ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 25ರಂದು ಮಾತ್ರ ಭಾರತದಲ್ಲಿ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಏಕೆ?

|
Google Oneindia Kannada News

ಭಾರತದಲ್ಲಿ ತುರ್ತು ಪರಿಸ್ಥಿತಿಯ ನಂತರ ಎಲ್ಲಾ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭವನ್ನು ಜುಲೈ 25ರಂದು ಮಾತ್ರ ಆಯೋಜಿಸಲಾಗಿದೆ. ದೇಶದ 15ನೇ ಹಾಗೂ 2ನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1977ರಿಂದ ಜುಲೈ 25ರಂದು ದೇಶದ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭ ಏಕೆ ನಡೆಯುತ್ತದೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

ಹೌದು ಪ್ರತಿ 5 ವರ್ಷಗಳಿಗೊಮ್ಮೆ ಜುಲೈ 25 ರಂದು ದೇಶವು ಹೊಸ ಅಧ್ಯಕ್ಷರನ್ನು ಪಡೆದುಕೊಳ್ಳತ್ತಾರೆ ಆದ್ದರಿಂದ ಜುಲೈ 25ರ ದಿನವನ್ನು ಭಾರತಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಂಸತ್ ಸೆೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಭಾಷಣ ಸಂಸತ್ ಸೆೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಭಾಷಣ

ನವದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ 10.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಿದ್ದು, ನೂತನ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಿಜೆಐ ಎನ್. ವಿ.ರಮಣ ದ್ರೌಪದಿ ಅವರು ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು, ಬಳಿಕ ಅವರಿಗೆ ಅಂತರ ಸೇವಾ ಗೌರವಗಳು ನೀಡಲಾಯಿತು. ಇದೆ ಸಮಯದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ 21ಗನ್ ಸೆಲ್ಯೂಟ್ ನೀಡಿ ಗೌರವ ನೀಡಲಾಗಿದೆ ನಂತರ ಅವರು ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕಾರಿಸುವ ಇತಿಹಾಸ

ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕಾರಿಸುವ ಇತಿಹಾಸ

ಇತಿಹಾಸದ ಬಗ್ಗೆ ಮಾತನಾಡುತ್ತಾ ಹೊದರೆ, ಜುಲೈ 25 ರಂದು ದೇಶದ ಆರನೇ ರಾಷ್ಟ್ರಪತಿಯಾಗಿ ನೀಲಂ ಸಂಜೀವ ರೆಡ್ಡಿ ಅವರು ಪ್ರಮಾಣವಚನ ಸ್ವೀಕರಿಸಿದರು, ನಂತರ ಜುಲೈ 25ರಂದು ಎಲ್ಲಾ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸುದ್ದಾರೆ. 1977ರಿಂದ 9 ರಾಷ್ಟ್ರಪತಿಗಳು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದೇ ರೀತಿ ದ್ರೌಪದಿ ಮುರ್ಮು 10ನೇ ರಾಷ್ಟ್ರಪತಿಯಾಗಿ ಈ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

 ಅಧಿಕಾರ ಪೂರ್ಣಗೊಳಿಸಿದ ಕೋವಿಂದ್ 9ನೇ ರಾಷ್ಟ್ರಪತಿ

ಅಧಿಕಾರ ಪೂರ್ಣಗೊಳಿಸಿದ ಕೋವಿಂದ್ 9ನೇ ರಾಷ್ಟ್ರಪತಿ

ಭಾರತದಲ್ಲಿ ತುರ್ತು ಪರಿಸ್ಥಿತಿಯ ನಂತರ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಿದ 8 ರಾಷ್ಟ್ರಪತಿಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮತ್ತೊಂದೆಡೆ, ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಮ್‌ನಾಥ್ ಕೋವಿಂದ್ ಇಂದು 9ನೇ ರಾಷ್ಟ್ರಪತಿಯಾಗಿದ್ದರು. ಮೊದಲ ಬಾರಿಗೆ ನೀಲಂ ಸಂಜೀವ ರೆಡ್ಡಿ ಅವರು 25 ಜುಲೈ 1977ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯಿಂದ ಹಿಡಿದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವರೆಗೆ 9 ರಾಷ್ಟ್ರಪತಿಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

 ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿಗಳು

ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿಗಳು

ನೀಲಂ ಸಂಜೀವ ರೆಡ್ಡಿ (25 ಜುಲೈ, 1977ರಿಂದ 25 ಜುಲೈ, 1982)
ಗಿಯಾನಿ ಜೈಲ್ ಸಿಂಗ್ (25 ಜುಲೈ, 1982ರಿಂದ 25 ಜುಲೈ, 1987)
ರಾಮಸ್ವಾಮಿ ವೆಂಕಟರಾಮನ್ (25 ಜುಲೈ, 1987ರಿಂದ 25 ಜುಲೈ, 1992)
ಶಂಕರ್ ದಯಾಳ್ ಶರ್ಮಾ (25 ಜುಲೈ, 1992ರಿಂದ 25 ಜುಲೈ 1997)
ಕೆ.ಆರ್. ನಾರಾಯಣನ್ (25 ಜುಲೈ, 1997ರಿಂದ 25 ಜುಲೈ, 2002)
ಎಪಿಜೆ ಅಬ್ದುಲ್ ಕಲಾಂ (25 ಜುಲೈ, 2002ರಿಂದ 25 ಜುಲೈ, 2007)
ಪ್ರತಿಭಾ ಪಾಟೀಲ್ (25 ಜುಲೈ, 2007 ರಿಂದ 25 ಜುಲೈ, 2012)
ಪ್ರಣಬ್ ಮುಖರ್ಜಿ (25 ಜುಲೈ, 2012ರಿಂದ 25 ಜುಲೈ, 2017)
ರಾಮನಾಥ್ ಕೋವಿಂದ್ (25 ಜುಲೈ, 2017 ರಿಂದ 25 ಜುಲೈ, 2022)
ಈಗ ದ್ರೌಪದಿ ಮುರ್ಮು (25 ಜುಲೈ, 2022 ರಿಂದ .......................)

 ಅಧ್ಯಕ್ಷರ ಅವಧಿ ಮುಗಿದ ತಕ್ಷಣ, ಪ್ರಮಾನ ವಚನ

ಅಧ್ಯಕ್ಷರ ಅವಧಿ ಮುಗಿದ ತಕ್ಷಣ, ಪ್ರಮಾನ ವಚನ

ಅಧ್ಯಕ್ಷರಿಲ್ಲದ ಸಂದರ್ಭದಲ್ಲಿ ಭಾರತದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಅಧ್ಯಕ್ಷರ ಅವಧಿ ಮುಗಿದ ತಕ್ಷಣ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಲಾಗುತ್ತದೆ. ಜುಲೈ 21ರಂದು ಎಣಿಕೆಯಾದ 15ನೇ ಅಧ್ಯಕ್ಷೀಯ ಚುನಾವಣೆಗೆ ಜುಲೈ 18 ರಂದು ಮತದಾನ ನಡೆಯಿತು. ಇಂದು ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Recommended Video

Virat Kohli Instagramನಲ್ಲೇ ಇಷ್ಟೊಂದು ಹಣ ದುಡಿಯುತ್ತಾರಾ ? |*Cricket | OneIndia Kannada

English summary
After the Emergency in India, the swearing-in ceremony of all the Presidents was organized only on 25th July. Draupadi Murmu will take oath as the 15th 2nd woman President of the country today. Know the complete information about why the swearing-in ceremony of the President of the country is held on 25th July since 1977,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X