ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಸಂಘರ್ಷ: ಗಾಲ್ವಾನ್ ಕಣಿವೆ ಹೆಸರಿನ ರಹಸ್ಯ

|
Google Oneindia Kannada News

ಲಡಾಕ್ ಪೂರ್ವ ಗಡಿಯಲ್ಲಿರುವ ಗಾಲ್ವಾನ್ ನದಿ ಕಣಿವೆ ಈಗ ಎಲ್ಲರ ಚರ್ಚೆಯ ಕೇಂದ್ರ ಬಿಂದುವಾಗಿದೆ. ಭಾರತ ಹಾಗೂ ಚೀನಾ ನಡುವಿನ ಗಡಿ ನಿಯಂತ್ರಣ ರೇಖೆ (Line of actual Control) ಗೆ ಹೊಂದುಕೊಂಡಂತೆ ಇರುವ ಗಾಲ್ವಾನ್ ಕಣಿವೆ ಮೆಲೆ ಚೀನಾ ಕಣ್ಣಿಟ್ಟಿದೆ. ಹಲವು ದಶಕಗಳಿಂದ ಹುದುಗಿಟ್ಟಿದ್ದ ಕಬಳಿಕೆ ಬಯಕೆಯನ್ನು ಇದೀಗ ಹೊರ ಹಾಕಿದೆ.

Recommended Video

History of India China border dispute | Oneindia Kannada

ಮೇ ತಿಂಗಳಿನಲ್ಲಿ ಆರಂಭವಾದ ಸಂಘರ್ಷ ಜೂನ್15 ಮತ್ತು 16 ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವಿನ ಸಂಘರ್ಷ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿದೆ. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು, 43 ಮಂದಿ ಚೀನಾ ಯೋಧರು ಮೃತಪಟ್ಟಿದ್ದಾರೆ.

India-China standoff LIVE: ಭಾರತ ಹಾಗೂ ಚೀನಾ ಗಡಿಯಲ್ಲಿ ಏನಾಗುತ್ತಿದೆ?India-China standoff LIVE: ಭಾರತ ಹಾಗೂ ಚೀನಾ ಗಡಿಯಲ್ಲಿ ಏನಾಗುತ್ತಿದೆ?

1962ರ ಭಾರತ-ಚೀನಾ ಯುದ್ಧದ ನಂತರದಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 1971ರ ಬಳಿಕ ಇದೇ ಮೊದಲ ಬಾರಿಗೆ ಈ ಬಾರಿ ರಕ್ತಪಾತ ಕಂಡು ಬಂದಿದೆ. ಇಷ್ಟಕ್ಕೂ ಇದೆಲ್ಲ ಇಷ್ಟೆಲ್ಲ ಘಟನೆಗೆ ಸಾಕ್ಷಿಯಾದ ಗಾಲ್ವಾನ್ ಕಣಿವೆ ಇರುವುದು ಎಲ್ಲಿ. ಈ ಪ್ರದೇಶ ವಿವಾದಕ್ಕೆ ಕಾರಣವಾಗಿರುವುದು ಏಕೆ. ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಈಗಾಗಲೇ ಒನ್ಇಂಡಿಯಾದಲ್ಲಿ ಓದಿರುತ್ತೀರಿ. ಈಗ ಗಾಲ್ವಾನ್ ಕಣಿವೆ ಹೆಸರಿನ ಹಿಂದಿನ ಸತ್ಯ, ರಹಸ್ಯ ಅಥವಾ ಕುತೂಹಲಕಾರಿ ಅಂಶದ ಬಗ್ಗೆ ಬೆಳಕು ಚೆಲ್ಲುವ ಸಮಯ....

ಗಾಲ್ವಾನ್ ಮೇಲೆ ಚೀನಾ ಕಣ್ಣಿಟ್ಟಿರುವುದು ಏಕೆ?

