ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಯಾರು?

|
Google Oneindia Kannada News

ನವದೆಹಲಿ, ಜನವರಿ 28: ಕೇಂದ್ರ ಸರ್ಕಾರ ಶುಕ್ರವಾರ ಆರ್ಥಿಕ ತಜ್ಞ ವಿ ಅನಂತ ನಾಗೇಶ್ವರನ್‌ರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ (ಸಿಇಎ) ನೇಮಕ ಮಾಡಿದೆ. ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಮತ್ತು ಜೂಲಿಯಸ್ ಬೇರ್ ಗ್ರೂಪ್‌ನ ಶೈಕ್ಷಣಿಕ ಮತ್ತು ಮಾಜಿ ಕಾರ್ಯನಿರ್ವಾಹಕ ವಿ ಅನಂತ ನಾಗೇಶ್ವರನ್‌ ಇನ್ನು ಮುಂದೆ ಕೇಂದ್ರ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಈ ಹಿಂದೆ ಲೇಖಕ, ಶಿಕ್ಷಕ ಮತ್ತು ಸಲಹೆಗಾರರಾಗಿ ಕೆಲಸ ಮಾಡಿರುವ ನಾಗೇಶ್ವರನ್ ಅವರು ಜನವರಿ 28 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಕೆ ವಿ ಸುಬ್ರಮಣಿಯನ್ ಅವರನ್ನು ಬದಲಾವಣೆ ಮಾಡಲು ಸರ್ಕಾರವು ಅಕ್ಟೋಬರ್ 2021 ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಸಿಇಎ ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಿತ್ತು.

ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡಿದ್ದು ಏಕೆ? ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್ ವಿಲೀನಗೊಂಡಿದ್ದು ಏಕೆ?

ತಮ್ಮ ಮೂರು ವರ್ಷಗಳ ಅವಧಿ ಮುಗಿದ ನಂತರ ಡಿಸೆಂಬರ್ 2021 ರಲ್ಲಿ ಸಿಇಎ ಕಚೇರಿಯನ್ನು ತೊರೆದ ಕೆವಿ ಸುಬ್ರಮಣಿಯನ್ ಅವರ ಹುದ್ಧೆಗೆ ಈಗ ಸರ್ಕಾರವು ವಿ ಅನಂತ ನಾಗೇಶ್ವರನ್‌ರನ್ನು ನೇಮಕ ಮಾಡಿದೆ. ನಾಗೇಶ್ವರನ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಶುಕ್ರವಾರ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

Who is Dr V Anantha Nageswaran, Newly Appointed Chief Economic Advisor, Heres Details

ಕೊರೊನಾ ವೈರಸ್‌ ಸೋಂಕಿನ ಹೊಡೆತದಿಂದ ಭಾರತದ ಆರ್ಥಿಕತೆಯು ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿರುವ ಸಮಯದಲ್ಲಿ ನಾಗೇಶ್ವರನ್‌ ಅವರನ್ನು ಕೇಂದ್ರ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಿ ಸರ್ಕಾರವು ಆದೇಶವನ್ನು ಹೊರಡಿಸಿದೆ. ಪ್ರಸ್ತುತ ಕೊರೊನಾ ಮೂರನೇ ಅಲೆಯ ಪ್ರಭಾವದಿಂದಾಗಿ ದೇಶವು ಇನ್ನೂ ಕೆಲವು ಹೊಸ ಸವಾಲುಗಳನ್ನು ಎದುರಿಸುತ್ತಿದೆ.

 ಬಜೆಟ್‌ 2022: ವರ್ಕ್ ಫ್ರಮ್‌ ಹೋಮ್‌ ಮಾಡುವವರಿಗೆ ಬಿಗ್‌ ರಿಲೀಫ್‌ ಸಾಧ್ಯತೆ ಬಜೆಟ್‌ 2022: ವರ್ಕ್ ಫ್ರಮ್‌ ಹೋಮ್‌ ಮಾಡುವವರಿಗೆ ಬಿಗ್‌ ರಿಲೀಫ್‌ ಸಾಧ್ಯತೆ

ವಿ ಅನಂತ ನಾಗೇಶ್ವರನ್ ಯಾರು?

ವಿ ಅನಂತ ನಾಗೇಶ್ವರನ್ ಈ ಹಿಂದೆ ಲೇಖಕ, ಶಿಕ್ಷಕ ಮತ್ತು ಸಲಹೆಗಾರರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇದಕ್ಕೂ ಮುನ್ನ ನಾಗೇಶ್ವರನ್ ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ವ್ಯಾಪಾರ ಶಾಲೆಗಳು ಮತ್ತು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಹಲವಾರು ಪುಸ್ತಕಗಳು ಇವರ ಹೆಸರಲ್ಲಿ ಪ್ರಕಟವಾಗಿದೆ.

