ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Who's Shehbaz Sharif : ಪಾಕ್ ನೂತನ ಪ್ರಧಾನಿಯಾಗಲಿರುವ ಶೆಹಬಾಜ್ ಷರೀಫ್ ಯಾರು?

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್‌ 10: ಪಾಕಿಸ್ತಾನದಲ್ಲಿ ಶನಿವಾರ ಭಾರೀ ರಾಜಕೀಯ ಬದಲಾವಣೆ ಉಂಟಾಗಿದ್ದು, ವಿವಾದಕ್ಕೀಡಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಅಧಿಕಾರದಿಂದ ಹೊರಗುಳಿದಿದ್ದಾರೆ. ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ ಶೆಹಬಾಜ್ ಷರೀಫ್ ಆಯ್ಕೆ ಬಹುತೇಕ ಖಚಿತವಾಗಿದೆ.

ರಾಷ್ಟ್ರೀಯ ಅಸೆಂಬ್ಲಿಯ ಬಹುಪಾಲು ಸದಸ್ಯರು ಇಮ್ರಾನ್‌ ಖಾನ್‌ ವಿರುದ್ಧ ಮತ ಚಲಾಯಿಸಿದ ನಂತರ ಅವರ ವಿರುದ್ಧ ವಿರೋಧ ಪಕ್ಷದ ಮೈತ್ರಿಕೂಟವು ಸಲ್ಲಿಸಿದ ಅವಿಶ್ವಾಸ ನಿರ್ಣಯವು ಯಶಸ್ವಿಯಾಗಿದೆ. ಈ ಹಿನ್ನೆಲೆ ಇಮ್ರಾನ್ ಖಾನ್ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಅವಿಶ್ವಾಸ ನಿರ್ಣಯದಲ್ಲಿ ಪಾಕಿಸ್ತಾನದಲ್ಲಿ ಸೋಲು ಕಂಡ ಮೊದಲ ಪ್ರಧಾನಿ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ.

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತ

ಭಾನುವಾರ ಬೆಳಗಿನ ಜಾವದ ಕೆಲವು ಗಂಟೆಗಳ ಮೊದಲು ಅವರ ಅಧಿಕಾರಾವಧಿಯನ್ನು ಅನೌಪಚಾರಿಕವಾಗಿ ಕೊನೆಗೊಳಿಸಿದರು. ಇಮ್ರಾನ್ ಅವರು ಅವಿಶ್ವಾಸ ನಿರ್ಣಯದಲ್ಲಿ ಸೋತಿದ್ದು, ಪಾಕಿಸ್ತಾನ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಖಾನ್ ಅವರ ಬದಲಿಗೆ ದೇಶದ ಪ್ರಧಾನಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಈ ಹಿಂದೆಯೇ ಪಿಎಂಎಲ್-ಎನ್ ನಾಯಕರುಗಳು ಹೇಳಿಕೆಗಳನ್ನು ನೀಡಿದ್ದಾರೆ.

Who Is Next Pakistan PM Shehbaz Sharif?

ಶೆಹಬಾಜ್ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಆಗಿದ್ದಾರೆ. ಅವರು ಮಾರ್ಚ್ 28 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಿದ್ದಾರೆ. ಏಪ್ರಿಲ್ 1, 2022 ರಂದು ಇಸ್ಲಾಮಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ತಾನು ಮುಂದಿನ ಪಾಕ್ ಪ್ರಧಾನಿ ಎಂಬ ಸುಳಿವು ನೀಡಿದ್ದರು. ಹಾಗಾದರೆ ಶೆಹಬಾಜ್ ಷರೀಫ್ ಯಾರು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

Who Is Next Pakistan PM Shehbaz Sharif?

ಶೆಹಬಾಜ್ ಷರೀಫ್ ಯಾರು?

* ಶೆಹಬಾಜ್ ಷರೀಫ್ ಅವರು ಪಾಕಿಸ್ತಾನ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ.

