ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ ಡೂಡಲ್‌ನಲ್ಲಿ ಪಿಜ್ಜಾ ಏಕಿದೆ?, ಆಟ ಆಡಿ ನೋಡಿ: ಇಲ್ಲಿದೆ ಮಾಹಿತಿ

|
Google Oneindia Kannada News

ಗೂಗಲ್‌ ಇಂದು ವಿಶ್ವದ ಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದಾದ ಪಿಜ್ಜಾಗೆ ಡೂಡಲ್‌ ಅನ್ನು ಸಮರ್ಪಿಸಿದೆ. 2007 ರಲ್ಲಿ ಈ ದಿನದಂದು ಅಂದರೆ ಡಿಸೆಂಬರ್‌ 6 ರಂದು ನಿಯಾಪೊಲಿಟನ್ "ಪಿಜ್ಜೈಯುಲೊ" (ಪಿಜ್ಜಾ) ಅನ್ನು ಯುನೆಸ್ಕೋ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ನಿಟ್ಟಿನಲ್ಲಿ ಈ ದಿನವನ್ನು ಪಿಜ್ಜಾಗೆ ಸಮರ್ಪಣೆ ಮಾಡಲಾಗಿದೆ.

ಗೂಗಲ್ ಡೂಡಲ್ ಎಂಬುದು ರಜಾದಿನಗಳು, ಘಟನೆಗಳು, ಸಾಧನೆಗಳು ಮತ್ತು ಜನರ ಬಗೆಗಿನ ವಿಚಾರಗಳನ್ನು ಆಧರಿಸಿ ಆಚರಿಸಲು ಉದ್ದೇಶಿಸಿರುವ ಗೂಗಲ್‍ನ ಮುಖಪುಟ. ಯಾವುದೇ ವಿಶೇಷ ದಿನ ಅಥವಾ ಸಂದರ್ಭಗಳು ಇದ್ದಾಗ ಗೂಗಲ್‌ ತನ್ನ ಡೂಡಲ್‌ ಮೂಲಕ ಅದನ್ನು ನೆನಪಿಸಿಕೊಳ್ಳುತ್ತದೆ.

 ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿಗೆ ಗೂಗಲ್‌ ಡೂಡಲ್‌ ಗೌರವ ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿಗೆ ಗೂಗಲ್‌ ಡೂಡಲ್‌ ಗೌರವ

ಇನ್ನು ಗೂಗಲ್‌ನ ಪಿಜ್ಜಾ ಪಝಲ್‌ ಗೇಮ್‌ ಮೂಲಕ ಪಿಜ್ಜಾವನ್ನು ಸ್ಮರಿಸಿಕೊಳ್ಳಲಾಗಿದೆ. ಈ ಪಿಜ್ಜಾ ಪಝಲ್‌ ಗೇಮ್‌ನಲ್ಲಿ ಆಟಗಾರರು ಪಿಜ್ಜಾ ಸ್ಲೈಸ್‌ ಅನ್ನು ಸರಿಯಾಗಿ ಸ್ಲೈಸ್‌ ಮಾಡಬೇಕಾಗಿದೆ. ಆಟದಲ್ಲಿಯೇ ಎಷ್ಟು ಸ್ಲೈಸ್‌ ಮಾಡಬೇಕು ಎಂದು ತೋರಿಸಲಾಗುತ್ತದೆ. ಒಟ್ಟು ಹನ್ನೊಂದು ಬಗೆಯ ಪಿಜ್ಜಾವನ್ನು ಈ ಆಟದಲ್ಲಿ ಪ್ರಸ್ತುತ ಪಡಿಸಲಾಗಿದೆ. ಹನ್ನೊಂದು ಬಗೆಯ ಪಿಜ್ಜಾವನ್ನು ಹನ್ನೊಂದು ರೀತಿಯಲ್ಲಿ ಸ್ಲೈಲ್‌ ಮಾಡಲು ಹೇಳಲಾಗಿದೆ. ನಾವು ಆಡಿದ ಶೈಲಿಯನ್ನು ನೋಡಿ ನಮಗೆ ಈ ಆಟದಲ್ಲಿ ಸ್ಟಾರ್‌ ಅನ್ನು ನೀಡಲಾಗುತ್ತದೆ. ಹಾಗಾದರೆ ಬಾಯಲ್ಲಿ ನೀರೂರಿಸುವ ಹನ್ನೊಂದು ಬಗೆಯ ಪಿಜ್ಜಾಗಳು ಯಾವುದು, ಈ ದಿನದ ವಿಶೇಷತೆ ಎಂಬ ಬಗ್ಗೆ ಅಧಿಕ ಮಾಹಿತಿ ನಾವು ತಿಳಿಯೋಣ ಮುಂದೆ ಓದಿ...

