ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ವೈರಸ್' ಇದೇ ಹೆಸರೇಕೆ ಬಂತು?

|
Google Oneindia Kannada News

ಬೀಜಿಂಗ್, ಫೆಬ್ರವರಿ 05: ಚೀನಾದಲ್ಲಿ ಹುಟ್ಟಿ ವಿಶ್ವದಲ್ಲೇ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ತಹಬದಿಗೆ ಬರುವ ಲಕ್ಷಣಗಳನ್ನು ತೋರುತ್ತಿಲ್ಲ.

490 ಮಂದಿಯನ್ನು ಬಲಿ ಪಡೆದಿರುವ ಕೊರೊನಾ ವೈರಸ್‌ ಅನ್ನು ತಹಬದಿಗೆ ತರಲು ಚೀನಾದಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ಸಾಗಿವೆ. ಆದರೆ ಕೊರೊನಾ ಹಿಡಿತಕ್ಕೆ ಸಿಗುತ್ತಿಲ್ಲ.

ಸಾಮಾನ್ಯವಾಗಿ ಪ್ರತಿಯೊಂದು ವೈರಸ್‌ ನ ಹೆಸರಿನ ಹಿಂದೆಯೂ ವಿಶೇಷತೆ ಇರುತ್ತದೆ. ಹಾಗಾದರೆ ನೂರಾರು ಜನರನ್ನು ಬಲಿಪಡೆದಿರುವ ಈ ವೈರಸ್‌ ಗೆ 'ಕೊರೊನಾ ವೈರಸ್' ಎಂದು ಕರೆಯುತ್ತಿರುವುದೇಕೆ? ಇಲ್ಲಿದೆ ಮಾಹಿತಿ.

'ಕೊರೊನಾ' ಎಂಬುದು ಲ್ಯಾಟಿನ್ ಪದವಾಗಿದ್ದು, 'ಕೊರೊನಾ' ಎಂದರೆ ಕಿರೀಟ, ಗುಂಪು, ವೃತ್ತ, ರಿಂಗ್ ಎಂಬ ಅರ್ಥಗಳಿವೆ. ಕೊರೊನಾ ವೈರಸ್ ಅನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಕಿರೀಟ ಮಾದರಿಯ ರಚನೆ ಕಾಣುತ್ತದೆಯಂತೆ ಹಾಗಾಗಿ ಇದಕ್ಕೆ ಕೊರೊನಾ ವೈರಸ್ ಎಂದು ಹೆಸರಿಡಲಾಗಿದೆ. ಈಗ ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ವೈರಸ್ ಅನ್ನು 'ನೋವಲ್ ಕೊರೊನಾ ವೈರಸ್' ಎಂದು ಕರೆಯಲಾಗುತ್ತಿದೆ. 'ಹೊಸರೀತಿಯ ಕಿರೀಟ ಮಾದರಿಯಲ್ಲಿ ಕಾಣುವ ವೈರಸ್' ಎಂದು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳಬಹುದು.

ಕೊರೊನಾ ವೈರಸ್ ಸಾಮಾನ್ಯ ವೈರಸ್ ಆಗಿದೆ

ಕೊರೊನಾ ವೈರಸ್ ಸಾಮಾನ್ಯ ವೈರಸ್ ಆಗಿದೆ

ಕೊರೊನಾ ವೈರಸ್ ಹೊಸದೇನೂ ಅಲ್ಲ, ಸಾಮಾನ್ಯವಾಗಿ ಎಲ್ಲ ಜನರಿಗೂ ಕೊರೊನಾ ವೈರಸ್ ಬಂದಿರುತ್ತದೆ. ಹಲವು ವೈರಸ್‌ಗಳು ಸೇರಿರುವ ಗುಂಪಿಗೆ ಕೊರೊನಾ ವೈರಸ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರಗಳನ್ನು ತರುತ್ತದೆ. ಆದರೆ ಇದೇ ಮಾದರಿಯಲ್ಲಿರುವ 'ನೋವಲ್ ಕೊರೊನಾ ವೈರಸ್' ಜನರ ಜೀವಗಳನ್ನು ಬಲಿ ಪಡೆಯುತ್ತಿದೆ.

2019-nCoV ಎಂಬುದು ಅಧಿಕೃತ ಹೆಸರು

2019-nCoV ಎಂಬುದು ಅಧಿಕೃತ ಹೆಸರು

ಚೀನಾದಲ್ಲಿ ಪತ್ತೆಯಾಗಿರುವ ವೈರಸ್ ಅನ್ನು '2019-nCoV' ಎಂದು ಕರೆಯಲಾಗುತ್ತಿದೆ. ಆದರೆ ಇದಕ್ಕೆ ಪ್ರತ್ಯೇಕ ಹೆಸರನ್ನು ಈವರೆಗೆ ಇಡಲಾಗಿಲ್ಲ. ಸೂಕ್ತ ಮತ್ತು ಪ್ರತ್ಯೇಕ ಹೆಸರಿನ ಹುಡುಕಾಟವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ ಆದರೆ ಯಾವುದೇ ಪ್ರತ್ಯೇಕ ಹೆಸರನ್ನು ಅಂತಿಮಗೊಳಿಸಿಲ್ಲ.

