ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿತ್ತಳೆ ನೀರಿನಲ್ಲಿ ತೇಲುತ್ತದೆ ಆದರೆ ಸಿಪ್ಪೆ ತೆಗೆದಾಗ ಮುಳುಗುತ್ತದೆ, ಏಕೆ?

|
Google Oneindia Kannada News

ನೀರಿನಲ್ಲಿ ಯಾವುದು ತೇಲುತ್ತದೆ? ಮತ್ತು ಯಾವುದು ಮುಳುಗುತ್ತದೆ? ಜನರು ಇದರ ಬಗ್ಗೆ ಉತ್ತರವನ್ನು ನೀಡಿದರೂ ಕೆಲವೊಮ್ಮೆ ಕಾರಣವನ್ನು ಹೇಳಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ನೀರಿನಲ್ಲಿ ಮುಳುಗುವ ವಸ್ತುವು ಅದರ ತೂಕಕ್ಕೆ ಸಂಬಂಧಿಸಿದೆ. ಜೊತೆಗೆ ಅದರ ಸಾಂದ್ರತೆಗೆ ಸಂಬಂಧಿಸಿದೆ. ಆದ್ದರಿಂದ ಒಂದು ಟನ್ ಕಬ್ಬಿಣದ ಹಡಗು ನೀರಿನಲ್ಲಿ ತೇಲುತ್ತದೆ. ಆದರೆ ಸಣ್ಣ ಬೆಣಚುಕಲ್ಲು ನೀರಿನಲ್ಲಿ ಮುಳುಗುತ್ತದೆ. ನೀರಿನಲ್ಲಿ ಮುಳುಗುವ ಮತ್ತು ತೇಲುವ ಅಂತಹ ಆಸಕ್ತಿದಾಯಕ ವಿಷಯವೊಂದು ಇಲ್ಲಿದೆ. ಸಾಮಾನ್ಯವಾಗಿ ಇದರ ಬಗ್ಗೆ ನೀವು ಅಷ್ಟೇನೂ ಗಮನಿಸಿರುವುದಿಲ್ಲ.

ಕಿತ್ತಳೆ ಹಣ್ಣು: ಸ್ವಲ್ಪ ಹುಳಿ ಎನಿಸಿದರೂ ಸಿಹಿಯಾದ ಹಣ್ಣು ಕಿತ್ತಳೆ. ಹೆಸ್ಪೆರೆಡಿಯಮ್ ಎಂಬ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದ ಈ ಕಿತ್ತಳೆಗೆ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವ ಶಕ್ತಿಯಿದೆ. ಇತ್ತ ವೈದ್ಯರು ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ. ಇನ್ನಷ್ಟು ಆಸಕ್ತಿಕರ ವಿಷಯಗಳನ್ನು ಮುಂದೆ ಓದಿ...

 ಮಾರುಕಟ್ಟೆಯಲ್ಲಿ ಯಾವಾಗ ಲಭ್ಯ

ಮಾರುಕಟ್ಟೆಯಲ್ಲಿ ಯಾವಾಗ ಲಭ್ಯ

ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಜನವರಿ, ಮಾರ್ಚ್ ತಿಂಗಳವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿತ್ತಳೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈ ಕಿತ್ತಳೆಯ ಬಗ್ಗೆ ಆಸಕ್ತಿದಾಯಕ ವಿಷಯವೊಂದು ಇದೆ. ಇದು ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಎನ್ನುವ ಪ್ರಶ್ನೆ ಮಾಡಿದರೆ ಉತ್ತರ ಕೊಂಚ ಕಷ್ಟವಾಗುತ್ತದೆ. ಯಾಕೆಂದರೆ ಸಿಪ್ಪೆ ತೆಗೆದ ಕಿತ್ತಳೆ ಹಣ್ಣು ನೀರಿನಲ್ಲಿ ಮುಳುಗುತ್ತದೆ. ಆದರೆ ಸಿಪ್ಪೆ ಇರುವ ಕಿತ್ತಳೆ ಹಣ್ಣು ನೀರಿನಲ್ಲಿ ತೇಲುತ್ತದೆ.

ಕಿತ್ತಳೆ ನೀರಿನಲ್ಲಿ ಮುಳುಗುತ್ತಾ? ತೇಲುತ್ತಾ?

ಕಿತ್ತಳೆ ನೀರಿನಲ್ಲಿ ಮುಳುಗುತ್ತಾ? ತೇಲುತ್ತಾ?

ಆಸಕ್ತಿದಾಯಕ ವಿಷಯವೊಂದು ಕಿತ್ತಳೆಯಲ್ಲಿದೆ. ನೀವು ಗಮನಿಸಿರಬಹುದು. ಕಿತ್ತಳೆ ಹಣ್ಣನ್ನು ನೀರಿನಲ್ಲಿ ಹಾಕಿದರೆ ಅದು ಸುಲಭವಾಗಿ ತೇಲುತ್ತದೆ. ಆದರೆ ಅದರ ಸಿಪ್ಪೆಯನ್ನು ತೆಗೆದರೆ ಅದು ನೀರಿನಲ್ಲಿ ಮುಳುಗುತ್ತದೆ. ಸಿಪ್ಪೆಯಿಲ್ಲದ ಕಿತ್ತಳೆಯ ಮೊಗ್ಗು ಕೂಡ ನೀರಿನಲ್ಲಿ ತೇಲಲು ಸಾಧ್ಯವಾಗುವುದಿಲ್ಲ, ಆದರೆ ಸಿಪ್ಪೆಯೊಂದಿಗೆ ಇದ್ದರೆ ಇಡೀ ಕಿತ್ತಳೆ ನೀರಿನಲ್ಲಿ ತೇಲುತ್ತದೆ. ಸಾಮಾನ್ಯವಾಗಿ ಕಿತ್ತಳೆಯ ಸಿಪ್ಪೆ ತೆಗೆದರೆ ಅದರ ತೂಕ ಕಡಿಮೆಯಾಗಿ ಕಿತ್ತಳೆ ನೀರಿನ ಮೇಲೆ ತೇಲುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಅದು ಸಂಭವಿಸುವುದಿಲ್ಲ. ಬದಲಿಗೆ ಸಿಪ್ಪೆ ತೆಗೆದ ಬಳಿಕವೇ ಕಿತ್ತಳೆ ತೇಲುವುದಿಲ್ಲ.

