ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ರೂಪಾಂತರ: ಲಸಿಕೆ ಮೇಲೆ ಪರಿಣಾಮ ಬೀರಬಲ್ಲದೇ?

|
Google Oneindia Kannada News

ಕೊರೊನಾ ವೈರಸ್‌ನ ರೂಪಾಂತರದ ಅಂಶದ ಬಗ್ಗೆ ವಿಜ್ಞಾನ ಲೋಕದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.

Recommended Video

ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸಿದ Dhoni | Oneindia Kannada

ರಾಷ್ಟ್ರೀಯ ಜೀವ ವೈದ್ಯಕೀಯ ಜಿನೊಮಿಕ್ಸ್ ನೇತೃತ್ವದ ವಿಜ್ಞಾನಿಗಳ ತಂಡವೊಂದು ಈ ತಿಂಗಳ ಆರಂಭದಲ್ಲಿ ಸಾರ್ಸ್-ಕೋವ್-2 (ತೀವ್ರ ಉಸಿರಾಟದ ಲಕ್ಷಣ ಕೊರೊನಾ ವೈರಸ್ 2) ಎಂಬುದರ ಕುರಿತು ಲೇಖನವೊಂದನ್ನು ಪ್ರಕಟಿಸಿತ್ತು. ದೇಶದ ವಿವಿಧೆಡೆಗಳಿಂದ 1,000ಕ್ಕೂ ಅಧಿಕ ಸೋಂಕಿತರ ಜಿನೋಮ್‌ಗಳನ್ನು (ಎಲ್ಲ ಬಗೆಯ ವಂಶವಾಹಿನಿಗಳನ್ನು ಒಳಗೊಂಡಂತೆ ಜೀವಿಯ ಡಿಎನ್‌ಎದ ಸಂಪೂರ್ಣ ಒಕ್ಕೂಟ) ಸಂಗ್ರಹಿಸಿತ್ತು.

ಹುಷಾರ್!: ಮಾಸ್ಕ್ ಧರಿಸದೆ ಇದ್ದರೆ ದಂಡದ ಬದಲು ಈ ಶಿಕ್ಷೆಯೂ ಇದೆ!ಹುಷಾರ್!: ಮಾಸ್ಕ್ ಧರಿಸದೆ ಇದ್ದರೆ ದಂಡದ ಬದಲು ಈ ಶಿಕ್ಷೆಯೂ ಇದೆ!

ಯುರೋಪ್‌ನಲ್ಲಿ ಎ2ಎ ಹ್ಯಾಪ್ಲೊಟೈಪ್ ಡಿ614ಜಿ ವಂಶವಾಹಿ ರೂಪಾಂತರ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿರುವ ದೇಶದಿಂದ ಪ್ರಯಾಣಿಸಿದವರಿಂದ ಈ ಅಂಶ ಹರಡಿತ್ತು. ಈ ಜೀವಕೋಶಗಳ ಸಮೂಹವು ಸಾಮಾನ್ಯವಾಗಿ ಒಂದೇ ಮೂಲದಿಂದ ಹುಟ್ಟಿರುತ್ತವೆ. ಇವುಗಳಲ್ಲಿ ಪ್ರಸರಣ ಸಾಮರ್ಥ್ಯವೂ ಹೆಚ್ಚು ಬೆಳೆದಿರುತ್ತವೆ ಎಂದು ಸರ್ಕಾರದ ವರದಿ ಹೇಳಿತ್ತು.

ಜಾಗತಿಕವಾಗಿ, ಭಾರತದಲ್ಲಿ ಕೂಡ ವೈರಸ್ ಸೋಂಕು ಹರಡುವಿಕೆ ಮತ್ತು ಮರಣಗಳಲ್ಲಿ ಈ ವಂಶವಾಹಿ ರೂಪಾಂತರದ ಪರಿಣಾಮಗಳನ್ನು ಅರಿತುಕೊಳ್ಳಲು ನಿರಂತರವಾಗಿ ಅಧ್ಯಯನಗಳು ನಡೆಯುತ್ತಿವೆ. ಡಿ614ಜಿ ವಂಶವಾಹಿ ರೂಪಾಂತರವು ಈಗ ಮುಖ್ಯವಾಗಿ ಚರ್ಚೆಯಲ್ಲಿದೆ. ಮುಂದೆ ಓದಿ.

