ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನಗೆ ಸಹಾಯ ಮಾಡಿದ್ದವನನ್ನೇ ಕೊಂದ ಅಮೆರಿಕ: ಯಾರಿದು ಸೋಲೆಮನಿ?

|
Google Oneindia Kannada News

ಇರಾಕ್‌ನ ವಿಮಾನ ನಿಲ್ದಾಣದಲ್ಲಿದ್ದ ಇರಾನ್ ಸೇನಾಧಿಕಾರಿ ಖಾಸಿಂ ಸೋಲೆಮನಿ ಅವರನ್ನು ಅಮೆರಿಕದ ಪಡೆಗಳು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿರುವ ಘಟನೆ ಉಭಯ ದೇಶಗಳ ನಡುವಿನ ಸಂಘರ್ಷವನ್ನು ಉದ್ವಿಗ್ನಗೊಳಿಸುವ ಸೂಚನೆ ನೀಡಿದೆ.

ಅಮೆರಿಕ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದರೆ, ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇರಾಕ್‌ನಲ್ಲಿದ್ದ ತನ್ನ ಪ್ರಜೆಗಳು ಮತ್ತು ರಾಜತಾಂತ್ರಿಕರ ಮೇಲಿನ ದಾಳಿಗಳಿಗೆ ಖಾಸಿಂ ನೇರ ಹೊಣೆಗಾರ ಎಂದು ಅಮೆರಿಕ ಆರೋಪಿಸಿದೆ. ಯಾರು ಈ ಖಾಸಿಂ? ಅವರನ್ನು ಸಾಯಿಸಲು ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

 ಇರಾಕ್‌ನಲ್ಲಿ ಇರಾನಿನ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕ ಇರಾಕ್‌ನಲ್ಲಿ ಇರಾನಿನ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕ

ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಸೇನಾಪಡೆಯ ಮುಖ್ಯಸ್ಥರಾಗಿದ್ದವರು ಜನರಲ್ ಖಾಸಿಂ ಸೋಲೆಮನಿ. ಇರಾನ್‌ನಲ್ಲಿ ಸೋಲೆಮನಿ ಬಹುಜನಪ್ರಿಯತೆ ಗಳಿಸಿದ್ದ ಸೆಲೆಬ್ರಿಟಿಗಳಲ್ಲಿ ಒಬ್ಬರು. ಹಾಗೆಯೇ ಹೊರಜಗತ್ತಿಗೆ ರೆವೊಲ್ಯೂಷನರಿ ಗಾರ್ಡ್ಸ್‌ನ ವಿದೇಶಿ ಪಡೆಯ ನಾಯಕ. ಸಿರಿಯಾ ಮತ್ತು ಇರಾಕ್‌ಗಳಲ್ಲಿನ ಕಾರ್ಯಾಚರಣೆಗಳಲ್ಲಿ ಸೋಲೆಮನಿ ಪ್ರಮುಖ ಪಾತ್ರ ವಹಿಸಿದ್ದವರು.

ಮಧ್ಯಪ್ರಾಚ್ಯದಲ್ಲಿ ಇರಾನಿಯನ್ನರ ಪ್ರಭಾವಳಿ ಬಿತ್ತುವಲ್ಲಿ ಖಾಸಿಂ ಸೋಲೆಮನಿ ಸಾಧನವಾಗಿದ್ದರು. ಅಮೆರಿಕ ಮತ್ತು ಇರಾನ್‌ನ ಪ್ರಾದೇಶಿಕ ವೈರಿಗಳಾದ ಸೌದಿ ಅರೇಬಿಯಾ ಮತ್ತು ಇಸ್ರೇಲ್ ಇಲ್ಲಿ ತಮ್ಮ ಪ್ರಭಾವ ಬೆಳೆಸುವ ಪ್ರಯತ್ನದಲ್ಲಿ ಹೆಣಗಾಡುತ್ತಿದ್ದಾಗ ಅದರಲ್ಲಿ ಸೋಲೆಮನಿ ಯಶಸ್ವಿಯಾಗಿದ್ದರು.

