ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೋಟ್ ವೈಮಾನಿಕ ದಾಳಿ ಟಾರ್ಗೆಟ್ ಯೂಸುಫ್ ಅಜರ್!

|
Google Oneindia Kannada News

Recommended Video

Surgical Strike 2: ಬಾಲಕೋಟ್ ವೈಮಾನಿಕ ದಾಳಿ ಟಾರ್ಗೆಟ್ | Oneindia Kannada

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಆತ್ಮಾಹುತಿ ದಾಳಿ ನಡೆಸಲು ಸೂಚನೆ ಕೊಟ್ಟ ಪ್ರಮುಖರ ಪೈಕಿ ಯೂಸುಫ್ ಅಜರ್ ಕೂಡಾ ಒಬ್ಬ.

ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ವಿಷಯ ಪರಿಸ್ಥಿತಿಯಲ್ಲಿರುವ ಜೈಷ್ ಎ ಮೊಹಮ್ಮದ್ ನ ಮುಖ್ಯಸ್ಥ ಮೌಲನಾ ಮಸೂದ್ ಅಜರ್ ನ ಬಾವವೇ ಈ ಯೂಸುಫ್. ಕಂದಹಾರ್ ವಿಮಾನ ಅಪಹರಣ, ಸಂಸತ್ ದಾಳಿ, ಪಠಾಣ್ ಕೋಟ್ ದಾಳಿ, ಇತ್ತೀಚಿನ ಪುಲ್ವಾಮಾ ದಾಳಿ ಎಲ್ಲದರಲ್ಲೂ ಅಜರ್ ಗೆ ಸಾಥ್ ನೀಡಿದವನು ಯೂಸುಫ್.

ಸೇನಾ ದಾಳಿಯ ನಂತರ ಇದೇನು ಹೇಳುತ್ತಿದ್ದಾರೆ ಓಮರ್ ಅಬ್ದುಲ್ಲಾ? ಸೇನಾ ದಾಳಿಯ ನಂತರ ಇದೇನು ಹೇಳುತ್ತಿದ್ದಾರೆ ಓಮರ್ ಅಬ್ದುಲ್ಲಾ?

ಭಾರತ ವಿರುದ್ಧ ಭಯೋತ್ಪಾದನಾ ಕೃತ್ಯ ಎಸಗಲು ಪಾಕಿಸ್ತಾನ ಬೆಂಬಲಿತ ಈ ಜಿಹಾದಿ ಪಡೆಗಳಿಗೆ ಮಸೂದ್ ನಿರ್ದೇಶನ ನೀಡಿದ್ದನ್ನು ಎಲ್ಲರಿಗೂ ತಲುಪಿಸುವ ಕೆಲಸ ಈ ಯೂಸುಫ್ ಮಾಡುತ್ತಿದ್ದ.ಬಾಲಕೋಟ್ ನಲ್ಲಿ ಆತ್ಮಾಹುತಿ ದಾಳಿ ನಡೆಸುವ ಜಿಹಾದಿಗಳ ತಯಾರಿಸುವ ಕ್ಯಾಂಪ್ ನೋಡಿಕೊಳ್ಳುತ್ತಿದ್ದ ಯೂಸುಫ್ ಮೇಲೆ ಬಾಂಬ್ ಬಿದ್ದಿದೆ ಎಂಬ ಸುದ್ದಿಯಿದೆ.

ಮೌಲನಾ ಮಸೂದ್ ಅಜರ್ ನ ಆಜ್ಞೆ ಪಾಲಕರು

ಮೌಲನಾ ಮಸೂದ್ ಅಜರ್ ನ ಆಜ್ಞೆ ಪಾಲಕರು

ಮೌಲನಾ ಅಜರ್ ಅಳಿಯ ಮೊಹಮ್ಮದ್ ಉಮೇರ್ ಹಾಗೂ ಬಾವ ಅಬ್ದುಲ್ ರಶೀದ್ ಘಾರಿ ಅಲಿಯಾಸ್ ಯೂಸುಫ್ ಅಜರ್ ಅಲಿಯಾಸ್ ಮೊಹಮ್ಮದ್ ಸಲೀಂ ಇಬ್ಬರು ಸೇರಿಕೊಂಡು ಕಣಿವೆ ರಾಜ್ಯದಲ್ಲಿ ಮಸೂದ್ ನೀಡಿದ ಆಡಿಯೋ ಸಂದೇಶವನ್ನು ಯುವಕರಿಗೆ ಹಂಚಿ ಅವರ ತಲೆಕೆಡಿಸುವ ಕಾರ್ಯದಲ್ಲಿ ತೊಡಗಿದರು. ಎಲ್ ಇ ಡಿ ಸ್ಫೋಟಕ ಬಳಕೆ, ಆತ್ಮಾಹುತಿ ದಾಳಿಗೆ ಕಾಶ್ಮೀರಿ ಯುವಕರನ್ನು ತರಬೇತಿಗೊಳಿಸತೊಡಗಿದರು.

ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ

ಉಸ್ಮಾನ್ ಸಾವಿನ ಪ್ರತೀಕಾರ

ಉಸ್ಮಾನ್ ಸಾವಿನ ಪ್ರತೀಕಾರ

ಭಾರತೀಯ ಸೇನೆಯಿಂದ ಹತನಾದ ಸೋದರ ಸಂಬಂಧಿ ಉಸ್ಮಾನ್ ಸಾವಿನ ಪ್ರತೀಕಾರ ತೆಗೆದುಕೊಳ್ಳುವಂತೆ ಆಡಿಯೋ ಸಂದೇಶದಲ್ಲಿ ಅಜರ್ ಕರೆ ನೀಡಿದ್ದ. ಇದನ್ನು ಕಾರ್ಯಗತಗೊಳಿಸಿದ್ದು ಇದೆ ಅಬ್ದುಲ್ ರಶೀದ್ ಘಾರಿ ನಿರ್ದೇಶಿತ ತಂಡ. ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ.

