• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿಚಿತ್ರ: ಆರ್ಯ ಸಮಾಜ ಮುಖಂಡ, ಹೋರಾಟಗಾರ ಸ್ವಾಮಿ ಅಗ್ನಿವೇಶ್

|

ಆರ್ಯ ಸಮಾಜದ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ, ಕಾರ್ಮಿಕ ಹಕ್ಕುಗಳ ಹೋರಾಟಗಾರ, ಭ್ರಷ್ಟಾಚಾರ ವಿರುದ್ಧ ಹೋರಾಟಗಾರ, ರಾಜ್ಯಸಭೆಯ ಸದಸ್ಯ, ಹರ್ಯಾಣದಲ್ಲಿ ಶಾಸಕರಾಗಿದ್ದ ಸ್ವಾಮಿ ಅಗ್ನಿವೇಶ್(80) ಇಂದು ನಿಧನರಾಗಿದ್ದಾರೆ. ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬಿಲಿಯರಿ ಸೈನ್ಸಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರದಿಂದಲೂ ಅವರು ಬಹುಅಂಗಾಂಗ ವೈಫಲ್ಯದ ಕಾರಣ ವೆಂಟಿಲೇಟರ್ ಸಪೋರ್ಟ್‌ನಲ್ಲಿದ್ದರು.

ಸದಾ ಹಿಂದು ವಿರೋಧಿ ಹೇಳಿಕೆ ನೀಡುತ್ತಿದ್ದ ಕಾರಣಕ್ಕೆ ಅಗ್ನಿವೇಶ್ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಲ್ಲಿ ಮುನಿಸಿದೆ. ಪುರಿ ಜಗನ್ನಾಥ ಮಂದಿರ, ಅಮರನಾಥ ಯಾತ್ರೆ, ಶಬರಿಮಲೆ ದೇಗುಲದ ಪ್ರವೇಶ ನಿರ್ಬಂಧ ಬಗ್ಗೆ ಅಗ್ನಿವೇಶ್ ನೀಡಿದ ಹೇಳಿಕೆಗಳು ಭಾರಿ ವಿವಾದ ಎಬ್ಬಿಸಿದ್ದವು. 'ಹಿಂದುಗಳು ಶಿವನನ್ನು ಕೇವಲ ಒಂದು ಮಂಜುಗಡ್ಡೆಯ ತುಂಡು ಎಂದುಕೊಂಡಿದ್ದಾರೆ' ಎಂದು ಅಮರನಾಥ ಯಾತ್ರೆಯ ಬಗ್ಗೆ ಹೇಳಿದ್ದರು.. ಹಿಂದುಗಳ ಭಾವನೆಗೆ ನೋವುಂಟು ಮಾಡುವಂಥ ಹೇಳಿಕೆಯನ್ನು ನೀಡದಂತೆ ಅಗ್ನಿವೇಶ್ ಗೆ ಸುಪ್ರೀಂ ಕೋರ್ಟ್ ಸಹ ಒಮ್ಮೆ ತಾಕಿತು ಹಾಕಿತ್ತು.

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಭಾರತೀಯ ಜನತಾ ಪಾರ್ಟಿಯ ಯುವ ಘಟಕದ ಕಾರ್ಯಕರ್ತರು ಒಮ್ಮೆ ಹಲ್ಲೆ ಮಾಡಿದ್ದರು. ಶಬರಿಮಲೆ ವಿವಾದದ ಉಪಯೋಗ ಪಡೆದು ಬಿಜೆಪಿ ಮತ್ತು ಆರೆಸ್ಸೆಸ್ ಒಂದಾಗಿ ಕೇರಳದ ಶಾಂತಿ-ಸುವ್ಯವಸ್ಥೆ ಕದಡುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಳಂನ ಅಗ್ನಿವೇಶ್