ವಿದೇಶದಲ್ಲಿ ಸೋಲೆಮನಿ ಪ್ರಭಾವ

ವಿದೇಶದಲ್ಲಿ ಸೋಲೆಮನಿ ಪ್ರಭಾವ

ಪಶ್ಚಿಮದ ವಿವಿಧ ದೇಶಗಳು, ಇಸ್ರೇಲ್ ಮತ್ತು ಅರಬ್ ಸಂಸ್ಥೆಗಳು ಕಳೆದ 20 ವರ್ಷಗಳಿಂದ ನಡೆಸಿದ ಅವರ ಹತ್ಯೆ ಪ್ರಯತ್ನಗಳಿಂದ ಹಲವು ಬಾರಿ ಬವಾಚಾಗಿದ್ದರು. ಸೋಲೆಮನಿ ಅವರ ಐಆರ್‌ಜಿಸಿ ಪಡೆಯು ಇರಾನ್‌ನ ಗಡಿಯಾಚೆಗೆ ಕಾರ್ಯಾಚರಣೆ ನಡೆಸುವುದಕ್ಕೆ ನಿಯೋಜಿತಗೊಂಡಿತ್ತು. ಸಿರಿಯಾದಲ್ಲಿ 2011ರಿಂದ ನಡೆಯುತ್ತಿದ್ದ ನಾಗರಿಕ ಯುದ್ಧದಲ್ಲಿ ತೀರಾ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರಿಗೆ ಬೆಂಬಲ ನೀಡಿದ್ದು ಸೋಲೆಮನಿ ಪಡೆ. ಹಾಗೆಯೇ ಇರಾಕ್ ಹಾಗೂ ಲೆವಾಂಟ್‌ಗಳಲ್ಲಿನ ಇಸ್ಲಾಮಿಕ್ ಸ್ಟೇಟ್ ಉಗ್ರರ ಬಲವನ್ನು ತಗ್ಗಿಸಲು ಸಶಸ್ತ್ರ ಪಡೆಗಳ ನೆರವಿಗೆ ಧಾವಿಸಿದ್ದರು.

ಸೇನಾ ಪಡೆ ಬೆಳೆಸಿದ ಸೋಲೆಮನಿ

ಸೇನಾ ಪಡೆ ಬೆಳೆಸಿದ ಸೋಲೆಮನಿ

ಸೋಲೆಮನಿ 1998ರಲ್ಲಿ ಐಆರ್‌ಜಿಸಿಯ ಮುಖ್ಯಸ್ಥರಾಗಿ ನೇಮಕವಾದರು. ಆಗ ಅವರ ಪಡೆಗೆ ಅಷ್ಟೇನೂ ಮಹತ್ವದ ಸ್ಥಾನವಿರಲಿಲ್ಲ. ಲೆಬನಾನ್‌ನ ಹೆಜ್‌ಬೊಲ್ಲಾ, ಸಿರಿಯಾದ ಅಸ್ಸಾದ್ ಮತ್ತು ಇರಾನ್‌ನಲ್ಲಿನ ಇರಾಕ್‌ನ ಶಿಯಾ ಸೇನಾ ಪಡೆಗಳ ಜತೆಗಿನ ಇರಾನ್‌ನ ಸಂಬಂಧವನ್ನು ಬಲಪಡಿಸಿಕೊಂಡರು.

ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರೆ ಶಿಯಾ ನಾಯಕರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಮನ್ನಣೆ ಗಳಿಸಿದರು.

ಸೋಲೆಮನಿ ನಾಯಕತ್ವದಲ್ಲಿ ಐಆರ್‌ಜಿಸಿ ತನ್ನ ಸಾಮರ್ಥ್ಯವನ್ನು ಸಾಕಷ್ಟು ವಿಸ್ತರಿಸಿಕೊಂಡಿತು. ಇರಾನ್‌ನ ಗಡಿಯಾಚೆಗೂ ಗುಪ್ತಚರ, ಹಣಕಾಸು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಮಹತ್ವದ ಪ್ರಭಾವಿ ಪಡೆಯಾಗಿ ಬೆಳೆಯಿತು.

