ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕ ಮಕ್ಕಳು ಬೆರಳು ಚೀಪುವುದು ಏಕೆ?

|
Google Oneindia Kannada News

ಬೆರಳು ಚೀಪುವುದು ಚಿಕ್ಕ ಮಕ್ಕಳಲ್ಲಿ ಕಾಣುವ ಸಾಮಾನ್ಯ ಅಭ್ಯಾಸ. ಸಾಮಾನ್ಯವಾಗಿ ಪೋಷಕರು ಈ ಅಭ್ಯಾಸವನ್ನು ಇರಗೊಡರು. ಆದರೆ ಮಕ್ಕಳು ಬೆರಳು ಚೀಪುವುದು ಏಕೆ? ಅದರಿಂದ ಮಕ್ಕಳಿಗೆ ಆಗುವ ಲಾಭ ಅಥವಾ ಹಾನಿ ಏನು?

ತೀರಾ ಎರಡು ಮೂರು ತಿಂಗಳ ಮಕ್ಕಳಿಂದ ಹಿಡಿದು, ಮೂರು ನಾಲ್ಕು ವರ್ಷದ ಮಕ್ಕಳವರೆಗೆ ಬೆರಳು ಚೀಪುವ ಅಭ್ಯಾಸ ಸಾಮಾನ್ಯ. ಕೆಲವು ಮಕ್ಕಳು ಒಂದು ಹಂತದವರೆಗೆ ದೊಡ್ಡವರಾದರೂ ಬೆರಳು ಚೀಪುವ ಅಭ್ಯಾಸ ಬಿಡುವುದಿಲ್ಲ. ಆದರೆ ಹೀಗೆ ಬೆರಳು ಚೀಪುವ ಅಭ್ಯಾಸ ಮಕ್ಕಳಿಗೆ ಏಕೆ ಬರುತ್ತದೆ ಎಂಬುದೇ ಕುತೂಹಲಕರ.

ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್

ಬೆರಳು ಚೀಪುವುದರಿಂದ ಹಲ್ಲು ಓರೆ-ಕೋರೆಯಾಗುತ್ತವೆ. ಮಕ್ಕಳು ಹಠಮಾರಿಗಳಾಗುತ್ತಾರೆ. ಉಗುರು ಹೊಟ್ಟೆ ಸೇರಿ ಸಮಸ್ಯೆ ಆಗುತ್ತದೆ? ಎಂಬಿತ್ಯಾದಿ ಕಾರಣಗಳಿಂದ ಪೋಷಕರು ಮಕ್ಕಳ ಬೆರಳು ಚೀಪುವ ಅಭ್ಯಾಸಕ್ಕೆ ಸಿಟ್ಟಾಗುತ್ತಾರೆ. ಬೆರಳು ಚೀಪುವುದರಿಂದ ಏನೇನು ಆಗಬಹುದು ಎಂಬ ಅರಿವಿದೆಯಾದರೂ, ಬೆರಳು ಏಕೆ ಚೀಪುತ್ತಾರೆ ಎಂದು ತಿಳಿದುಕೊಳ್ಳುವುದಿಲ್ಲ.

ಮಕ್ಕಳು ಬೆರಳು ಚೀಪುವುದಕ್ಕೆ ಹಲವು ಕಾರಣಗಳಿವೆ. ಇಂತಹುದೇ ನಿರ್ದಿಷ್ಟ ಕಾರಣ ಎಂದು ಹೇಳಲು ಬರುವುದಿಲ್ಲ. ಕೆಲವು ತಜ್ಞರು ಹೇಳುವ ಪ್ರಕಾರ, ಮಕ್ಕಳು ಗರ್ಭದಲ್ಲಿರುವಾಗಲೇ ಬೆರಳು ಚೀಪುತ್ತಾರಂತೆ. ಆದರೆ ಕೆಲವರ ಪ್ರಕಾರ ಎದೆಹಾಲು ಕುಡಿಯುವ ಅಭ್ಯಾಸ ಆರಂಭವಾದ ನಂತರ ಮಕ್ಕಳು ಬೆರಳು ಚೀಪುವ ಅಭ್ಯಾಸ ಪ್ರಾರಂಭಿಸುತ್ತಾರೆ ಎನ್ನುತ್ತಾರೆ ಇನ್ನು ಕೆಲವು ತಜ್ಞರು.

