ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಪ್ರಧಾನಿ ಹುದ್ದೆ: ರೇಸ್‌ನ ಮುಂಚೂಣಿಯಲ್ಲಿರುವ ರಿಷಿ ಸುನಕ್ ಯಾರು?

|
Google Oneindia Kannada News

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಎಲ್ಲಾ ಸಾಧ್ಯತೆಗಳಿದ್ದು, ಒಂದು ವೇಳೆ ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಬ್ರಿಟನ್‌ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಪಟ್ಟವನ್ನು ಅಲಂಕರಿಸುವ ಸಾಧ್ಯತೆಯಿದೆ.

ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ಮಾಡಿರುವ ವಿವಾದದಲ್ಲಿ ಸಿಲುಕಿರುವ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಸ್ವಪಕ್ಷದಲ್ಲೇ ರಾಜೀನಾಮೆ ನೀಡುವಂತೆ ಒತ್ತಡ ನಿರ್ಮಾಣವಾಗಿದೆ.

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್‌ನ ಮುಂದಿನ ಪ್ರಧಾನಿ?ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್‌ನ ಮುಂದಿನ ಪ್ರಧಾನಿ?

2020ರ ಮೇ ತಿಂಗಳಿನಲ್ಲಿ ಇಂತಹ ವಿವಾದಕ್ಕೆ ಸಿಲುಕಿದ್ದ ಪ್ರಧಾನಿ ಬಳಿಕವೂ 2021ರಲ್ಲಿ ಬ್ರಿಟನ್ ರಾಜಕುಮಾರ ಫಿಲಿಪ್ (ರಾಣಿ ಎಲಿಜಬೆತ್‌ರ ಪತಿ)ರ ಅಂತ್ಯಕ್ರಿಯೆಗೂ ಮುನ್ನ ಮದ್ಯದ ಪಾರ್ಟಿ ಮಾಡಿರುವುದಾಗಿ ಆರೋಪ ಈಗ ಕೇಳಿ ಬಂದಿದೆ.

Who is Rishi Sunak, Indian-Origin Chancellor To Be Next PM Of Britain?

ಸದ್ಯ ಬೋರಿಸ್ ಜಾನ್ಸನ್‌ಗೆ ಅಧಿಕಾರದಿಂದ ಕೆಳಗೆ ಇಳಿಯುವಂತೆ ಹಲವು ಕಡೆಗಳಿಂದ ಒತ್ತಡ ಇರುವಾಗ ಭಾರತೀಯ ರಿಷಿ ಸುನಕ್ ಮುಂದಿನ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮುಂದಿನ ಪ್ರಧಾನಿಯಾಗುವವರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ರಿಷಿಯವರ ಹೆಸರು ಇದೆ ಎಂದು ವರದಿಯಾಗಿದೆ.

ಬ್ರಿಟನ್‌ನಲ್ಲಿ ರಿಷಿ ಹವಾ: 2015ರಲ್ಲಿ ರಿಷಿ ಬ್ರಿಟನ್ ಸಂಸತ್ತನ್ನು ಪ್ರವೇಶಿಸಿದರು. 2020ರಲ್ಲಿ ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವ ಹುದ್ದೆಗೇರಿದರು.

ಈ ಹುದ್ದೆಗೇರಿದ ಭಾರತ ಮೂಲದ ಪ್ರಥಮ ವ್ಯಕ್ತಿ ರಿಷಿ ಸುನಕ್ ಆಗಿದ್ದಾರೆ. ಕೋವಿಡ್ 19 ಸಾಂಕ್ರಾಮಿಕದಿಂದ ಬ್ರಿಟನ್ ತತ್ತರಿಸುತ್ತಿದ್ದ ವೇಳೆ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ರಿಷಿ ಯಶಸ್ವಿಯಾಗಿದ್ದರು. ಕೊರೊನಾ ವೇಳೆ ನಷ್ಟದಿಂದ ತತ್ತರಿಸಿದ್ದ ಉದ್ಯಮಗಳಿಗೆ ಅನುಕೂಲಕರವಾದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಈ ಎಲ್ಲಾ ಕೆಲಸಗಳು ಇದೀಗ ರಿಷಿ ಅವರನ್ನ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಿಸಿದೆ.

2015ರಲ್ಲಿ ಬ್ರಿಟನ್‌ ಸಂಸತ್‌ಗೆ ಆಯ್ಕೆಯಾಗಿದ್ದ ರಿಷಿ ಈ ಹಿಂದೆ ಖಜಾನೆ ಇಲಾಖೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಇದು ಹಣಕಾಸು ಸಚಿವರ ನಂತರದ ಪ್ರಮುಖ ಸ್ಥಾನವಾಗಿದೆ.

