ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣದಲ್ಲಿ 2ನೇ ಬಾರಿ ಬಿಜೆಪಿ, 1966ರಿಂದ ಆಳ್ವಿಕೆ ಮಾಡಿದ ಪಕ್ಷಗಳು ಯಾವ್ಯಾವು?

|
Google Oneindia Kannada News

ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಎಬ್ಬಿಸಿದ ಅಲೆಯಿಂದ ಭಾರತದ ಪುರಾತನ ಪಕ್ಷ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿ, 2014ರಲ್ಲಿ ಹರ್ಯಾಣದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಆದರೆ ಈ ಬಾರಿ
ಗೆಲುವು, ಅಧಿಕಾರ ಸುಲಭವಾಗಿ ದಕ್ಕಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗಿಸಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು.

ಬಿಜೆಪಿ ಗೆಲುವಿನ ರುವಾರಿಗಳಲ್ಲಿ ಸಂಘ ಪರಿವಾರದ ಶಿವಪ್ರಕಾಶ್ ಹಾಗೂ ರಾಮ್ ಲಾಲ್, ಕ್ಯಾಪ್ಟನ್ ಅಭಿಮನ್ಯು, ರಾಮ್ ಬಿಲಾಸ್ ಶರ್ಮ, ಅನಿಲ್ ವಿಜ್, ಓಂ ಧಾಂಕರ್ ಅವರು ಮೋದಿ ಹಾಗೂ ಅಮಿತ್ ಶಾ ಅವರ ತಂತ್ರಗಾರಿಕೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸುವ ಮೂಲಕ ಸುಮಾರು 1೦ ವರ್ಷಗಳ ಕಾಂಗ್ರೆಸ್ ಅಧಿಪತ್ಯಕ್ಕೆ ಅಂತ್ಯ ಹಾಡಿ ಹರ್ಯಾಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸುವಂತೆ ಮಾಡಿ 5 ವರ್ಷಗಳು ಕಳೆದಿವೆ.

ಮೋದಿ ಹಾದಿಯಲ್ಲಿ ಸಾಗಿರುವ ಹರ್ಯಾಣ ಸಿಎಂ ಮನೋಹರ್ ಲಾಲ್ಮೋದಿ ಹಾದಿಯಲ್ಲಿ ಸಾಗಿರುವ ಹರ್ಯಾಣ ಸಿಎಂ ಮನೋಹರ್ ಲಾಲ್

2014ರಲ್ಲಿ 90 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನ ಗಳಿಸಿದರೆ, ಐಎನ್ ಎಲ್ ಡಿ 20, ಕಾಂಗ್ರೆಸ್ 15, ಎಚ್ ಜೆಸಿ 2 ಸ್ಥಾನ, ಇತರೆ 6 ಸ್ಥಾನ ಪಡೆದುಕೊಂಡಿತ್ತು. 2019ರಲ್ಲಿ 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಐಎನ್‌ಎಲ್‌ಡಿ 1, ಹೆಚ್‌ಎಲ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ. 7 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.

Who has ruled Haryana - since 1966, Khattar for second term

ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರ ರಚನೆ ಅನಿವಾರ್ಯವಾಗಿದ್ದು, ಉಪ ಮುಖ್ಯಮಂತ್ರಿ ಹುದ್ದೆ ಜೆಜೆಪಿ ಪಾಲಾಗಿದೆ. 31 ವರ್ಷ ವಯಸ್ಸಿನ ದುಷ್ಯಂತ್ ಚೌಟಾಲಾ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವ ಜೆಜೆಪಿಗೆ 3 ಸಚಿವ ಸ್ಥಾನಗಳೂ ಸಿಕ್ಕಿದೆ. ಮನೋಹರ್ ಲಾಲ್ ಖಟ್ಟರ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ.

2009ರ ಫಲಿತಾಂಶ : ಕಾಂಗ್ರೆಸ್ 40, ಐಎನ್ ಎಲ್ ಡಿ 31, ಬಿಜೆಪಿ 4, ಎಚ್ ಜೆ ಸಿ-ಬಿಎಲ್ 6, ಇತರೆ 9.
2014ರಲ್ಲಿ 90 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನ ಗಳಿಸಿದರೆ, ಐಎನ್ ಎಲ್ ಡಿ 20, ಕಾಂಗ್ರೆಸ್ 15, ಎಚ್ ಜೆಸಿ 2 ಸ್ಥಾನ, ಇತರೆ 6.
2019ರಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಐಎನ್‌ಎಲ್‌ಡಿ 1, ಹೆಚ್‌ಎಲ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ. 7 ಪಕ್ಷೇತರ ಅಭ್ಯರ್ಥಿಗಳು.

ಇದಕ್ಕೂ ಮುನ್ನ 1966ರಿಂದ ಇಲ್ಲಿತನಕ ಆಳ್ವಿಕೆ ಮಾಡಿದ ಪಕ್ಷಗಳ ವಿವರ ಹೀಗಿದೆ:
* 1966-67: ಕಾಂಗ್ರೆಸ್ (ಭಗವತ್ ದಯಾಳ್ ಶರ್ಮ ಸಿಎಂ)
* 1967: ವಿಶಾಲ್ ಹರ್ಯಾಣ ಪಾರ್ಟಿ (ರಾವ್ ಬೀರೇಂದರ್ ಸಿಂಗ್)
* 1968-1975: ಕಾಂಗ್ರೆಸ್ (ಬನ್ಸಿಲಾಲ್)
* 1975-77: ಕಾಂಗ್ರೆಸ್ (ಬನರಾಸಿ ದಾಸ್ ಗುಪ್ತ)
* 1977-79: ಜನತಾ ಪಾರ್ಟಿ (ದೇವಿಲಾಲ್)
* 1979-1985: ಕಾಂಗ್ರೆಸ್ (ಭಜನ್ ಲಾಲ್)
* 1985-87: ಕಾಂಗ್ರೆಸ್ (ಬನ್ಸಿಲಾಲ್)
* 1987-1991 ಜನತಾದಳ(ದೇವಿಲಾಲ್, ಓಂ ಪ್ರಕಾಶ್ ಚೌಟಾಲ, ಬಿ.ಡಿ ಗುಪ್ತ, ಹುಕುಂ ಸಿಂಗ್)
* 1991-96: ಕಾಂಗ್ರೆಸ್ (ಭಜನ್ ಲಾಲ್)
* 1996-99 : ಹರ್ಯಾಣ ವಿಕಾಸ್ ಪಾರ್ಟಿ(+ ಬಿಜೆಪಿ) (ಬನ್ಸಿಲಾಲ್)
* 1999-2005: ಇಂಡಿಯನ್ ನ್ಯಾಷನಲ್ ಲೋಕದಳ(INLD) (ಓಂ ಪ್ರಕಾಶ್ ಚೌಟಾಲ)
* 2005-2014: ಕಾಂಗ್ರೆಸ್ (ಭೂಪಿಂದರ್ ಸಿಂಗ್ ಹೂಡಾ)
* 2014: ಬಿಜೆಪಿ (ಮನೋಹರ್ ಲಾಲ್ ಖಟ್ಟರ್)
* 2019: ಬಿಜೆಪಿ+ಜೆಜೆಪಿ (ಮನೋಹಾರ್ ಲಾಲ್ ಖಟ್ಟರ್)

English summary
Who has ruled Haryana - since 1966: Haryana was carved out as a separate state from unified Punjab Nov 1, 1966. The BJP, which contested the 2014 assembly polls alone for the first time formed government in Haryana for the first time; In 2019 BJP-JJP got chance to form coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X