ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಸ್ಥಾನಕ್ಕೆ ಇನ್ನೊಬ್ಬರು; ಯಾರು ಈ ನಿಕೋಲಾಯ್ ಪಟ್ರುಶೆವ್?

|
Google Oneindia Kannada News

ಮಾಸ್ಕೋ, ಮೇ 3: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಉಕ್ರೇನ್ ವಿರುದ್ಧ ಯುದ್ಧ ಗೆಲ್ಲಲು ರಷ್ಯಾ ಹರಸಾಹಸ ನಡೆಸುತ್ತಿರುವ ಹೊತ್ತಿನಲ್ಲೇ ಪುಟಿನ್‌ಗೆ ಸರ್ಜರಿಯಾಗುತ್ತಿದೆ. ಇಂಥ ಮುಖ್ಯ ಸಂದರ್ಭದಲ್ಲಿ ರಷ್ಯಾ ದೇಶದ ಚುಕ್ಕಾಣಿಯನ್ನು ತಾತ್ಕಾಲಿಕವಾಗಿ ಹಿಡಿಯುವ ಹೊಣೆ ನಿಕೋಲಾಯ್ ಪಟ್ರುಶೆಯ್ (Nikolai Patrushev) ಅವರ ಹೆಗಲಿಗೆ ಬೀಳುವ ಸಾಧ್ಯತೆ ಇದೆ. 70 ವರ್ಷದ ಪಟ್ರುಶೆವ್ ಅವರು ರಷ್ಯಾ ಗುಪ್ತಚರ ದಳದ ಮಾಜಿ ಮುಖ್ಯಸ್ಥರಾಗಿದ್ದಾರೆ. ಜೊತೆಗೆ ವ್ಲಾಡಿಮಿರ್ ಪುಟಿನ್ ಅವರ ನಿಕಟವರ್ತಿಯೂ ಆಗಿದ್ದಾರೆ. ಸದ್ಯ ರಷ್ಯಾದ ಭದ್ರತಾ ಮಂಡಳಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಅವರು ಪುಟಿನ್ ಚೇತರಿಕೆ ಕಾಣುವವರೆಗೂ ರಷ್ಯಾದ ಆಡಳಿತ ಚುಕ್ಕಾಣಿ ಹಿಡಿಯಬಹುದೆನ್ನಲಾಗಿದೆ.

ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸಮರ ತಂತ್ರಗಾರಿಕೆ, ರಣತಂತ್ರ ಎಲ್ಲದರ ಮಾಸ್ಟರ್ ಮೈಂಡ್ ಪಟ್ರುಶೆವ್ ಅವರಾಗಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಬಹಳ ನಂಬುವ ವ್ಯಕ್ತಿಯೂ ಅವರು. ಪುಟಿನ್ ತಮ್ಮ ಪ್ರಧಾನಮಂತ್ರಿ ಮಿಖಾಯಿಲ್ ಮಿಶುಸ್ಟಿನ್ (Michael Mishustin) ಅವರನ್ನ ಬಿಟ್ಟು ಪಟ್ರುಶೆವ್ ಅವರಿಗೆ ರಷ್ಯಾದ ಚುಕ್ಕಾಣಿ ಕೊಟ್ಟಿರುವುದು ಸುಮ್ಮನೆ ಅಲ್ಲ.

2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರು ರಷ್ಯಾಕ್ಕೆ ಗಡಿಪಾರು2 ಲಕ್ಷ ಮಕ್ಕಳು ಸೇರಿದಂತೆ 11 ಲಕ್ಷ ಉಕ್ರೇನಿಯನ್ನರು ರಷ್ಯಾಕ್ಕೆ ಗಡಿಪಾರು

ಪ್ರಧಾನಿ ಮಿಶುಸ್ಟಿನ್ ಮೇಲೆ ಪುಟಿನ್‌ಗೆ ನಂಬಿಕೆ ಇಲ್ಲವೆಂದಲ್ಲ. ಆದರೆ, ಮಿಲಿಟರಿ ವ್ಯವಹಾರಗಳು, ಯುದ್ಧ ತಂತ್ರಗಾರಿಕೆಗಳು ಇತ್ಯಾದಿ ವಿಚಾರದಲ್ಲಿ ಪ್ರಧಾನಿಗಳು ಪಳಗಿದವರಲ್ಲ. ಆದ್ದರಿಂದ ನಿಕೋಲಾಯ್ ಪಟ್ರುಶೆವ್ ಅವರ ಹೆಗಲಿಗೆ ರಷ್ಯಾದ ಆಡಳಿತ ಜವಾಬ್ದಾರಿ ವಹಿಸಲಾಗಿದೆ.

