• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳದ ಅಂಗಳದಲ್ಲಿ ರೋವರ್: ಯೋಜನೆಯ ಹಿಂದಿನ ವಿಜ್ಞಾನಿ ಭಾರತ ಮೂಲದ ಸ್ವಾತಿ ಮೋಹನ್

|

ಅಮೆರಿಕದ ನಾಸಾದ ಪರ್ಸೆವೆರೆನ್ಸ್ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಇಳಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಕೆಂಪು ಗ್ರಹದ ಮೇಲಿನ ಜೀವಿಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲು ಅಗತ್ಯವಾದ ಮಹತ್ವದ ಅಂಶಗಳನ್ನು ಈ ನೌಕೆ ಭೂಮಿಗೆ ರವಾನಿಸಲಿದೆ. ಹಾಗೆಯೇ ಜಗತ್ತು ಅಚ್ಚರಿಯಿಂದ ನೋಡುತ್ತಿರುವುದು ಈ ಇಡೀ ಯೋಜನೆಯ ನೇತೃತ್ವವಹಿಸಿದ್ದ ಮಹಿಳೆಯ ಬಗ್ಗೆ. ಅಂದಹಾಗೆ ಈ ಮಹಿಳೆಯ ಬೇರು ಭಾರತ ಮೂಲದ್ದು.

ಭಾರತದಿಂದ ವಿವಿಧ ಕಾರಣಕ್ಕೆ ವಿದೇಶಕ್ಕೆ ತೆರಳಿ ಅಲ್ಲಿಯೇ ನೆಲೆಯೂರಿದ ಅನೇಕ ಪ್ರತಿಭೆಗಳ ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ. ಅದರಲ್ಲಿಯೂ ಅಮೆರಿಕದ ರಾಜಕೀಯ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯರು ಪ್ರಮುಖವಾಗಿ ಕಾಣಿಸುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಭಾರತ ಮೂಲದ ಡಾ. ಸ್ವಾತಿ ಮೋಹನ್.

ನಾಸಾದ ರೋವರ್ ಮಂಗಳ ಯಾನ ಯಶಸ್ವಿ: ಯೋಜನೆ ನೇತೃತ್ವ ವಹಿಸಿದ್ದು ಭಾರತ ಮೂಲದ ಮಹಿಳೆನಾಸಾದ ರೋವರ್ ಮಂಗಳ ಯಾನ ಯಶಸ್ವಿ: ಯೋಜನೆ ನೇತೃತ್ವ ವಹಿಸಿದ್ದು ಭಾರತ ಮೂಲದ ಮಹಿಳೆ

ಮಂಗಳ ಗ್ರಹಕ್ಕೆ ಪರ್ಸೆವೆರೆನ್ಸ್ ರೋವರ್ ಸುಗಮವಾಗಿ ಇಳಿದಿದ್ದನ್ನು ಇಡೀ ಜಗತ್ತಿಗೆ ಖಚಿತಪಡಿಸಿದ್ದೇ ಡಾ. ಸ್ವಾತಿ ಮೋಹನ್. 'ನೆಲಸ್ಪರ್ಶ ಖಚಿತವಾಗಿದೆ! ಪರ್ಸೆವೆರೆನ್ಸ್ ಮಂಗಳದ ಮೇಲ್ಮೈನಲ್ಲಿ ಸುರಕ್ಷಿತವಾಗಿದೆ. ಹಿಂದಿನ ಜೀವಗಳ ಕುರುಹುಗಳನ್ನು ಹುಡುಕುವ ಕಾರ್ಯ ಆರಂಭಿಸಲು ಸಿದ್ಧವಾಗಿದೆ' ಎಂದು ಸ್ವಾತಿ ಅವರು ಘೋಷಿಸುತ್ತಿದ್ದಂತೆಯೇ ಕ್ಯಾಲಿಫೋರ್ನಿಯಾದಲ್ಲಿನ ನಾಸಾ ಯೋಜನಾ ನಿಯಂತ್ರಣ ಕೊಠಡಿಯಲ್ಲಿ ಜೋರಾದ ಹರ್ಷೋದ್ಗಾರ ಕೇಳಿಬಂದಿತ್ತು.