ಸರ್ಜಿಕಲ್ ಸ್ಟ್ರೈಕ್ 2: ಕಂದಹಾರ್ ವಿಮಾನ ಹೈಜಾಕರ್ ಯೂಸಫ್ ಅಜರ್ ಹತ್ಯೆ? ಸರ್ಜಿಕಲ್ ಸ್ಟ್ರೈಕ್ 2: ಕಂದಹಾರ್ ವಿಮಾನ ಹೈಜಾಕರ್ ಯೂಸಫ್ ಅಜರ್ ಹತ್ಯೆ?

ಬಾಲಕೋಟ್ ಪ್ರದೇಶವೇ ಏಕೆ?

ಬಾಲಕೋಟ್ ಪ್ರದೇಶವೇ ಏಕೆ?

ಬಾಲಾಕೋಟ್- ಪಾಕಿಸ್ತಾನದ ಅಬ್ಬೋಟಾಬಾ ನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಅಬೊಟಾಬಾದ್ ನಲ್ಲೇ ಜಾಗತಿಕ ಉಗ್ರ ಒಸಾಮಾ ಬಿಲ್ ಲಾಡೆನ್ ತನ್ನ ಅಡಗುತಾಣವನ್ನು ಹೊಂದಿದ್ದ. ಖೈಬರ್ ಪಖ್ತುಖ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಗೆ ಈ ತಾಣ ಸೇರುತ್ತದೆ. ಇಲ್ಲಿ ಉಗ್ರರ ತರಬೇತಿಗೆ ಬೇಕಾದ ಅಗತ್ಯ ಸ್ಥಳ, ಪರಿಕರ, ನೆರವು ಇದೆ. ಹೀಗಾಗಿ, ಜೈಷ್ ನ ಆತ್ಮಾಹುತಿ ದಾಳಿ ತಂಡಕ್ಕೆ ಇಲ್ಲಿ ತರಬೇತಿ ನೀಡುವುದು ಅಬ್ದುಲ್ ರಶೀದ್ ಘಾರಿ ಕೆಲಸವಾಗಿತ್ತು.

ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ ಘಟನೆ

ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ ಘಟನೆ

1999ರಲ್ಲಿ ಇಂಡಿಯನ್ ಏರ್ ಲೈನ್ಸ್ ಐಸಿ 814 ವಿಮಾನವನ್ನು ಹೈಜಾಕ್ ಮಾಡಿದ ಉಗ್ರರ ತಂಡದಲ್ಲಿ ಮೊಹಮ್ಮದ್ ಸಲೀಂ ಕೂಡಾ ಇದ್ದ. ಕಠ್ಮಂಡುವಿನಿಂದ ಲಕ್ನೋಗೆ ತೆರಳಬೇಕಿದ್ದ ವಿಮಾನವನ್ನು ಹೈಜಾಕ್ ಮಾಡಿದ್ದ ಉಗ್ರರು, ಕಂದಹಾರ್ ಗೆ ವಿಮಾನವನ್ನು ತೆಗೆದುಕೊಂಡು ಹೋಗಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಅಂದಿನ ವಾಜಪೇಯಿ ಸರ್ಕಾರ ಹಾಗೂ ಅಜಿತ್ ದೋವಲ್ ಅವರು ಉಗ್ರ ಅಜರ್ ಮಸೂದ್ ನನ್ನು ಬಿಡುಗಡೆ ಮಾಡಿದ್ದರು.

ಜೈಷ್ ಎ ಮೊಹಮ್ಮದ್ ನ ಉಸ್ತುವಾರಿ ಯಾರು?

ಜೈಷ್ ಎ ಮೊಹಮ್ಮದ್ ನ ಉಸ್ತುವಾರಿ ಯಾರು?

ಕಾಶ್ಮೀರದಲ್ಲಿರುವ ಭಾರತದ ಹಿರಿಯ ಅಧಿಕಾರಿಗಳ ಪ್ರಕಾರ, ಸದ್ಯ ಜೈಷ್ ಎ ಮೊಹಮ್ಮದ್ ನ ಉಸ್ತುವಾರಿಯನ್ನು ಉಮೆರ್, ಇಸ್ಮಾಯಿಲ್, ರಶೀದ್ ಘಾಜಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು 60 ಮಂದಿ ಸದಸ್ಯರು ಈ ಸಂಘಟನೆಯಲ್ಲಿದ್ದು ಈ ಪೈಕಿ 35 ಮಂದಿ ಸ್ಥಳೀಯರಿದ್ದಾರೆ. ಅಜರ್ ಮಸೂರ್ ಅನುಪಸ್ಥಿತಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಸೈಯದ್ ಸಲಾಹುದ್ದೀನ್ ಸಲಹೆ ನೀಡುತ್ತಿದ್ದಾನೆ. ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದಿನ ಟೌನ್ ಹಾಲ್ ನಲ್ಲಿ ಜನವರಿ 19ರಂದು ಸಭೆ ನಡೆಸಿ, ಸುಧಾರಿತ ಸ್ಫೋಟಕಗಳ ಬಳಕೆ ಬಗ್ಗೆ ಚರ್ಚಿಸಿದ್ದರು.

English summary
Foreign Secretary Vijay Gokhale said that the air force hit at the JeM camp headed by Yusuf Azhar. Yusuf Azhar is the brother-in-law of Masood Azhar, the chief of JeM. Yusuf Azhar was involved in the 1999 IC-814 hijacking to free Mazoor Azhar, and works under the alias Mohammad Salim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X