• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೌಂಟ್ ಎವರೆಸ್ಟ್ ಮೊದಲ ಮಹಿಳೆ ಜಂಕೋ ತಾಬಿ ಸ್ಮರಿಸಿದ ಗೂಗಲ್

|
Google Oneindia Kannada News

ಬೆಂಗಳೂರು, ಸೆ. 22: ಮೌಂಟ್ ಎವರೆಸ್ಟ್ ಶಿಖರ ಏರಿದ ಜಗತ್ತಿನ ಮೊದಲ ಮಹಿಳೆ ಜಂಕೋ ತಾಬಿ 80ನೇ ಹುಟ್ಟುಹಬ್ಬದ ಸಂಭ್ರಮವನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ವಿಶೇಷ ಡೂಡ್ಲ್ ಮೂಲಕ ಸ್ಮರಿಸಿದೆ.

ಮೌಂಟ್ ಎವರೆಸ್ಟ್ ಅಲ್ಲದೆ ಪ್ರತಿ ಖಂಡದಲ್ಲಿರುವ ಅತ್ಯಂತ ಎತ್ತರದ ಶಿಖರಗಳನ್ನು ಏರಿದ ಮೊದಲ ಮಹಿಳೆ ಎಂಬ ಸಾಧನೆ ಜಂಕೋ ತಾಬಿ ಹೆಸರಿನಲ್ಲಿದೆ. 2016ರಲ್ಲಿ ತಾಬಿ ತಮ್ಮ ನಿಧನರಾದರು.

ಗೂಗಲ್‌ ಡೂಡಲ್‌ನಲ್ಲಿ ನೀಲ್ ಆರ್ಮ್‌ ಸ್ಟ್ರಾಂಗ್, ವಿಶೇಷತೆಯೇನು?ಗೂಗಲ್‌ ಡೂಡಲ್‌ನಲ್ಲಿ ನೀಲ್ ಆರ್ಮ್‌ ಸ್ಟ್ರಾಂಗ್, ವಿಶೇಷತೆಯೇನು?

1939ರ ಸೆಪ್ಟೆಂಬರ್ 22ರಂದು ಜಪಾನಿನ ಫುಕುಶಿಮಾದ ಮಿಹಾರುವಿನಲ್ಲಿ ಜನಿಸಿದ ಜಂಕೋ ತಾಬಿಗೆ ಚಿಕ್ಕಂದಿನಿಂದ ಪರ್ವತಾರೋಹಣ ಅಚ್ಚುಮೆಚ್ಚಿನ ಚಟುವಟಿಕೆಯಾಗಿತ್ತು.

10ನೇ ವಯಸ್ಸಿನಲ್ಲೇ ಶಾಲಾ ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರೊಂದಿಗೆ 6,289 ಅಡಿ ಎತ್ತರದ ನಾಸು ಪರ್ವತವನ್ನೇರಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದ ಜಂಕೋ 1962ರಿಂದ ಪರ್ವತಾರೋಹಣದಲ್ಲಿ ಹೆಚ್ಚಿನ ಸಮಯ ಕಳೆದರು. ತಮ್ಮ ಕಾಲೇಜಿನ ಮೌಂಟೇನ್ ಕ್ಲೈಂಬಿಂಗ್ ಕ್ಲಬ್​ನ ಸಕ್ರಿಯ ಸದಸ್ಯರಾಗಿದ್ದರು. 1969ರಲ್ಲಿ ಲೇಡಿಸ್ ಕ್ಲೈಂಬಿಂಗ್ ಕ್ಲಬ್ ರಚಿಸಿದರು. 1972ರಲ್ಲಿ ಜಪಾನಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಫುಜಿ (3776 ಮೀ.) ಹಾಗೂ ಸ್ವಿಜರ್ಲೆಂಡಿನ ಸ್ವಿಸ್ ಅಲ್ಪ್ಸ್ ಪರ್ವತ ಶ್ರೇಣಿಯಲ್ಲಿನ 4,478 ಮೀ. ಎತ್ತರದ ಮ್ಯಾಟರ್ ಹಾರ್ನ್ ಶಿಖರವನ್ನೇರಿದರು.