ಗಾಲ್ವಾನ್ ಮೇಲೆ ಚೀನಾ ಕಣ್ಣಿಟ್ಟಿರುವುದು ಏಕೆ?

ಚೀನಾ ಪ್ರಾಬಲ್ಯ ಹೊಂದಿರುವ ಶಿಯೊಕ್ ನದಿ ಮಾರ್ಗದ ಪಕ್ಕದಲ್ಲೇ ಗಾಲ್ವಾನ್ ನದಿ ಕಣಿವೆ ಹಾದು ಹೋಗುತ್ತದೆ. ಈ ಪ್ರದೇಶದ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಭಾರತವು ಗಾಲ್ವಾನ್ ನದಿ ಕಣಿವೆ ಸಹಾಯದಿಂದ ಅಕ್ಸಾಯ್ ಚಿನ್ ಪ್ರಸ್ಥಭೂಮಿಯಲ್ಲಿ ಹಿಡಿತ ಸಾಧಿಸುವ ಭೀತಿ ಚೀನಾವನ್ನು ಕಾಡುತ್ತಿದೆ. ಹೀಗಾಗಿ, ಗಡಿ ರೇಖೆ ಉಲ್ಲಂಘಿಸಿ, ಭಾರತ ಭಾಗದ LAC ದಾಟಿ ನುಗ್ಗಲು ಚೀನಾ ಯತ್ನಿಸುತ್ತಲೇ ಇದೆ. ಈ ಭಾಗವನ್ನು ಈ ಹಿಂದೆ ಗುರುತಿಸಿದ ಲಡಾಕಿ ಸಮುದಾಯದ ವ್ಯಕ್ತಿಗೆ ಮುಂದೊಂದು ದಿನ ಇದೇ ರಣಭೂಮಿಯಾಗುವ ಬಗ್ಗೆ ಕಲ್ಪನೆ ಇದ್ದಿರಲು ಸಾಧ್ಯವಿಲ್ಲ.

ಗುಲಾಂ ರಸೂಲ್ ಗಾಲ್ವಾನ್

ಗುಲಾಂ ರಸೂಲ್ ಗಾಲ್ವಾನ್

ಗಾಲ್ವಾನ್ ನದಿ ಮುಖಜ ಭೂಮಿ, ಕಣಿವೆಗೆ ಗುಲಾಂ ರಸೂಲ್ ಗಾಲ್ವಾನ್ ಹೆಸರಿಡಲಾಗಿದೆ. ಆತ ಒಬ್ಬ ಸಾಮಾನ್ಯ ಲಡಾಕಿ ವ್ಯಕ್ತಿಯಾಗಿದ್ದ. ಆದರೆ, ಒಳ್ಳೆ ಸಾಹಸಿಯಾಗಿದ್ದ. ಗಾಲ್ವಾನ್ ನದಿ ಪ್ರದೇಶದಲ್ಲಿ ಹೊಸ ಅನ್ವೇಷಣೆಯಲ್ಲಿ ತೊಡಗಿ ನದಿ ಮಾರ್ಗದ ಜಾಡು ಹಿಡಿದು ಚಾಂಗ್ ಚೆನ್ಮೋ ಕಣಿವೆಯಲ್ಲಿ ಅನ್ವೇಷಣೆ ನಡೆಸುತ್ತಿದ್ದ ಬ್ರಿಟಿಷ್ ಸಂಶೋಧಕರ ಪಡೆಯನ್ನು ಸೇರಿಕೊಂಡ. ಈತ ಅನುಸರಿಸಿ ಬಂದ ಮಾರ್ಗ ಸರಿ ಸುಮಾರು 80 ಕಿ. ಮೀ ದೂರದ್ದಾಗಿತ್ತು. ಕಾಶ್ಮೀರದ ಈಶಾನ್ಯ ಭಾಗದ ಈ ಕಣಿವೆಗೆ ಈ ಸಾಹಸಿಯ ಹೆಸರನ್ನಿಟ್ಟು ಗೌರವಿಸಲಾಯಿತು.

ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!

1956ರಿಂದ ಸಮಸ್ಯೆ ಎಂಬುದು ಕಣಿವೆಯಲ್ಲಿದೆ

1956ರಿಂದ ಸಮಸ್ಯೆ ಎಂಬುದು ಕಣಿವೆಯಲ್ಲಿದೆ

ಭಾರತ-ಚೀನಾ ಗಡಿಯಲ್ಲಿನ ಪಶ್ಚಿಮ ಭಾಗವು ಅತಿಹೆಚ್ಚು ಪರ್ವತ ಶ್ರೇಣಿಗಳನ್ನು ಹೊಂದಿದೆ. ಶಿಯಾಕ್ ನದಿಯ ಪಕ್ಕದಲ್ಲೇ ಈ ಪ್ರದೇಶವು ಹಾದು ಹೋಗುತ್ತದೆ. ಇತ್ತೀಚಿಗಷ್ಟೇ ಶಿಯಾಕ್ ನದಿಗೆ ಹೊಂದಿಕೊಳ್ಳುವಂತೆ ಇರುವ ಪ್ರದೇಶದಲ್ಲಿ ದರ್ಬಾಕ್-ಶಿಯಾಕ್ ಗ್ರಾಮ ಮತ್ತು ದೌಲತ್ ಬೇಗ್ ಒಲ್ದಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಗೆ ಹತ್ತಿರದಲ್ಲಿರುವ ಈ ರಸ್ತೆಯೇ ಉಭಯ ರಾಷ್ಟ್ರಗಳ ನಡುವಿನ ಸಂವಹನಕ್ಕೆ ಪ್ರಮುಖ ಮಾರ್ಗವಾಗಿದೆ. ಆದರೆ, ಈ ಭಾಗದ ಮೇಲೆ ಮೊದಲಿಗೆ ಚೀನಾ ಕಣ್ಣಿಟ್ಟಿದ್ದು 1956ರಲ್ಲಿ ಎನ್ನಬಹುದು.

ಸಾವಿನ ಮಾರ್ಗ ಅಥವಾ ಸಾವಿನ ನದಿ

ಸಾವಿನ ಮಾರ್ಗ ಅಥವಾ ಸಾವಿನ ನದಿ

ಚಳಿಗಾಲದಲ್ಲಿ ಶಿಯಾಕ್ ನದಿಯು ಸಂಪೂರ್ಣ ಹೆಪ್ಪುಗಟ್ಟುತ್ತಿದ್ದು, ಬೇಸಿಗೆ ಕಾಲ ಬರುತ್ತಿದ್ದಂತೆ ನದಿಯಾಗಿ ಪರಿವರ್ತನೆಯಾಗುತ್ತದೆ. ಈ ವೇಳೆಯಲ್ಲಿ ಶಿಯಾಕ್ ನದಿಯಲ್ಲಿ ನೀರಿನ ಪ್ರಮಾಣ ಹಾಗೂ ವೇಗವು ಹೆಚ್ಚಾಗುತ್ತದೆ. ಇದರಿಂದ ನದಿಯು ಹೆಪ್ಪುಗಟ್ಟಿದ ಸಂದರ್ಭದಲ್ಲಿ ಸಂಚಾರ ಆರಂಭಿಸಿದ ಜನರು ಹಾಗೂ ಪ್ರಾಣಿಗಳು ಶಿಯಾಕ್ ನದಿಯಲ್ಲಿನ ಮಂಜುಗಡ್ಡೆ ಕರಗಿ ನೀರಾಗುತ್ತದ್ದಂತೆ ನೀರಿನ ಪ್ರವಾಹಕ್ಕೆ ಸಿಲುಕಿ ಮನುಷ್ಯರು ಹಾಗೂ ಪ್ರಾಣಿಗಳು ಸಹ ಪ್ರಾಣ ಬಿಡುತ್ತವೆ. ಈ ಹಿನ್ನೆಲೆ ಶಿಯಾಕ್ ನದಿಯನ್ನು ಸಾವಿನ ಮಾರ್ಗ ಅಥವಾ ಸಾವಿನ ನದಿ ಎಂದು ಕರೆಯಲಾಗುತ್ತದೆ. ಆದರೆ, ಇಂಥ ಸಾವಿನ ಮಾರ್ಗದಲ್ಲಿ ಚೀನಾ ತನ್ನ ಕಬಳಿಕೆ ಆರಂಭಿಸಿ ಶಿಯಾಕ್ ನದಿ ಪಾತ್ರದಲ್ಲಿ ಬೀಡುಬಿಟ್ಟಿದೆ. 1961ರಿಂದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಭಾರತ-ಚೀನಾ 'ಗಡಿರೇಖೆ' ಗೊಂದಲದ ಹಿಂದಿನ ಅಸಲಿ ಸತ್ಯ!ಭಾರತ-ಚೀನಾ 'ಗಡಿರೇಖೆ' ಗೊಂದಲದ ಹಿಂದಿನ ಅಸಲಿ ಸತ್ಯ!

