ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 12: ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಆರಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಂದರೆ ಮುಂಬರುವ ಚುನಾವಣೆಯಲ್ಲಿ ಬಿಡೆನ್ ಜಯಗಳಿಸಿದರೆ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಲಿದ್ದಾರೆ. ಅಮೆರಿಕದ ಚುನಾವಣೆಯ ಪಾಲಿಗೆ ಇದು ಮಹತ್ವದ ನಡೆಯಾಗಿದೆ.

ಭಾರತ ಮೂಲದವರಾಗಿರುವುದರಿಂದ ಕಮಲಾ ಹ್ಯಾರಿಸ್ (55) ಅವರ ಆಯ್ಕೆಯನ್ನು ಅಮೆರಿಕದಲ್ಲಿನ ಭಾರತೀಯ ಸಮುದಾಯಗಳು ಸ್ವಾಗತಿಸಿವೆ. ಈ ಮೂಲಕ ಕಮಲಾ ಹ್ಯಾರಿಸ್ ಅಪರೂಪದ ಸಾಧನೆ ಮಾಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನ ಮಾತ್ರವಲ್ಲ, ಅಮೆರಿಕದ ಯಾವುದೇ ಪ್ರಮುಖ ಪಕ್ಷಗಳ ಅಧ್ಯಕ್ಷೀಯ ಟಿಕೆಟ್‌ನಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಮೊಟ್ಟಮೊದಲ ಕಪ್ಪುವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಜತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸೆಣಸುತ್ತಿರುವ ಭಾರತ ಹಾಗೂ ಏಷ್ಯಾ ಮೂಲದ ಪ್ರಥಮ ವ್ಯಕ್ತಿ ಎನಿಸಿದ್ದಾರೆ. ಮುಂದೆ ಓದಿ...

ತಾಯಿ ಚೆನ್ನೈ ಮೂಲದವರು

ತಾಯಿ ಚೆನ್ನೈ ಮೂಲದವರು

ಕಮಲ ಹ್ಯಾರಿಸ್ ಜನಿಸಿದ್ದು 1964ರಲ್ಲಿ. ಅವರ ತಂದೆ ಜಮೈಕಾದವರಾದರೆ, ತಾಯಿ ಭಾರತದವರು. ಅವರ ಬಾಲ್ಯದ ಜೀವನ ಹೆಚ್ಚು ಕಳೆದಿದ್ದು ಕ್ಯಾಲಿಪೋರ್ನಿಯಾದ ಬರ್ಕೆಲಿಯಲ್ಲಿ. ತಮ್ಮ ತಾಯಿಯ ಜತೆಗಿನ ಬಾಂಧವ್ಯದ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಆಕೆಯೇ ತಮ್ಮ ಅತಿ ದೊಡ್ಡ ಸ್ಫೂರ್ತಿ ಎಂದು ತಿಳಿಸಿದ್ದರು. ಅದಂಹಾಗೆ, ಕಮಲಾ ಅವರ ತಾಯಿ ಚೆನ್ನೈ ಮೂಲದವರು.

ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!

ತಾಯಿ ಕ್ಯಾನ್ಸರ್ ಸಂಶೋಧಕಿ

ತಾಯಿ ಕ್ಯಾನ್ಸರ್ ಸಂಶೋಧಕಿ

ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಕ್ಯಾನ್ಸರ್ ಸಂಶೋಧಕರಾಗಿದ್ದರು. 2009ರಲ್ಲಿ ಅವರು ನಿಧನರಾಗಿದ್ದರು. ಜಮೈಕಾ ಮೂಲದ ತಂದೆ ಡೊನಾಲ್ಡ್ ಹ್ಯಾರಿಸ್ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದಾರೆ. ಕಮಲಾ ಅವರ ತಂಗಿ ಮಾಯಾ ಹ್ಯಾರಿಸ್ ಇನ್ನೂ ಪುಟ್ಟ ಮಗುವಾಗಿರುವಾಗಲೇ ಅವರ ತಂದೆ ತಾಯಿ ಬೇರ್ಪಟ್ಟಿದ್ದರು.

