ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಗರ್ ಸಿಆರ್ ಪಿಎಫ್ ಮುಖ್ಯಸ್ಥೆ ಚಾರು ಸಿನ್ಹಾ ಕಿರು ಪರಿಚಯ

|
Google Oneindia Kannada News

ಶ್ರೀನಗರ್, ಸಪ್ಟೆಂಬರ್.02: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮುಖ್ಯಸ್ಥರಾಗಿ ಚಾರು ಸಿನ್ಹಾ ನೇಮಕಗೊಂಡಿದ್ದಾರೆ. ಈ ಪ್ರದೇಶದಲ್ಲಿ ಸಿಆರ್ ಪಿಎಫ್ ಮುಖ್ಯಸ್ಥರಾದ ಮೊದಲ ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಚಾರು ಸಿನ್ಹಾ ಭಾಜನರಾಗಿದ್ದಾರೆ.

Recommended Video

Dr Kafeel Khanಗೆ ಕೊನೆಗೂ ಬಿಡುಗಡೆ | Oneindia Kannada

1996ರ ಬ್ಯಾಚ್ ‌ತೆಲಂಗಾಣ ಕೇಡರ್ ಐಪಿಎಸ್ ಅಧಿಕಾರಿ ಚಾರು ಸಿನ್ಹಾ, ಶ್ರೀನಗರ ಸೆಕ್ಟರ್ ನಲ್ಲಿ ಸಿಆರ್ ಪಿಎಫ್ ಪಡೆಯ ಇನ್ಸ್ ಪೆಕ್ಟರ್ ಜನರಲ್(ಐಜಿ) ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಶ್ರೀನಗರ್ ಸೆಕ್ಟರ್ ನಲ್ಲಿ ಚಾರು ಸಿನ್ಹಾ ಅವರು ಐಜಿ ಹಂತದಲ್ಲಿ ಕಾರ್ಯಾರಂಭ ಮಾಡಿದ ಮೊದಲ ಮಹಿಳಾ ಅಧಿಕಾರಿ ಎನಿಸಿದರು. ಇದೀಗ ಅದೇ ಐಪಿಎಸ್ ಅಧಿಕಾರಿ ಚಾರು ಸಿನ್ಹಾ ಅವರನ್ನು ಪ್ರಮೋದ್ ಕುಮಾರ್ ಪಾಂಡೆ ಸ್ಥಾನಕ್ಕೆ ನೇಮಿಸಲಾಗಿದೆ.

ಶ್ರೀನಗರ ಸೆಕ್ಟರ್ ಸಿಆರ್‌ಪಿಎಫ್‌ಗೆ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಮುಖ್ಯಸ್ಥೆಶ್ರೀನಗರ ಸೆಕ್ಟರ್ ಸಿಆರ್‌ಪಿಎಫ್‌ಗೆ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಮುಖ್ಯಸ್ಥೆ

ಚಾರು ಸಿನ್ಹಾ, ಉಗ್ರಪೀಡಿತ ಪ್ರದೇಶದಲ್ಲಿ ಸಿಆರ್ ಪಿಎಫ್ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ ಎನಿಸಿದ್ದಾರೆ. ಖಡಕ್ ಅಧಿಕಾರಿ ಎನಿಸಿರುವ ಚಾರು ಸಿನ್ಹಾರಿಗೆ ಈ ಹಿಂದಿನಿಂದಲೂ ಭಯೋತ್ಪಾದಕ ಮತ್ತು ಉಗ್ರರನ್ನು ಹತ್ತಿಕ್ಕುವ ಕಾರ್ಯತಂತ್ರದ ಬಗ್ಗೆ ತಿಳಿದಿದೆ.

Who Is Charu Sinha, CRPF’s First Woman IG In The Srinagar Sector


ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟಿಸಿದ ಅಧಿಕಾರಿ:

ಜಮ್ಮು-ಕಾಶ್ಮೀರದ ಶ್ರೀನಗರ್ ಕ್ಕೆ ನೇಮಕಗೊಳ್ಳುವ ಮೊದಲು ಈ ಹಿಂದೆ ಬಿಹಾರದಲ್ಲಿ ಸಿಆರ್ ಪಿಎಫ್ ಐಜಿಯಾಗಿ ಚಾರು ಸಿನ್ಹಾ ಕಾರ್ಯ ನಿರ್ವಹಿಸಿದ್ದರು. ಬಿಹಾರದಲ್ಲಿ ಖಡಕ್ ಆಡಳಿತ ನಡೆಸಿದ ಇವರು ಭಯೋತ್ಪಾದಕ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಚಾರು ಸಿನ್ಹಾ ನೇತೃತ್ವದಲ್ಲಿಯೇ ಹಲವು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.

ಬಿಹಾರದ ನಂತರದಲ್ಲಿ ಜಮ್ಮುವಿನ ಸಿಆರ್ ಪಿಎಫ್ ಐಜಿ ಆಗಿ ಚಾರು ಸಿನ್ಹಾರನ್ನು ವರ್ಗಾವಣೆಗೊಳಿಸಲಾಗಿದ್ದು, ಉತ್ತಮ ಆಡಳಿತದ ಮೂಲಕ ಅಲ್ಲಿಯೂ ಸೈ ಎನಿಸಿಕೊಂಡಿದ್ದರು. ಇದೀಗ ಶ್ರೀನಗರ ಸೆಕ್ಟರ್ ನಲ್ಲಿ ಸಿಆರ್ ಪಿಎಫ್ ಮುಖ್ಯಸ್ಥರಾಗಿ ಚಾರು ಸಿನ್ಹಾರನ್ನು ನೇಮಿಸಿ ಹೊಸದಾಗಿ ಆದೇಶ ಹೊರಡಿಸಲಾಗಿದೆ.

English summary
Who Is Charu Sinha, CRPF’s First Woman IG In The Srinagar Sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X