* ಶೆಹಬಾಜ್ ಷರೀಫ್ 1950 ರಲ್ಲಿ ಲಾಹೋರ್‌ನಲ್ಲಿ ಪಂಜಾಬಿ ಮಾತನಾಡುವ ಕಾಶ್ಮೀರಿ ಕೈಗಾರಿಕೋದ್ಯಮಿ ಕುಟುಂಬದಲ್ಲಿ ಜನಿಸಿದರು ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರರಾಗಿದ್ದಾರೆ.

Who Is Next Pakistan PM Shehbaz Sharif?

* ಪಿಎಂಎಲ್-ಎನ್ ಅಧ್ಯಕ್ಷರು ಆಗಿರುವ ಶೆಹಬಾಜ್ ಷರೀಫ್ ಮೂರು ಅವಧಿಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 1997, 2008, ಮತ್ತು 2013ರಲ್ಲಿ ಮುಖ್ಯಮಂತ್ರಿಯಾಗಿದ್ದರು.

* 1999 ರ ಜನರಲ್ ಪರ್ವೇಜ್ ಮುಷರಫ್ ನೇತೃತ್ವದ ದಂಗೆಯ ನಂತರ ಶೆಹಬಾಜ್ ಷರೀಫ್ ಪಾಕಿಸ್ತಾನವನ್ನು ತೊರೆದು ಸೌದಿ ಅರೇಬಿಯಾದಲ್ಲಿ ಎಂಟು ವರ್ಷಗಳ ಕಾಲ ದೇಶಭ್ರಷ್ಟ ಆರೋಪದಲ್ಲಿ ವಾಸಿಸಬೇಕಾಯಿತು.

* ಶೆಹಬಾಜ್ ಷರೀಫ್ 1988 ರಲ್ಲಿ ಮೊದಲ ಬಾರಿಗೆ ಪಂಜಾಬ್ ಪ್ರಾಂತೀಯ ಅಸೆಂಬ್ಲಿಗೆ ಆಯ್ಕೆಯಾದರು. 1990 ರಲ್ಲಿ ರಾಷ್ಟ್ರೀಯ ಅಸೆಂಬ್ಲಿಗೆ ಚುನಾಯಿತರಾದರು. ಮತ್ತೆ 1993 ರಲ್ಲಿ ಪ್ರಾಂತೀಯ ಚುನಾವಣೆಗಳಿಗೆ ಸ್ಪರ್ಧಿಸಿದರು. ಪಂಜಾಬ್ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾದರು.

Who Is Next Pakistan PM Shehbaz Sharif?

* ಶೆಹಬಾಜ್ ಷರೀಫ್ ಅವರು ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾರಣ ಅವರನ್ನು ಸೆಪ್ಟೆಂಬರ್ 2020 ರಲ್ಲಿ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಬಿ) ಬಂಧಿಸಿತು. ವರದಿಗಳ ಪ್ರಕಾರ, ಶೆಹಬಾಜ್ ಪಾಕಿಸ್ತಾನ ಸೇನೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

Recommended Video

KL Rahulಗೆ ಪಾಪ ಹೀಗಾಗಬಾರದಿತ್ತು | Oneindia Kannada

* ಪನಾಮ ಪೇಪರ್ಸ್ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದ ಆಸ್ತಿಯನ್ನು ಮರೆಮಾಚುವ ಆರೋಪದ ಮೇಲೆ 2017 ರಲ್ಲಿ ನವಾಜ್ ತಪ್ಪಿತಸ್ಥರೆಂದು ಸಾಬೀತಾದ ನಂತರ ಶೆಹಬಾಜ್ ಷರೀಫ್ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷರಾದರು. ಈ ಮೂಲಕ ರಾಷ್ಟ್ರೀಯ ರಾಜಕೀಯಕ್ಕೆ ಎಂಟ್ರಿ ನೀಡಿದರು.

English summary
Who Is Shehbaz Sharif, Frontrunner For Next Pakistan PM After Imran Khan’s Ouster?. Here's the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X