ವಲಸಿಕರು, ಕಪ್ಪು ವರ್ಣೀಯರ ಪರ ಹೋರಾಟ

ವಲಸಿಕರು, ಕಪ್ಪು ವರ್ಣೀಯರ ಪರ ಹೋರಾಟ

ಕಮಲಾ ಹ್ಯಾರಿಸ್ 2016ರಲ್ಲಿ ಸೆನೆಟ್ ಆಯ್ಕೆಯಾಗುವವರೆಗೂ ಕಾನೂನು ವಲಯದಲ್ಲಿ ಕೆಲಸ ಮಾಡುತ್ತಿದ್ದರು. ಕ್ಯಾಲಿಫೋರ್ನಿಯಾದ ಮಾಜಿ ಅಟಾರ್ನಿ ಜನರಲ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ಅಟಾರ್ನಿಯಾಗಿಯೂ ಕಾರ್ಯನಿರ್ವಹಿಸಿದ್ದರು. ವಲಸಿಗರು ಮತ್ತು ಸಮಾನಹಕ್ಕುಗಳ ವಿಚಾರದಲ್ಲಿ ಕಮಲಾ ಅನೇಕ ಹೋರಾಟ ನಡೆಸಿದ್ದಾರೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಅಖಾಡಕ್ಕಿಳಿದ ಬರಾಕ್ ಒಬಾಮ..!ಡೊನಾಲ್ಡ್ ಟ್ರಂಪ್ ವಿರುದ್ಧ ಅಖಾಡಕ್ಕಿಳಿದ ಬರಾಕ್ ಒಬಾಮ..!

2020ರ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕಾಗಿ ಕಮಲಾ ಹ್ಯಾರಿಸ್ ಮುಂಚೂಣಿಯಲ್ಲಿ ಪ್ರಚಾರ ನಡೆಸಿದ್ದರು. ಆದರೆ ಕೆಲವು ದಿನಗಳ ಬಳಿಕ 2019ರ ಡಿ. 3ರಂದು ಅನುದಾನದ ಕೊರತೆ ಕಾರಣದಿಂದ ಪ್ರಚಾರ ಕಾರ್ಯ ಮೊಟಕುಗೊಳಿಸಿದ್ದರು.

ಪ್ರಚಾರದಿಂದ ಹಿಂದೆ ಸರಿದಿದ್ದ ಕಮಲಾ

ಪ್ರಚಾರದಿಂದ ಹಿಂದೆ ಸರಿದಿದ್ದ ಕಮಲಾ

ಡೆಮಾಕ್ರಟಿಕ್‌ನ ಆರಂಭದ ಪ್ರಚಾರ ಕಾರ್ಯಗಳಲ್ಲಿ ಅತ್ಯುತ್ತಮ ದರ್ಜೆಯ ಸ್ಪರ್ಧಿಗಳಲ್ಲಿ ಕಮಲಾ ಒಬ್ಬರೆನಿಸಿದ್ದರು. ಓಕ್ಲಾಂಡ್‌ನಲ್ಲಿ ನಡೆದ ಮೊದಲ ಪ್ರಚಾರ ಸಭೆಯಲ್ಲಿ ಸುಮಾರು 20,000 ಜನರನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ ಅವರ ಪ್ರಚಾರ ಪ್ರಾರಂಭದ ಭರವಸೆಗಳು ಮಸುಕಾಗಿದ್ದವು. ಅವರ ಹಿನ್ನೆಲೆ ಬಗ್ಗೆ ಅನೇಕರು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಮತದಾರರನ್ನು ಸೆಳೆಯಲು ಅಚಲ ಸಂದೇಶಗಳನ್ನು ರವಾನಿಸುವಲ್ಲಿ ಅವರು ವಿಫಲರಾಗಿದ್ದರು. ಪ್ರಾಥಮಿಕ ಹಂತದ ಮೊದಲ ಮತಗಳು ಚಲಾವಣೆಯಾಗುವ ಎರಡು ತಿಂಗಳ ಮುನ್ನವೇ ರೇಸ್‌ನಿಂದ ಹಿಂದೆ ಸರಿದಿದ್ದರು.

English summary
Indian origin Kamala Harris was chosen as Democratic party's vice presidential candidate for American elections 2020. Who is Kamala Harris?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X