ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ್ ಸೈನ್ಯಕ್ಕೆ ಇಮ್ರಾನ್ ಖಾನ್ ಮೇಲೆ ಯಾಕಿಷ್ಟು ಲವ್?

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಒಂದಿಷ್ಟು ಮಂದಿ ಪಕ್ಷೇತರರು ಹಾಗೂ ಸಣ್ಣ-ಪುಟ್ಟ ಪಕ್ಷಗಳನ್ನು ಗುಡ್ಡೆ ಹಾಕಿಕೊಂಡು ಪಿಟಿಐ ಪಕ್ಷದ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಏರುವುದು ಬಹುತೇಕ ಖಚಿತವಾಗಿದೆ. ಇದೇನೋ ಆಗಬಾರದ್ದು ಆಗಿಹೋಗಿದೆ ಅಂತಲೋ ಅಥವಾ ಅಚ್ಚರಿಯ ಫಲಿತಾಂಶ ಅಂತಲೋ ಹೇಳುವ ಅಗತ್ಯ ಖಂಡಿತಾ ಇಲ್ಲ.

ಏಕೆಂದರೆ, ಪಾಕ್ ಸೇನೆಯ ಪಾಲಿಗೆ ಆಪ್ಯಾಯಮಾನರಾಗಿದ್ದ ಇಮ್ರಾನ್ ಖಾನ್ ಈ ಸಲ ಗೆಲುವು ಸಾಧಿಸಬಹುದು ಎಂದು ರಾಜಕೀಯದ ಕನಿಷ್ಠ ಜ್ಞಾನ ಇರುವ ಯಾರು ಬೇಕಾದರೂ ಹೇಳುತ್ತಿದ್ದರು. ಈಗ ಬಂದಿರುವ ಚುನಾವಣೆ ಫಲಿತಾಂಶದ ಬಗ್ಗೆ ನವಾಜ್ ಷರೀಫ್ ರ ಪಿಎಂಎಲ್ (ಎನ್) ಹಾಗೂ ಬಿಲಾವಲ್ ಭುಟ್ಟೋರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಆಕ್ಷೇಪ ವ್ಯಕ್ತಪಡಿಸಿದೆ.

ಮತ್ತೊಮ್ಮೆ ಚುನಾವಣೆ ನಡೆಯಲಿ ಅಂತ ಒತ್ತಾಯಿಸಿವೆ. ಅದಿರಲಿ, ಪಾಕಿಸ್ತಾನದ ಸೈನ್ಯ ನೇರವಾಗಿ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅವಕಾಶ ಇದ್ದರೂ ಚುನಾವಣೆ ಅಂತ ನಡೆದು, ತನಗೆ ಬೇಕಾದ ವ್ಯಕ್ತಿಯೊಬ್ಬರು ಪ್ರಧಾನಿಯಾಗಿ, ಆ ವ್ಯಕ್ತಿಯ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕೆ ಅಲ್ಲಿನ ಸೈನ್ಯವಾದರೂ ಬಯಸುತ್ತದಾ ಅಂದರೆ, ಅದಕ್ಕೆ ಉತ್ತರ ಹೌದು ಅಂತಲೇ ಹೇಳಬೇಕಾಗುತ್ತದೆ.