ರಾಷ್ಟ್ರೀಯ ಹೀರೋ ಆದ ಸಾಮಾನ್ಯ ಹುಡುಗ

ರಾಷ್ಟ್ರೀಯ ಹೀರೋ ಆದ ಸಾಮಾನ್ಯ ಹುಡುಗ

ಆಗ್ನೇಯ ಇರಾನ್‌ನ ಕೆರ್ಮನ್ ಪ್ರಾಂತ್ಯದಲ್ಲಿನ ಬಡ ಕುಟುಂಬದಲ್ಲಿ ಜನಿಸಿದ ಸೋಲೆಮನಿ, ಬಹಳ ವಿಧೇಯದ ವ್ಯಕ್ತಿತ್ವದವರು. 13ನೇ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಸಹಾಯಕ ಮಾಡಲು ದುಡಿಮೆಗೆ ಇಳಿದರು. ಬಿಡುವಿನ ಅವಧಿಯಲ್ಲಿ ಭಾರಗಳನ್ನು ಹೊತ್ತರು. ಖಮೇನಿ ಅವರ ಭಾಷಣಗಳಲ್ಲಿ ಭಾಗವಹಿಸಿದರು.

1979ರಲ್ಲಿ ಇರಾನ್‌ನ ಕ್ರಾಂತಿಯ ವೇಳೆ ತರುಣನಾಗಿದ್ದ ಸೋಲೆಮನಿ, ಇರಾನಿಯನ್ ಸೇನೆಗೆ ಸೇರಿಕೊಂಡರು. ಕೇವಲ ಆರು ವಾರಗಳ ತರಬೇತಿ ಪಡೆಯುವುದರೊಳಗೇ ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಮೊದಲ ಯುದ್ಧದಲ್ಲಿ ಪಾಲ್ಗೊಂಡರು. ಇರಾಕ್ ಗಡಿಯಲ್ಲಿ ನಡೆದ ಇರಾನ್- ಇರಾಕ್ ಯುದ್ಧದಲ್ಲಿ ದಿಟ್ಟತನದ ಹೋರಾಟ ನಡೆಸಿದ ಸೋಲೆಮನಿ, ರಾಷ್ಟ್ರೀಯ ಹೀರೋ ಎನಿಸಿಕೊಂಡರು.

ಸತ್ತಿದ್ದಾರೆ ಎಂಬ ಊಹಾಪೋಹ

ಸತ್ತಿದ್ದಾರೆ ಎಂಬ ಊಹಾಪೋಹ

ಸೋಲೆಮನಿ ಮೇಲೆ ಈ 20 ವರ್ಷಗಳಲ್ಲಿ ಹಲವು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿವೆ. ಹಾಗೆಯೇ ಅವರು ಸತ್ತಿದ್ದಾರೆ ಎಂಬ ವದಂತಿ ಕೂಡ ಅನೇಕ ಸಲ ಹರಡಿತ್ತು. 2006ರಲ್ಲಿ ವಾಯವ್ಯ ಇರಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಇತರೆ ಸೇನಾಧಿಕಾರಿಗಳ ಜತೆಗೆ ಸೋಲೆಮನಿ ಸತ್ತಿದ್ದಾರೆ ಎನ್ನಲಾಗಿತ್ತು. 2012ರಲ್ಲಿ ಡಮಾಸ್ಕಸ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರ ಸಹವರ್ತಿಗಳು ಮೃತಪಟ್ಟಿದ್ದರು. ಆಗಲೂ ಸೋಲೆಮನಿ ಸತ್ತಿದ್ದಾರೆ ಎಂದೇ ಹೇಳಲಾಗಿತ್ತು.

ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?