ರೋವರ್ ನಿಯಂತ್ರಣದ ಮುಖ್ಯಸ್ಥೆ

ರೋವರ್ ನಿಯಂತ್ರಣದ ಮುಖ್ಯಸ್ಥೆ

ರೋವರ್‌ನ ಆಟಿಟ್ಯೂಡ್ ನಿಯಂತ್ರಣ ಅಭಿವೃದ್ಧಿ ಮತ್ತು ಲ್ಯಾಂಡಿಂಗ್ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಸ್ವಾತಿ ಅವರು ಈ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಐತಿಹಾಸಿಕ ಯೋಜನೆಯ ಹಿಂದಿದ್ದ ಪ್ರಮುಖ ವಿಜ್ಞಾನಿಗಳ ತಂಡದಲ್ಲಿ ಸ್ವಾತಿ ಕೂಡ ಒಬ್ಬರು.

ಒಂದು ವರ್ಷದವರಿದ್ದಾಗ ಅಮೆರಿಕ ಪ್ರವೇಶ

ಒಂದು ವರ್ಷದವರಿದ್ದಾಗ ಅಮೆರಿಕ ಪ್ರವೇಶ

ಡಾ. ಸ್ವಾತಿ ಮೋಹನ್ ಅವರು ನಾಸಾದ ಮಾರ್ಸ್ 2020 ಯೋಜನೆಯ ಮಾರ್ಗದರ್ಶನ, ನ್ಯಾವಿಗೇಷನ್ ಮತ್ತು ನಿಯಂತ್ರಣ (ಜಿಎನ್‌&ಸಿ) ಕಾರ್ಯಾಚರಣೆಯ ಮುಖ್ಯಸ್ಥೆಯಾಗಿದ್ದಾರೆ. ಭಾರತದಲ್ಲಿ ಜನಿಸಿದ ಸ್ವಾತಿ, ಅಮೆರಿಕಕ್ಕೆ ಬರುವಾಗ ಇನ್ನೂ ಪುಟ್ಟ ಕಂದಮ್ಮ. ಅವರು ತಮ್ಮ ಬಾಲ್ಯವನ್ನು ಕಳೆದಿದ್ದು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ.

ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!

ಶಿಕ್ಷಣ ಅಭ್ಯಾಸ

ಶಿಕ್ಷಣ ಅಭ್ಯಾಸ

ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದ ಅವರು, ಎಂಐಟಿಯಲ್ಲಿ ಏರೋನಾಟಿಕ್ಸ್/ಆಸ್ಟ್ರೋನಾಟಿಕ್ಸ್‌ನಲ್ಲಿ ಎಂಎಸ್ ಮತ್ತು ಪಿಎಚ್‌ಡಿ ಪೂರೈಸಿದ್ದಾರೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಮಾರ್ಸ್ ರೋವರ್ ಮಿಷನ್ ಸೇರಿಕೊಂಡ ಸಂದರ್ಭದಿಂದಲೂ ಸ್ವಾತಿ ಅದರ ಭಾಗವಾಗಿದ್ದಾರೆ.

