• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿ ಚಿತ್ರ : ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ್

By Mahesh
|

ನವದೆಹಲಿ, ಆಗಸ್ಟ್ 09: ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಗುರುವಾರ(ಆಗಸ್ಟ್ 9) ನಡೆದದ್ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರು 125 ಮತಗಳನ್ನು ಗಳಿಸಿ, ಜಯ ದಾಖಲಿಸಿದ್ದಾರೆ.

ಯುಪಿಎಯ ಬಿಕೆ ಹರಿಪ್ರಸಾದ್ ಅವರು 105 ಮತಗಳನ್ನು ಮಾತ್ರ ಗಳಿಸಿದರು.ಪಿಜೆ ಕುರಿಯನ್ ಅವರ ನಿವೃತ್ತಿ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ನೂತನ ಉಪ ಸಭಾಪತಿಯಾಗಿ ಹರಿವಂಶ್ ಅವರು ಆಯ್ಕೆಯಾಗಿದ್ದಾರೆ ಎಂದು ರಾಜ್ಯಸಭೆ ಚೇರ್ಮನ್ ವೆಂಕಯ್ಯ ನಾಯ್ಡು ಅವರು ಘೋಷಿಸಿದರು.

ರಾಜ್ಯಸಭೆ ಉಪಸಭಾಪತಿ ಚುನಾವಣೆ: NDA ಅಭ್ಯರ್ಥಿಗೆ ಗೆಲುವು

ರಾಜ್ಯಸಭೆ ಉಪಸಭಾಪತಿ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ (3 ಮತಗಳಿದ್ದವು) ಬಹಿಷ್ಕರಿಸಿದ್ದರೆ, ಕೊನೆಯ ಕ್ಷಣದಲ್ಲಿ ಟಿಆರ್ ಎಸ್ ಪಕ್ಷ ತನ್ನ ಬೆಂಬಲವನ್ನು ಎನ್ ಡಿಎ ಅಭ್ಯರ್ಥಿಗೆ ನೀಡಿತು. ಎನ್​ಡಿಎ ಘೋಷಿಸಿರುವ ಅಭ್ಯರ್ಥಿಯ ವಿಷಯದಲ್ಲಿ ಮಿತ್ರ ಪಕ್ಷಗಳು ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ಪುಣೆ ಮೂಲದ ವಂದನಾ ಅವರಿಗೆ ಶಿವಸೇನಾ ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬ ವಾದ ಬಂದಿತ್ತು.

500 ರು ಮಾಸಿಕ ಸಂಬಳದೊಂದಿಗೆ ವೃತ್ತಿ ಬದುಕು ಆರಂಭಿಸಿದ ಹರಿವಂಶ್ ಅವರು ಇಂದು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಹರಿವಂಶ್ ಕುರಿತ ಇನ್ನಷ್ಟು ವಿವರ ಇಲ್ಲಿದೆ...

ಹರಿವಂಶ ನಾರಾಯಣ ಸಿಂಗ್​

ಹರಿವಂಶ ನಾರಾಯಣ ಸಿಂಗ್​

* ಹರಿವಂಶ ನಾರಾಯಣ ಸಿಂಗ್​ ಅವರು 1956ರ ಜೂನ್​ 30ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು.

* ಬನಾರಸ್​ ಹಿಂದು ವಿಶ್ವವಿದ್ಯಾಲಯ(BHU) ದಿಂದ ಪದವಿ ಪಡೆದಿದ್ದಾರೆ.

* BHU ನಿಂದಲೇ ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮಾ ಪಡೆದುಕೊಂಡರು.

* 500ರು ತಿಂಗಳ ಸಂಬಳದೊಂದಿಗೆ ವೃತ್ತಿ ಬದುಕು ಆರಂಭಿಸಿದರು.

* ಕಾಲೇಜು ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್(ಜೆಪಿ ಚಳವಳಿ) ಅವರ ಸಾಮಾಜಿಕ ಕ್ರಾಂತಿಯಿಂದ ಪ್ರಭಾವಿತರಾದರು. 1974ರಲ್ಲಿ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.

ಟೈಮ್ ಆಫ್ ಇಂಡಿಯಾದಲ್ಲಿ ಟ್ರೈನಿ

ಟೈಮ್ ಆಫ್ ಇಂಡಿಯಾದಲ್ಲಿ ಟ್ರೈನಿ

* 1977ರಲ್ಲಿ ಟೈಮ್ ಆಫ್ ಇಂಡಿಯಾದಲ್ಲಿ ಟ್ರೈನಿ ಪತ್ರಕರ್ತರಾಗಿದ್ದರು.

* ಧರ್ಮಯುಗ್ ಮ್ಯಾಗಜೀನ್ ನಲ್ಲಿ 1981ರ ತನಕ ಕಾರ್ಯ ನಿರ್ವಹಿಸಿದರು.

* 1981ರಿಂದ 1984ರ ತನಕ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದರು. ನಂತರ ಅಮೃತ್ ಬಜಾರ್ ಪತ್ರಿಕಾದ ರವಿವಾರ್ ಮ್ಯಾಗಜೀನ್ ನ ಸಂಪಾದಕರಾಗಿದ್ದರು.

* 1989ರಲ್ಲಿ ರಾಂಚಿಯಲ್ಲಿ ಉಷಾ ಮಾರ್ಟಿನ್ ಸಮೂಹದ ಪ್ರಭಾತ್ ಖಬರ್ ನ ಜವಾಬ್ದಾರಿ ವಹಿಸಿಕೊಂಡರು.

ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು

ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು

* ಪ್ರಭಾತ್ ಖಬರ್ ಸುಧಾರಣೆ ಮಾಡಿದ್ದಲ್ಲದೆ, ಜಾರ್ಖಂಡ್, ಬಿಹಾರ ಹಾಗೂ ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಿದರು.

* ಹರಿವಂಶ ನಾರಾಯಣ ಸಿಂಗ್​ ಅವರು ಮಾಜಿ ಪ್ರಧಾನಿ ಚಂದ್ರಶೇಖರ್​ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದರು.

* ನಿತೀಶ್ ಕುಮಾರ್ ಅವರ ಜೆಡಿ-ಯುವಿನಿಂದ ಪ್ರಥಮ ಬಾರಿಗೆ ಸಂಸದರಾಗಿ ನಾಮಾಂಕಿತಗೊಂಡರು.

* ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ನಾಮಪತ್ರದ ಶುಲ್ಕ 10,000 ರು ಗಳನ್ನು ರೀಫಂಡ್ ಆಗಿ ಪಡೆದುಕೊಂಡಿದ್ದಾರೆ.

ಗೆಲ್ಲಲು ಎಷ್ಟು ಮತ ಬೇಕಿತ್ತು?

ಗೆಲ್ಲಲು ಎಷ್ಟು ಮತ ಬೇಕಿತ್ತು?

ಚುನಾವಣೆಗೂ ಮುನ್ನ ಇದ್ದ ಲೆಕ್ಕಾಚಾರ ಹೀಗಿತ್ತು: 245 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 122 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ. ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ. ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ. ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ. ಯುಪಿಎ ಪರ 112 ಮತಗಳಿವೆ, ಎನ್ಡಿಎ 90 +42(ಇನ್ನೂ ನಿರ್ಧಾರವಾಗದ ಸದಸ್ಯರು) ಹೊಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National Democratic Alliance (NDA) candidate Harivansh Narayan Singh elected as Rajya Sabha Deputy Chairman with 125 votes. UPA's BK Hariprasad got 105 votes. PM Narendra Modi congratulated e Harivansh Narayan Singh who was elected as Rajya Sabha Deputy Chairman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more