ಸಿರಿಯಾದ ಅಲೆಪ್ಪೋದಲ್ಲಿ ಅಸ್ಸಾದ್ ಪರ ಪಡೆಗಳನ್ನು ನಡೆಸುವ ವೇಳೆ ಸೋಲೆಮನಿ ಅವರಿಗೆ ತೀವ್ರ ಗಾಯವಾಗಿದೆ ಅಥವಾ ಸತ್ತಿದ್ದಾರೆ ಎಂಬ ಊಹಾಪೋಹ 2015ರ ನವೆಂಬರ್‌ನಲ್ಲಿ ಹರಡಿತ್ತು. ಸಿರಿಯಾದಲ್ಲಿನ ಐಆರ್‌ಜಿಸಿ ನೆಲೆಗಳ ಮೇಲೆ ನಿರಂತರ ವಾಯುದಾಳಿಗಳು ನಡೆದಿದ್ದವು. ಸೋಲೆಮನಿ ಅವರನ್ನು ಸಂಪೂರ್ಣವಾಗಿ ನಾಶಪಡಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವರು ಆರೋಪಿಸಿದ್ದರು.

ಇಸ್ರೇಲ್ ಮತ್ತು ಅರಬ್ ಸಂಸ್ಥೆಗಳು ಸೋಲೆಮನಿ ಅವರನ್ನು ಕೊಲ್ಲಲು ನಡೆಸಿದ್ದ ಸಂಚನ್ನು ವಿಫಲಗೊಳಿಸಿದ್ದಾಗಿ ಟೆಹರಾನ್ ಕಳೆದ ಅಕ್ಟೋಬರ್‌ನಲ್ಲಿ ಹೇಳಿಕೊಂಡಿತ್ತು.

ಇರಾನ್‌ನ ಎರಡನೇ ಸರ್ವೋಚ್ಛ ನಾಯಕ

ಇರಾನ್‌ನ ಎರಡನೇ ಸರ್ವೋಚ್ಛ ನಾಯಕ

ಇರಾನ್‌ನ ಪರಮೋಚ್ಛ ನಾಯಕ ಖಮೇನಿ ತಮ್ಮ ಉತ್ತರಾಧಿಕಾರಿಯನ್ನಾಗಿ ಸೋಲೆಮನಿ ಅವರನ್ನು ನೇಮಿಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಇರಾಕ್‌ನಲ್ಲಿನ ಅಮೆರಿಕದ ರಾಯಭಾರ ಕಚೇರಿ ಒಳಗೆ ಇರಾನ್ ಬೆಂಬಲಿತ ಶಿಯಾ ಸೇನೆ ಪ್ರವೇಶಿಸಿದ ಬಳಿಕ ಸೋಲೆಮನಿ ಹತ್ಯೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದರು.

ಈಗ ಬದ್ಧ ವೈರಿಗಳಾಗಿರುವ ಇರಾನ್ ಮತ್ತು ಅಮೆರಿಕ ನಡುವಿನ ಸಂಬಂಧ ಮೊದಲು ಹೀಗೆ ಇರಲಿಲ್ಲ. ಅಮೆರಿಕದ ಶತ್ರುವಾಗಿ ಬದಲಾಗುವ ಮುನ್ನ ಸೋಲೆಮನಿ, ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧದ ಅಮೆರಿಕದ ಕಾರ್ಯಾಚರಣೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಆಫ್ಘನ್ ದಾಳಿಗೆ ನೆರವಾಗಿದ್ದು ಸೋಲೆಮನಿ