ಬಾಯಲ್ಲಿ ನೀರು ತರಿಸಲಿದೆ ಈ ಹನ್ನೊಂದು ಪಿಜ್ಜಾಗಳು

ಬಾಯಲ್ಲಿ ನೀರು ತರಿಸಲಿದೆ ಈ ಹನ್ನೊಂದು ಪಿಜ್ಜಾಗಳು

ಈ ಆಟದಲ್ಲಿ ಬಳಕೆದಾರರು ಹನ್ನೊಂದು ಪಿಜ್ಜಾಗಳನ್ನು ಕತ್ತರಿಸಬೇಕಾಗಿದೆ. ಮಾರ್ಗರಿಟಾ ಪಿಜ್ಜಾ (ಚೀಸ್, ಟೊಮ್ಯಾಟೊ, ಪೆಪ್ಪೆರೋನಿ), ಪೆಪ್ಪೆರೋನಿ ಪಿಜ್ಜಾ (ಚೀಸ್, ಪೆಪ್ಪೆರೋನಿ), ವೈಟ್ ಪಿಜ್ಜಾ (ಚೀಸ್, ವೈಟ್ ಸಾಸ್, ಮಶ್ರೂಮ್‌, ಬ್ರೊಕೊಲಿ), ಕ್ಯಾಲಬ್ರೆಸಾ ಪಿಜ್ಜಾ (ಚೀಸ್, ಕ್ಯಾಲಬ್ರೆಸಾ, ಆನಿಯನ್‌ ರಿಂಗ್ಸ್, ಬ್ಲ್ಯಾಕ್‌ ಆಲಿವ್ಸ್‌), ಮುಝಾರೆಲ್ಲಾ ಪಿಜ್ಜಾ (ಚೀಸ್, ಓರೆಗಾನೊ, ಗ್ರೀನ್‌ ಆಲಿವ್ಸ್‌), ಹವಾಯಿಯನ್ ಪಿಜ್ಜಾ (ಚೀಸ್, ಹ್ಯಾಮ್, ಪೈನ್‌ಆಪಲ್‌), ಮ್ಯಾಗ್ಯಾರೋಸ್ ಪಿಜ್ಜಾ (ಚೀಸ್, ಸಲಾಮಿ, ಬೇಕನ್, ಆನಿಯನ್‌, ಚಿಲಿ ಪೆಪ್ಪರ್), ಟೆರಿಯಾಕಿ ಮೇಯನೇಸ್ ಪಿಜ್ಜಾ (ಚೀಸ್, ಟೆರಿಯಾಕಿ ಚಿಕನ್, ಸೀವೀಡ್, ಮೇಯನೇಸ್), ಟಾಮ್ ಯಮ್ ಪಿಜ್ಜಾ (ಚೀಸ್, ಶ್ರಿಂಪ್‌-ಸಿಗಡಿ, ಮಶ್ರೂಮ್‌, ಚಿಲಿ ಪೆಪ್ಪರ್, ನಿಂಬೆ ಎಲೆಗಳು), ಪನೀರ್ ಟಿಕ್ಕಾ ಪಿಜ್ಜಾ (ಪನೀರ್, ಕ್ಯಾಪ್ಸಿಕಂ, ಆನಿಯನ್‌, ಬ್ಲಾಕ್‌ ಪೆಪ್ಪರ್‌).

ಪಿಜ್ಜಾ ಎಲ್ಲಿ ಮೊದಲು ಆರಂಭವಾದದ್ದು?

ಪಿಜ್ಜಾ ಎಲ್ಲಿ ಮೊದಲು ಆರಂಭವಾದದ್ದು?

ಪ್ರಾಚೀನ ನಾಗರೀಕತೆಗಳಲ್ಲಿ ಈಜಿಪ್ಟ್‌ನಿಂದ ರೋಮ್‌ವರೆಗಿನ ಫ್ಲಾಟ್‌ಬ್ರೆಡ್ ಅನ್ನು ಶತಮಾನಗಳಿಂದ ಆಹಾರವಾಗಿ ಸೇವನೆ ಮಾಡಲಾಗುತ್ತಿದೆ. ಆದರೂ ನೈಋತ್ಯ ಇಟಾಲಿಯನ್ ನಗರವಾದ ನೇಪಲ್ಸ್ 1700 ರ ದಶಕದ ಉತ್ತರಾರ್ಧವು ಪಿಜ್ಜಾದ ಜನ್ಮಸ್ಥಳವೆಂದು ವ್ಯಾಪಕವಾಗಿ ಮನ್ನಣೆ ಪಡೆದಿದೆ. ಪಿಜ್ಜಾ ಎಂಬ ಸ್ವಾದಿಷ್ಟ ಆಹಾರದ ಪ್ರಾರಂಭವು ಇಲ್ಲಿಂದ ಆಗಿದೆ. ಶತಮಾನಗಳು ಕಳೆದಂತೆ ಈಗ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ಪಿಜ್ಜಾವು ಜನಪ್ರಿಯವಾಗಿದೆ. ಇಂದು, ಅಂದಾಜು ಐದು ಬಿಲಿಯನ್ ಪಿಜ್ಜಾಗಳು ಪ್ರತಿ ವರ್ಷ ಅಂತಾರಾಷ್ಟ್ರೀಯವಾಗಿ ಸೇವಿಸಲಾಗುತ್ತದೆ. ಯುಎಸ್‌ ಒಂದರಲ್ಲೇ ಪ್ರತಿ ಸೆಕೆಂಡಿಗೆ 350 ಸ್ಲೈಸ್‌ಗಳು ತಯಾರಿ ಮಾಡಲಾಗುತ್ತದೆ.

