• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆ

|

ಭಾರತದ ಪೂರ್ವಘಟ್ಟದ ಯುವತಿ ಆಫ್ರಿಕಾದ ನೈಜೀರಿಯಾದ ಯುವಕ ಇಬ್ಬರು ಸಂಧಿಸಲು ಕಾಸ್ಮೋಪಾಲಿಟನ್ ಸಿಟಿ ಬೆಂಗಳೂರು ವೇದಿಕೆಯಾಗುತ್ತದೆ. ವಿದ್ಯೆ ತಲೆಗೆ ಹತ್ತದೆ ಹಣ, ಕೆಲಸ ಅರಸಿ ಅವಕಾಶಗಳ ಹೆಬ್ಬಾಗಿಲು ಬೆಂಗಳೂರಿಗೆ ಕಾಲಿಟ್ಟ ಅನಿಕಾ ಕೊನೆಗೆ ಡ್ರಗ್ ಜಾಲದಲ್ಲಿ ಸಿಲುಕುತ್ತಾಳೆ. ಆಕೆಗಿನ್ನೂ 24 ವರ್ಷ ವಯಸ್ಸು, ಯೆರ್ಕಾಡ್ ನ ಕಾಲೇಜಿನಲ್ಲಿ ಬಿಸಿನೆಸ್ ಸ್ಟಡಿ ಮಾಡುತ್ತಿದ್ದ ಯುವತಿ ಕೆಲ ವರ್ಷಗಳಲ್ಲೇ ವಿದೇಶ ಮಟ್ಟದ ಡ್ರಗ್ ಡೀಲರ್ ಆಗಿ ಬೆಳೆಯುತ್ತಾಳೆ. ಇದಕ್ಕೆ ಕಾರಣವಾಗಿದ್ದು, ಪ್ರೇಮಿ ಹಾಲಿ ಗಂಡ ಆಫ್ರಿಕಾ ಮೂಲದ ಆಂಡಿ ಜುಂಬೋ.

   Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ?| Oneindia Kannada Kannada

   ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್

   ಹಾದಿ ತಪ್ಪಿ ಜಾಲಕ್ಕೆ ಬಿದ್ದ ಬಳಿಕ ಒಂದು ಕಾಲದಲ್ಲಿ ಕಿಕ್ಕೇರಿಸಿಕೊಳ್ಳಲು ಡ್ರಗ್ಸ್ ಬೇಡುತ್ತಾ ಅಲೆಯುತ್ತಿದ್ದ ಅನಿಕಾ ಡ್ರಗ್ ಪೆಡ್ಲರ್ ಆಗಿ ಈಗ ದೊಡ್ಡ ಮಟ್ಟದ ಡೀಲರ್ ಆಗಿದ್ದಾಳೆ. ಅನಿಕಾ ಬಳಿ ಇದ್ದ ಡೈರಿಯಲ್ಲಿ ಸಿನಿಮಾ, ಸಂಗೀತ, ರಾಜಕಾರಣಿಗಳ ನಂಬರ್ಸ್ ಇವೆ ಎಂಬ ಮಾಹಿತಿಯಿದೆ. ಈ ಬಗ್ಗೆ ಸದ್ಯ ಬೆಂಗಳೂರಿನ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಅನಿಕಾ ಡೈರಿಯಿಂದ 10-15 ಚಿತ್ರರಂಗಕ್ಕೆ ಸಂಬಂಧಪಟ್ಟವರ ಹೆಸರು ಇರುವುದನ್ನು ಖಚಿತಪಡಿಸಿದ್ದಾರೆ. ಸಿನಿಮಾ ರಂಗದವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಡ್ರಗ್ಸ್ ಎಂದರೇನು ಎಂಬುದು ಕೂಡಾ ಗೊತ್ತಿರದೆ ಅನೇಕರು ನೀಡುತ್ತಿರುವ ಹೇಳಿಕೆ ಕೇಳಿಸಿಕೊಂಡರೆ ಅನಿಕಾ ಮುಸಿ ಮುಸಿ ನಕ್ಕು ಬಿಡಬಹುದು.. ಅದು ಹಾಗಿರಲಿ, ಈಗ ಮತ್ತೆ ಅನಿಕಾ ಇತಿಹಾಸ ನೋಡೋಣ..

