ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್‌ ಗೆದ್ದ ಯುವಕರಿಗೆ ಕೊರೊನಾ ಲಸಿಕೆಯ ಭಯವೇಕೆ?

|
Google Oneindia Kannada News

ವಾಷಿಂಗ್ಟನ್, ಜುಲೈ 05: ಕ್ಯಾನ್ಸರ್‌ನಂತಹ ಭಯಾನಕ ರೋಗವನ್ನೇ ಗೆದ್ದ ಯುವಕರಿಗೆ ಕೊರೊನಾ ಲಸಿಕೆ ಕುರಿತು ಭಯವೇಕೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.

ಅಮೆರಿಕದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಯುವಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಿಷಯ ಬಹಿರಂಗಗೊಂಡಿತ್ತು.

ಕ್ಯಾನ್ಸರ್‌ನಿಂದ ಬದುಕುಳಿದವರು ಕ್ಯಾನ್ಸರ್ ಚಿಕಿತ್ಸೆ ಅಥವಾ ಕ್ಯಾನ್ಸರ್‌ನಿಂದಾಗಿ ತುಂಬಾ ದುರ್ಬಲಗೊಂಡು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ, ಇಂಥವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರು ಬಹುಬೇಗ ಕೊರೊನಾ ಲಸಿಕೆಯನ್ನು ಪಡೆಯುವಂತೆ ಅಮೆರಿಕದ ತಜ್ಞರು ಸಲಹೆ ನೀಡಿದ್ದಾರೆ.

 ಕೊರೊನಾ ಲಸಿಕೆ ಪಡೆಯಲೇಬೇಕು

ಕೊರೊನಾ ಲಸಿಕೆ ಪಡೆಯಲೇಬೇಕು

ಕ್ಯಾನ್ಸರ್‌ನಿಂದ ಬದುಕುಳಿದವರು ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಸ್ವೀಕರಿಸಬೇಕು, ಮತ್ತು ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೆ ಆರೋಗ್ಯ ತಂಡಗಳ ಬಳಿ ಸಲಹೆ ಪಡೆಯಬೇಕೆಂದು ರಾಷ್ಟ್ರೀಯ ಸಂಸ್ಥೆಗಳು ಬಲವಾಗಿ ಶಿಫಾರಸು ಮಾಡಿವೆ.

 ಕ್ಯಾನ್ಸರ್‌ನಿಂದ ಬದುಕುಳಿದವರ ಮೇಲೆ ಅಧ್ಯಯನ

ಕ್ಯಾನ್ಸರ್‌ನಿಂದ ಬದುಕುಳಿದವರ ಮೇಲೆ ಅಧ್ಯಯನ

ಕೆಲವು ಯುವಕರು ಕ್ಯಾನ್ಸರ್‌ನಿಂದ ಬದುಕುಳಿದಿದ್ದಾರೆ ಆದರೆ ಕೊರೊನಾ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು 'ಜೆಎನ್‌ಸಿಐ ಕ್ಯಾನ್ಸರ್ ಸ್ಪೆಕ್ಟ್ರಮ್ 'ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿವರಿಸಲಾಗಿದೆ.

ಈ ಅಧ್ಯಯನವು ಪಶ್ಚಿಮ ಅಮೆರಿಕದ 342 ಯುವಕರನ್ನು ನಿರ್ಣಯಿಸಿದೆ, ಅವರೆಲ್ಲರೂ 15ರಿಂದ 39 ವರ್ಷದೊಳಗಿನವರಾಗಿದ್ದಾರೆ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.ಸಮೀಕ್ಷೆ ನಡೆಸಿದವರಲ್ಲಿ ಹೆಚ್ಚಿನವರು ಲಸಿಕೆ ಪಡೆಯಲು ಉದ್ದೇಶಿಸಿದರೆ ಶೇ.37.1 ರಷ್ಟು ಮಂದಿ ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
 ಕೊರೊನಾ ಸೋಂಕಿನ ಭಯ ಹೆಚ್ಚು

ಕೊರೊನಾ ಸೋಂಕಿನ ಭಯ ಹೆಚ್ಚು

ಜೂನ್ 2021ಕ್ಕೆ ಅಮೆರಿಕದಲ್ಲಿ 33 ಮಿಲಿಯನ್ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕನ್ನು ನಿಯಂತ್ರಿಸಲು ಹಾಗೂ ತಡೆಗಟ್ಟಲು ಲಸಿಕೆಯೇ ಉತ್ತಮ ಮಾರ್ಗವಾಗಿದೆ. ಆದರೂ ಅಮೆರಿಕದಲ್ಲಿ ಶೇ.20-30ರಷ್ಟು ಮಂದಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ.

