾನಿಗಳ ತಂಡವು ಮಂಕಿಪಾಕ್ಸ್ ರೋಗದ ಹೆಸರನ್ನು ಬದಲಾಯಿಸುವಂತೆ ಕರೆ ನೀಡಿರುವುದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು ಈ ಕುರಿತು ಸಮಾಲೋಚನೆ ನಡೆಸುತ್ತಿದೆ. ಏಕೆಂದರೆ ವಿಜ್ಞಾನಿಗಳ ತಂಡವು ಒಂದು ಪತ್ರಿಕೆಯಲ್ಲಿ, ಮುಖ್ಯವಾಹಿನಿಯ ಮಾಧ್ಯಮದಲ್ಲಿ ಪೋಕ್ಸ್ ಗಾಯಗಳನ್ನು ಚಿತ್ರಿಸಲು ಆಫ್ರಿಕನ್ ರೋಗಿಗಳ ಫೋಟೋಗಳ ನಿರಂತರ ಬಳಕೆ ಮಾಡಿರುವುದನ್ನು ಗುಂಪು ಗಮನಿಸಿದೆ.

ಎರಡು ತಳಿಯನ್ನು ಗುರುತಿಸಿದ ವಿಶ್ವ ಆರೋಗ್ಯ ಸಂಸ್ಥೆ

ಎರಡು ತಳಿಯನ್ನು ಗುರುತಿಸಿದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆಯು ಈ ಮಂಕಿಪಾಕ್ಸ್ ಸೋಂಕಿನಲ್ಲಿ ಎರಡು ತಳಿಗಳನ್ನು ಪತ್ತೆ ಮಾಡಿದೆ. ಮಂಕಿಪಾಕ್ಸ್ ರೋಗದಲ್ಲಿ ಒಂದು ಮದ್ಯ ಆಫ್ರಿಕನ್ ಕ್ಲಾಡ್ ಆಗಿದ್ದರೆ, ಇನ್ನೊಂದು ಪಶ್ಚಿಮ ಆಫ್ರಿಕನ್ ಕ್ಲಾಡ್ ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಸೋಂಕಿತರಲ್ಲಿ ಎರಡು ರೀತಿ ತಳಿಗಳು ಪತ್ತೆ ಆಗಿರುವುದನ್ನು ಗುರುತು ಮಾಡಿಕೊಳ್ಳಲಾಗಿದೆ.

"ಜಾಗತಿಕ ಮಟ್ಟದಲ್ಲಿ ಏಕಾಏಕಿ ಮಂಕಿಪಾಕ್ಸ್ ಸೋಂಕಿನ ಏರಿಕೆಯ ಮೂಲವು ಇನ್ನೂ ತಿಳಿದಿಲ್ಲವಾದರೂ, ಖಂಡಾಂತರ, ನಿಗೂಢ ರೀತಿಯಲ್ಲಿ ಸೋಂಕು ಹರಡುವುದರ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಕಾಲ ಇರುವುದಕ್ಕೆ ಈ ಸಾಕಷ್ಟು ಸಾಕ್ಷ್ಯಗಳಿವೆ. ಆದಾಗ್ಯೂ, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಆಫ್ರಿಕಾ ಅಥವಾ ಪಶ್ಚಿಮ ಆಫ್ರಿಕಾ ಅಥವಾ ನೈಜೀರಿಯಾಕ್ಕೆ ನಂಟು ಹೊಂದಿರುವ ಬಗ್ಗೆ ಮಾಧ್ಯಮಗಳಲ್ಲಿ ಅನೇಕ ವಿಜ್ಞಾನಿಗಳು ತಿಳಿಸುತ್ತಿದ್ದಾರೆ. ಜಾಗತಿಕ ಆರೋಗ್ಯ ಸಮುದಾಯಕ್ಕೆ ತಟಸ್ಥ, ತಾರತಮ್ಯ ಮತ್ತು ಕಳಂಕರಹಿತ ಹೆಸರನ್ನು ಇರಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಹೆಸರು ಬದಲಾವಣೆಗೆ ವಿಜ್ಞಾನಿಗಳು ತೋರಿದ ಮಾರ್ಗ