    ಅನಿಕಾ ಡಿ ಪ್ರಮುಖ ಆರೋಪಿ

   ಅನಿಕಾ ಡಿ ಪ್ರಮುಖ ಆರೋಪಿ

   ಸಿಂಥೆಟಿಕ್ ಡ್ರಗ್ ರಾಕೆಟ್ ಜಾಲ ಪ್ರಕರಣದಲ್ಲಿ Narcotics Control Bureau(NCB) ಬಂಧಿಸಿರುವ ಮೂವರು ಆರೋಪಿಗಳ ಪೈಕಿ ಅನಿಕಾ ಡಿ ಪ್ರಮುಖಳಾಗಿದ್ದಾಳೆ. ಮಿಕ್ಕಂತೆ ಅನೂಪ್ ಹಾಗೂ ರಿಜೇಶ್ ಆಕೆಗೆ ಸಹಾಯಕರಾಗಿದ್ದಾರೆ. ಅನಿಕಾ ಎರಡು ಮೂರು ಹೆಸರುಗಳಲ್ಲಿ ವ್ಯವಹರಿಸಿದ್ದಾಳೆ. ಅದರಲ್ಲೂ ವಾಟ್ಸಾಪ್ ನಲ್ಲಿ ಹೆಸರು ಬದಲಾಗುತ್ತಲೇ ಇರುತ್ತದೆ. ಕನಿಷ್ಠ 18 ರಿಂದ 20 ಪೆಡ್ಲರ್ ಗಳನ್ನು ನಿಭಾಯಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಅನಿಕಾ ಡಿ, ಅನಿ ಅಲಿಯಾಸ್ ಡಿ ಮನಿ, ಬಿಮನಿ ಮುಂತಾದವು ಕಾಮನ್ ಆಗಿ ಅನಿಕಾ ಬಳಸುತ್ತಿದ್ದ ಹೆಸರುಗಳು.

    ಬಂಧಿತರ ಮೇಲೆ ಇರುವ ಆರೋಪಗಳೇನು

   ಬಂಧಿತರ ಮೇಲೆ ಇರುವ ಆರೋಪಗಳೇನು

   ಆಗಸ್ಟ್​ 21 ರ ಸಂಜೆ ಸಾದಹಳ್ಳಿ ಗೇಟ್ ಬಳಿ ಇರುವ ಜೂಮ್ ಕಾರಿನ ಕಚೇರಿ ಬಳಿ ಪೆಡ್ಲರ್ ಒಬ್ಬನಿಗೆ ಎಂಡಿಎಂಎ ಮಾತ್ರೆ ತಲುಪಿಸಲು ಅನಿಕಾ ರಸ್ತೆಗಿಳಿದಿದ್ದಳು.. ಸಾಮಾನ್ಯವಾಗಿ ಅಪಾರ್ಟ್ಮೆಂಟ್ ಗೆ ಬರುತ್ತಿದ್ದ ಪೆಡ್ಲರ್, ರಸ್ತೆಗಿಳಿಯುವಂತೆ ಮಾಡಿದ್ದು, ಎನ್ ಸಿಬಿ ಬಲೆಯಲ್ಲಿ ಸುಲಭವಾಗಿ ಬೀಳುವಂತಾಯಿತು. ಅನಿಕಾ ಬಂಧಿಸಿ ದೊಡ್ಡಗುಬ್ಬಿಯಲ್ಲಿದ್ದ ಆಕೆಯ ಐಶ್ವರ್ಯ ಅಪಾರ್ಟ್ಮೆಂಟ್ ಗೆ ಕರೆದೊಯ್ದ ಎನ್ ಸಿಬಿ ತಂಡಕ್ಕೆ ಅಲ್ಲಿ 111.6 ಗ್ರಾಂ ತೂಗುವ 270 ಎಂಡಿಎಂಎ ಮಾತ್ರೆಗಳು ಲಭ್ಯವಾಯಿತು. ಆಕೆ ಬಳಿ ಇದ್ದ ಫೋನ್, ಲ್ಯಾಪ್ ಟಾಪ್, ಅಳಿದುಳಿದ ಡ್ರಗ್ಸ್ ಸೀಜ್ ಮಾಡಿಕೊಂಡ ಎನ್ ಸಿಬಿ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ NDPS Act ಸೆಕ್ಷನ್ 22,27(a), 28,29 ಮತ್ತು R/W ಸೆಕ್ಷನ್ 8 ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡರು.