ಇಂತಹ ಹಿಂಜರಿಯುವಿಕೆಯಿಂದಾಗಿ ಕ್ಯಾನ್ಸರ್‌ನಿಂದ ಗುಣಮುಖರಾದರೂ ಕೊರೊನಾದಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ರಕ್ತದ ಕ್ಯಾನ್ಸರ್ ಮತ್ತು ಲಿಂಫೋಮಾ ಹಾಗೂ ಹಲವು ಚಿಕಿತ್ಸೆಯು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ.
 ದೀರ್ಘಕಾಲೀನ ಪರಿಣಾಮ

ದೀರ್ಘಕಾಲೀನ ಪರಿಣಾಮ

ಹಲವು ವಿಧದ ಕ್ಯಾನ್ಸರ್‌ಗಳಿವೆ, ಇದರಲ್ಲಿ ಹಲವರು ಕ್ಯಾನ್ಸರ್‌ನಿಂದಾಗಿ ದೀರ್ಘಕಾಲೀನ ಪರಿಣಾಮವನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಕ್ಯಾನ್ಸರ್‌ನಿಂದ ಗುಣಮುಖರಾದ ಎಷ್ಟು ದಿನಗಳ ಬಳಿಕ ಲಸಿಕೆ ಪಡೆಯಬೇಕು ಎನ್ನುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

ಪ್ರಸ್ತುತ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಹೇಳಿರುವ ಮಾಹಿತಿ ಪ್ರಕಾರ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳನ್ನು ಹೊಂದಿರುವವರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಕ್ಯಾನ್ಸರ್‌ನಿಂದ ಬದುಕುಳಿದವರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
 ಕ್ಯಾನ್ಸರ್‌ ರೋಗಿಗಳಲ್ಲಿ ಕಾಡುತ್ತಿರುವ ಪ್ರಶ್ನೆ

ಕ್ಯಾನ್ಸರ್‌ ರೋಗಿಗಳಲ್ಲಿ ಕಾಡುತ್ತಿರುವ ಪ್ರಶ್ನೆ

ಕೊರೊನಾ ಸೋಂಕು ತಗುಲುದಂತೆ ಮನೆಯಲ್ಲಿಯೇ ಇರುತ್ತೇವೆ, ಈಗಾಗಲೇ ಇಂತಹ ಮಾರಣಾಂತಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದೇವೆ, ಈಗ ಕೊರೊನಾ ಲಸಿಕೆ ಪಡೆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ, ಹಾಗೆಯೇ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದು ಪ್ರಶ್ನೆಯಾಗಿದೆ.

ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾನ್ಟ್‌, ಕಾರ್ ಟಿ ಸೆಲ್ ಥೆರಪಿ ಸೇರಿದಂತೆ ಹಲವು ಚಿಕಿತ್ಸೆಯು ರೋಗಿಯ ದೇಹವನ್ನು ತುಂಬಾ ದುರ್ಬಲಗೊಳಿಸುತ್ತದೆ. ಇಷ್ಟೇ ಅಲ್ಲದೆ ಕೀಮೋ ಥೆರಪಿ, ರೇಡಿಯೇಷನ್ ಥೆರಪಿ, ಡ್ರಗ್ ಥೆರಪಿ ಕೂಡ ಮನುಷ್ಯನ ದೇಹವನ್ನು ನಿತ್ರಾಣವನ್ನಾಗಿಸುತ್ತದೆ.

English summary
Some adolescent and young adult cancer survivors are hesitant to get vaccinated against COVID-19, according to a new study published in JNCI Cancer SpectrumTrusted Source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X