ರಸೂಲ್ ಕಂಡ ಗಾಲ್ವಾನ್ ಕಣಿವೆ ಸುರಕ್ಷಿತವಲ್ಲ

ರಸೂಲ್ ಕಂಡ ಗಾಲ್ವಾನ್ ಕಣಿವೆ ಸುರಕ್ಷಿತವಲ್ಲ

ಗಾಲ್ವಾನ್ ಕಣಿವೆ ಅಲ್ಲದೆ ಸ್ಪಾಂಗುರ್, ಪ್ಯಾಂಗಾಂಗ್ ಸರೋವರಗಳಲ್ಲಿ ರಸೂಲ್ ಅಥವಾ ಬ್ರಿಟಿಷ್ ಅನ್ವೇಷಕರು ಸಂಚರಿಸಿದ್ದು ಬಿಟ್ಟರೆ, ಗಸ್ತು ತಿರುಗುವ ಗಡಿ ಯೋಧರು ಕಾಣಿಸುತ್ತಿರಲಿಲ್ಲ. ಸಮುದ್ರಮಟ್ಟದಿಂದ 14 ಸಾವಿರ ಅಡಿಗೂ ಮೇಲ್ಪಟ್ಟ ಈ ಪ್ರದೇಶದಲ್ಲಿ ಉಸಿರಾಡುವುದೇ ಕಷ್ಟ. ಆದರೆ, ಚೀನಾದ ಕೃತ್ಯದಿಂದ 1962ರಲ್ಲಿ ಯುದ್ಧ ಶುರುವಾಯಿತು. ಸ್ಯಾಮ್ ಜುಂಗ್ ಗ್ಲಿಂಗ್ ಪೋಸ್ಟ್ ನ ಸಂವಹನ ಸಂಪರ್ಕ ಕಡಿತಗೊಳಿಸಿದ ಗೋರ್ಖಾ ಪಡೆ ಮೆಲೆ ಚೀನಿಯರು ಮುಗಿಬಿದ್ದರು. ರಸೂಲ್ ಅನ್ವೇಷಿಸಿದ ಕಣಿವೆ ಸೇರಿದಂತೆ ನಿರ್ಜನ ಪ್ರದೇಶವಾಗಿದ್ದ ಕಣಿವೆಯಲ್ಲಿ ರಕ್ತಪಾತ ಮೊದಲುಗೊಂಡಿತು.