ನೆಪೋಲಿಟನ್ 'ಪಿಝೈಯುಲೋ' ಪಾಕಶಾಲೆಯ ಕಲೆ ಯಾವುದು?

ನೆಪೋಲಿಟನ್ 'ಪಿಝೈಯುಲೋ' ಪಾಕಶಾಲೆಯ ಕಲೆ ಯಾವುದು?

ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ) ಪ್ರಕಾರ, ನಿಯಾಪೊಲಿಟನ್ 'ಪಿಜ್ಜೈಯುಲೊ' ಕಲೆಯು ನಾಲ್ಕು ವಿಭಿನ್ನ ಹಂತಗಳನ್ನು ಒಳಗೊಂಡಿರುವ ಒಂದು ಪಾಕಶಾಲೆಯ ಅಭ್ಯಾಸವಾಗಿದೆ. ಹಿಟ್ಟನ್ನು ತಯಾರಿಸುವುದು ಮತ್ತು ಅದನ್ನು ಕಟ್ಟಿಗೆ ಒಲೆಯಲ್ಲಿ ಬೇಯಿಸುವುದು, ಬೇಕರ್‌ನಲ್ಲಿ ತಿರುಗಿಸುವ ಒಂದು ಕಲೆಯೇ ಈ ಪಿಜ್ಜಾ (ಪಿಜ್ಜೈಯುಲೊ) ಆಗಿದೆ. ಈ ಪಿಜ್ಜಾವು ಕ್ಯಾಂಪನಿಯಾ ಪ್ರದೇಶದ ರಾಜಧಾನಿ ನೇಪಲ್ಸ್‌ನಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. Pizzaiuoli ಎಂಬುವುದು ಒಂದು ಸಮುದಾಯದ ಹೆಸರು ಆಗಿದೆ. ಕ್ಯಾಂಪನಿಯಾ ಪ್ರದೇಶದ ರಾಜಧಾನಿ ನೇಪಲ್ಸ್‌ನಲ್ಲಿ ಸುಮಾರು 3,000 ಪಿಜ್ಜೈಯುಲಿಗಳು ಈಗ ವಾಸ ಮಾಡುತ್ತಿದ್ದಾರೆ.

ಗೂಗಲ್‌ ಡೂಡಲ್‌ನಲ್ಲಿ ಆಡಿ ಪಿಜ್ಜಾ ಪಝಲ್‌

ಗೂಗಲ್‌ ಡೂಡಲ್‌ನಲ್ಲಿ ಆಡಿ ಪಿಜ್ಜಾ ಪಝಲ್‌

ನಿಯಾಪೊಲಿಟನ್ "ಪಿಜ್ಜೈಯುಲೊ" (ಪಿಜ್ಜಾ) ಅನ್ನು ಯುನೆಸ್ಕೋ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬ ಪಟ್ಟಿಯಲ್ಲಿ ಸೇರಿಸಿದ ಈ ಪಿಜ್ಜಾ ದಿನವನ್ನು ಗೂಗಲ್‌ ಡೂಡಲ್‌ ಮೂಲಕ ಸ್ಮರಿಸಿದೆ. ಈ ದಿನದಂದು ಸುಮಾರು ಹನ್ನೊಂದು ಬಗೆಯ ಪಿಜ್ಜಾವನ್ನು ಗೂಗಲ್‌ ಪ್ರಸ್ತಾಪ ಮಾಡುವ ನಿಟ್ಟಿನಲ್ಲಿ ಪಿಜ್ಜಾ ಪಝಲ್‌ ಅನ್ನು ನೀಡಿದೆ. ಈ ಗೇಮ್‌ನಲ್ಲಿ ಪಿಜ್ಜಾವನ್ನು ಹಂಚುವ ಕಾರ್ಯವನ್ನು ನಾವು ಮಾಡಬೇಕಾಗುತ್ತದೆ. ಗೇಮ್‌ನಲ್ಲಿ ನೀಡದ ಅಂಕಿಯಂತೆ ನಾವು ಪಿಜ್ಜಾವನ್ನು ತುಂಡರಿಸಬೇಕಾಗಿದೆ. ನಾವು ಸರಿಯಾದ ರೀತಿ ತುಂಡರಿಸದರೆ ಮೂರು ಸ್ಟಾ‌ರ್‌ಗಳು ಕೊಂಚ ತಪ್ಪಾದರೆ ಎರಡು ಸ್ಟಾರ್‌ಗಳು, ಅಧಿಕ ತಪ್ಪಾದರೆ ಒಂದು ಸ್ಟಾರ್‌ ಲಭ್ಯವಾಗಲಿದೆ.

English summary
Why is Google Doodle Celebrating Pizza Today in India?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X