ಕಿತ್ತಳೆ ಹಣ್ಣಾಗಲು ಇದೇ ಕಾರಣ

ಕಿತ್ತಳೆ ಹಣ್ಣಾಗಲು ಇದೇ ಕಾರಣ

ವಾಸ್ತವವಾಗಿ ಕಿತ್ತಾಳೆ ಸಿಪ್ಪೆಯ ತೂಕವು ಅದರ ಸಾಂದ್ರತೆಗಿಂತ ಕಡಿಮೆಯಿರುತ್ತದೆ. ಕಿತ್ತಳೆಯ ಸಿಪ್ಪೆಯ ಒಳಗೆ ಕಿತ್ತಳೆ ಬಣ್ಣದಲ್ಲಿ ರಂಧ್ರಗಳಿವೆ. ಈ ರಂಧ್ರದಲ್ಲಿ ಅದಾಗಲೇ ರಸ ತುಂಬಿರುತ್ತದೆ. ಇದು ನೀರಿನ ಮೇಲೆ ತೇಲುವಂತೆ ಮಾಡುತ್ತದೆ. ಹೀಗಾಗಿ ಸಿಪ್ಪೆ ಸುಲಿದ ಕಿತ್ತಳೆ ನೀರಿನಲ್ಲಿ ಹಾಕಿದ ತಕ್ಷಣ ಮುಳುಗುತ್ತದೆ. ಸಿಪ್ಪೆ ಇರುವ ಕಿತ್ತಳೆ ಹಣ್ಣು ತೇಲುತ್ತದೆ. ಮತ್ತೊಂದು ವಿಚಾರ ಅಂದರೆ ಕಿತ್ತಳೆ ಸಿಪ್ಪಿಯಿಂದಲೇ ಹಣ್ಣಾಗಿದೆ.

Recommended Video

Puneeth Rajkumar ಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಾ? CM ಬೊಮ್ಮಾಯಿ ಹೇಳಿದ್ದೇನು | Oneindia Kannada
ಆರೋಗ್ಯಕರ ಪ್ರಯೋಜನ

ಆರೋಗ್ಯಕರ ಪ್ರಯೋಜನ

ಕಿತ್ತಳೆ ಹಣ್ಣಿನಲ್ಲಿ ಥಯಾಮಿನ್, ರಿಬೋಫ್ಲವಿನ್, ನಿಯಾಸಿನ್, ವಿಟಮಿನ್ ಬಿ -6, ಫೊಲೇಟ್, ಪ್ಯಾಂಟೊಥೆನಿಕ್ ಆಮ್ಲ, ರಂಜಕ, ಮೆಗ್ನೀಶಿಯಮ್, ಮ್ಯಾಂಗನೀಸ್, ಸೆಲೆನಿಯಮ್ ಮತ್ತು ತಾಮ್ರ ಇರುತ್ತದೆ. ಅದರಲ್ಲೂ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಕಿತ್ತಳೆ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಕಿತ್ತಳೆ ಹಣ್ಣುಗಳಲ್ಲಿ ಸೇರಿರುವ ನೀರಿನಲ್ಲಿ ಕರಗುವ ವಿಟಮಿನ್ ಅಂಶ ಮನುಷ್ಯನ ದೇಹದ ಬೊಜ್ಜಿನ ಸಮಸ್ಯೆಯ ನಿವಾರಣೆಯಲ್ಲಿ ಮತ್ತು ನಿರ್ವಹಣೆಯಲ್ಲಿ ತನ್ನ ಕಾರ್ಯ ಸಾಧಿಸುತ್ತದೆ. ಇಷ್ಟೇ ಅಲ್ಲದೆ, ಇದರಲ್ಲಿರುವ ಇತರೆ ಪೌಷ್ಟಿಕ ಸತ್ವಗಳು ದೇಹದ ಯಾವುದೇ ಭಾಗದ ನೋವಿನ ವಾತಾವರಣವನ್ನು ನಿವಾರಣೆ ಮಾಡಿ ದೇಹದ ರಕ್ತದಲ್ಲಿ ಗ್ಲೈಸೆಮಿಕ್ ಅಂಶವನ್ನು ಉತ್ತೇಜಿಸಿ ಕೊಬ್ಬಿನ ಅಂಶ ಕರಗುವ ಪ್ರಕ್ರಿಯೆಯನ್ನು ದೇಹದಲ್ಲಿ ಚುರುಕುಗೊಳಿಸುತ್ತದೆ. ಈ ಎಲ್ಲಾ ಗುಣ ಲಕ್ಷಣ ಗಳನ್ನು ಹೊಂದಿರುವ ಕಿತ್ತಳೆ ಹಣ್ಣಿನ ಸೇವನೆ ನಿಮ್ಮ ದೇಹದ ಆರೋಗ್ಯ ವೃದ್ಧಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

English summary
What will float in the water and which will sink, even if people give an answer about it, they are not able to tell the reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X