ಗಾಲ್ವಾನ್ ಕಣಿವೆ ಭಾಗ ಅಕ್ರಮಿಸಿದ ಚೀನಾ

ಗಾಲ್ವಾನ್ ಕಣಿವೆ ಭಾಗ ಅಕ್ರಮಿಸಿದ ಚೀನಾ

ಯುದ್ಧ ಮುಗಿಯುವ ವೇಳೆಗೆ ಚೀನಾ ಕಣಿವೆಯ ಅನೇಕ ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ಗಾಲ್ವಾನ್ ಅನುಸರಿಸಿದ ಹಾದಿಯಲ್ಲಿ ಸಾಗಿದರೆ ಇಂದಿನ LAC ಗೆ ಹೊಂದಿಕೊಂಡಂತೆ 8-9 ಕಿ. ಮೀ ವ್ಯಾಪ್ತಿ ಮಾತ್ರ ನಿರ್ಬಂಧಿತ ಪ್ರದೇಶ ಎಂಬುದನ್ನು ಅರಿತು, ಬುಲೆಟ್, ಗನ್, ಬಾಂಬ್ ಇಲ್ಲದೆ ದೊಣ್ಣೆ, ಕಲ್ಲೆಸೆತ, ಮಲ್ಲಯುದ್ಧದ ರಣತಂತ್ರ ರೂಪಿಸಿತು. ಇದಕ್ಕೆ ಭಾರತ ತಕ್ಕ ಉತ್ತರ ನೀಡುತ್ತಾ ಬಂದಿದೆ. 2016ರ ಉಪಗ್ರಹ ಚಿತ್ರದ ಪ್ರಕಾರ ಗಾಲ್ವಾನ್ ಕಣಿವೆಯ ಮಧ್ಯ ಭಾಗದ ತನಕ ಚೀನಾ ರಸ್ತೆ ನಿರ್ಮಾಣ ಸದ್ದಿಲ್ಲದೆ ಮಾಡಿ ಮುಗಿಸಿಬಿಟ್ಟಿತ್ತು.

ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!

ಕ್ಸಿನ್ ಜಿಯಾಂಗ್- ಟಿಬೇಟ್ ಹೆದ್ದಾರಿ

ಕ್ಸಿನ್ ಜಿಯಾಂಗ್- ಟಿಬೇಟ್ ಹೆದ್ದಾರಿ

ಕ್ಸಿನ್ ಜಿಯಾಂಗ್- ಟಿಬೇಟ್ ಹೆದ್ದಾರಿಯಿಂದ ಭಾರತವನ್ನು ದೂರವಿಡಲು ಚೀನಾ ಬಯಸಿರುವುದು ಇಲ್ಲಿ ನಿರ್ವಿವಾದ. ಚೀನಾದ ಕ್ಸಿನ್ ಜಿಯಾಂಗ್ ವ್ಯಾಪ್ತಿಯಲ್ಲಿರುವ ಲೆಹ್ ಮತ್ತು ಯಾರ್ಕಂದ್ ಹಾಗೂ ಕಶ್ಗರ್ ಪ್ರದೇಶದಲ್ಲಿ ಸಂಚರಿಸಲು ಸಾಧ್ಯವಿದೆ. ಲೆಹ್ ನಿಂದ ಲಡಾಕ್ ನ ಚಾಂಗ್ ಲೆ ಮಾರ್ಗವಾಗಿ ತೆರಳಿ ದರ್ಬುಕ್ ಅಲ್ಲಿಂದ ಶಿಯಾಕ್ ನದಿ ಮಾರ್ಗವಾಗಿ ಕರಕೋರಮ್ ತಲುಪಬಹುದು. ಶಿಯಾಕ್ ನದಿ, ಗಾಲ್ವಾನ್ ಕಣಿವೆ ಹಿಮಾಲಯದ ರಕ್ತಪಾತದ ತಾಣವಾಗಿರುವುದು ದುರಂತವೆ ಸರಿ.

English summary
India and China face off at Galwan Valley situated on the Line of Actual Control (LAC) in Ladakh. How this valley was named Galwan? Who is Ghulam Rassul Galwa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X