ಆಂಧ್ರಪ್ರದೇಶದ ಶ್ರೀಕಾಕುಳಂನ ಅಗ್ನಿವೇಶ್

ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ1939ರ ಸೆ.21 ರಂದು ಸಾಂಪ್ರದಾಯಿಕ ಹಿಂದು ಕುಟುಂಬದಲ್ಲಿ ಜನಿಸಿದ ವೇಪಾ ಶ್ಯಾಮ್ ರಾವ್ ಮುಂದೆ ಅಗ್ನಿವೇಶ್ ಎಂಬ ಹೆಸರು ಪಡೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅಗ್ನಿವೇಶ್ ತಮ್ಮ ತಾತ(ತಾಯಿಯ ತಂದೆ)ನ ನೆರವಿನಿಂದ ಛತ್ತೀಸ್ ಗಢದಲ್ಲಿ ಓದಿ, ಕಾನೂನು ಮತ್ತು ವಾಣಿಜ್ಯ ಪದವಿ ಪಡೆದರು. 'ಆರ್ಯ ಸಮಾಜ'ಪದ್ಧತಿಯಲ್ಲಿ ಸಾಕಷ್ಟು ಆಸಕ್ತಿ ಇದ್ದ ಅವರು ಅವೇ ಸಿದ್ಧಾಂತಗಳನ್ನು ಪಾಲಿಸುವುದಕ್ಕೆ ಆರಂಭಿಸಿದರು. ಕೋಲ್ಕತ್ತಾದಲ್ಲಿ ಉಪನ್ಯಾಸಕರಾಗಿದ್ದರು.

ಸ್ವಾಮಿ ದಯಾನಂದ ಸರಸ್ವತಿ ಸಿದ್ಧಾಂತ ಪಾಲನೆ

ಸ್ವಾಮಿ ದಯಾನಂದ ಸರಸ್ವತಿ ಸಿದ್ಧಾಂತ ಪಾಲನೆ

ಸ್ವಾಮಿ ದಯಾನಂದ ಸರಸ್ವತಿ ಸಿದ್ಧಾಂತ ಪಾಲನೆ ಮಾಡಿಕೊಂಡು 1970 ರಲ್ಲಿ ಆರ್ಯ ಸಮಾಜದ ತತ್ವಗಳ ಆಧಾರದ ಮೇಲೆ 'ಆರ್ಯ ಸಭಾ' ಎಂಬ ರಾಜಕೀಯ ಪಕ್ಷವೊಂದನ್ನು ಕಟ್ಟಿದರು ಅಗ್ನಿವೇಶ್. 1977 ರಲ್ಲಿ ಅವರು ಹರ್ಯಾಣ ವಿಧಾನಸಭೆಯ ಸದ್ಯರಾಗಿ, ಶಿಕ್ಷಣ ಸಚಿವ(1979)ರಾಗಿಯೂ ಕೆಲಸ ಮಾಡಿದರು. ಸಚಿವರಾಗಿರುವಾಗಲೇ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಸ್ಥಾಪಿಸಿದರು. ಭಾರತದಲ್ಲಿ ಜೀತ ಕಾರ್ಮಿಕರ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. 2011 ರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲೂ ಅವರು ಭಾಗವಹಿಸಿದ್ದರು. ಅಣ್ಣಾ ಹಜಾರೆ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು. ನಂತರ ಕೇಜ್ರಿವಾಲ್ ಅವರು ಅಣ್ಣಾ ಹಜಾರೆಯನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆದರು ಎಂದು ಆರೋಪಿಸಿದರು.

