ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ

|
Google Oneindia Kannada News

ರಾಜಸ್ಥಾನದ ಕೋಟಾ- ಬಂದಿ ಕ್ಷೇತ್ರ ಸಂಸತ್ ಸದಸ್ಯ ಬಿಜೆಪಿ ಮುಖಂಡ ಓಂ ಬಿರ್ಲಾ ಅವರು 17ನೇ ಲೋಕಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಕೋಟಾ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ 57 ವರ್ಷದ ಬಿರ್ಲಾ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಬಿರ್ಲಾ ಅವರ ಹೆಸರನ್ನು ವಾರಣಾಸ ಸಂಸದ, ಪ್ರಧಾನಿ ನರೇಂದ್ರ ಮೋದಿ, ಗಾಂಧಿನಗರದ ಸಂಸದ ಅಮಿತ್ ಶಾ ಅವರು ಸ್ಪೀಕರ್ ಸ್ಥಾನಕ್ಕೆ ಅನುಮೋದನೆ ಮಾಡಿದರು.

ಅಧಿವೇಶನದ 2ನೇ ದಿನ: ಎನ್ಡಿಎ ಸ್ಪೀಕರ್ ಅಭ್ಯರ್ಥಿಗೆ 10 ಪಕ್ಷಗಳ ಬೆಂಬಲಅಧಿವೇಶನದ 2ನೇ ದಿನ: ಎನ್ಡಿಎ ಸ್ಪೀಕರ್ ಅಭ್ಯರ್ಥಿಗೆ 10 ಪಕ್ಷಗಳ ಬೆಂಬಲ

ಸಂಸದರಾಗಿ ಮಂಗಳವಾರ(ಜೂನ್ 18)ದಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಬಿರ್ಲಾ ಅವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆ ದಿನವಾಗಿದೆ. ಬುಧವಾರದಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಎನ್ಡಿಎ 352 ಸದಸ್ಯ ಬಲ ಹೊಂದಿದ್ದು, ಬಿರ್ಲಾ ಅವರ ಆಯ್ಕೆ ಖಚಿತವಾಗಿದೆ. ವಿಪಕ್ಷಗಳಿಂದ ಯಾವುದೇ ಅಭ್ಯರ್ಥಿಯನ್ನು ಇಲ್ಲಿ ತನಕ ಹೆಸರಿಸಿಲ್ಲ.

ಓಂ ಬಿರ್ಲಾಗೆ 10 ಪಕ್ಷಗಳ ಬೆಂಬಲ

ಓಂ ಬಿರ್ಲಾಗೆ 10 ಪಕ್ಷಗಳ ಬೆಂಬಲ

ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿರುವ ಓಂ ಬಿರ್ಲಾ ಅವರಿಗೆ ಬಿಜು ಜನತಾ ದಳ, ಎಐಡಿಎಂಕೆ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಬೆಂಬಲ ವ್ಯಕ್ತವಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ, ಮಿಜೋ ನ್ಯಾಷನಲ್ ಫ್ರಂಟ್, ಲೋಕ್ ಜನಶಕ್ತಿ ಪಾರ್ಟಿ, ಜೆಡಿಯು, ಅಪ್ನಾ ದಳ್ ನಿಂದಲೂ ಬೆಂಬಲ ವ್ಯಕ್ತವಾಗಿದೆ.

ಮೊದಲ ಮೂರು ದಿನದ ತನಕ ಹಂಗಾಮಿ ಸ್ಪೀಕರ್

ಮೊದಲ ಮೂರು ದಿನದ ತನಕ ಹಂಗಾಮಿ ಸ್ಪೀಕರ್

17ನೇ ಲೋಕಸಭಾ ಅಧಿವೇಶನ ಆರಂಭಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ವೀರೇಂದ್ರ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ಜೂನ್ 17 ರಿಂದ ಆರಂಭವಾದ ಸಂಸತ್ ಕಲಾಪದ ಮೊದಲ ಮೂರು ದಿನಗಳ ಕಾಲ ವೀರೇಂದ್ರ ಕುಮಾರ್ ಅವರು ಕಲಾಪವನ್ನು ನೋಡಿಕೊಳ್ಳಲಿದ್ದಾರೆ.

ಕಲಾಪದ ಮೂರನೇ ದಿನ ಸ್ಪೀಕರ್ ಚುನಾವಣೆ

ಕಲಾಪದ ಮೂರನೇ ದಿನ ಸ್ಪೀಕರ್ ಚುನಾವಣೆ

ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೇಶದ 22 ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಂಸದರು ಅರ್ಹರಾಗಿರುತ್ತಾರೆ. ಕಲಾಪದ ಮೂರನೇ ದಿನ ನೂತನ ಲೋಕಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಹಂಗಾಮಿ ಸ್ಪೀಕರ್ ವೀರೇಂದ್ರಕುಮಾರ್ ಪ್ರಮಾಣವಚನ ಬೋಧಿಸಲಿದ್ದಾರೆ

ಕೋಟಾ ಕ್ಷೇತ್ರದ ಸಂಸದ ಬಿರ್ಲಾ

ಕೋಟಾ ಕ್ಷೇತ್ರದ ಸಂಸದ ಬಿರ್ಲಾ

ಮೂರು ಬಾರಿ ಶಾಸಕರಾಗಿದ್ದ ಓಂ ಬಿರ್ಲಾ ಅವರು ಕೋಟಾ ಕ್ಷೇತ್ರದಲ್ಲಿ ಸ್ಪರ್ಧಿಸಿ 2,79,677 ಮತಗಳ ಅಂತರದ ಗೆಲುವು ದಾಖಲಿಸಿದರು. ಓಂ ಬಿರ್ಲಾ 8,00,051 ಮತ(58.52%) ಗಳಿಸಿ ಗೆದ್ದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ರಾಮ್ ನಾರಾಯಣ್ ಮೀನಾ ಅವರು 5,20,374 ಮತ(38.07%) ಗಳಿಸಿ ಸೋತರು.

English summary
Who is Om Birla: Two-time Bharatiya Janata Party (BJP) MP from Kota, Rajasthan, Om Birla is National Democratic Alliance (NDA) candidate for the post of Lok Sabha Speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X