ಒಂಬತ್ತು ವರ್ಷ ಸಂವಿಧಾನವೇ ಇರಲಿಲ್ಲ

ಒಂಬತ್ತು ವರ್ಷ ಸಂವಿಧಾನವೇ ಇರಲಿಲ್ಲ

ಪಾಕ್ ಪ್ರತ್ಯೇಕ ದೇಶವಾಗಿ ಅಸ್ತಿತ್ವಕ್ಕೆ ಬಂತು. ಅದೇ ವೇಳೆಗೆ ಭಾರತ ಸ್ವತಂತ್ರಗೊಡು ಪ್ರಬಲವಾದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದರೆ, ವರ್ಚಸ್ವಿ ನಾಯಕರು ದೇಶ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡರು. ಆದರೆ ಮಹ್ಮದ್ ಅಲಿ ಜಿನ್ನಾರ ಪಕ್ಷ ಒನ್ ಮ್ಯಾನ್ ಷೋ ಎಂಬಂತಾಗಿತ್ತು. ಆದ್ದರಿಂದ ಪಾಕಿಸ್ತಾನ ದೇಶ ಅಸ್ತಿತ್ವಕ್ಕೆ ಬಂದ ಒಂದೇ ವರ್ಷದಲ್ಲಿ ಜಿನ್ನಾ ಅವರು ತೀರಿಕೊಂಡಿದ್ದು ಆ ಪಕ್ಷದಲ್ಲಿ ಗೊಂದಲ ಸೃಷ್ಟಿಸಿತು. ಆ ದೇಶಕ್ಕೆ ಮೊದಲ ಒಂಬತ್ತು ವರ್ಷ ಸಂವಿಧಾನವೇ ಇರಲಿಲ್ಲ. ಆ ಕಾರಣಕ್ಕೆ ಅಲ್ಲಿನ ರಾಜಕಾರಣಿಗಳು ಸೃಷ್ಟಿಸಿದ ಗೊಂದಲದಿಂದಾಗಿ ಮೊದಲ ದಂಗೆ 1958ರಲ್ಲಿ ಕಾಣಿಸಿಕೊಂಡಿತು. ಇದು ಹಾಗೂ ಆ ನಂತರ ಬಂದ ಸೇನಾಡಳಿತದಿಂದ ಸೇನೆಯೇ ಪ್ರಬಲವಾಗಿ ಪ್ರತಿಬಿಂಬಿತವಾಯಿತು. ಯಾವಾಗೆಲ್ಲ ಪಾಕ್ ಗೆ ಕಷ್ಟ ಎದುರಾಯಿತೋ ಅನಿಸಿತೋ ಸೇನಾಡಳಿತವೇ ಉತ್ತಮ ಎಂಬ ಭಾವ ಮೂಡಲು ಕಾರಣವಾಯಿತು.

ಸೇನೆಯ ನೇರ ಆಡಳಿತದ ಮೇಲೆ ಜನರ ಸಿಟ್ಟು

ಸೇನೆಯ ನೇರ ಆಡಳಿತದ ಮೇಲೆ ಜನರ ಸಿಟ್ಟು

ಪಾಕಿಸ್ತಾನ ಎಂಬ ದೇಶವಾದ ಮೇಲೆ ಕಳೆದ ಎಪ್ಪತ್ತು ವರ್ಷದಲ್ಲಿ ಅರ್ಧಕ್ಕೂ ಹೆಚ್ಚು ಸಮಯ ಅಲ್ಲಿ ಸೇನೆಯೇ ಆಡಳಿತ ನಡೆಸಿದೆ. ಆದರೆ ಯಾವುದೇ ರಾಜಕೀಯ ಪಕ್ಷ ಆಡಳಿತ ನಡೆಸುವಾಗ ಕೂಡ ಸೇನೆಯ ಪಾಲಿಗೆ ಚೆನ್ನಾಗಿಯೇ ಕೆಲಸಗಳಾಗಿವೆ. ಇದು ಹೇಗೆಂದರೆ, ಯಾವ ಪಕ್ಷ ಆಡಳಿತ ನಡೆಸುತ್ತದೋ ಅದರದೇ ಉತ್ತರದಾಯಿತ್ವ ಇರುತ್ತದೆ. ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಆಗಲಿಲ್ಲ ಅಂದರೆ ಜನರ ಸಿಟ್ಟು ಆಡಳಿತಾರೂಢ ಪಕ್ಷದ ಮೇಲೆ ತಿರುಗುತ್ತದೆ ವಿನಾ ಸೇನೆ ಮೇಲಲ್ಲ. ಕಳೆದ ಸಲ ಸೇನೆಯ ಆಡಳಿತ ಹೇರಿದ ನಂತರ ಜನಾಭಿಪ್ರಾಯವು ನೇರ ಸೇನಾಡಳಿತದ ವಿರುದ್ಧವಾಗಿದೆ. ಇದರ ಜತೆಗೆ ಆಡಳಿತದಲ್ಲಿರುವ ಪಕ್ಷ ಮೇಲ್ನೋಟಕ್ಕೆ ಕಾಣುವಂತೆ ಸೇನೆಯನ್ನು ಒಂದು ಹಂತಕ್ಕೆ ನಿಯಂತ್ರಿಸುತ್ತದೆ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶಕ್ಕೆ ಒಂದು ವಿಶ್ವಾಸಾರ್ಹತೆ ನೀಡುತ್ತದೆ.