ವಿವಿಧ ಯೋಜನೆಗಳಲ್ಲಿ ಭಾಗಿ

ವಿವಿಧ ಯೋಜನೆಗಳಲ್ಲಿ ಭಾಗಿ

ವಿಜ್ಞಾನಿ ಸ್ವಾತಿ ಅವರು ಕ್ಯಾಸಿನಿ (ಶನಿ ಗ್ರಹ ಯೋಜನೆ) ಮತ್ತು ಜಿಆರ್ಎಐಎಲ್ (ಚಂದ್ರಯಾನ ಯೋಜನೆ) ಯೋಜನೆಗಳಲ್ಲಿ ಸಹ ಕೆಲಸ ಮಾಡಿದ್ದರು. 2013ರಿಂದಲೇ ಈ ಮಂಗಳಗ್ರಹದ ಯೋಜನೆ ಕೆಲಸ ಶುರುವಾಗಿತ್ತು. ಆಗಿನಿಂದಲೂ ಯೋಜನೆಯ ಪ್ರತಿ ವಿವರಗಳು ಸ್ವಾತಿಗೆ ಚಿರಪರಿಚಿತವಾಗಿತ್ತು. ನಾಸಾದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿನ ಯಶಸ್ಸು ಸ್ವಾತಿ ಅವರನ್ನು ಜಗತ್ತಿಗೆ ಪರಿಚಯಿಸಿದೆ. ಪ್ರಸ್ತುತ ಅವರು ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿನ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಶಿಕ್ಷಕರಿಂದಾಗಿ ಬದಲಾದ ಕನಸು

ಶಿಕ್ಷಕರಿಂದಾಗಿ ಬದಲಾದ ಕನಸು

ಅನೇಕ ಮಕ್ಕಳಂತೆ ಸ್ವಾತಿ ಮೋಹನ್ ಕೂಡ ಬಾಲ್ಯದಲ್ಲಿ ತನ್ನ ಭವಿಷ್ಯದ ಬಗ್ಗೆ ಕನಸು ಕಂಡಿದ್ದರು. ಆದರೆ ಅದು ಆಗಾಗ ಬದಲಾಗುತ್ತಿತ್ತು. 9ನೇ ವಯಸ್ಸಿನಲ್ಲಿದ್ದಾಗ ಮೊದಲ ಬಾರಿಗೆ 'ಸ್ಟಾರ್ ಟೆಕ್' ನೋಡಿದ ಅವರಿಗೆ ತಾನು ವಿಜ್ಞಾನಿಯಾಗಿ ಜಗತ್ತಿನ ನಿಗೂಢಗಳನ್ನೆಲ್ಲ ಕಂಡುಹಿಡಿಯಬೇಕು. ಬ್ರಹ್ಮಾಡದಲ್ಲಿನ ಹೊಸ ಮತ್ತು ಸುಂದರವಾದ ಜಾಗಗಳನ್ನು ಪತ್ತೆಹಚ್ಚಬೇಕು ಆಸೆ ಮೂಡಿತ್ತು. ಆದರೆ 16ನೇ ವಯಸ್ಸಿನಲ್ಲಿ ಅವರಿಗೆ ಶಿಶುವೈದ್ಯೆಯಾಗಬೇಕೆಂಬ ಬಯಕೆ ಉಂಟಾಗಿತ್ತು. ಕೊನೆಗೆ ಭೌತಶಾಸ್ತ್ರದಲ್ಲಿ ಸಿಕ್ಕ ಮಹಾನ್ ಶಿಕ್ಷಕರೊಬ್ಬರು ಆಕೆಯ ಕನಸುಗಳನ್ನು ಬಾಹ್ಯಾಕಾಶದತ್ತ ಕಟ್ಟಿ ಬೆಳೆಸಿದರು.

ಈಗ ಸ್ವಾತಿ ಹೆಮ್ಮೆಯ ವಿಜ್ಞಾನಿಯಾಗಿ ರೂಪುಗೊಂಡಿದ್ದಾರೆ. ನಾಸಾದ ಭವಿಷ್ಯದ ಅನೇಕ ಹೊಸ ಯೋಜನೆಗಳಲ್ಲಿಯೂ ಸ್ವಾತಿ ಅವರ ಕೊಡುಗೆ ಇರಲಿದೆ.

English summary
Who is Dr Swati Mohan, the Indian American scientist behind NASA's Rover landing on Mars. Here is details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X