   ಡ್ರಗ್ಸ್ ಜಾಲ: ಈವರೆಗೆ ವಿಚಾರಣೆಗೆ ಒಳಪಟ್ಟ ತೆಲುಗು ಸಿನಿ ತಾರೆಗಳು

    ಅಂದು ಇನ್ನೊಂದು ಕಡೆ ದಾಳಿ ನಡೆಯಿತು

   ಅಂದು ಇನ್ನೊಂದು ಕಡೆ ದಾಳಿ ನಡೆಯಿತು

   ಬೆಂಗಳೂರಿನ ಗೇಟೆಡ್ ಕಮ್ಯೂನಿಟಿ ಅಪಾರ್ಟ್ಮೆಂಟ್ ಆಗಿರುವ ನಿಕೂ ಹೋಮ್ಸ್ ಮೇಲೆ ದಾಳಿ ನಡೆಸಿದ ಎನ್ ಸಿಬಿಗೆ 40 ಗ್ರಾಂ ತೂಗುವ ಎಂಡಿಎಂಎ 96 ಗುಳಿಗೆ, 180 ಎಲ್ ಎಸ್ ಬಿ ಬ್ಲಾಟುಗಳು ಸಿಕ್ಕಿತ್ತು. ಅಲ್ಲಿ ಸಿಕ್ಕಿಬಿದ್ದ ಪೆಡ್ಲರ್ ಹೆಸರು ರವೀಂದ್ರ. ಮತ್ತೊಂದು ದಾಳಿ ಕಲ್ಯಾಣನಗರದ ರಾಯಲ್ ಸ್ಯೂಟ್ಸ್ ಹೋಟೆಲ್ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ದಾಳಿ ನಡೆಸಿದಾಗ 60 ಗ್ರಾಂ ತೂಗುವ 145 ಎಂಡಿಎಂ ಗುಳಿಗೆ, 2,20, 500 ನಗದು ಜಪ್ತಿ ಮಾಡಲಾಯಿತು. ಇಲ್ಲಿ ಸಿಕ್ಕಿ ಬಿದವನು ಅನೂಪ್. ಅನಿಕಾ ತಮಿಳುನಾಡಿನ ಸೇಲಂ ಬಳಿಕ ಯೆರ್ಕಾಡ್ ನವಳು, ಕೊಚ್ಚಿ‌ ಮೂಲದ ಅನೂಪ್ ಹಾಗೂ ಚೆನ್ನೈ ನಿವಾಸಿ ರಿಜೇಶ್ ವಿ ರವಿಚಂದ್ರನ್ ಮುಖ್ಯ ಪೆಡ್ಲರ್ಸ್.

    2014ರಲ್ಲೇ ಕ್ಯಾಂಪಸ್ ಡೀಲರ್ ಆದ ಅನಿಕಾ

   2014ರಲ್ಲೇ ಕ್ಯಾಂಪಸ್ ಡೀಲರ್ ಆದ ಅನಿಕಾ

   ಡ್ರಗ್ ಪ್ರಪಂಚದಲ್ಲಿ ಸುಲಭವಾಗಿ ಟಾರ್ಗೆಟ್ ಆಗುವುದು ಶಾಲೆ, ಕಾಲೇಜಿನ ಯುವ ಪೀಳಿಗೆ. ಸೇಲಂನ ಯೆರ್ಕಾಡ್ ನಗರದ ನಿವಾಸಿ ದಿನೇಶ್ ಎಂಬುವರ ಪುತ್ರಿ ಅನಿಕಾಳಿಗೆ ಒಬ್ಬಳು ತಂಗಿ ಮತ್ತು ತಮ್ಮ ಇದ್ದಾನೆ. ಯೆರ್ಕಾಡ್​ನ ಹೊಟೇಲ್ ಮ್ಯಾನೆಜ್‌ಮೆಂಟ್‌ ಡಿಗ್ರಿ ಎರಡು ವರ್ಷ ಓದಿದ್ದ ಅನಿಕಾಳಿಗೆ ಡ್ರಗ್ ಚಟ ಹತ್ತಿ ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿ ಕೊನೆಗೆ ಕ್ಯಾಂಪಸ್ ಡೀಲರ್ ಅಗಿ ಬೆಳೆದಳು.ಆಕೆಗೆ ಡ್ರಗ್ ಜಾಲದ ಎಬಿಸಿಡಿ ಹೇಳಿಕೊಟ್ಟಿದ್ದು ಡ್ರಗ್ ಪೂರೈಸುತ್ತಿದ್ದ ನೈಜೀರಿಯಾ ಮೂಲದ ಆಂಡ್ರ್ಯೂ ಜುಂಬೋ.