ಇಮ್ರಾನ್ ಖಾನ್ ಬಗ್ಗೆ ಸೇನೆಗೆ ಪ್ರೀತಿ

ಇಮ್ರಾನ್ ಖಾನ್ ಬಗ್ಗೆ ಸೇನೆಗೆ ಪ್ರೀತಿ

ದುರ್ಬಲವಾದ ರಾಜಕೀಯ ಸ್ಥಿತಿಯಿಂದಾಗಿ ಸೇನೆಗೆ ಹೆಚ್ಚಿನ ಅವಕಾಶಗಳು ಉದ್ಭವವಾಗುತ್ತವೆ. ಆದ್ದರಿಂದಲೇ ನಿಧಾನವಾಗಿ ನಾಗರಿಕರಿಗೆ ಹೆಚ್ಚಿನ ಅಧಿಕಾರ ಕೊಡುತ್ತಾ ಸಾಗಿದ ಹಾಗೂ ಹಿಂದಿನ ಸರ್ವಾಧಿಕಾರಿ ಪರ್ವೇಜ್ ಮುಷರಫ್ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಮಾಡಿದ ನವಾಜ್ ಷರೀಫ್ ಈ ಬಾರಿ ಸೇನೆಗೆ ಬೇಡವಾದರು. ಅದೇ ವೇಳೆಗೆ ಜನಪ್ರಿಯರು ಹಾಗೂ ಆಡಳಿತ ನಡೆಸುವುದಕ್ಕೆ ಹೊಸಬರಾದ ಇಮ್ರಾನ್ ಖಾನ್ ಬಗ್ಗೆ ಸೇನೆಗೆ ಪ್ರೀತಿಯುಕ್ಕಿತು. ಈ ಹಿಂದೆ ಹೇಗೆ ಝುಲ್ಫೀಕರ್ ಅಲಿ ಭುಟ್ಟೋ ಹಾಗೂ ನವಾಜ್ ಷರೀಫ್ ಅಧಿಕಾರ ಹಿಡಿದರೋ ಅದೇ ಮಾರ್ಗದಲ್ಲೇ ಸಾಗಿದರು. ಸೇನೆಯ ವಿರುದ್ಧ ಧ್ವನಿ ಎತ್ತಿ ಜನರ ಮಧ್ಯೆ ಹೀರೋ ಆಗಲು ಹೊರಟವರ ರಾಜಕೀಯ ಭವಿಷ್ಯವೇ ಇಲ್ಲದಂತೆ ಮಾಡಲಾಯಿತು.

ಪಾಕಿಸ್ತಾನದ ಪ್ರಧಾನಮಂತ್ರಿಗಳ ಅಧಿಕಾರಾವಧಿ ಕೊನೆಗೊಳ್ಳಲು ಕಾರಣಗಳು

ಪಾಕಿಸ್ತಾನದ ಪ್ರಧಾನಮಂತ್ರಿಗಳ ಅಧಿಕಾರಾವಧಿ ಕೊನೆಗೊಳ್ಳಲು ಕಾರಣಗಳು

ರಾಷ್ಟ್ರಪತಿಗಳಿಂದ ಪದಚ್ಯುತಿಗೊಂಡದ್ದು 7

ಪಾಕಿಸ್ತಾನದ ಸುಪ್ರೀಂ ಕೋರ್ಟ್ ನಿಂದ ಅನರ್ಹಗೊಂಡದ್ದು 6

ರಾಜೀನಾಮೆ ಸಲ್ಲಿಸಿದ್ದು 5

ಮಧ್ಯಂತರ ಪ್ರಧಾನಿ 6

ದಂಗೆ ಎಂದು ಕಿತ್ತೊಗೆದದ್ದು 3

ದಂಗೆಯ ಪಿತೂರಿ 1

ಹತ್ಯೆ ಆದದ್ದು 1

English summary
Recently held Pakistan elections result almost out. Opposition parties alleged against Imran Khan led Pakistan Tehrik E Insaf. But Pakistan army wanted Imran to win this elections, here is the reasons why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X