ಸ್ಪೈಕ್ ಪ್ರೋಟೀನ್

ಸ್ಪೈಕ್ ಪ್ರೋಟೀನ್

ಮನುಷ್ಯನ ಜೀವಕೋಶಗಳನ್ನು ಆವರಿಸಿಕೊಳ್ಳಲು ಪ್ರಮುಖವಾಗಿ ಬಳಸಿಕೊಳ್ಳುವ ವೈರಸ್‌ನ ಸ್ಪೈಕ್ ಪ್ರೊಟೀನ್‌ನ ಹೊರಭಾಗದಲ್ಲಿ ಈ ರೂಪಾಂತರ ಕಂಡುಬಂದಿದೆ. ಸ್ಪೈಕ್ ಪ್ರೋಟೀನ್ ಸುತ್ತಲೂ ಉಂಟಾಗುವ ಈ ರೂಪಾಂತರವು ವ್ಯಾಕ್ಸಿನ್‌ನಿಂದ ಪ್ರಚೋದನೆಗೊಳ್ಳುವ ಪ್ರತಿರಕ್ಷಣಾ ಸ್ಪಂದನೆಯಿಂದ ವೈರಸ್‌ಗಳು ತಪ್ಪಿಸಿಕೊಳ್ಳಲು ನೆರವಾಗಬಹುದು ಎಂದು ಕೆಲವರು ವಾದಿಸಿದ್ದಾರೆ.

ರೂಪಾಂತರ ಅಪಾಯಕಾರಿಯಲ್ಲ

ರೂಪಾಂತರ ಅಪಾಯಕಾರಿಯಲ್ಲ

ಆದರೆ ಭಾರತ ಮತ್ತು ಜಾಗತಿಕ ವಿಜ್ಞಾನಿಗಳು ಈ ದೃಷ್ಟಿಕೋನವು ಪ್ರಮುಖ ಕಳವಳಕಾರಿ ಅಂಶವೇನಲ್ಲ ಎಂದಿದ್ದಾರೆ. ವೈರಸ್‌ನ ವಿಕಸನದ ಬಗ್ಗೆ ನಿಗಾವಹಿಸಲು ಜಿನೋಮ್‌ಗಳ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸಲು ಇದು ವೈಜ್ಞಾನಿಕ ಸಮುದಾಯ ಮತ್ತು ಸರ್ಕಾರಗಳಿಗೆ ಅಗತ್ಯವಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಆಕ್ಸ್‌ಫರ್ಡ್ ವಿವಿಯ 'ಕೋವಿಶೀಲ್ಡ್' ಲಸಿಕೆಯ ಮಾನವ ಪ್ರಯೋಗ ಶೀಘ್ರದಲ್ಲೇ ಶುರುಆಕ್ಸ್‌ಫರ್ಡ್ ವಿವಿಯ 'ಕೋವಿಶೀಲ್ಡ್' ಲಸಿಕೆಯ ಮಾನವ ಪ್ರಯೋಗ ಶೀಘ್ರದಲ್ಲೇ ಶುರು

ಯಾವಾಗ ಲಸಿಕೆ ಕೆಲಸ ಮಾಡುವುದಿಲ್ಲ?

ಯಾವಾಗ ಲಸಿಕೆ ಕೆಲಸ ಮಾಡುವುದಿಲ್ಲ?

ಸ್ಪೈಕ್ ಪ್ರೊಟೀನ್‌ನಲ್ಲಿನ ಬದಲಾವಣೆಯಿಂದ ರೂಪಾಂತರ ಸಂಭವಿಸಿದರೆ ಅದು ಆತಂಕಕಾರಿ. ಆಗ ಲಸಿಕೆ ಕೆಲಸ ಮಾಡದೆ ಇರಬಹುದು. ಏಕೆಂದರೆ ಹೆಚ್ಚಿನ ಲಸಿಕೆಗಳು ಸ್ಪೈಕ್ ಪ್ರೋಟೀನ್‌ಗೆ ವಿರುದ್ಧವಾಗಿ ಸುರಕ್ಷಿತಾ ಪ್ರತಿರಕ್ಷಣಾ ಸ್ಪಂದನೆಯನ್ನು ಹುಟ್ಟಿಸುವುದರ ಮೇಲೆ ಗಮನ ಹರಿಸುತ್ತವೆ. ಆದರೆ ಇದುವರೆಗೂ ಅಂತಹ ಲಕ್ಷಣಗಳು ಕಂಡುಬಂದಿಲ್ಲ. ಅದರ ಬಗ್ಗೆ ಈಗ ನಾವು ಚಿಂತಿಸಬೇಕಿದೆಯೇ? ಸದ್ಯಕ್ಕೆ ಹಾಗೆನಿಸುತ್ತಿಲ್ಲ. ನಾವು ವೈರಸ್‌ಅನ್ನು ಹಿಂಬಾಲಿಸುವುದರತ್ತಲೇ ಮುಖ್ಯವಾಗಿ ಗಮನ ನೀಡಬೇಕು ಎನ್ನುತ್ತಾರೆ ವೆಲ್ಲೋರ್‌ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಗಗನದೀಪ್ ಕಾಂಗ್.