   ಡ್ರಗ್ ಕೇಸ್: ನಟ ರವಿತೇಜ ಸೇರಿ ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್

    ಆಂಡಿ ಜುಂಬೋ ನೈಜೀರಿಯಾ ನಂಟು

   ಆಂಡಿ ಜುಂಬೋ ನೈಜೀರಿಯಾ ನಂಟು

   ಬೆಂಗಳೂರಿಹೆ ಬಂದ ಹೊಸದರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಿಕಾಳಿಗೆ ನೈಜೀರಿಯಾ ಮೂಲದ ಆಂಡಿ ಜುಂಬೋ ಪರಿಚಯವಾಗಿದೆ. ಆಂಡಿ ಜೊತೆದಿನ ಸ್ನೇಹ ದಿನ ಕಳೆದಂತೆ ಪ್ರೇಮಕ್ಕೆ ತಿರುಗಿದೆ. ಯಾವ ಡ್ರಗ್ ನಶೆಯಲ್ಲಿ ಇಬ್ಬರು ಪರಸ್ಪರ ಮನಸೋತರೋ ಗೊತ್ತಿಲ್ಲ. ಪೊಲೀಸರಿಗೆ ಆಕೆಯೇ ನೀಡಿರುವ ಮಾಹಿತಿ ಪ್ರಕಾರ, ಇಬ್ಬರಿಗೂ ಮದುವೆಯಾಗಿದೆ. ಆತ ರೆಡಿಮೇಡ್ ಬಟ್ಟೆ ಎಕ್ಸ್ ಪೋರ್ಟ್ ಉದ್ಯಮದಲ್ಲಿದ್ದಾನೆ. ಇತ್ತೀಚೆಗೆ ಸ್ಥಳೀಯ ಪೊಲೀಸರ ಮೇಲೆ ಹಲೆ ಮಾಡಿದ್ದರಿಂದ ತಾತ್ಕಾಲಿಕವಾಗಿ ಜೈಲು ಸೇರಿದ್ದಾನೆ. ಇನ್ನೂ ಆತನನ್ನು ಈ ಕೇಸಿನಲ್ಲಿ ಸಿಸಿಬಿ ಪ್ರಶ್ನಿಸಲು ಹೋಗಿಲ್ಲ.

   ಅನಿಕಾಳಿಗೆ ಡ್ರಗ್ಸ್ ದಂಧೆಯ ಪೆಡ್ಲರ್ ಗಳ ಪರಿಚಯ ಚೆನ್ನಾಗಿಯೇ ಇತ್ತು. ಹೀಗಾಗಿ, ಜುಂಬೋ ಇಲ್ಲದಿದ್ದಾಗಲೂ ದಂಧೆ ನಡೆಸುವುದನ್ನು ಕಲಿತ್ತಿದ್ದಳು. ಖಾನ್ ಮೊಹಮ್ಮದ್ ಎಂಬುವನ ಪರಿಚಯ ಬೆಳೆದು ದಂಧೆ ವಿಸ್ತರಿಸಿದಳು. ಹೊರಮಾವು ಪ್ರದೇಶದಲ್ಲಿ ಆಫ್ರಿಕಾ ಮೂಲದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನೈಜೀರಿಯಾದ ಡ್ರಗ್​ ಪೆಡ್ಲರ್ ಒಬ್ಬನಿಗೆ ಡ್ರಗ್ಸ್ ಪೂರೈಸುತ್ತಿದ್ದಳು.