ಈ ಹಿಂದೆ ಐಎಫ್‌ಎಂಆರ್‌ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಡೀನ್ ಆಗಿದ್ದರು. ಕ್ರಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ವಿಶೇಷ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 2019 ರಿಂದ 2021 ರವರೆಗೆ ಭಾರತದ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರಾಗಿದ್ದರು.

ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಿರುವ ವಿ ಅನಂತ ನಾಗೇಶ್ವರನ್ ಅಮ್ಹೆರ್ಸ್ಟ್‌ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಸಾರ್ವಜನಿಕ ನೀತಿಯಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಸ್ವತಂತ್ರ ಕೇಂದ್ರವಾದ ತಕ್ಷಶಿಲಾ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದವರಲ್ಲಿ ಒಬ್ಬರು ಆಗಿದ್ದಾರೆ. 2001 ರಲ್ಲಿ ಆವಿಷ್ಕಾರ್ ಗ್ರೂಪ್‌ನ ಮೊದಲ ಪರಿಣಾಮ ಹೂಡಿಕೆ ನಿಧಿ (ಇಂಪಾಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌) ಅನ್ನು ಪ್ರಾರಂಭಿಸಲು ಸಹಾಯ ಮಾಡಿದರು.

ಅವರ 'ಎಕನಾಮಿಕ್ಸ್ ಆಫ್ ಡೆರಿವೇಟಿವ್ಸ್' ಮತ್ತು 'ಡೆರಿವೇಟಿವ್ಸ್' ಅನ್ನು ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಕ್ರಮವಾಗಿ ಮಾರ್ಚ್ 2015 ಮತ್ತು ಅಕ್ಟೋಬರ್ 2017 ರಲ್ಲಿ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಅವರು ಸಹ ಲೇಖಕರಾಗಿದ್ದಾರೆ. ಅವರ ಇನ್ನೊಂದು ಪುಸ್ತಕ Can India grow? ಅನ್ನು ನವೆಂಬರ್ 2016 ರಲ್ಲಿ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಪ್ರಕಟಿಸಿದೆ. ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದಿ ರೈಸ್ ಆಫ್ ಫೈನಾನ್ಸ್: ಕಾಸಸ್, ಕಾನ್ಸೆಕ್ವೆನ್ಸಸ್ ಅಂಡ್ ಕ್ಯೂರ್ಸ್' ನಾಗೇಶ್ವರನ್ ಅವರ ಇತ್ತೀಚಿನ (ಸಹ-ಲೇಖಕ) ಕೃತಿಯಾಗಿದೆ.

ನಾಗೇಶ್ವರನ್ ಮುಂದಿದೆ ಹಲವು ಸವಾಲು

ಕೇಂದ್ರ ಸರ್ಕಾರವು ಕೇಂದ್ರ ಬಜೆಟ್‌ ಅನ್ನು ಇನ್ನು ಕೆಲವೇ ದಿನಗಳಲ್ಲಿ ಮಂಡನೆ ಮಾಡಲಿದೆ. ಈ ನಡುವೆ ಕೇಂದ್ರ ಸರ್ಕಾರವು ನೂತನ ಮುಖ್ಯ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿದೆ. ಈ ಕೊರೊನಾ ವೈರಸ್‌ ಹೊಸ ರೂಪಾಂತರ ಓಮಿಕ್ರಾನ್‌ ಆತಂಕದ ನಡುವೆ ಹಲವಾರು ಸವಾಲುಗಳು ನಾಗೇಶ್ವರನ್‌ ಮುಂದಿದೆ. ಈ ಸಮಸ್ಯೆಗಳಲ್ಲಿ ಆದಾಯದ ಅಸಮಾನತೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗವೂ ಕೂಡಾ ಸೇರಿದೆ. ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ವಿತ್ತೀಯ ಕೊರತೆಯನ್ನು ಮಿತಿಗೊಳಿಸಲು ಹೊಸ ಆಲೋಚನೆಗಳನ್ನು ಒದಗಿಸುವ ಜವಾಬ್ದಾರಿಯನ್ನು ನಾಗೇಶ್ವರನ್ ಹೊಂದಿದ್ದಾರೆ. ಇದಲ್ಲದೆ, ನಾಗೇಶ್ವರನ್ ಹಣಕಾಸು ಸಚಿವರೊಂದಿಗೆ ಪ್ರಮುಖ ನೀತಿ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಮತ್ತು ಆರ್ಥಿಕ ಸಮೀಕ್ಷೆಯ ಪ್ರಮುಖ ಲೇಖಕರಾಗಿರುತ್ತಾರೆ. (ಒನ್‌ಇಂಡಿಯಾ ಸುದ್ದಿ)

English summary
Who is Dr V Anantha Nageswaran, Newly Appointed Chief Economic Advisor, Heres Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X