ವೈರಸ್‌ ಗೆ ಹೆಸರಿಡುವ ಮುನ್ನಾ ಹಲವು ವಿಷಯ ಗಮನಿಸಬೇಕು

ವೈರಸ್‌ ಗೆ ಹೆಸರಿಡುವ ಮುನ್ನಾ ಹಲವು ವಿಷಯ ಗಮನಿಸಬೇಕು

ಹೊಸ ವೈರಸ್ ಪತ್ತೆಯಾದರೆ ಅದಕ್ಕೆ ಹೆಸರಿಡುವುದು ಸಾಮಾನ್ಯ ಮತ್ತು ಅವಶ್ಯಕ ಸಹ. ವೈರಸ್‌ ಗೆ ಹೆಸರಿಡುವ ಮುನ್ನಾ ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ವೈರಸ್ ಎಲ್ಲಿ ಪತ್ತೆಯಾಗುತ್ತದೆಯೋ ಅದೇ ಹೆಸರನ್ನು ಜನರು ಬಳಕೆಗೆ ತಂದುಬಿಡುತ್ತಾರೆ. ಉದಾಹರಣೆಗೆ ಚೀನಾ ವೈರಸ್ ಎಂದು ನೋವಲ್ ಕೊರೊನಾ ವೈರಸ್ ಅನ್ನು ಕರೆದರೆ, ಅದು ಚೀನಾ ದೇಶಕ್ಕೆ ಕಪ್ಪುಚುಕ್ಕೆ ಆದಂತಾಗುತ್ತದೆ. ದೇಶ, ಪ್ರದೇಶ, ಪ್ರಾಣಿ, ವ್ಯಕ್ತಿ, ಸಮುದಾಯ, ಆಚರಣೆಗಳ ಹೆಸರುಗಳನ್ನು ವೈರಸ್‌ ಗೆ ಇಡುವಂತಿಲ್ಲ. ವೈರಸ್‌ ಅನ್ನು ಕಂಡುಹಿಡಿದ ವಿಜ್ಞಾನಿಗಳ ಹೆಸರನ್ನು ಇಡುವ ಸಂಪ್ರದಾಯ ಇದೆ.

ಎಚ್‌1 ಎನ್‌1 ಹರಡಿದ್ದಾಗ ಹಂದಿಗಳ ಕೊಂದಿದ್ದರು

ಎಚ್‌1 ಎನ್‌1 ಹರಡಿದ್ದಾಗ ಹಂದಿಗಳ ಕೊಂದಿದ್ದರು

ಎಚ್‌1ಎನ್‌1 ವೈರಸ್ ಹರಡಿದ್ದಾಗ ಅದನ್ನು ಹಂದಿ ಜ್ವರ ಎಂದು ಜನರು ಕರೆದು ಅದು ಚಾಲನೆಗೆ ಬಂದುಬಿಟ್ಟಿತ್ತು. ಇದರಿಂದ ಹಲವು ಕಡೆ ಹಂದಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಆದರೆ ಈ ವೈರಸ್ ಹರಡಿದ್ದು ಜನರಿಂದಲೇ. ಈ ರೀತಿಯ ಘಟನೆಗಳು ನಡೆಯಬಾರದೆಂದೇ ವೈರಸ್‌ ಗೆ ಶೀಘ್ರವಾಗಿ ಹೆಸರಿಡುವುದು ಮುಖ್ಯವಾಗುತ್ತದೆ.

ಕೆಲವೇ ದಿನಗಳಲ್ಲಿ ಹೆಸರು ಅಂತಿಮ

ಕೆಲವೇ ದಿನಗಳಲ್ಲಿ ಹೆಸರು ಅಂತಿಮ

ಕಳೆದ ಎರಡು ವಾರದಿಂದಲೂ ನೋವೆಲ್ ಕೊರೊನಾ ವೈರಸ್ ಗೆ ಪ್ರತ್ಯೇಕ ಹೆಸರಿಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ, ಕಳೆದ ಎರಡು ದಿನದ ಹಿಂದೆ ಒಂದು ಹೆಸರಿಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದು, ಅದನ್ನೇ ಅಧಿಕೃತಗೊಳಿಸಲು ಅಧಿಕೃತ ವಿಜ್ಞಾನ ನಿಯತಕಾಲಿಕೆಗೆ ನೀಡಲಾಗಿದೆ ಎಂದು ಟೆಕ್ಸಾಸ್‌ನ ಜೈವಿಕ ವಿಜ್ಞಾನ ವಿವಿಯ ಅಧ್ಯಕ್ಷ ನ್ಯೂಮನ್ ಹೇಳಿದ್ದಾರೆ.

English summary
Deadly virus which started in China called 'coronavirus'. WHO called the virus as 2019-nCoV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X