1975ರ ಮೇ 16ರಂದು ಒಂಭತ್ತು ಸ್ಥಳೀಯ ಶೆರ್ಪಾಗಳೊಂದಿಗೆ ತೇನ್‌ಸಿಂಗ್,ಎಡ್ಮಂಡ್ ಹಿಲರಿಯವರು ಸಾಗಿದ ದಾರಿಯಲ್ಲೇ ಕ್ರಮಿಸಿ ಮೌಂಟ್ ಎವರೆಸ್ಟ್ ಸಮ್ಮಿಟ್ ಮುಕ್ತಾಯಗೊಳಿಸಿದ ಸಾಧನೆ ಮಾಡಿದರು.

1992ರಲ್ಲಿ ಏಳು ಖಂಡಗಳಲ್ಲಿನ ಏಳು ಪರ್ವತಗಳ ಸಮ್ಮಿಟ್ ಪೂರ್ಣಗೊಳಿಸಿದ ಮೊದಲ ಮಹಿಳಾ ಪರ್ವತಾರೋಹಿ ಎನಿಸಿಕೊಂಡರು. ಸುಮಾರು 70 ದೇಶಗಳಲ್ಲಿ ಬೆಟ್ಟ ಹತ್ತಿಳಿದ ಸಾಧನೆ ಮಾಡಿದ್ದಾರೆ.

1991ರ ಎಪಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿ, "ನನ್ನ ಪೀಳಿಗೆಯ ಪುರುಷರಿಗೆ ತಮ್ಮ ಮಹಿಳೆಯರು ಮನೆಯಲ್ಲೇ ಅಡುಗೆ, ಕ್ಲೀನಿಂಗ್ ನಲ್ಲಿ ತೊಡಗಿಕೊಂಡಿರಬೇಕು ಎಂಬ ಮನಸ್ಥಿತಿ ಇತ್ತು, ಇದನ್ನು ತೊಡೆದು ಹಾಕಲು ನಾನು ಮುಂದಾದೆ, ಇನ್ನು ಹೆಚ್ಚೆಚ್ಚು ಪರ್ವತಗಳನ್ನು ಏರುವುದು ನನ್ನ ಗುರಿ" ಎಂದಿದ್ದರು.

ಮೌಂಟ್ ಎವರೆಸ್ಟ್ ನಂತರ 1980ರಲ್ಲಿ ತಾಂಜೇನಿಯಾದ ಕಿಲಿಮಾಂಜರೋ, 1987ರಲ್ಲಿ ಅರ್ಜೆಂಟೀನಾದ ಅಕೊಂಗಗುವಾ, 1988ರಲ್ಲಿ ಅಲಾಸ್ಕಾದ ಮೆಕ್ ಕಿನ್ಲೆ(ಡೆನಾಲಿ), 1989ರಲ್ಲಿ ರಷ್ಯಾದ ಎಲ್ಬ್ರೂಸ್, 1991ರಲ್ಲಿ ಅಂಟಾರ್ಟಿಕಾದ ವಿನ್ಸನ್ ಮಾಶಿಫ್, 1992ರಲ್ಲಿ ಇಂಡೋನೇಷಿಯಾದ ಕಾರ್ಸ್ಟೆಂನ್ಜ್ ಪಿರಮಿಡ್ ಮುಂತಾದ ಪರ್ವತಗಳನ್ನು ಯಶಸ್ವಿಯಾಗಿ ಹತ್ತಿಳಿದರು. ಹೊಟ್ಟೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಬೆಟ್ಟ ಹತ್ತುವುದನ್ನು ನಿಲ್ಲಿಸಿರಲಿಲ್ಲ, 2016ರ ಅಕ್ಟೋಬರ್ 20ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು.

English summary
Today's Google Doodle is dedicated to Japanese mountaineer Junko Tabei's 80th birthday. Tabei was the first woman to reach the summit of Mount Everest and also the first woman to climb all seven highest peaks on every continent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X