Who is Nikolai Patrushev who likely to take control of Russia

ಯಾರು ಈ ನಿಕೋಲಾಯ್ ಪಟ್ರುಶೆವ್?
ನಿಕೋಲಾಯ್ ಪಟ್ರುಶೆವ್ ಜನಿಸಿದ್ದು 1951ರಲ್ಲಿ. ಅವರ ತಂದೆ ಸೋವಿಯತ್ ರಷ್ಯಾ ಕಾಲಘಟ್ಟದಲ್ಲಿ ನೌಕಾಪಡೆ ಅಧಿಕಾರಿಯಾಗಿದ್ದವರು. ಪೆಟ್ರೋಶೆವ್ ಅವರು ಸೋವಿಯತ್ ಒಕ್ಕೂಟದ ಕೆಜಿಬಿ ಭದ್ರತಾ ಸಂಸ್ಥೆಯ ಕಳ್ಳಸಾಗಾಣಿಕೆ-ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಬೆಳೆದರು. ತೊಂಬತ್ತರ ದಶಕದಲ್ಲಿ ಸೋವಿಯತ್ ರಷ್ಯಾ ಒಕ್ಕೂಟ ಪತನೊಂಡ ಬಳಿಕ ಅವರು ಭದ್ರತಾ ಸಂಸ್ಥೆಯಲ್ಲಿ ಕೆಲಸ ಮುಂದುವರಿಸಿದರು. ಬಳಿಕ 1992-1994ರವರೆಗೂ ಕರೇಲಿಯಾ ಪ್ರಾಂತ್ಯಕ್ಕೆ ಭದ್ರತಾ ಸಚಿವರಾದರು. ನಂತರ ಮಾಸ್ಕೋದಲ್ಲಿ ಎಫ್‌ಎಸ್‌ಕೆ ಎನ್ನುವ ಗುಪ್ತಚರ ಸಂಸ್ಥೆಯ ಆಂತರಿಕ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥರಾದರು. ಹೀಗೆ ಗುಪ್ತಚರ ವಿಭಾಗದಲ್ಲಿ ನಿಕೋಲಾಯ್ ಪಟ್ರುಶೆವ್ ಅವರ ಪ್ರಯಾಣ ಮುಂದುವರಿಯುತ್ತಲೇ ಹೋಯಿತು.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಬಹಳ ಗಂಭೀರ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಮಿಲಿಟರಿಗೆ ಸೂಕ್ತವಾಗುವ ಸಣ್ಣ ವಯಸ್ಸಿನ ಯುವಕರನ್ನು ರಷ್ಯಾ ಯುದ್ಧಕ್ಕೆ ಕರೆತರುತ್ತಿದೆ. ವ್ಲಾದಿಮಿರ್ ಪುಟಿನ್ ಅವರು ಈಗಾಗಲೇ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಅಧಿಕೃತವಾಗಿ ಯುದ್ಧ ಘೋಷಣೆ ಮಾಡುವ ಸಾಧ್ಯತೆ ಇದೆ. ಇಂಥ ಸಮಯದಲ್ಲಿ ಪುಟಿನ್ ಅವರಿಗೆ ಕ್ಯಾನ್ಸರ್ ಆಪರೇಷನ್ ನಡೆಯುತ್ತಿದ್ದು ಪಟ್ರುಶೆವ್ ಅವರು ರಷ್ಯಾದ ಚುಕ್ಕಾಣಿ ಹಿಡಿದಿದ್ದಾರೆ.

ಪುಟಿನ್ ಉದ್ದೇಶಪಟ್ಟಿರುವ ರೀತಿಯಲ್ಲಿ ಪಟ್ರುಶೆವ್ ಯುದ್ಧ ಮುನ್ನಡೆಸುತ್ತಾರಾ ಅಥವಾ ತಮ್ಮದೇ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸುತ್ತಾರಾ ಕಾಲವೇ ಉತ್ತರಿಸಬೇಕು. ಆದರೆ, ಉಕ್ರೇನ್ ಮೇಲೆ ಎರಗಿ ಹೋಗಿರುವ ರಷ್ಯಾ ಈಗ ಮರಳಿ ಬಾರದ ಸ್ಥಿತಿಯಲ್ಲಿದೆ. ಉಕ್ರೇನ್ ವಿರುದ್ಧ ಯುದ್ಧ ಗೆಲ್ಲಲೇಬೇಕಾದ ಹತಾಶ ಪರಿಸ್ಥಿತಿಯಲ್ಲಿ ರಷ್ಯಾ ಇದೆ.

(ಒನ್ಇಂಡಿಯಾ ಸುದ್ದಿ)

English summary
Amidst reports of the Russian president Vladimir Putin's undergoing cancer surgery, ex-KGB officer and a close aid of the Kremlin leader, Nikolai Patrushev is expected to take control of the country and the ongoing Ukraine war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X