ಆಫ್ಘನ್ ದಾಳಿಗೆ ನೆರವಾಗಿದ್ದು ಸೋಲೆಮನಿ

ಒಸಾಮ ಬಿನ್ ಲ್ಯಾಡೆನ್‌ನ ಅಲ್ ಕೈದಾ ಅಫ್ಘಾನಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಹೀಗಾಗಿ ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಹಾಗೂ ಅಲ್‌ ಕೈದಾವನ್ನು ಮಟ್ಟಹಾಕಲು ಅಮೆರಿಕಕ್ಕೆ ಬೇಹುಗಾರಿಕಾ ಶಕ್ತಿಯೊಂದರ ಅಗತ್ಯವಿತ್ತು. ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಸೂಕ್ತ ಸಿದ್ಧತೆ ಬೇಕಿತ್ತು. ಆಗ ಅಮೆರಿಕಕ್ಕೆ ನೆರವಾಗಿದ್ದು ಖುದ್ಸ್ ಪಡೆಗಳ ನಾಯಕ ಖಾಸಿಂ ಸೋಲೆಮನಿ. ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕ ವಿಳಂಬ ಮಾಡಿದ್ದಕ್ಕೆ ಸೋಲೆಮನಿ ಅಸಮಾಧಾನ ವ್ಯಕ್ತಪಡಿಸಿದ್ದರು. 2001ರ ಅಕ್ಟೋಬರ್‌ನಲ್ಲಿ ಸಭೆ ವೇಳೆ ಅಮೆರಿಕ ಅಧಿಕಾರಿಗಳ ಮುಂದೆ ಆಫ್ಘನ್ ನಕಾಶೆಯೊಂದನ್ನು ಎಸೆದಿದ್ದ ಸೋಲೆಮನಿ, ಈ ಜಾಗಗಳಲ್ಲಿ ದಾಳಿ ಮಾಡಿ ಎಂದು ಕೋಪದಿಂದ ಹೇಳಿದ್ದರು. ಅದರಂತೆ ಅಮೆರಿಕದ ಪಡೆ ಬಾಂಬ್ ದಾಳಿ ಆರಂಭಿಸಿತ್ತು.

ಮಿತ್ರ, ಶತ್ರುವಾಗಿ ಬದಲಾದರು...

ಮಿತ್ರ, ಶತ್ರುವಾಗಿ ಬದಲಾದರು...

ಮೂರು ವರ್ಷಗಳಲ್ಲಿ ಅಮೆರಿಕದ ಬೆಂಬಲಿತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಈ ಅವಧಿಯಲ್ಲಿ ಲ್ಯಾಡೆನ್ ಪಾಕಿಸ್ತಾನಕ್ಕೆ ಓಡಿಹೋಗಿದ್ದ. ತಾಲಿಬಾನ್ ಮತ್ತು ಅಲ್ ಕೈದಾ ಮಟ್ಟಹಾಕಲು ಅಮೆರಿಕಕ್ಕೆ ಸೋಲೆಮನಿ ದಾರಿ ತೋರಿಸಿದ್ದರು. ಆದರೆ ತಾಲಿಬಾನ್ ಮೇಲೆ ಅಮೆರಿಕ ಬಾಂಬ್ ದಾಳಿ ಆರಂಭಿಸಿದ ಮೂರೇ ತಿಂಗಳ ಬಳಿಕ ಆಗಿನ ಅಧ್ಯಕ್ಷ ಜಾರ್ಜ್ ಬುಷ್, ಇರಾನ್‌ ವಿರುದ್ಧ ತಿರುಗಿಬಿದ್ದರು. ಸೋಲೆಮನಿಯನ್ನು ಅಮೆರಿಕದ ಶತ್ರು ಎಂದು ಪರಿಗಣಿಸಿದರು.

2019ರ ಏಪ್ರಿಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಲೆಮನಿ ನೇತೃತ್ವದ ರೆವೊಲ್ಯೂಷನರಿ ಗಾರ್ಡ್ ಮತ್ತು ಖುದ್ಸ್ ಪಡೆಗಳನ್ನು ಉಗ್ರ ಸಂಘಟನೆಗಳು ಎಂದು ಕರೆದರು. ಈ ಪಡೆಗಳೊಂದಿಗೆ ನಂಟು ಹೊಂದಿರುವ ಜನರ ವಿರುದ್ಧದ ಕ್ರಮಕ್ಕೆ ಕರೆ ನೀಡಿದರು. ಖಾಸಿಂ ಸೋಲೆಮನಿ ಅವರ ಹತ್ಯೆಯ ಆದೇಶವು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಾಗ್ದಂಡನೆಗೆ ಗುರಿಯಾದ ಸಂದರ್ಭದಲ್ಲಿಯೇ ಹೊರಬಂದಿದೆ ಎನ್ನಲಾಗಿದೆ.

English summary
Head of Iran's IRGC Qassem Soleimani who was killed by US forces in Iraq was more powerful after Iran's Supreme leader Ali Khamenei.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X