    ಡ್ರಗ್ ದಂಧೆಯಲ್ಲಿ ಫುಲ್ ಕೋಡ್ ನೇಮ್

   ಡ್ರಗ್ ದಂಧೆಯಲ್ಲಿ ಫುಲ್ ಕೋಡ್ ನೇಮ್

   ಡ್ರಗ್ಸ್ ದಂಧೆಯಲ್ಲಿ ಡೀಲರ್, ಪೆಡ್ಲರ್, ಗ್ರಾಹಕರು ಎಲ್ಲರಿಗೂ ಕೋಡ್ ನೇಮ್ ಮುಖ್ಯ. ಸಿನಿಮಾಗಳಲ್ಲಿ ಇಂಥ ದೃಶ್ಯ ಸಾಮಾನ್ಯವಾಗಿ ನೋಡಿರುತ್ತಿರಿ. ಅದೇ ರೀತಿ ಅನಿಕಾ ಕೂಡಾ ಬಿಮನಿ(Bmoney) ಎಂಬ ಹೆಸರಿನಲ್ಲಿ ವಾಟ್ಸಾಪ್, ಟೆಲಿಗ್ರಾಮ್ ಗ್ರೂಪ್ ನಡೆಸುತ್ತಿದ್ದಳು.

   ಇವಳು ಪ್ರತಿ ಡ್ರಗ್ಸ್ ಗಳಿಗೂ ಬೇರೆ ಬೇರೆ ಕೋಡ್ ನೇಮ್ ಇಟ್ಟಿದ್ದಳು MDMA ಮತ್ತು LSDಗೂ ಬೇಡಿಕೆ ಹೆಚ್ಚಾಗಿತ್ತು. ಪಿಂಕ್ ಬಣ್ಣದ MDMAಗೆ ರೆಡ್ ಬುಲ್, LSDಗೆ ಲವ್ ಡೋಸ್ ಎಂಬ ಹೆಸರು ಜನಪ್ರಿಯ. ಗ್ರಾಹಕರ ಪಟ್ಟಿಯಲ್ಲಿ ವಿದ್ಯಾರ್ಥಿಗಳು, ಸ್ಯಾಂಡಲ್​ವುಡ್ ನಟ-ನಟಿಯರು ಮತ್ತು ಸಂಗೀತ ನಿರ್ದೇಶಕರು ಇದ್ದಾರೆ. ಡ್ರಗ್ ಪೂರೈಕೆ ಎಲ್ಲಾ ಪೆಡ್ಲರ್ ಗಳಾದ ರವೀಂದ್ರನ್, ಅನೂಪ್ ಕೆಲಸ.

   ಸಾಮಾನ್ಯ ಕೊರಿಯರ್ ಮೂಲಕ ಬರುತ್ತಿದ್ದ ಮಾತ್ರೆ, ಪುಡಿಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಸಾಫ್ಟ್ ಟಾಯ್ಸ್ ಗಳಲ್ಲಿ ಅಡಗಿಸಿ ಗ್ರಾಹಕರಿಗೆ ನೇರವಾಗಿ ಇಲ್ಲವೇ ಪೋಸ್ಟ್ ಮಾಡುತ್ತಿದ್ದರು. ಪಾರ್ಟಿಗಳಿಗೆ ಹೋಗಿ ಕೊಡುತ್ತಿದ್ದದ್ದು ಕಡಿಮೆ. ಹೀಗಾಗಿ ಸೆಲೆಬ್ರಿಟಿಗಳನ್ನು ಹಿಡಿಯುವುದು ಸಿಸಿಬಿಗೂ ಕಷ್ಟಕರ, ಡ್ರಗ್ಸ್ ಕೇಸಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯುವುದು ಮುಖ್ಯ ಎಂದು ಕರ್ನಾಟಕ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರೇ ಹೇಳಿದ್ದಾರೆ. ಈಗ ಅನಿಕಾಳಿಂದ ಸಿಕ್ಕ ಮಾಹಿತಿ ಸೆಲೆಬ್ರಿಟಿಗಳಿಗೂ ಎಷ್ಟರಮಟ್ಟಿಗೆ ಮಾರಕವಾಗಲಿದೆ ಕಾದು ನೋಡಬೇಕಿದೆ.

   English summary
   Who is Anika the Drug Dealer in Bengaluru. Anika is from Yercaud, Salem she loved a Nigeria guy in Bengaluru who introduced her to Drug World.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X