ಹೆಸರು ಬದಲಾವಣೆಗೆ ವಿಜ್ಞಾನಿಗಳು ತೋರಿದ ಮಾರ್ಗ

ಮಂಕಿಪಾಕ್ಸ್ ಪತ್ತೆ ಆಗಿರುವ ಕ್ರಮದಲ್ಲಿ 1, 2, ಮತ್ತು 3 ಕ್ರಮದಲ್ಲಿಯೇ ಹೆಸರು ಬದಲಾಯಿಸುವುದಕ್ಕೆ ವಿಜ್ಞಾನಿಗಳು ಪ್ರಸ್ತಾಪಿಸಿದ್ದಾರೆ. ಇವುಗಳಲ್ಲಿ ಪಶ್ಚಿಮ ಆಫ್ರಿಕಾ, ಮಧ್ಯ ಆಫ್ರಿಕನ್, ಮತ್ತು ಜಾಗತಿಕ ಉತ್ತರ ದೇಶಗಳಲ್ಲಿನ ಘಟನೆಗಳು ಮತ್ತು ಮನುಷ್ಯ ಮತ್ತು ಮನುಷ್ಯರಲ್ಲದ ಇತರೆ ಜೀವಿಗಳಿಂದ ಸ್ಥಳೀಯವಾಗಿ ಹರಡಿರುವ ವೈರಲ್ ಜೀನೋಮ್‌ಗಳು ಸೇರಿವೆ. ಅವರು ಕ್ಲಾಡ್ 1 ಅನ್ನು ಕಾಂಗೋ ಬೇಸಿನ್ ಕ್ಲಾಡ್‌ಗೆ ಸೇರಬೇಕೆಂದು ಪ್ರಸ್ತಾಪಿಸಿದ್ದಾರೆ. 2 ಮತ್ತು 3 ಕ್ಲಾಡ್‌ಗಳು ಹಿಂದಿನ "ವೆಸ್ಟ್ ಆಫ್ರಿಕನ್ ಕ್ಲಾಡ್" ಗೆ ಸಂಬಂಧಿಸಿವೆ.

ಒಟ್ಟು 1600 ಮಂಕಿಪಾಕ್ಸ್ ಪ್ರಕರಣಗಳು ವರದಿ

ಒಟ್ಟು 1600 ಮಂಕಿಪಾಕ್ಸ್ ಪ್ರಕರಣಗಳು ವರದಿ

ಜಗತ್ತಿನ 39 ರಾಷ್ಟ್ರಗಳಲ್ಲಿ ಒಟ್ಟು 1600 ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದರೆ, 1500 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಮಂಕಿಪಾಕ್ಸ್ ಕುರಿತು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಆಲೋಚನೆ ನಡೆಸುತ್ತಿದೆ. ಮಂಕಿಪಾಕ್ಸ್ ಅನ್ನು ಅಂತರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದು, ಕೋವಿಡ್ -19 ಸಾಂಕ್ರಾಮಿಕದಂತೆಯೇ ಭಾವಿಸಲಾಗುತ್ತದೆ. ಸಾಮಾನ್ಯವಾಗಿ ಅಪರೂಪದ ರೋಗಗಳಿಂದ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳಿಗೆ ನಿರಂತರ ಬೆದರಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಪರಿಗಣಿಸುತ್ತದೆ.

ತುರ್ತು ಸಮಿತಿ ನೀಡಿರುವ ಸಲಹೆಯ ಪ್ರಕಾರ, "ಮಂಕಿಪಾಕ್ಸ್ ಅನ್ನು ನಿರ್ವಹಿಸುವ ನಿಟ್ಟಿನಲ್ಲಿ ನಾವು ಉತ್ತಮ ಸ್ಥಾನದಲ್ಲಿ ಇರಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗೆ ಹೋಗುತ್ತೇವೆ ಎನ್ನುವುದು ಅದರ ಅರ್ಥವಲ್ಲ. ತುರ್ತು ಸಮಿತಿಯು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವವರೆಗೂ ಕಾದುಕೊಂಡು ಕೂರುವ ಅಗತ್ಯವಿಲ್ಲ," ಎಂದು ಆಫ್ರಿಕಾದ WHO ನ ತುರ್ತು ನಿರ್ದೇಶಕ ಡಾ. ಇಬ್ರಾಹಿಮಾ ಸೋಸ್ ಫಾಲ್ ಹೇಳಿದರು.

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಮಂಕಿಪಾಕ್ಸ್ ವೈರಸ್ ಎನ್ನುವುದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ಈ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಸೋಂಕಿತ ಪ್ರಾಣಿಯ ಕಡಿತದಿಂದ ಅಥವಾ ಅದರ ರಕ್ತ, ದೇಹದ ದ್ರವಗಳು ಅಥವಾ ತುಪ್ಪಳವನ್ನು ಸ್ಪರ್ಶಿಸುವ ಮೂಲಕ ಮಂಗನ ಕಾಯಿಲೆ ಅಂಟಿಕೊಳ್ಳಬಹುದು. ಇದು ಇಲಿಗಳು, ಇಲಿಗಳು ಮತ್ತು ಅಳಿಲುಗಳಂತಹ ದಂಶಕಗಳಿಂದ ಹರಡುತ್ತದೆ ಎಂದು ಭಾವಿಸಲಾಗಿದೆ. ಸರಿಯಾಗಿ ಬೇಯಿಸದ ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವ ಮೂಲಕವೂ ರೋಗವು ಹರಡುವ ಸಾಧ್ಯತೆಯಿದೆ.

ಜ್ವರ, ಸ್ನಾಯು ನೋವು, ಗಾಯಗಳು ಮತ್ತು ಶೀತಗಳು ಮಾನವರಲ್ಲಿ ಮಂಗನ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಂಕಿಪಾಕ್ಸ್‌ನ ವೈರಸ್ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಆದರೆ WHO ಪ್ರಕಾರ 5 ರಿಂದ 21 ದಿನಗಳವರೆಗೆ ಇರುತ್ತದೆ.

English summary
Why is World Health organisation changing the name of monkeypox?. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X