ಸೋಂಕು ಹರಡಿಸಬಲ್ಲದು

ಸೋಂಕು ಹರಡಿಸಬಲ್ಲದು

ವೈರಸ್ ಕೆಲಸ ಮಾಡಲು ಸ್ಪೈಕ್ ಬಹಳ ಅತ್ಯಗತ್ಯವಾಗಿರುವುದರಿಂದ ಸ್ಪೈಕ್ ಪ್ರೋಟೀನ್‌ನಲ್ಲಿ ಉಂಟಾಗುವ ಬದಲಾವಣೆಗಳನ್ನು ತಾಳಿಕೊಳ್ಳಲು ವೈರಸ್‌ಗೆ ಸಾಧ್ಯವಾಗುವುದು ಕಷ್ಟ. ಆದರೆ ಜನರಿಗೆ ಸೋಂಕು ಹರಡಿಸಬಲ್ಲದು ಎನ್ನುತ್ತಾರೆ ಅವರು.

ಲಸಿಕೆಗಳ ಮೇಲೆ ಪರಿಣಾಮ ಕಡಿಮೆ

ಲಸಿಕೆಗಳ ಮೇಲೆ ಪರಿಣಾಮ ಕಡಿಮೆ

ಡಿ164ಜಿ ರೂಪಾಂತರವು ಸ್ಪೈಕ್ ಪ್ರೋಟೀನ್‌ನ ರೆಸೆಪ್ಟರ್ ಬೈಂಡಿಂಗ್ ಡೊಮೈನ್‌ನಲ್ಲಿ (ಆರ್‌ಬಿಡಿ) ಇರುವುದಿಲ್ಲ. ಹೀಗಾಗಿ ಪ್ರತಿಕಾಯ ನಿಷ್ಪ್ರಯೋಜಕಗೊಳಿಸುವ ಮಹತ್ವದ ಆರ್‌ಬಿಡಿ ಎಪಿಟೋಪ್‌ಗಳನ್ನು ಬದಲಿಸುವ ಶಕ್ತಿ ಕಡಿಮೆ ಇರುತ್ತದೆ. ಇದರಿಂದಾಗಿ ಆರ್‌ಬಿಡಿಯನ್ನು ಮುಖ್ಯವಾಗಿ ಗುರಿಯಾಗಿರಿಸಿ ನೀಡುವ ಲಸಿಕೆಗಳ ದಕ್ಷತೆಯ ಮೇಲೆ ಅವು ದಟ್ಟ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ವೈರಸ್‌ನ ಪ್ರಭಾವವನ್ನು ತಗ್ಗಿಸಲು ನೀಡಲಾಗುವ ಪ್ರತಿ ರಕ್ಷಕ ಔಷಧಗಳನ್ನು ದುರ್ಬಲಗೊಳಿಸುವ ಶಕ್ತಿ ಈ ರೂಪಾಂತರಿ ವೈರಸ್‌ಗಳಲ್ಲಿ ಇದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಯಾಲೆ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಹಾರ್ವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಅಧ್ಯಯನ ವರದಿ ಹೇಳಿದೆ.

ಆದರೆ, ಕೊರೊನಾ ವೈರಸ್ ಲಸಿಗೆ ಅಥವಾ ಚಿಕಿತ್ಸೆಗೆ ಪೂರಕವಾದ ಔಷಧಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ವೈರಸ್‌ನ ರೂಪಾಂತರವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...

English summary
Why Coronavirus Mutations are Unlikely to Have an Impact on Covid-19 Vaccine Efficacy: Here Experts Explain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X