ಬೆರಳು ಚೀಪುವುದು ಹಿತಾನುಭವ ನೀಡುತ್ತದೆ

ಬೆರಳು ಚೀಪುವುದು ಹಿತಾನುಭವ ನೀಡುತ್ತದೆ

ಬೆರಳು ಚೀಪುವುದು ಮಕ್ಕಳಿಗೆ ಹಿತಾನುಭವ ನೀಡುತ್ತದೆಯಂತೆ ಹಾಗಾಗಿಯೇ ಮಕ್ಕಳು ಹೀಗೆ ಮಾಡುತ್ತಾರೆ. ಕೆಲವರು ಆ ಅಭ್ಯಾಸದಿಂದ ತಮ್ಮನ್ನು ತಾವು ಹೊರಗೆ ಎಳೆದುಕೊಳ್ಳದೆ, ಹಲವು ವರ್ಷ ಬೆರಳು ಚೀಪುವುದು ಮುಂದುವರೆದು ಬಿಡುತ್ತದೆ.

ಬೆರಳು ಚೀಪುವ ಮಕ್ಕಳು ಅಳುವುದು ಕಡಿಮೆ

ಬೆರಳು ಚೀಪುವ ಮಕ್ಕಳು ಅಳುವುದು ಕಡಿಮೆ

ಬೆರಳು ಚೀಪುವುದರಿಂದ ಮಗುವಿಗೆ ಹೆಚ್ಚಿನ ಸಂತೋಷ ಸಿಗುತ್ತದೆ ಹಾಗೂ ಹೆಚ್ಚಿನ ಗಲಾಟೆ ಮಾಡದೆ ನಿದ್ರೆಗೆ ಜಾರುತ್ತದೆ. ಇದು ತಾಯಿಗೆ ಹೆಚ್ಚಿ ಸಹಕಾರಿಯಾಗುತ್ತದೆ. ಮಗುವಿನ ಗಮನ ಬೆರಳು ಚೀಪುವುದರ ಮೇಲೆ ಇದ್ದರೆ ಹೆಚ್ಚಾಗಿ ಅಳುವುದಿಲ್ಲ. ಇದು ಮಕ್ಕಳ ಬೆಳವಣಿಗೆಗೆ ಸಹಾಯವೂ ಆಗಬಹುದು.

ಸಿಂಹ ಮಾಸದಲ್ಲಿ ಮಗು ಹುಟ್ಟಿದರೆ ತಂದೆ-ಮಕ್ಕಳ ಸಂಬಂಧ ಗಟ್ಟಿಯೋ ಗಟ್ಟಿಸಿಂಹ ಮಾಸದಲ್ಲಿ ಮಗು ಹುಟ್ಟಿದರೆ ತಂದೆ-ಮಕ್ಕಳ ಸಂಬಂಧ ಗಟ್ಟಿಯೋ ಗಟ್ಟಿ

ಹಸಿದ ಮಕ್ಕಳು ಬೆರಳು ಚೀಪುತ್ತಾರೆ

ಹಸಿದ ಮಕ್ಕಳು ಬೆರಳು ಚೀಪುತ್ತಾರೆ

ಚಿಕ್ಕ ಮಕ್ಕಳು ಬೆರಳು ಚೀಪುವುದು ಹಸಿದಿದ್ದಾರೆ ಎಂಬುದಕ್ಕೆ ಸೂಚಕ. ಬೆರಳು ಚೀಪುವುದು ತೀರಾ ದೊಡ್ಡ ಸಮಸ್ಯೆ ಏನೂ ಅಲ್ಲ. ಆದರೆ ದೊಡ್ಡವರಾಗುತ್ತಾ ಬಿಟ್ಟರೆ ಒಳ್ಳೆಯದು ಇಲ್ಲವಾದರೆ ಅದು ಅಸಹಜವಾಗಿ ಕಾಣುತ್ತದೆ.

ಅಭ್ಯಾಸ ಬಿಡಿಸುವುದು ಹೇಗೆ?

ಅಭ್ಯಾಸ ಬಿಡಿಸುವುದು ಹೇಗೆ?

ಬೆರಳು ಚೀಪುವ ಮಕ್ಕಳಿಗೆ ಹೆಚ್ಚು ಹೆಚ್ಚು ನೀರು ಕುಡಿಸಿದರೆ ಈ ಅಭ್ಯಾಸ ತಾವಾಗಿಯೇ ಬಿಡುತ್ತಾರೆ ಎನ್ನುತ್ತಾರೆ ಮಕ್ಕಳ ತಜ್ಞರು. ಬೆರಳು ಚೀಪುವುದರಿಂದ ಮಕ್ಕಳಿಗೆ ಆರೋಗ್ಯ ಹಾನಿ ಆಗುತ್ತದೆ ಎಂಬುದು ತಪ್ಪು ಕಲ್ಪನೆ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಇದನ್ನು ಬಿಟ್ಟು ಬಿಟ್ಟರೆ ಒಳ್ಳೆಯದಷ್ಟೆ.

ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?

English summary
Kids lick their fingers often. This is frequently asked question. Licking finger is not a big problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X