ಆರ್ಯ ಸಮಾಜದಿಂದಲೂ ಹೊರಕ್ಕೆ

ಆರ್ಯ ಸಮಾಜದಿಂದಲೂ ಹೊರಕ್ಕೆ

ಹೆಣ್ಣು ಭ್ರೂಣ ಹತ್ಯೆಗೆ ವಿರೋಧ, ಮಾನವ ಹಕ್ಕು ರಕ್ಷಣೆ, ವಲಸಿಗರ ಸಮಸ್ಯೆಗೆ ಪರಿಹಾರ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡವರು ಅಗ್ನಿವೇಶ್. 1970 ಮಾರ್ಚ್ 25 ರಂದು ಅಗ್ನಿವೇಶ್ ಸನ್ಯಾಸ ಸ್ವೀಕರಿಸಿದರು. ಆಗಸ್ಟ್ 2008 ರಲ್ಲಿ 19 ಕ್ಕೂ ಹೆಚ್ಚು ಆರ್ಯ ಸಮಾಜ ಪ್ರತಿನಿಧಿ ಸಭಾಗಳು ಅವರನ್ನು ವಿರೋಧಿಸಿದ ಕಾರಣ ಅವರನ್ನು ಆರ್ಯ ಸಮಾಜ ಸಂಘದಿಂದ ಹೊರಹಾಕಲಾಯಿತು. ಅತ್ತ ಸಚಿವಾಲಯವನ್ನು ತೊರೆದ ನಂತರ, ಅವರನ್ನು ಎರಡು ಬಾರಿ ಬಂಧಿಸಲಾಯಿತು, ಅವರು 14 ತಿಂಗಳುಗಳ ಕಾಲ ಜೈಲು ಶಿಕ್ಷೆಗೆ ಒಳಗಾದರು; ಅವರು ಮೋಸ ಮತ್ತು ಕೊಲೆಯ ಆರೋಪಕ್ಕೆ ಒಳಗಾದರು, ನಂತರ ಅವರನ್ನು ಆರೋಪಗಳಿಂದ ವಿಮುಕ್ತಿಗೊಳಿಸಲಾಯಿತು.

  Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada
  ವಿವಾದಿತ ಹೇಳಿಕೆಗಳು

  ವಿವಾದಿತ ಹೇಳಿಕೆಗಳು

  ಭಾರತದಲ್ಲಿರುವ ಮುಸ್ಲಿಮರು 'ವಂದೇ ಮಾತರಂ' ಹಾಡುವುದನ್ನು ನಿಷೇಧಿಸಬೇಕು ಎಂಬ ಜಮೈತ್ ಉಲೆಮಾ ಇ ಹಿಂದ್ ಸಂಘಟನೆಯ ಬೇಡಿಕೆಯನ್ನು ಅವರು ಬೆಂಬಲಿಸಿದ್ದರು! 'ಖುರಾನ್ ಮತ್ತು ಇಸ್ಲಾಮ್ ಅನ್ನು ಭಯೋತ್ಪಾದನೆಯ ಹೆಸರಿನಲ್ಲಿ ತೇಜೋವಧೆ ಮಾಡುವುದು ಸರಿಯಲ್ಲ. ಇಸ್ಲಾಮ್ ಎಂದರೆ ಶಾಂತಿ, ಭ್ರಾತೃತ್ವವನ್ನು ಬಯಸುವ ಮತ. ಮುಸ್ಲಿಮರನ್ನು ಭಯೋತ್ಪಾದಕರು ಎನ್ನುವುದಕ್ಕಿಂತ ದೊಡ್ಡ ಸುಳ್ಳು ಬೇರೆ ಇಲ್ಲ' ಎಂಬ ಹೇಳಿಕೆಯನ್ನು ಅವರು ನೀಡಿದ್ದರು. ಇದು ಬಲಪಂಥೀಯರ ಕೆಂಗಣ್ಣಿಗೆ ಕಾರಣವಾಗಿತ್ತು.

  ಪುಣೆ ಜಗನ್ನಾಥ ದೇವಾಲಯ ಪ್ರವೇಶವನ್ನು ಹಿಂದುಯೇತರರಿಗೂ ಕಲ್ಪಿಸಬೇಕು ಎಂದಿದ್ದರು. ಭಗವಾನ್ ಶಿವನನ್ನು ಹೋಲುತ್ತದೆ ಎಂದು ನಂಬುವ (ಐಸ್ ಸ್ಲಾಗ್ಮ್ಯಾಮಿಟ್) ಕೇವಲ ಹಿಮದ ತುಂಡು ಎಂದಿದ್ದರು. ಅಗ್ನಿವೇಶ್ ಹೇಳಿಕೆ ವಿರುದ್ಧ ಹಿಂದೂಪರ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು.

  ಆರ್ಯ ಸಮಾಜ ಮುಖಂಡ, ರಾಜಕಾರಣಿ ಸ್ವಾಮಿ ಅಗ್ನಿವೇಶ್

  ಪ್ರಶಸ್ತಿ, ಕೃತಿಗಳು

  English summary
  Swami Agnivesh (1939-2020) was Arya Samaj leader and politician,controversial leader, who was labelled as anti hindu by right group.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X