ಶಿಕ್ಷಣ: ಪ್ರತಿಷ್ಠಿತ ವಿಂಚೆಸ್ಟರ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್‌, ಆಕ್ಸ್‌ಫರ್ಡ್‌ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್‌ ವಿವಿಯಿಂದ ಎಂಬಿಎ ಪದವಿಯನ್ನೂ ಅವರು ಪಡೆದುಕೊಂಡಿದ್ದಾರೆ.

ಸುನಕ್‌ ತಂದೆ ವೈದ್ಯರಾಗಿದ್ದು, ತಾಯಿ ರಾಸಾಯನಿಕ ವಸ್ತುಗಳ ಅಂಗಡಿ ನಡೆಸುತ್ತಿದ್ದರು. ರಾಜಕೀಯಕ್ಕೆ ಕಾಲಿಡುವ ಮೊದಲು ಹೂಡಿಕೆ ಬ್ಯಾಂಕ್‌ ಗೋಲ್ಡ್‌ಮನ್‌ ಸ್ಯಾಶ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂತರ ಹೂಡಿಕೆ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಕೆಲವೇ ತಿಂಗಳ ಹಿಂದೆ ಬ್ರಿಟನ್‌ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಅವರು ಪುನರಾಯ್ಕೆಯಾಗಿದ್ದರು

ಇನ್ಫೋಸಿಸ್ ನಾರಾಣಮೂರ್ತಿ ಅಳಿಯ ರಿಷಿ: 41 ವರ್ಷದ ರಿಷಿ ಸುನಾಕ್ ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅಳಿಯನಾಗಿದ್ದಾರೆ. ನಾರಾಯಣ ಮೂರ್ತಿ ಮಗಳು ಅಕ್ಷತಾರನ್ನು ವಿವಾಹವಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17 ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ ಬೋರಿಸ್ ಜಾನ್ಸನ್​ ಜೊತೆ 30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪವಿದೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.

ಪಾರ್ಟಿ ಗೇಟ್​ ವಿವಾದದ ಬಗ್ಗೆ ಬೋರಿಸ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.

ಹಣಕಾಸು ಸಚಿವರಾದಾಗಿನಿಂದ ರಿಷಿ ಪ್ರಧಾನಿ ಹುದ್ದೆ ಬಗ್ಗೆ ತೀವ್ರ ಉತ್ಸುಕರಾಗಿದ್ದಾರೆ. ಹಾಗಾಗಿ ಪಾರ್ಟಿಗೇಟ್ ವಿವಾದದಿಂದ ದೂರ ಇರಬೇಕೆಂಬ ಉದ್ದೇಶದಿಂದ ಹೌಸ್ ಗೆ ಹಾಜರಾಗಲಿಲ್ಲ ಎಂದು ಬೋರಿಸ್ ಆಪ್ತರು ಹೇಳುತ್ತಾರೆ. ಈ ಹೇಳಿಕೆಯನ್ನು ತಳ್ಳಿ ಹಾಕಿರುವ ರಿಷಿ, ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿರುವ ಕಾರಣ ಹೌಸ್‌ಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ರಿಷಿ ಸುನಕ್ ಒಂದುವೇಳೆ ಬ್ರಿಟನ್‍ನ ಪ್ರಧಾನಿಯಾದರೆ ಭಾರತೀಯ ಮೂಲದ ಮೊದಲ ಬ್ರಿಟನ್ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಪಡೆಯಲಿದ್ದಾರೆ.

ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಮುಂದಿದ್ದಾರೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಇತಿಹಾಸ ಸೃಷ್ಟಿಸಲಿದ್ದಾರೆಯೇ? ಈ ಪ್ರಶ್ನೆಗಳು ಬ್ರಿಟನ್ ನಲ್ಲಿ ಹರಿದಾಡುತ್ತಿವೆ.

Recommended Video

Team India ಸರಣಿ ಸೋಲಿನ ಬಳಿಕ Points Tableನಲ್ಲಿ ಯಾವ ಸ್ಥಾನದಲ್ಲಿದೆ | Oneindia Kannada

ಬೋರಿಸ್ ಹೌಸ್ ಆಫ್ ಕಾಮನ್ಸ್ ನಲ್ಲಿ ಕ್ಷಮೆಯಾಚಿಸುವ ಸಮಯದಲ್ಲಿ ರಿಷಿ ಹೌಸ್ ನಲ್ಲಿ ಇಲ್ಲದಿರುವುದು ಈ ಪ್ರಚಾರಕ್ಕೆ ಮತ್ತಷ್ಟು ಇಂಬು ನೀಡುತ್ತದೆ.

English summary
Rishi Sunak Biography: Indian-origin Chancellor of the Exchequer Rishi Sunak has high chances of becoming Britain's next Prime Minister. Know more about him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X